ಬಂಗಾರಪೇಟೆ: ರಾಗಿ ಮಾರಾಟಕ್ಕೆ ರೈತರು ಉತ್ಸುಕ
Team Udayavani, Feb 16, 2022, 2:38 PM IST
ಬಂಗಾರಪೇಟೆ: ಹಲವು ಗೊಂದಲಗಳ ನಡುವೆ ತಿಂಗಳ ನಂತರ ಬೆಂಬಲಯೋಜನೆ ಅಡಿ ರೈತರಿಂದ ರಾಗಿ ಖರೀದಿ ಕಾರ್ಯ ಆರಂಭ ವಾಗಿದೆ. ಇದಕ್ಕೆ ತಾಲೂಕಿನಲ್ಲಿಉತ್ತಮ ಪ್ರತಿ ಕ್ರಿಯೆ ವ್ಯಕ್ತವಾಗಿದ್ದು, ಟೋಕನ್ ಪಡೆಯಲು ನೂಕು ನುಗ್ಗಲು ಕಂಡು ಬರುತ್ತಿದೆ.
ಪಟ್ಟಣ ಹೊರವಲಯದ ಸೂಲಿಕುಂಟೆ ರಸ್ತೆಯಲ್ಲಿರುವ ಕೆಸಿಎಸ್‌ಎಫ್ಸಿ ಗೋದಾಮಿ ನಲ್ಲಿ ರಾಗಿ ಮಾರಾಟಕ್ಕೆ ಅವಕಾಶ ನೀಡಿದ್ದು,ಮೂರು ದಿನಗಳಲ್ಲಿ 2,000 ಕ್ವಿಂಟಲ್‌ರಾಗಿಯನ್ನು ಸರ್ಕಾರ ಖರೀದಿ ಮಾಡಿದೆ. ಒಟ್ಟು 37,199 ಕ್ವಿಂಟಲ್ ರಾಗಿ ಮಾರಾಟಕ್ಕೆ 2,567 ರೈತರು ನೋಂದಣಿ ಮಾಡಿಕೊಂಡಿದ್ದಾರೆ.
ಹೆಚ್ಚು ರಾಗಿ ಬೆಳೆದವರಿಗೆ ನಿರಾಶೆ: ಸರ್ಕಾರ ಪ್ರತಿ ಕ್ವಿಂಟಲ್ ರಾಗಿಗೆ ಕಳೆದ ವರ್ಷ 3,295ರೂ. ದರ ನಿಗದಿ ಮಾಡಿತ್ತು. ಈ ವರ್ಷ 3,377 ರೂ.ಗೆ ಏರಿಕೆ ಮಾಡಿರುವುದು ಬೆಳೆಗಾರರಲ್ಲಿ ಸಂಸದ ತಂದಿದೆ. ಆದರೆ, ಪ್ರತಿಎಕರೆಗೆ 10 ಕ್ವಿಂಟಲ್‌ನಂತೆ ಗರಿಷ್ಠ 20ಕ್ವಿಂಟಲ್‌ವರೆಗೆ ಮಾತ್ರ ರಾಗಿ ಖರೀದಿಮಾಡುತ್ತಿರುವುದು ಹೆಚ್ಚು ರಾಗಿ ಬೆಳೆದರೈತರಿಗೆ ನಿರಾಶೆಯಾಗಿದೆ. ಕಳೆದ ಸಾಲಿನಲ್ಲಿಪ್ರತಿ ರೈತರಿಂದ ಐದು ಎಕರೆಗೆ ಗರಿಷ್ಠ 50 ಕ್ವಿಂಟಲ್ ರಾಗಿ ಮಾರಾಟ ಮಾಡಲು ಅವಕಾಶ ನೀಡಲಾಗಿತ್ತು.
ಅಲೆದಾಡುವ ಕೆಲಸ ತಪ್ಪಿಲ್ಲ: ಸಮೀಕ್ಷೆ ವೇಳೆ ರೈತರ ಬಹಳಷ್ಟು ಬೆಳೆಯನ್ನು ಸರಿಯಾಗಿನಮೂದಿಸದ ಕಾರಣ ರಾಗಿ ಮಾರಾಟ ನೋಂದಾಯಿಸಲು ಸಾಧ್ಯವಾಗಿಲ್ಲ. ಕಚೇರಿ ಗಳಿಗೆ ಅಲೆದಾಡುವ ಕೆಲಸ ತಪ್ಪಿಲ್ಲ. ರೈತರಿಂದರಾಗಿ ಖರೀದಿಸಲು ಜಾರಿಗೆ ತಂದಿರುವನಿಯಮಗಳನ್ನು ಸಡಿಲಗೊಳಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಫೆ.11ರಿಂದಲೇ ಬೆಂಬಲಯೋಜನೆಯಡಿರೈತರಿಂದ ರಾಗಿಖರೀದಿ ಮಾಡಲಾಗುತ್ತಿದೆ. ಈಗಾಗಲೇ ನೋಂದಣಿಮಾಡಿಕೊಂಡಿರುವ ರೈತರಿಗೆಜನಸಂದಣಿ ಇಲ್ಲದೇ, ಸುಗಮವಾಗಿಖರೀದಿ ಕಾರ್ಯ ನಡೆ ಸಲು ಪ್ರತಿದಿನ 40ರಿಂದ 50 ರೈತರಿಗೆ ಟೋಕನ್ ನೀಡಲಾಗುತ್ತಿದೆ. ಪ್ರತಿ ದಿನ 600 ರಿಂದ700 ಕ್ವಿಂಟಲ್ ಖರೀದಿ ಮಾಡಲಾಗುತ್ತಿದೆ. ಹಣ ನೇರ ರೈತರ ಬ್ಯಾಂಕ್‌ಖಾತೆಗೆ ಜಮೆ ಮಾಡಲಾಗುತ್ತದೆ. –ಖಲೀಮ್ಮುಲ್ಲಾ ಖಾನ್,ವ್ಯವಸ್ಥಾಪಕ, ಕೆಸಿಎಸ್‌ಎಫ್ಸಿ ಗೋಡೌನ್, ಬಂಗಾರಪೇಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ
Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ
November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ
Marriage registration ಪ್ರಮಾಣಪತ್ರ ನೀಡುವ ಅಧಿಕಾರ ವಕ್ಫ್ ಬೋರ್ಡ್‌ಗೆ ಎಲ್ಲಿದೆ?
Libya; 8 ವರ್ಷಗಳ ಬಳಿಕ ಲಿಬಿಯಾಕ್ಕೆ ತೆರಳಲು ಭಾರತೀಯರಿಗೆ ಅನುಮತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.