ಕುಂದಾಪುರದಲ್ಲಿ ಸಾರಿಗೆ ಉಪ ಕಚೇರಿ : ಉಡುಪಿಯ ಹೊರೆ ಇಳಿಕೆಗೆ
Team Udayavani, Feb 16, 2022, 10:00 AM IST
ಉಡುಪಿ : ಉಡುಪಿ ಪ್ರಾದೇಶಿಕ ಸಾರಿಗೆ ಇಲಾಖೆಯ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಕುಂದಾಪುರದಲ್ಲಿ ಸಾರಿಗೆ ಪ್ರಾದೇಶಿಕ ಉಪಕಚೇರಿ ನಿರ್ಮಾಣ ಮಾಡುವ ಕುರಿತು ಸಾರಿಗೆ ಇಲಾಖೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಇದರ ಪ್ರಕ್ರಿಯೆಗಳೂ ತ್ವರಿತಗತಿಯಲ್ಲಿ ನಡೆಯುತ್ತಿವೆ.
ಇದು ಆದಷ್ಟು ಶೀಘ್ರದಲ್ಲಿ ಆರಂಭವಾದರೆ ಕುಂದಾಪುರ, ಬೈಂದೂರು ತಾಲೂಕಿನ ಜನತೆ ಉಡುಪಿಗೆ ಬಂದು ಹೋಗುವ ಒತ್ತಡ ತಪ್ಪಲಿದೆ. ಕುಂದಾಪುರ ಭಾಗಕ್ಕೆ ಆರ್‌ಟಿಒ ಕಚೇರಿ ಬೇಕೆನ್ನುವುದು ಸುಮಾರು 4 ವರ್ಷಗಳ ಹಿಂದಿನ ಬೇಡಿಕೆಯಾಗಿದೆ. ಈ ಬಗ್ಗೆ ಸ್ಥಳೀಯ ಶಾಸಕರೂ ಉತ್ಸುಕತೆ ವಹಿಸಿದ್ದಾರೆ.
ನೋಂದಣಿ ವಿವರ
ವಾರ್ಷಿಕ ಸರಾಸರಿ 5,413 ವಾಹನಗಳಂತೆ ಒಟ್ಟು 1,29,900 ವಾಹನಗಳು ಕುಂದಾಪುರ, ಬೈಂದೂರು ವ್ಯಾಪ್ತಿಯಲ್ಲಿ ನೋಂದಣಿಯಾಗಿದ್ದು, ಎಆರ್‌ಟಿಒ ಕಚೇರಿ ಆರಂಭಕ್ಕೆ ಬೇಕಾದ ಮಾನದಂಡಗಳಿಗೆ ಅನುಗುಣವಾಗಿದೆ. ಈಗಾಗಲೇ ರಾಜ್ಯದ 70 ಕಡೆ ಆರ್‌ಟಿಒ ಹಾಗೂ ಉಪಕಚೇರಿಗಳಿವೆ.
ಮಾನದಂಡವೇನು?
ಆರ್‌ಟಿಒ ಉಪ ಕಚೇರಿ ನಿರ್ಮಾಣಕ್ಕೆ ಆ ಭಾಗದಲ್ಲಿ ನೋಂದಣಿಯಾಗುತ್ತಿರುವ ವಾಹನಗಳ ಸಂಖ್ಯೆ ಹಾಗೂ ಆದಾಯ ಗಳನ್ನು ಪರಿಗಣನೆಗೆ ತೆಗೆದುಕೊಳ್ಳ ಲಾಗುತ್ತದೆ. ಅದರಂತೆ ಬೈಂದೂರು ಹಾಗೂ ಕುಂದಾಪುರ ಭಾಗದ ಸಾಧನೆ ಉತ್ತಮವಾಗಿಯೇ ಇದೆ. ಈಗಾಗಲೇ ಆರ್‌ಟಿಒ ಸೇವೆಗಳೆಲ್ಲ ಆನ್‌ಲೈನ್ ಮೂಲಕ ನಡೆಯು ತ್ತಿರುವುದರಿಂದ ಈ ಭಾಗದಲ್ಲಿ ಕಚೇರಿ ನಿರ್ಮಾಣಗೊಂಡರೆ ಜನರು ಚಾಲನಾ ಪರೀಕ್ಷೆಗಾಗಿ ವಿನಾಕಾರಣ ಉಡುಪಿಯವರೆಗೆ ಆಗಮಿಸುವುದು ತಪ್ಪಲಿದೆ.
ಪ್ರಸ್ತಾವನೆ ಸಲ್ಲಿಕೆ
ಕುಂದಾಪುರದಲ್ಲಿ ಆರ್‌ಟಿಒ ಉಪಕಚೇರಿ ನಿರ್ಮಿಸುವ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಬಾರಿ ಅದಕ್ಕೆ ಅನುಮೋದನೆ ಲಭಿಸುವ ಸಾಧ್ಯತೆಗಳಿವೆ.
-ಜೆ.ಪಿ.ಗಂಗಾಧರ್, ಪ್ರಾದೇಶಿಕ ಸಾರಿಗೆ ಅಧಿಕಾರಿ, ಉಡುಪಿ
ಉಡುಪಿಯಲ್ಲಿ ಸಿಬಂದಿ ಕೊರತೆ
ಉಡುಪಿಯ ಪ್ರಾದೇಶಿಕ ಸಾರಿಗೆ ಇಲಾಖೆ ಯಲ್ಲಿ ಶೇ.50ಕ್ಕೂ ಅಧಿಕ ಮಂದಿ ಸಿಬಂದಿಯ ಕೊರತೆಯಿದೆ. ಮಂಜೂರಾಗಿರುವ 36 ಹುದ್ದೆಗಳಲ್ಲಿ 14 ಮಂದಿಯಷ್ಟೇ ಕಾರ್ಯ ನಿರತರಾಗಿದ್ದಾರೆ. ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ, ಹಿರಿಯ ಮೋಟಾರು ವಾಹನ ನಿರೀಕ್ಷಕರು, ಲೆಕ್ಕ ಅಧೀಕ್ಷಕರು, ಗ್ರೂಪ್ ಡಿ ನೌಕರರ ಎಲ್ಲ ಹುದ್ದೆಗಳೂ ಖಾಲಿಯಾಗಿವೆ. ಹಾಗೂ ಇತರ ಹುದ್ದೆ ಗಳಿಗೂ ಮಂಜೂರಾತಿಯಾದಷ್ಟು ಮಂದಿ ಕಾರ್ಯನಿರತರಾಗಿಲ್ಲ. ಈ ನಡುವೆ ಕುಂದಾಪುರದಲ್ಲಿ ಉಪ ಕಚೇರಿ ನಿರ್ಮಾಣಗೊಂಡರೆ ಮತ್ತಷ್ಟು ಸಿಬಂದಿಯನ್ನು ನಿಯೋಜಿಸುವ ಅಗತ್ಯ ಎದುರಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
MUST WATCH
ಹೊಸ ಸೇರ್ಪಡೆ
Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್ ಮದುವೆ?
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.