ರಸಗೊಬ್ಬರ ವಿತರಣೆ, ದರಕ್ಕೆ ಶೀಘ್ರ ಕಾಯ್ದೆ?
ಸಾರ್ವಜನಿಕರಿಂದ ಪ್ರತಿಕ್ರಿಯೆ ಆಹ್ವಾನಿಸಿದ ಕೇಂದ್ರ; 26ರ ಒಳಗಾಗಿ ಸಲಹೆ, ಟೀಕೆ ಸಲ್ಲಿಸಲು ಕೋರಿಕೆ
Team Udayavani, Feb 17, 2022, 7:40 AM IST
ನವದೆಹಲಿ: ರಸಗೊಬ್ಬರ ವಿತರಣೆ, ಅದರ ಗುಣಮಟ್ಟ, ದರ ಮೇಲೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ವಿಶೇಷ ಕಾಯ್ದೆ ಜಾರಿ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಕೇಂದ್ರ ರಸಗೊಬ್ಬರ ಸಚಿವಾಲಯ ದೇಶವಾಸಿಗಳಿಂದ ಅದಕ್ಕೆ ಅಭಿಪ್ರಾಯ ಮತ್ತು ಸಲಹೆಗಳನ್ನು ಆಹ್ವಾನಿಸಿದೆ. ಫೆ.26ರ ಒಳಗಾಗಿ ಅದನ್ನು ಸಲ್ಲಿಸುವಂತೆಯೂ ಸಚಿವಾಲಯ ಮನವಿ ಮಾಡಿದೆ.
ಏಕೀಕೃತ ಘಟಕ ಪೋಷಕಾಂಶ ನಿರ್ವಹಣಾ ವಿಧೇಯಕ 2022 (ಇಂಟೆಗ್ರೇಟೆಡ್ ಪ್ಲಾಂಟ್ ನ್ಯೂಟ್ರಿಶಿಯನ್ ಮ್ಯಾನೇಜ್‌ಮೆಂಟ್ ಬಿಲ್ 2022) ಅನ್ನು www.fert.nic.in/node/2170 ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಅದನ್ನು ನೋಡಿ ಸಲಹೆ, ಅಭಿಪ್ರಾಯಗಳನ್ನು Under Secretary (Fertilizers Act), Department of Fertilizers, Room No. 222, A-wing, Shastri Bhawan, New Delhi 110001. ಅಂಚೆ ಮೂಲಕ ಮತ್ತು ಇ-ಮೇಲ್ ಮೂಲಕ[email protected] ಗೆ ಸಲ್ಲಿಸಲು ಮನವಿ ಮಾಡಿಕೊಳ್ಳಲಾಗಿದೆ.
ವಿಧೇಯಕದ ಪ್ರಮುಖಾಂಶ
– ಬಯೋ ರಸಗೊಬ್ಬರ, ಸಾವಯವ ಗೊಬ್ಬರ, ನ್ಯಾನೋ ಫರ್ಟಿಲೈಸರ್‌ಗಳ ಬಳಕೆ.
– ದೇಶದಲ್ಲಿ ರಸಗೊಬ್ಬರ ಉತ್ಪಾದನೆ, ವಿತರಣೆ ಮತ್ತು ದರ ನಿಗದಿ ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸಿ, ಆ ಕ್ಷೇತ್ರದ ಮಾರಾಟ ವ್ಯವಸ್ಥೆ ಉತ್ತಮ ಪಡಿಸುವ ಗುರಿ.
– ಸರಿಯಾದ ರೀತಿಯಲ್ಲಿ ರಸಗೊಬ್ಬರಗಳ ವಿತರಣೆ ಮಾಡುವ ಉತ್ಪಾದಕ, ಡೀಲರ್, ಖರೀದಿದಾರರಿಗೆ ಅನ್ಯಾಯವಾಗದಂತೆ ಬೆಲೆ ನಿಯಂತ್ರಣಕ್ಕೆ ಪರಿಹಾರೋಪಾಯಗಳು.
– ಸರ್ಕಾರ ನಿಗದಿಪಡಿಸಿದ ಗರಿಷ್ಠ ಮಾರಾಟ ಬೆಲೆಯಿಂದ ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರ ಮಾರಾಟ ಮಾಡದಂತೆ ಡೀಲರ್, ಮಾರಾಟಗಾರರ ಮೇಲೆ ನಿಯಂತ್ರಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Madikeri: ಲಾರಿ ಡಿಕ್ಕಿಯಾಗಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿ ಸಾವು
Mumbai Cricket: ಸಚಿನ್ ತೆಂಡೂಲ್ಕರ್ ಸಲಹೆಯನ್ನೂ ನಿರ್ಲಕ್ಷಿಸಿದರಾ ಪೃಥ್ವಿ ಶಾ..
Teacher: ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
Marriages: ನಗರದಲ್ಲಿ 1 ತಿಂಗಳಲ್ಲಿ 13,000 ಮದುವೆ!
High Court: ಗುರು ರಾಘವೇಂದ್ರ ಬ್ಯಾಂಕ್ ಅಧ್ಯಕಗೆ ಜಾಮೀನು ನಿರಾಕರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.