ಅಪಘಾತಕ್ಕೆ ಬಾಯ್ದೆರೆದಂತಿದೆ ಮುಚ್ಚದ ಚರಂಡಿ

ನಾವುಂದ ಅಂಡರ್‌ಪಾಸ್‌ನ ಸರ್ವಿಸ್‌ ರಸ್ತೆ

Team Udayavani, Feb 17, 2022, 5:05 AM IST

ಅಪಘಾತಕ್ಕೆ ಬಾಯ್ದೆರೆದಂತಿದೆ ಮುಚ್ಚದ ಚರಂಡಿ

ಮರವಂತೆ: ಕುಂದಾಪುರ – ಬೈಂದೂರು ರಾಷ್ಟ್ರೀಯ ಹೆದ್ದಾರಿ 66ರ ನಾವುಂದ ಅಂಡರ್‌ಪಾಸ್‌ ಬಳಿಯ ಎರಡೂ ಕಡೆಗಳ ಸರ್ವಿಸ್‌ ರಸ್ತೆಯ ಹಲವೆಡೆಗಳಲ್ಲಿ ಚರಂಡಿಯನ್ನು ಮುಚ್ಚದೆ ಹಾಗೇ ಬಿಟ್ಟಿದ್ದು, ಇದು ಅಪಘಾತವನ್ನು ಆಹ್ವಾನಿಸುವಂತಿದೆ.

ಕುಂದಾಪುರ – ಬೈಂದೂರು ಹೆದ್ದಾರಿಯ ಅರೆಬರೆ ಕಾಮಗಾರಿಯ ಅವ್ಯವಸ್ಥೆಯು ಸಾರ್ವಜನಿಕರಿಗೆ ನಿತ್ಯ ಮುಗಿಯದ ಗೋಳಾಗಿ ಪರಿಣಮಿ ಸಿದೆ. ಸಂಗಮ್‌ ಬಳಿಯಿಂದ ಆರಂಭಿಸಿ, ತಲ್ಲೂರು, ಹೆಮ್ಮಾಡಿಯಾಗಿ ಬೈಂದೂರು, ಶಿರೂರುವರೆಗಿನ ಅಧ್ವಾನ ಮಾರಕವಾದಂತಿದೆ.

ಅಪಘಾತ ತಾಣ
ಹೆದ್ದಾರಿ ಹಾದು ಹೋಗುವ ನಾವುಂದ ದಲ್ಲಿ ಅಂಡರ್‌ಪಾಸ್‌ ನಿರ್ಮಿಸಿದ್ದು, ಎರಡೂ ಕಡೆಗಳಲ್ಲಿಯೂ ಸರ್ವಿಸ್‌ ರಸ್ತೆ ಆಗಿದೆ. ಆದರೆ ಚರಂಡಿ ಕಾಮಗಾರಿ ಮಾತ್ರ ಅರೆಬರೆಯಾಗಿದೆ. ಎರಡೂ ಕಡೆಯ ಸರ್ವಿಸ್‌ ರಸ್ತೆಗಳಲ್ಲಿಯೂ ಚರಂಡಿ ನಿರ್ಮಿಸಿದ್ದು, ಆದರೆ ಚರಂಡಿಯನ್ನು ಸರಿಯಾಗಿ ಮುಚ್ಚದೇ, 4-5 ಕಡೆಗಳಲ್ಲಿ ಹಾಗೇ ಬಾಕಿ ಬಿಟ್ಟಿದ್ದು, ಇಲ್ಲಿ ರಾತ್ರಿ ವೇಳೆ ತಿಳಿಯದೇ ಬೈಕ್‌ ಸವಾರರು ಬಿದ್ದ ನಿದರ್ಶನವು ಇದೆ. ಅದರಲ್ಲೂ ಪ್ರಮುಖವಾಗಿ ಅಂಡರ್‌ಪಾಸ್‌ ಬಳಿಯ ಪೆಟ್ರೋಲ್‌ ಬಂಕ್‌ ಬಳಿಯ ಚರಂಡಿ ಮುಚ್ಚದೆ ಇರುವುದು, ಅಪಾಯವನ್ನು ಆಹ್ವಾನಿಸುವಂತಿದೆ. ಇನ್ನು ಉರ್ದು ಶಾಲೆಗೆ ಹೋಗುವಲ್ಲಿಯೂ ಸಹ ಚರಂಡಿ ಮುಚ್ಚದೇ ಅಪಘಾತಕ್ಕೆ ರಹದಾರಿಯಾದಂತಿದೆ.

ಮನವಿಗೆ ಸ್ಪಂದನೆಯೇ ಇಲ್ಲ
ಈ ಚರಂಡಿಯನ್ನು ಮುಚ್ಚದೆ ಇರುವ ಬಗ್ಗೆ ನಾವುಂದ ಗ್ರಾಮ ಪಂಚಾಯತ್‌ನಿಂದ ಅನೇಕ ಬಾರಿ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿರುವ ಐಆರ್‌ಬಿಯ ಸಂಬಂಧಪಟ್ಟ ಎಲ್ಲರಿಗೂ ಮನವಿ ಸಲ್ಲಿಸಲಾಗಿದೆ. ಆದರೆ ಈವರೆಗೆ ಈ ಬಗ್ಗೆ ಯಾರೂ ಸಹ ಗಂಭೀರವಾಗಿ ಪರಿಗಣಿಸಿ, ಸಮಸ್ಯೆ ಬಗೆಹರಿಸುವ ಪ್ರಯತ್ನವನ್ನೇ ಮಾಡಿಲ್ಲ. ಸಾರ್ವಜನಿಕರಿಂದಲೂ ಅನೇಕ ಬಾರಿ ಈ ಬಗ್ಗೆ ಮನವಿ ಸಲ್ಲಿಸಿದರೂ, ಪ್ರಯೋಜನವಾಗಿಲ್ಲ.

ಮುಚ್ಚಲು ಆಗ್ರಹ
ನಾವುಂದ ಅಂಡರ್‌ಪಾಸ್‌ ಬಳಿಯ ಎರಡೂ ಬದಿಯ ಸರ್ವಿಸ್‌ ರಸ್ತೆಗೆ ತಾಗಿಕೊಂಡಿರುವ ಚರಂಡಿಯನ್ನು ಮುಚ್ಚದೇ ಸಮಸ್ಯೆಯಾಗುತ್ತಿದ್ದು, ಗೊತ್ತಿಲ್ಲದೆ ಬಿದ್ದರೆ ಪ್ರಾಣ ಭೀತಿಯು ಎದುರಾಗಬಹುದು. ಆದ್ದರಿಂದ ಕೂಡಲೇ ತೆರೆದ ಚರಂಡಿಯನ್ನು ಮುಚ್ಚಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಅನೇಕ ಬಾರಿ ಮನವಿ
ನಾವು ಗ್ರಾಮ ಪಂಚಾಯತ್‌ ವತಿಯಿಂದ ಚರಂಡಿ ಮುಚ್ಚದೇ ಬಾಕಿ ಇರುವ ಕಡೆಗಳಲ್ಲ ಮುಚ್ಚುವಂತೆ ಅನೇಕ ಬಾರಿ ಮನವಿ ಸಲ್ಲಿಸಲಾಗಿದೆ. ಇದಲ್ಲದೆ ಪಂಚಾಯತ್‌ ವ್ಯಾಪ್ತಿಯಲ್ಲಿ ಹೆದ್ದಾರಿಯ ಅನೇಕ ಸಮಸ್ಯೆ ಬಗೆಹರಿಸುವಂತೆಯೂ ಸಂಬಂಧಪಟ್ಟವರಿಗೂ ಗಮನಕ್ಕೆ ತರಲಾಗಿದೆ. ಈಗ ಮತ್ತೆ ಈ ಬಗ್ಗೆ ಪಂಚಾಯತ್‌ನಿಂದ ಮನವಿ ಸಲ್ಲಿಸಲಾಗುವುದು.
-ಜಾನಕಿ ಮೊಗವೀರ, ಅಧ್ಯಕ್ಷರು,
ನಾವುಂದ ಗ್ರಾ.ಪಂ.

 

ಟಾಪ್ ನ್ಯೂಸ್

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ

BJP FLAG

Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ

kolahara-TV

By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13

Bramavara: ವಿದ್ಯಾರ್ಥಿ ಕಾಲಿನ ಮೇಲೆ ಸಾಗಿದ ಪಿಕ್‌ಅಪ್‌

Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ

Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ

Katpadi: ಸ್ಕೂಟರ್‌ಗೆ ಟೆಂಪೋ ಢಿಕ್ಕಿ 

Katpadi: ಸ್ಕೂಟರ್‌ಗೆ ಟೆಂಪೋ ಢಿಕ್ಕಿ 

Karkala: ಬೈಕ್‌ ಢಿಕ್ಕಿ; ಗಾಯ

Karkala: ಬೈಕ್‌ ಢಿಕ್ಕಿ; ಗಾಯ

ನ. 26 : ಕಾಪುವಿನಲ್ಲಿ ಸಂವಿಧಾನ ಉಳಿಸಿ ಬೃಹತ್ ಆಂದೋಲನ ಮತ್ತು ಜಾಗೃತಿ ಜಾಥಾ ಆಯೋಜನೆ

ನ. 26 : ಕಾಪುವಿನಲ್ಲಿ ಸಂವಿಧಾನ ಉಳಿಸಿ ಬೃಹತ್ ಆಂದೋಲನ ಮತ್ತು ಜಾಗೃತಿ ಜಾಥಾ ಆಯೋಜನೆ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

Syed Mushtaq Ali Trophy T20: ಕರ್ನಾಟಕಕ್ಕೆ 6 ರನ್‌ಗಳ ಸೋಲು

Syed Mushtaq Ali Trophy T20: ಕರ್ನಾಟಕಕ್ಕೆ 6 ರನ್‌ಗಳ ಸೋಲು

ICC Champions Trophy: ನ.26ಕ್ಕೆ ಐಸಿಸಿ ತುರ್ತು ಸಭೆ?

ICC Champions Trophy: ನ.26ಕ್ಕೆ ಐಸಿಸಿ ತುರ್ತು ಸಭೆ?

16

Pro Kabaddi: ಗುಜರಾತ್‌ಗೆ ರೋಚಕ ಜಯ

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.