ಭದ್ರಾ ಮೇಲ್ದಂಡೆಗೆ ಕೊನೆಗೂ ರಾಷ್ಟ್ರೀಯ ಯೋಜನೆ ಮಾನ್ಯತೆ


Team Udayavani, Feb 18, 2022, 6:00 AM IST

Untitled-1

ಮಧ್ಯ ಕರ್ನಾಟಕದ ಬಯಲುಸೀಮೆಯ ಜಿಲ್ಲೆಗಳಿಗೆ ನೀರು ಹರಿಸುವ ಮಹತ್ವಾಕಾಂಕ್ಷಿಯ ಭದ್ರಾ ಮೇಲ್ದಂಡೆಗೆ ಕೊನೆಗೂ ರಾಷ್ಟ್ರೀಯ ಯೋಜನೆ ಮಾನ್ಯತೆ ಸಿಕ್ಕಿದೆ. ಈ ಮೂಲಕ ರಾಷ್ಟ್ರೀಯ ಯೋಜನೆ ಎಂಬ ಮನ್ನಣೆ ಪಡೆದ ಹಾಗೂ ಕಾಮಗಾರಿಗೆ ಶೇ.60ರಷ್ಟು ಅನುದಾನ ಪಡೆದು ಕೊಳ್ಳುತ್ತಿರುವ ರಾಜ್ಯದ ಪ್ರಪ್ರಥಮ ಯೋಜನೆಯಾಗಿದೆ. ಯೋಜನೆಗೆ ಇನ್ನೇನು ರಾಷ್ಟ್ರೀಯ ಮಾನ್ಯತೆ ಸಿಕ್ಕಿತು ಎನ್ನುವಾಗ ಆಂಧ್ರಪ್ರದೇಶ ಇದಕ್ಕೆ ತಕರಾರು ವ್ಯಕ್ತಪಡಿಸಿತ್ತು. ಆದರೆ ರಾಜ್ಯ ಸರಕಾರ, ಕೇಂದ್ರ ಜಲ ಆಯೋಗದಲ್ಲಿ ಸಮರ್ಥ ಉತ್ತರ ನೀಡಿದ್ದರಿಂದ ಆಂಧ್ರದ ತಕರಾರು ನಗಣ್ಯವಾಯಿತು.  2008ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು.  ಹತ್ತು ವರ್ಷಗಳಿಂದ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಇದರಿಂದ ಯೋಜನ ವೆಚ್ಚ ಮೂರು ಪಟ್ಟು ಹೆಚ್ಚಾಗಿದೆ. ಸದ್ಯ ರಾಷ್ಟ್ರೀಯ ಮಾನ್ಯತೆ ದೊರೆತಿರುವುದರಿಂದ ಯೋಜನೆಗೆ ವೇಗ ಸಿಗಲಿದೆ. ಇದರ ಜತೆಯಲ್ಲಿ ಈವರೆಗೆ ಆಗಿರುವ ವೆಚ್ಚ ಹೊರತುಪಡಿಸಿ ಇನ್ನು ಮುಂದೆ ನಡೆಯುವ ಕಾಮಗಾರಿಯ ಶೇ.60ರಷ್ಟು ಅನುದಾನ ನೇರವಾಗಿ ಕೇಂದ್ರ ದಿಂದಲೇ ಬರಲಿದೆ. ಯೋಜನೆಗೆ ಕೇಂದ್ರ ಸರಕಾರದಿಂದ 12,500 ಕೋಟಿ ರೂ. ಅನುದಾನ ದೊರೆಯಲಿದೆ ಎಂದು ಖುದ್ದು  ಮುಖ್ಯಮಂತ್ರಿ ಬೊಮ್ಮಾಯಿ ಆಶಾಭಾವನೆ ಹೊಂದಿದ್ದಾರೆ.

ಸ್ವಾತಂತ್ರ್ಯ ದೊರೆತು 75 ವರ್ಷಗಳ ಅನಂತರ ಮಧ್ಯ ಕರ್ನಾಟಕದ ಚಿತ್ರದುರ್ಗ ಜಿಲ್ಲೆಗೆ ನೀರು ಹರಿಯಲಿದೆ. ಅಲ್ಲದೆ ಪಕ್ಕದ ದಾವಣಗೆರೆ, ಚಿಕ್ಕಮಗಳೂರು ಹಾಗೂ ತುಮಕೂರು ಜಿಲ್ಲೆಗಳಿಗೂ ಯೋಜನೆಯಿಂದ ಹೆಚ್ಚು ಅನುಕೂಲವಾಗಲಿದೆ.

ಭದ್ರಾ ಮೇಲ್ದಂಡೆ ಯೋಜನೆ 4 ಜಿಲ್ಲೆಗಳ 12 ತಾಲೂಕುಗಳ 2,25,515 ಹೆಕ್ಟೇರ್‌ ಪ್ರದೇಶಕ್ಕೆ ನೀರು ಹರಿಯಲಿದೆ. 367 ಕೆರೆಗಳಿಗೆ ಪ್ರತೀ ವರ್ಷ ಅರ್ಧದಷ್ಟು ನೀರು ತುಂಬಿಸಲು 6 ಟಿಎಂಸಿ, ಚಿತ್ರದುರ್ಗ ಜಿಲ್ಲೆಯಲ್ಲಿರುವ ವಾಣಿವಿಲಾಸ ಸಾಗರಕ್ಕೆ 2 ಟಿಎಂಸಿ ನೀರು ಮೀಸಲಿಡಲಾಗಿದೆ. ಕೃಷ್ಣಾ ಕೊಳ್ಳ ವ್ಯಾಪ್ತಿಗೆ ಸೇರುವ ಈ ಯೋಜನೆಯಡಿ ತುಂಗಾ ನದಿಯಿಂದ 17.4 ಟಿಎಂಸಿ ಅಡಿ ನೀರು ಸೇರಿಕೊಂಡಂತೆ ಭದ್ರಾ ಜಲಾಶಯದಿಂದ 29.9 ಟಿಎಂಸಿ ಅಡಿ ನೀರನ್ನು ನಾಲ್ಕು ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗಿದೆ. ಯೋಜನೆ ಹಲವು ಬಾರಿ ಪರಿಷ್ಕರಣೆಯಾಗಿದ್ದು, 2020, ಡಿ.16ರಂದು ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ಯೋಜನಾ ವೆಚ್ಚ 21,473.67 ಕೋಟಿ ರೂ.ಗಳಾಗಿದೆ.

ಇತ್ತೀಚೆಗೆ ಭದ್ರಾ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದ್ದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಕಾಮಗಾರಿ ಆರಂಭವಾಗಿ ಹತ್ತು ವರ್ಷ ಕಳೆದರೂ ಶೇ.40ರಷ್ಟು ಕಾಮಗಾರಿ ಪೂರ್ಣಗೊಂಡಿಲ್ಲ. ತ್ವರಿತಗತಿಯಲ್ಲಿ ಮುಗಿಯಬೇಕು. ಗುತ್ತಿಗೆದಾರರಿಗೆ ನೀಡಿರುವ ಅವ ಧಿ ಮೀರಿದ್ದರೆ ದಂಡ ವಿ ಧಿಸಿ ಎಂದು ತಾಕೀತು ಮಾಡಿದ್ದರು.  ಕುಂಟು ನೆಪಗಳನ್ನು ಬಿಟ್ಟು ಕಾಮಗಾರಿಗೆ ವೇಗ ನೀಡಿದರೆ ಬರದ ನಾಡಿಗೆ ಭಾಗೀರಥಿ ಹರಿಯಲಿದ್ದಾಳೆ.

ಸತತ ಬರದ ಹೊಡೆತಕ್ಕೆ ಸಿಲುಕಿ ನಲುಗಿ ಹೋಗಿದ್ದ ಚಿತ್ರದುರ್ಗ ಜಿಲ್ಲೆಗೆ ನೀರು ಹರಿಸಬೇಕು ಎನ್ನುವುದು ಈ ಭಾಗದ ಜನರ ದಶಕಗಳ ಬೇಡಿಕೆ. ಮಾಜಿ ಸಿಎಂ ಎಸ್‌. ನಿಜಲಿಂಗಪ್ಪ ಅವರ ಆಸೆ ಕೂಡ ಇದಾಗಿತ್ತು. ಇದರ ಜತೆ ವಾಣಿವಿಲಾಸ ಸಾಗರಕ್ಕೆ ಮೀಸಲಿಟ್ಟಿರುವ 2 ಟಿಎಂಸಿ ನೀರನ್ನು 5 ಟಿಎಂಸಿಗೆ ಹೆಚ್ಚಿಸಬೇಕು ಎನ್ನುವುದು ಜಿಲ್ಲೆಯ ಜನರ ಪ್ರಮುಖ ಬೇಡಿಕೆಯಾಗಿದೆ. ಖುದ್ದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿರುವಂತೆ ವಿವಿ ಸಾಗರ ಭರ್ತಿಯಾದರೆ ಮಧ್ಯ ಕರ್ನಾಟಕದ ಪ್ರತೀ ಹಳ್ಳಿಗೂ ಕುಡಿಯುವ ನೀರು ಒದಗಿಸಲು ಸಾಧ್ಯ. ಬರದ ಛಾಯೆ ದೂರವಾಗಿ ಹಸುರು ನಳನಳಿಸಲಿದೆ.

ಟಾಪ್ ನ್ಯೂಸ್

renukaacharya

BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ

1-jan-26

R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು

1-sp

Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್

1-dee

Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ

1-ani

Mangaluru; ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ : ಮೂವರ ಬಂಧನ

ಕಳಕಮಲ್ಲಯ್ಯ ಕ್ಷೇತ್ರ: ದಕ್ಷಿಣ ಕಾಶಿ ಪ್ರಸಿದ್ಧಿಯ ಸುಕ್ಷೇತ್ರ ಶ್ರೀಕಾಲ ಕಾಲೇಶ್ವರ…

ಕಳಕಮಲ್ಲಯ್ಯ ಕ್ಷೇತ್ರ: ದಕ್ಷಿಣ ಕಾಶಿ ಪ್ರಸಿದ್ಧಿಯ ಸುಕ್ಷೇತ್ರ ಶ್ರೀಕಾಲ ಕಾಲೇಶ್ವರ…

ಇದು ವಿಶ್ವದ ಅತಿ ಎತ್ತರದ ಏಕಶಿಲಾ ಬೆಟ್ಟ… Online ನೋಂದಣಿ ಇಲ್ಲದೆ ಚಾರಣಕ್ಕೆ ಅವಕಾಶವಿಲ್ಲ

ಇದು ವಿಶ್ವದ ಅತಿ ಎತ್ತರದ ಏಕಶಿಲಾ ಬೆಟ್ಟ… Online ನೋಂದಣಿ ಇಲ್ಲದೆ ಚಾರಣಕ್ಕೆ ಅವಕಾಶವಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Editorial: ಕೊನೆಗೂ ಬಂತು ವಾರಾಹಿ ನೀರು; ಮಿತವಾಗಿರಲಿ ಬಳಕೆ

5

Editorial: ಅರೆಬರೆ ಕಾಮಗಾರಿ ಜೀವ ತಿನ್ನದಿರಲಿ

3

Editrorial: ಬೀದಿಬದಿ ವ್ಯಾಪಾರ ವಲಯ ನಿರ್ಮಾಣ; ಅನುಷ್ಠಾನಕ್ಕೆ ಆದ್ಯತೆ ಸಿಗಲಿ

1

Editorial: ತಾಲೂಕು ಕ್ರೀಡಾಂಗಣ ನಿರ್ಮಾಣದ ಪ್ರಕ್ರಿಯೆ ಜರೂರಾಗಿ ನಡೆಯಲಿ

US-india

Editorial: ರಾಜ್ಯದಲ್ಲಿ ಅಮೆರಿಕ ದೂತಾವಾಸ: ಈಡೇರಿದ ಬಹುಕಾಲದ ಬೇಡಿಕೆ

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

crime

Padubidri: ಸ್ಕೂಟಿಗೆ ಈಚರ್‌ ವಾಹನ ಢಿಕ್ಕಿ; ಸವಾರನಿಗೆ ಗಾಯ

renukaacharya

BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ

1-jan-26

R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು

1-wl

ಅಖಿಲ ಭಾರತ ಅಂತರ್‌ ವಿ.ವಿ.ವೇಟ್‌ಲಿಫ್ಟಿಂಗ್‌:ಮಂಗಳೂರು ವಿವಿ ರನ್ನರ್ ಅಪ್‌

1-sp

Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.