ಉಕ್ರೇನ್‌ನಲ್ಲಿ ಕೈಗೆಟಕುವ ವೈದ್ಯ ಶಿಕ್ಷಣ
Team Udayavani, Feb 18, 2022, 11:30 AM IST
ಪೂರ್ವ ಯುರೋಪ್‌ನ ರಾಷ್ಟ್ರ ಉಕ್ರೇನ್ ಈಗ ಜಗತ್ತನ್ನು ತುದಿಗಾಲಿನಲ್ಲಿ ನಿಲ್ಲಿಸಿದೆ. ರಷ್ಯಾ ಆ ದೇಶದ ಮೇಲೆ ದಾಳಿ ಮಾಡಲಿದೆ ಎಂಬ ಅಂಶ ಈಗ ಎಲ್ಲರ ಕಳವಳಕ್ಕೆ ಕಾರಣವಾಗಿದೆ. ಇನ್ನು ಭಾರತ ಮತ್ತು ಉಕ್ರೇನ್ ವಿಚಾ ರಕ್ಕೆ ಬರುವುದಿದ್ದರೆ, ಎರಡೂ ದೇಶಗಳ ನಡುವೆ ರಾಜ ತಾಂತ್ರಿಕವಾಗಿ ಉತ್ತಮ ಬಾಂಧವ್ಯವಿದೆ. ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಉಕ್ರೇನ್‌ನಲ್ಲಿ ಅತ್ಯುತ್ತಮ ವಿವಿಗಳಿವೆ ಮತ್ತು ಕೈಗೆ ಎಟಕುವ ರೀತಿಯ ಶುಲ್ಕವಿದೆ.
ಅಧ್ಯಯನ ಅವಕಾಶಗಳು :
ವೈದ್ಯಕೀಯ ಶಿಕ್ಷಣ, ಕಂಪ್ಯೂಟರ್ ಸೈನ್ಸ್, ನರ್ಸಿಂಗ್ ಕೋರ್ಸ್, ನಾಗರಿಕ ವಿಮಾನಯಾನ, ಎಂಜಿನಿಯರಿಂಗ್, ಅರ್ಥಶಾಸ್ತ್ರ, ಎಂಬಿಎ ಮತ್ತು ಪಿಎಚ್.ಡಿ.
ವೈದ್ಯಕೀಯ ಶಿಕ್ಷಣಕ್ಕೆ ಬೆಸ್ಟ್ :
ವೈದ್ಯ ಶಿಕ್ಷಣಕ್ಕೆ ಜಗತ್ತಿನಲ್ಲಿಯೇ ಅತ್ಯಂತ ಉತ್ಕೃಷ್ಟ ಶಿಕ್ಷಣ ಸಂಸ್ಥೆಗಳು ಬೇರೆ ರಾಷ್ಟ್ರಗಳಲ್ಲಿ ಇದ್ದರೂ ಉಕ್ರೇನ್ ನಲ್ಲಿ ಇರುವ ಸಂಸ್ಥೆಗಳೂ ಕಡಿಮೆ ಏನಲ್ಲ. ಅಂತಾರಾಷ್ಟ್ರೀಯವಾಗಿ ಇರುವಂಥ ಮಾನದಂಡಗಳಿಗೆ ಅನುಗುಣವಾಗಿ ಅವುಗಳು ಕಾರ್ಯನಿರ್ವ ಹಿಸುತ್ತಿವೆ. ಎಂಬಿಬಿಎಸ್ ಮತ್ತು ಎಂ.ಡಿ. ಕೋರ್ಸ್‌ಗಳನ್ನು ಹೆಚ್ಚು ಸ್ಪರ್ಧಾತ್ಮಕವಾಗಿ ಕಲಿಸಲಾಗುತ್ತದೆ. ಅಲ್ಲಿ ಒಟ್ಟು ಆರು ವರ್ಷಗಳು ಬೇಕಾಗುತ್ತವೆ.
ಜನಪ್ರಿಯ ಕೋರ್ಸ್ ದಂತ ವೈದ್ಯಕೀಯ :
ನರ್ಸಿಂಗ್ ಕೋರ್ಸ್‌ಗಳು- ಅದರ ಅವಧಿ ಎರಡು ವರ್ಷಗಳು ಆರ್ಥೋಪೆಡಿಕ್ ಡೆಂಟಿಸ್ಟ್ರಿ- 2 ವರ್ಷದ ಕೋರ್ಸ್. ಕೋರ್ಸ್ ಮುಕ್ತಾಯದಲ್ಲಿ ಬ್ಯಾಚುಲರ್ ಡೆಂಟಲ್ ಆರ್ಥೋಪೆಡಿಕ್ ವೈದ್ಯ ಸ್ನಾತಕೋತ್ತರ ಪದವಿಗಳು- 2-3 ವರ್ಷದ ಅವಧಿ
ಆಯ್ಕೆ ಏಕೆ? :
ಯು.ಕೆ., ಅಮೆರಿಕ ಮತ್ತು ಇತರ ದೇಶಗಳಿಗೆ ಹೋಲಿಕೆ ಮಾಡಿದರೆ ಕಡಿಮೆ ವಚ್ಚ ಐಇಎಲ್‌ಟಿಎಸ್, ಟಿಒಇಎಫ್ಎಲ್‌ನಂಥ ಇಂಗ್ಲಿಷ್ ಭಾಷಾ ಪ್ರಾವೀಣ್ಯತೆ ಸಾಬೀತು ಮಾಡುವ ಪರೀಕ್ಷೆ ಅಗತ್ಯವಿಲ್ಲ
ವೆಚ್ಚವೆಷ್ಟು? :
- ಎಂಬಿಬಿಎಸ್ ಕಲಿಯಲು ಟ್ಯೂಶನ್ ಶುಲ್ಕ 3,500 ಡಾಲರ್‌ನಿಂದ 5 ಸಾವಿರ ಡಾಲರ್ (2.62 ಲಕ್ಷ ರೂ.ಗಳಿಂದ75 ಲಕ್ಷ ರೂ.). ದೇಶದ ಖಾಸಗಿ ಕಾಲೇಜುಗಳಲ್ಲಿ ಇದು 7 ಲಕ್ಷ ರೂ.ಗಳಿಂದ 10 ಲಕ್ಷ ರೂ. ಗಳಾಗಿವೆ.
- ಭಾರತದಿಂದ ಸರಿ ಸುಮಾರು 20 ಸಾವಿರ ಮಂದಿ ವಿದ್ಯಾರ್ಥಿಗಳು ಆ ದೇಶದಲ್ಲಿ ಕಲಿಯುತ್ತಿದ್ದಾರೆ. ಈ ಪೈಕಿ ನಾಲ್ಕು ಸಾವಿರ ಮಂದಿ ವೈದ್ಯಕೀಯ ಕೋರ್ಸ್ ಕಲಿಯುತ್ತಿದ್ದಾರೆ. ಉಕ್ರೇನ್ ರಾಜಧಾನಿ ಕೀವ್‌ನಲ್ಲಿ 18 ಸಾವಿರ ಮಂದಿ ಭಾರತೀಯರು ಇದ್ದಾರೆ. ವಿಶ್ವಸಂಸ್ಥೆಯಲ್ಲಿನ ಭಾರತದ ರಾಯಭಾರಿ ನಡೆಸಿದ ಅಧ್ಯಯನದ ಪ್ರಕಾರ 20 ಸಾವಿರ ಮಂದಿ ಇದ್ದಾರೆ. ಈ ಪೈಕಿ ತೆಲಂಗಾಣದಿಂದಲೇ 1 ಸಾವಿರ ಮಂದಿ ಇದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Mangaluru: ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಾಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.