ಮಂಗಳೂರು ವಿಶ್ವವಿದ್ಯಾನಿಲಯ: ಅಂಕಪಟ್ಟಿ ಸಿಗದೆ ಪದವಿ ವಿದ್ಯಾರ್ಥಿಗಳಿಗೆ ಸಂಕಷ್ಟ!

Team Udayavani, Feb 18, 2022, 7:22 AM IST

ಮಂಗಳೂರು ವಿಶ್ವವಿದ್ಯಾನಿಲಯ: ಅಂಕಪಟ್ಟಿ ಸಿಗದೆ ಪದವಿ ವಿದ್ಯಾರ್ಥಿಗಳಿಗೆ ಸಂಕಷ್ಟ!

ಮಂಗಳೂರು: ದೇಶ-ವಿದೇಶದ ವಿಶ್ವವಿದ್ಯಾನಿಲಯ, ಪ್ರತಿಷ್ಠಿತ ಕಾಲೇಜುಗಳಲ್ಲಿ ಉನ್ನತ ವ್ಯಾಸಂಗದ ನಿರೀಕ್ಷೆಯಲ್ಲಿರುವ ಮಂಗಳೂರು ವಿ.ವಿ. ವ್ಯಾಪ್ತಿಯ ವಿದ್ಯಾರ್ಥಿಗಳು ಅಂಕಪಟ್ಟಿ ನೀಡುವಂತೆ ದುಂಬಾಲು ಬೀಳುತ್ತಿದ್ದಾರೆ.

ವಿ.ವಿ. ವ್ಯಾಪ್ತಿಯ ಎಲ್ಲ ಫಲಿತಾಂಶಗಳನ್ನು ಪ್ರಕಟಿಸಿದ ಅನಂತರವೇ ಅಂಕಪಟ್ಟಿ ನೀಡಬೇಕು ಎಂಬ ನಿಯಮ ಇರುವುದರಿಂದ ಈ ಅಂಕಪಟ್ಟಿ ಸಮಸ್ಯೆ ಎದುರಾಗಿದೆ. ಮಂಗಳೂರು ವಿ.ವಿ. ವ್ಯಾಪ್ತಿಯಲ್ಲಿ ವಿಶೇಷ ಪರೀಕ್ಷೆಯ ಮರುಮೌಲ್ಯಮಾಪನ ಈಗಷ್ಟೇ ನಡೆಯುತ್ತಿರುವುದರಿಂದ ಅದರ ಫಲಿತಾಂಶ ಬಂದ ಬಳಿಕವಷ್ಟೇ ಅಂಕಪಟ್ಟಿ ನೀಡಬೇಕಾ ಗಿದೆ. ಮಾರ್ಚ್‌ ಒಳಗೆ ಅಂಕಪಟ್ಟಿ ಸಿಗದಿದ್ದರೆ ಬಹುತೇಕ ವಿದ್ಯಾರ್ಥಿಗಳ ವಿದೇಶಿ ವಿದ್ಯಾಭ್ಯಾಸದ ಕನಸು ಅಥವಾ ಉನ್ನತ ವ್ಯಾಸಂಗದ ಆಸೆ ಭಗ್ನವಾಗಲಿದೆ.

ಕೊರೊನಾ ಮುನ್ನ ಪರೀಕ್ಷೆ ನಡೆದ 15-20 ದಿನಗಳ ಒಳಗೆ ಅಂಕಪಟ್ಟಿ ಆಯಾ ಕಾಲೇಜಿಗೆ ಬರುತ್ತಿತ್ತು. ಆದರೆ ಕೊರೊನಾ ಬಳಿಕ ಬೇರೆ ಬೇರೆ ಸ್ತರದಲ್ಲಿ ಪರೀಕ್ಷೆ ನಡೆದ ಕಾರಣ ಅಂಕಪಟ್ಟಿ ಕೂಡ ವಿಳಂಬವಾಗುತ್ತಿದೆ. ಅಂಕಪಟ್ಟಿ ಮುದ್ರಣ ವಿಚಾರದಲ್ಲಿಯೂ ಸಮಸ್ಯೆಯಾಗಿದೆ.

ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಬಾರದು ಎಂದು ವಿ.ವಿ.ಯು ಅಂಕಪಟ್ಟಿಯನ್ನು ವೆಬ್‌ಸೈಟ್‌ನಿಂದ ಪಡೆಯಲು ಅವಕಾಶ ನೀಡಿತ್ತು. ಅದಕ್ಕೆ ಆಯಾ ಕಾಲೇಜು ಪ್ರಾಂಶುಪಾಲರ ಸಹಿ ಪಡೆದು ಉನ್ನತ ವ್ಯಾಸಂಗ ಪ್ರವೇಶ ಸಂದರ್ಭ ಬಳಸಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ದೇಶ-ವಿದೇಶದ ಪ್ರತಿಷ್ಠಿತ ಕಾಲೇಜು, ವಿ.ವಿ.ಗಳಿಗೆ ಇದು ಮಾನ್ಯವಾಗುವುದಿಲ್ಲ. ಅಲ್ಲಿಗೆ ಗ್ರೇಡ್‌ ಆಧಾರಿತ ವಿ.ವಿ.ಯ ಅಧಿಕೃತ ಅಂಕಪಟ್ಟಿಯೇ ಬೇಕು. ಹೀಗಾಗಿ ಸಾವಿರಾರು ವಿದ್ಯಾರ್ಥಿಗಳು ಅಧಿಕೃತ ಅಂಕಪಟ್ಟಿಗಾಗಿ ಕಾಯುತ್ತಿದ್ದಾರೆ. “ವಾರದೊಳಗೆ ಅಂಕಪಟ್ಟಿ ನೀಡಲಾಗುವುದು’ ಎಂದು ವಿ.ವಿ. ಹೇಳಿ 2 ವಾರಗಳು ಕಳೆದಿವೆ. ವಿದೇಶಿ ವಿ.ವಿ.ಗಳ ಸೀಟ್‌ಗಾಗಿ ಲಕ್ಷಾಂತರ ರೂ. ಪಾವತಿಸಿ ವಿದ್ಯಾರ್ಥಿಗಳು ಕಾಯುತ್ತಿ ದ್ದಾರೆ. ವಿಳಂಬವಾದರೆ ಹಣವನ್ನೂ ಕಳೆದುಕೊಳ್ಳುವಂತಾದೀತು ಎದು ಉಪನ್ಯಾಸಕರೊಬ್ಬರು ಹೇಳಿದ್ದಾರೆ.

ವಿಶೇಷ ಪರೀಕ್ಷೆ; ಮರುಮೌಲ್ಯಮಾಪನ ಆರಂಭ :

ಕೊರೊನಾ ಮತ್ತು ಇತರ ಕಾರಣದಿಂದ ಪದವಿ ಪರೀಕ್ಷೆ ಬರೆಯಲು ಸಾಧ್ಯವಾಗದಿದ್ದವರಿಗೆ ಡಿಸೆಂಬರ್‌ ಕೊನೆಯಲ್ಲಿ ನಡೆದ ವಿಶೇಷ ಪರೀಕ್ಷೆಯ ಫಲಿತಾಂಶ ವಾರದ ಹಿಂದೆ ಪ್ರಕಟವಾಗಿದೆ. ಸುಮಾರು 30 ಸಾವಿರ ವಿದ್ಯಾರ್ಥಿಗಳ ಫಲಿತಾಂಶ ನೀಡಲಾಗಿದೆ. ಈ ಫಲಿತಾಂಶ ತಿರಸ್ಕರಿಸಿರುವ 3,011 ಮಂದಿಯ ಕೋರಿಕೆ ಮೇರೆಗೆ ಮರುಮೌಲ್ಯಮಾಪನ ಆರಂಭಿಸಲಾಗಿದೆ. ಜತೆಗೆ ಫಲಿತಾಂಶ ಬಗ್ಗೆ ಯಾವುದೇ ಸಮಸ್ಯೆ ಇದ್ದರೆ ವೆಬ್‌ಸೈಟ್‌ನಲ್ಲಿ ಹೆಲ್ಪ್ಲೈನ್‌ ಆರಂಭಿಸಲಾಗಿದೆ ಎಂದು ಪ್ರೊ| ಪಿ.ಎಲ್‌. ಧರ್ಮ “ಉದಯವಾಣಿ’ಗೆ ತಿಳಿಸಿದ್ದಾರೆ.

ಕಾಲೇಜಿನ ಸಂಪೂರ್ಣ ಫಲಿತಾಂಶ ಪ್ರಕಟಿಸಿದ ಅನಂತರವೇ ಅಂಕಪಟ್ಟಿ ನೀಡಬೇಕು ಎಂಬುದು ವಿ.ವಿ. ನಿಯಮಾವಳಿ. ವಿಶೇಷ ಪರೀಕ್ಷೆಯ ಮರುಮೌಲ್ಯಮಾಪನ 3 ದಿನಗಳೊಳಗೆ ಪೂರ್ಣವಾಗಲಿದೆ. ಅದಾದ ಬಳಿಕ 5 ಮತ್ತು 6ನೇ ಸೆಮಿಸ್ಟರ್‌ ಕೊನೆಯ ವರ್ಷದ ವಿದ್ಯಾರ್ಥಿಗಳಿಗೆ ಅಂಕಪಟ್ಟಿಯನ್ನು ಒಂದು ವಾರದೊಳಗೆ ನೀಡಲಾಗುವುದು.ಪ್ರೊ| ಪಿ.ಎಲ್‌. ಧರ್ಮ,  ಕುಲಸಚಿವರು (ಪರೀಕ್ಷಾಂಗ), ಮಂಗಳೂರು ವಿ.ವಿ.

ದಿನೇಶ್‌ ಇರಾ

ಟಾಪ್ ನ್ಯೂಸ್

ಐಶಾರಾಮಿ ಕಾರು, ಫೈವ್‌ ಸ್ಟಾರ್‌ ಹೋಟೆಲ್‌ ಶೈಲಿಯ ಆಶ್ರಮ…ಕೋಟಿ ಸಂಪತ್ತಿನ ಒಡೆಯ ಭೋಲೆ ಬಾಬಾ!

ಐಶಾರಾಮಿ ಕಾರು, ಫೈವ್‌ ಸ್ಟಾರ್‌ ಹೋಟೆಲ್‌ ಶೈಲಿಯ ಆಶ್ರಮ…ಕೋಟಿ ಸಂಪತ್ತಿನ ಒಡೆಯ ಭೋಲೆ ಬಾಬಾ!

Bison: ಕಾಡುಕೋಣ ಹಾವಳಿ… ಮನೆಯಿಂದ ಹೊರಬರಲು ಹೆದರುತ್ತಿರುವ ಯಡೂರು ಗ್ರಾಮಸ್ಥರು

Bison: ಕಾಡುಕೋಣ ಹಾವಳಿ… ಮನೆಯಿಂದ ಹೊರಬರಲು ಹೆದರುತ್ತಿರುವ ಯಡೂರು ಗ್ರಾಮಸ್ಥರು

Maski: ಸಕಾಲಕ್ಕೆ ಬಾರದ ಮಳೆ ಸಂಕಷ್ಟದಲ್ಲಿ ರೈತ… ವಾರದೊಳಗೆ ಮಳೆ ಬರದಿದ್ದರೆ ಬೆಳೆ ನಾಶ

Maski: ಸಕಾಲಕ್ಕೆ ಬಾರದ ಮಳೆ, ಸಂಕಷ್ಟದಲ್ಲಿ ರೈತ… ವಾರದೊಳಗೆ ಮಳೆ ಬರದಿದ್ದರೆ ಬೆಳೆ ನಾಶ

Kalki

Indian Cinema; ಕಲ್ಕಿ ಗೆಲುವಲ್ಲಿ ಸ್ಟಾರ್ ನಗು

Heavy rain in Amboli; Five feet water rise in Hidkal reservoir in one day

Belagavi: ಅಂಬೋಲಿ ಭಾಗದಲ್ಲಿ ಭಾರಿ ಮಳೆ; ಹಿಡಕಲ್ ಜಲಾಶಯದಲ್ಲಿ ಒಂದೇ ದಿನ ಐದಡಿ ನೀರು ಏರಿಕೆ

9 ತಿಂಗಳ ಹಿಂದೆ ನಾಪತ್ತೆಯಾದ ಮಗಳ ಬಗ್ಗೆ DCM ಪವನ್ ಕಲ್ಯಾಣ್ ಬಳಿ ದೂರು.. 9 ದಿನದಲ್ಲಿ ಪತ್ತೆ

9 ತಿಂಗಳ ಹಿಂದೆ ನಾಪತ್ತೆಯಾದ ಮಗಳ ಬಗ್ಗೆ DCM ಪವನ್ ಕಲ್ಯಾಣ್ ಬಳಿ ದೂರು.. 9 ದಿನದಲ್ಲಿ ಪತ್ತೆ

Bellary: ಡ್ರೈವಿಂಗ್ ಸ್ಕೂಲ್ ಲಾಭಿ; ಆರ್ ಟಿಓ ಕಚೇರಿ ಸಿಬ್ಬಂದಿ ಮೇಲೆ ಹಲ್ಲೆ

Bellary: ಡ್ರೈವಿಂಗ್ ಸ್ಕೂಲ್ ಲಾಭಿ; ಆರ್ ಟಿಓ ಕಚೇರಿ ಸಿಬ್ಬಂದಿ ಮೇಲೆ ಹಲ್ಲೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-mng

Mangaluru: ಈಡಿಸ್ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಮಾಡುವ ದಿನ ಕಾರ್ಯಕ್ರಮ

Ulaibettu ಪೆರ್ಮಂಕಿ ಉದ್ಯಮಿ ದರೋಡೆ ಪ್ರಕರಣ; 10 ಮಂದಿ ಆರೋಪಿಗಳ ಬಂಧನ

Ulaibettu ಪೆರ್ಮಂಕಿ ಉದ್ಯಮಿ ದರೋಡೆ ಪ್ರಕರಣ; 10 ಮಂದಿ ಆರೋಪಿಗಳ ಬಂಧನ

Dengue ಕರಾವಳಿಯಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಳ : ಮುಂಜಾಗರೂಕತೆಯೇ ಮದ್ದು

Dengue ಕರಾವಳಿಯಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಳ : ಮುಂಜಾಗರೂಕತೆಯೇ ಮದ್ದು

Heavy Rain ಬಿರುಸಿನ ಮಳೆ; ವಿವಿಧೆಡೆ ನೆರೆ, ವ್ಯಾಪಕ ಹಾನಿ, ನಷ್ಟHeavy Rain ಬಿರುಸಿನ ಮಳೆ; ವಿವಿಧೆಡೆ ನೆರೆ, ವ್ಯಾಪಕ ಹಾನಿ, ನಷ್ಟ

Heavy Rain ಬಿರುಸಿನ ಮಳೆ; ವಿವಿಧೆಡೆ ನೆರೆ, ವ್ಯಾಪಕ ಹಾನಿ, ನಷ್ಟ

Rain ಪೊರ್ಕೋಡಿ ದೇವಸ್ಥಾನದ ಬಳಿ ಕುಸಿದ ರಸ್ತೆ: ವಾಹನ ಸಂಚಾರ ವ್ಯತ್ಯಯ

Rain ಪೊರ್ಕೋಡಿ ದೇವಸ್ಥಾನದ ಬಳಿ ಕುಸಿದ ರಸ್ತೆ: ವಾಹನ ಸಂಚಾರ ವ್ಯತ್ಯಯ

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

ಐಶಾರಾಮಿ ಕಾರು, ಫೈವ್‌ ಸ್ಟಾರ್‌ ಹೋಟೆಲ್‌ ಶೈಲಿಯ ಆಶ್ರಮ…ಕೋಟಿ ಸಂಪತ್ತಿನ ಒಡೆಯ ಭೋಲೆ ಬಾಬಾ!

ಐಶಾರಾಮಿ ಕಾರು, ಫೈವ್‌ ಸ್ಟಾರ್‌ ಹೋಟೆಲ್‌ ಶೈಲಿಯ ಆಶ್ರಮ…ಕೋಟಿ ಸಂಪತ್ತಿನ ಒಡೆಯ ಭೋಲೆ ಬಾಬಾ!

9-crime

Bengaluru: ಬೈಕ್‌ಗೆ ಲಾರಿ ಡಿಕ್ಕಿ : ರಿಯಲ್‌ ಎಸ್ಟೇಟ್‌ ಏಜೆಂಟ್‌ ಸಾವು

Bison: ಕಾಡುಕೋಣ ಹಾವಳಿ… ಮನೆಯಿಂದ ಹೊರಬರಲು ಹೆದರುತ್ತಿರುವ ಯಡೂರು ಗ್ರಾಮಸ್ಥರು

Bison: ಕಾಡುಕೋಣ ಹಾವಳಿ… ಮನೆಯಿಂದ ಹೊರಬರಲು ಹೆದರುತ್ತಿರುವ ಯಡೂರು ಗ್ರಾಮಸ್ಥರು

8-bng

Bengaluru: ಹಳೇ ದ್ವೇಷಕ್ಕೆ ವ್ಯಕ್ತಿ ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

Maski: ಸಕಾಲಕ್ಕೆ ಬಾರದ ಮಳೆ ಸಂಕಷ್ಟದಲ್ಲಿ ರೈತ… ವಾರದೊಳಗೆ ಮಳೆ ಬರದಿದ್ದರೆ ಬೆಳೆ ನಾಶ

Maski: ಸಕಾಲಕ್ಕೆ ಬಾರದ ಮಳೆ, ಸಂಕಷ್ಟದಲ್ಲಿ ರೈತ… ವಾರದೊಳಗೆ ಮಳೆ ಬರದಿದ್ದರೆ ಬೆಳೆ ನಾಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.