ಅಹೋರಾತ್ರಿ ಧರಣಿ: ಸಚಿವ ಈಶ್ವರಪ್ಪ ರಾಜೀನಾಮೆಗೆ ಕಾಂಗ್ರೆಸ್‌ ಬಿಗಿಪಟ್ಟು

Team Udayavani, Feb 18, 2022, 7:20 AM IST

ಅಹೋರಾತ್ರಿ ಧರಣಿ: ಸಚಿವ ಈಶ್ವರಪ್ಪ ರಾಜೀನಾಮೆಗೆ ಕಾಂಗ್ರೆಸ್‌ ಬಿಗಿಪಟ್ಟು

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮತ್ತಿತರರು ಧರಣಿ ನಿರತರ ಮನವೊಲಿಕೆಗೆ ಪ್ರಯತ್ನಿಸಿದರು.

ಬೆಂಗಳೂರು: ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ವಿಪಕ್ಷ ಕಾಂಗ್ರೆಸ್‌ ಅಹೋರಾತ್ರಿ ಧರಣಿ ಆರಂಭಿಸಿದೆ. ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸುತ್ತೇವೆ ಎಂದು ಹೇಳಿಕೆ ನೀಡಿರುವ ಗ್ರಾಮೀಣಾಭಿ ವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ರಾಜೀನಾಮೆ ನೀಡಬೇಕು ಹಾಗೂ ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ವಿಪಕ್ಷ ಒತ್ತಾಯಿಸುತ್ತಿದೆ.

ಈಶ್ವರಪ್ಪ ರಾಜೀನಾಮೆಗಾಗಿ ಕಾಂಗ್ರೆಸ್‌  ಸರಕಾರಕ್ಕೆ ಗುರುವಾರ ಬೆಳಗ್ಗೆ 11 ಗಂಟೆಯ ಗಡುವು ನೀಡಿತ್ತು ಅದು ಈಡೇರದ ಕಾರಣ ಕಲಾಪ ಆರಂಭವಾಗು ತ್ತಿದ್ದಂತೆಯೇ  ಸದನದಲ್ಲಿ  ಪ್ರತಿಭಟನೆ ಮುಂದುವರಿ ಸಿತು. ವಿಧಾನಸಭೆಯಲ್ಲಿ   ಪ್ರತಿಭಟನೆ ನಡುವೆಯೇ ಸ್ಪೀಕರ್‌ ಕಾಗೇರಿ ಅವರು ಪ್ರಶ್ನೋತ್ತರ ಕಲಾಪ ಹಾಗೂ ಸ್ಟಾಂಪ್‌ ಡ್ನೂಟಿ ಮಸೂದೆ ಮಂಡನೆಗೆ ಅವಕಾಶ ಮಾಡಿ ದರು. ಅನಂತರ ವಿಪಕ್ಷ ಸದಸ್ಯರಿಗೆ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಚರ್ಚೆಗೆ ಅವಕಾಶ ನೀಡಿದರೂ ಕಾಂಗ್ರೆಸ್‌ ಸದಸ್ಯರು ಧರಣಿ ಬಿಟ್ಟು ಹಿಂದೆ ಸರಿಯದೇ  ಈಶ್ವರಪ್ಪ ವಿರುದ್ಧ ಘೋಷಣೆ ಕೂಗಿ,  ರಾಜೀನಾಮೆಗೆ ಆಗ್ರಹಿಸಿದರು.

ಸ್ಪೀಕರ್‌ ಸಂಧಾನ ಯತ್ನ:

ಕಾಂಗ್ರೆಸ್‌ ಸದಸ್ಯರ ಪ್ರತಿಭಟನೆ ಹಿನ್ನೆಲೆಯಲ್ಲಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸದನವನ್ನು ಮಧ್ಯಾಹ್ನಕ್ಕೆ ಮುಂದೂಡಿದರು. ವಿಪಕ್ಷ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್‌ನ ಇತರ ಪ್ರಮುಖ ನಾಯಕರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾನೂನು ಸಚಿವ ಮಾಧುಸ್ವಾಮಿ ಅವರ ಜತೆಗೂ ಸ್ಪೀಕರ್‌ ಮಾತುಕತೆ ನಡೆಸಿ, ಧರಣಿ ಹಿಂಪಡೆಯುವಂತೆ ಮಾಡಲು ಪ್ರಯತ್ನಿಸಿದರು. ಭೋಜನ ವಿರಾಮದ ಬಳಿಕ  ಮತ್ತೆ ಸದನ ಆರಂಭವಾದ ಕೂಡಲೇ ಕಾಂಗ್ರೆಸ್‌ ಶಾಸಕರು ಪ್ರತಿಭಟನೆಯನ್ನು ಮುಂದುವರಿಸಿದರು. ಕಾಂಗ್ರೆಸ್‌ ಶಾಸಕರು ಧರಣಿ ಕೈ ಬಿಟ್ಟು  ಚರ್ಚೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ್ದರಿಂದ   ಸದನವನ್ನು ಶುಕ್ರವಾರಕ್ಕೆ ಮುಂದೂಡಲಾಯಿತು.

ಧರಣಿಗೆ ನಿರ್ಧಾರ:

ಈಶ್ವರಪ್ಪ ಅವರನ್ನು  ವಜಾ ಮಾಡುವವರೆಗೂ ಹೋರಾಟ ಮಾಡುವುದಾಗಿ ಘೋಷಿಸಿರುವ ಕಾಂಗ್ರೆಸ್‌ ಸದಸ್ಯರು ಎರಡೂ ಸದನಗಳಲ್ಲಿ ಅಹೋರಾತ್ರಿಧರಣಿಗೆ ನಿರ್ಧರಿಸಿದರು. ಸ್ಪೀಕರ್‌ ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಿದರೂ ಕಾಂಗ್ರೆಸ್‌ ನಾಯಕರು ಸದನದಿಂದ ಹೊರ ಬರಲಿಲ್ಲ.

ಪರಿಷತ್ತಿನಲ್ಲಿಯೂ ಧರಣಿ:

ಪರಿಷತ್ತಿನಲ್ಲಿಯೂ  ಈಶ್ವರಪ್ಪ ವಿರುದ್ಧ ಮಂಡಿಸಿದ್ದ ನಿಲುವಳಿ ಸೂಚನೆಯನ್ನು ತಿರಸ್ಕರಿಸಿದ್ದರಿಂದ ಕಾಂಗ್ರೆಸ್‌ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು. ಅಲ್ಲಿಯೂ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.  ಧರಣಿ ನಿರತ ಕಾಂಗ್ರೆಸ್‌ ಸದಸ್ಯರನ್ನು ಸಭಾಪತಿ ಬಸವರಾಜ ಹೊರಟ್ಟಿ ಭೇಟಿ ಮಾಡಿದರು. ಅವರಿಗೆ ರಾತ್ರಿ ಮಲಗಲು ಹಾಗೂ ಊಟದ ವ್ಯವಸ್ಥೆ ಮಾಡಿರುವ ಬಗ್ಗೆ ಪರಿಶೀಲಿಸಿದರು.

ಸಿಎಂ, ಬಿಎಸ್‌ವೈ ಯತ್ನ:

ಧರಣಿ ಕೈ ಬಿಟ್ಟು ಕಲಾಪ ನಡೆಯಲು ಸಹಕರಿಸುವಂತೆ ಸಿಎಂ ಬೊಮ್ಮಾಯಿ ಅವರು  ಯಡಿಯೂರಪ್ಪ ಜತೆಗೂಡಿ  ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ಸದಸ್ಯರ ಮನವೊಲಿಕೆ ಪ್ರಯತ್ನ ನಡೆಸಿದರು. ಅದಕ್ಕೆ ಸ್ಪಂದಿಸದ ಕಾಂಗ್ರೆಸ್‌ ನಾಯಕರು ಧರಣಿ ಮುಂದುವರಿಸಿದ್ದಾರೆ. ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಸದನ

ದಲ್ಲಿಯೇ ಕುಳಿತಿರುವ ಕಾಂಗ್ರೆಸ್‌ ನಾಯಕರನ್ನು ಭೇಟಿ ಮಾಡಿದರು. ಅವರಿಗೆ ಆಹಾರ ಹಾಗೂ ಇತರ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ  ಅಧಿಕಾರಿಗಳಿಗೆ  ಸೂಚಿಸಿದರು.  ಸಂಜೆ 8 ಗಂಟೆ ಹೊತ್ತಿಗೆ ಸ್ಪೀಕರ್‌ ಜತೆ ಸಿಎಂ ಮತ್ತೂಂದು ಬಾರಿ ವಿಧಾನಸಭೆಗೆ ಆಗಮಿಸಿ ಕಾಂಗ್ರೆಸ್‌ ನಾಯಕರ ಮನ ವೊಲಿಸಲು ಪ್ರಯತ್ನಿಸಿದರು. ತಾವು  ಧರಣಿ ಆರಂಭಿಸಿದ್ದು, ಇದರಿಂದ  ಹಿಂದೆ ಸರಿಯುವುದಿಲ್ಲ ಕಾಂಗ್ರೆಸ್‌  ಹೇಳಿದ್ದರಿಂದ  ಸಿಎಂ ಮರಳಿದರು.

ಜನಪರ ವಿಚಾರ, ರೈತ ವಿಚಾರ, ರಾಜ್ಯದ ಹಿತದೃಷ್ಟಿಯಿಂದ ಧರಣಿಗಳು ಆಗಿರುವುದು ನೋಡಿದ್ದೇನೆ. ಸಚಿವರ ಒಂದು ಹೇಳಿಕೆಯನ್ನು ಮುಂದಿಟ್ಟು ಕೊಂಡು ಧರಣಿ ಮಾಡುತ್ತಿದ್ದಾರೆ.  ಈಶ್ವರಪ್ಪ  ಹೇಳಿಕೆಯನ್ನು ತಪ್ಪಾಗಿ  ಅರ್ಥೈಸಿಕೊಳ್ಳ ಲಾಗಿದೆ. ಅವರ ಮಾತಿನಲ್ಲಿ  ತಪ್ಪೂ ಇಲ್ಲ, ಕಾನೂನು ವಿರೋಧಿ ಅಂಶವೂ ಇಲ್ಲ.ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ಈಶ್ವರಪ್ಪ ಮಾತನಾಡಿರುವುದಕ್ಕೆ  ಸಾಕ್ಷಿ ಇದೆ. ಶಾಸಕನಿಂದ ಹಿಡಿದು ರಾಷ್ಟ್ರಪತಿ ವರೆಗೆ ಚುನಾಯಿತ ಪ್ರತಿನಿಧಿಗಳು  ಸಂವಿ ಧಾನವನ್ನು ಎತ್ತಿ ಹಿಡಿಯುತ್ತೇವೆ ಎಂದು ಪ್ರಮಾಣ ಸ್ವೀಕರಿಸಿದ್ದೇವೆ. ಸಚಿವರೇ ರಾಷ್ಟ್ರಧ್ವಜಕ್ಕೆ ಅಗೌರವ ತೋರಿದರೆ ಹೇಗೆ. ಅವರು ರಾಜೀನಾಮೆ ನೀಡುವವರೆಗೂ ಹೋರಾಟ ನಿಲ್ಲಿಸುವುದಿಲ್ಲ.- ಸಿದ್ದರಾಮಯ್ಯ, ವಿಪಕ್ಷ ನಾಯಕ

ಈಶ್ವರಪ್ಪ ಕೆಂಪುಕೋಟೆಯಲ್ಲಿ ಕೇಸರಿ ಧ್ವಜ ಹಾರಿಸಲು ಬಯಸಿದ್ದು, ಇದು ದೇಶದ ಕಾನೂನಿಗೆ ವಿರುದ್ಧವಾಗಿದೆ. ಅವರು ಸಂವಿಧಾನ  ಹಾಗೂ ರಾಷ್ಟ್ರಧ್ವಜವನ್ನು ಬದಲಿಸಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ  ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಅಹೋರಾತ್ರಿ  ಧರಣಿ ಮಾಡುತ್ತಿದ್ದೇವೆ.ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

ಟಾಪ್ ನ್ಯೂಸ್

Tour:ವಿದೇಶ ಪ್ರವಾಸ ಕಥನ -2; ರಾಜಪ್ರಭುತ್ವದ ನೆಲದಲ್ಲಿ ಪ್ರಜಾಪ್ರಭುತ್ವ ಅಭಿವೃದ್ಧಿಯ ಬೆಳಕು

Tour:ವಿದೇಶ ಪ್ರವಾಸ ಕಥನ -2; ರಾಜಪ್ರಭುತ್ವದ ನೆಲದಲ್ಲಿ ಪ್ರಜಾಪ್ರಭುತ್ವ ಅಭಿವೃದ್ಧಿಯ ಬೆಳಕು

Team India: How much money is given to whom by BCCI in ₹125 crore?

Team India: ಅಗರ್ಕರ್ ಗೆ 1 ಕೋಟಿ!; ಬಿಸಿಸಿಐ ನೀಡಿದ ₹125 ಕೋಟಿಯಲ್ಲಿ ಯಾರಿಗೆ ಎಷ್ಟು ಹಣ?

Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್‌ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…

Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್‌ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…

Nandini Milk: ನಂದಿನಿ ಹಾಲು, ಮೊಸರಿನ ಜತೆ ಶೀಘ್ರ ದೋಸೆ ಹಿಟ್ಟು 

Nandini Milk: ನಂದಿನಿ ಹಾಲು, ಮೊಸರಿನ ಜತೆ ಶೀಘ್ರ ದೋಸೆ ಹಿಟ್ಟು 

Kadaba: ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಹಾರಿ, ಸಹಾಯಕ್ಕಾಗಿ ಬೊಬ್ಬಬಿಡುತ್ತಿರುವ ಯುವಕ

Kadaba: ಆತ್ಮಹತ್ಯೆಗೆ ಯತ್ನಿಸಿ ಕುಮಾರಧಾರ ನದಿಯ ಮಧ್ಯೆ ಸಿಲುಕಿದ ಯುವಕನ ರಕ್ಷಣೆ

Kalaburagi: ಹೃದಯಾಘಾತದಿಂದ ರಟಕಲ್ ವಿರಕ್ತ ಮಠದ ಸಿದ್ಧರಾಮ ಶ್ರೀಗಳು ವಿಧಿವಶ

Kalaburagi: ಹೃದಯಾಘಾತದಿಂದ ರಟಕಲ್ ವಿರಕ್ತ ಮಠದ ಸಿದ್ಧರಾಮ ಶ್ರೀಗಳು ವಿಧಿವಶ

Heavy Rain: ಮುಂಬೈನಲ್ಲಿ ದಾಖಲೆಯ ಮಳೆ… ತಗ್ಗು ಪ್ರದೇಶಗಳು ಜಲಾವೃತ, ಜನಜೀವನ ಅಸ್ತವ್ಯಸ್ತ

Heavy Rain: ಮುಂಬೈನಲ್ಲಿ ದಾಖಲೆಯ ಮಳೆ… ತಗ್ಗು ಪ್ರದೇಶಗಳು ಜಲಾವೃತ, ಜನಜೀವನ ಅಸ್ತವ್ಯಸ್ತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nandini Milk: ನಂದಿನಿ ಹಾಲು, ಮೊಸರಿನ ಜತೆ ಶೀಘ್ರ ದೋಸೆ ಹಿಟ್ಟು 

Nandini Milk: ನಂದಿನಿ ಹಾಲು, ಮೊಸರಿನ ಜತೆ ಶೀಘ್ರ ದೋಸೆ ಹಿಟ್ಟು 

Kalaburagi: ಹೃದಯಾಘಾತದಿಂದ ರಟಕಲ್ ವಿರಕ್ತ ಮಠದ ಸಿದ್ಧರಾಮ ಶ್ರೀಗಳು ವಿಧಿವಶ

Kalaburagi: ಹೃದಯಾಘಾತದಿಂದ ರಟಕಲ್ ವಿರಕ್ತ ಮಠದ ಸಿದ್ಧರಾಮ ಶ್ರೀಗಳು ವಿಧಿವಶ

Bar

Government; ಡಿಜಿಟಲೀಕರಣದತ್ತ ಅಬಕಾರಿ ಇಲಾಖೆ: ಭ್ರಷ್ಟಾಚಾರಕ್ಕೆ ಬೀಳಲಿದೆ ಕಡಿವಾಣ!

Darshan-case

Renukaswamy Case: ದರ್ಶನ್‌, ಪವಿತ್ರಾ ಗೌಡ ಸೇರಿ 10 ಮಂದಿ ಬೆರಳಚ್ಚು ಹೊಂದಾಣಿಕೆ

R.Ashok

Dengue ನಿಯಂತ್ರಣಕ್ಕೆ ಸರಕಾರದ ಬಳಿ ದುಡ್ಡಿಲ್ಲ: ಅಶೋಕ್‌

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

Tour:ವಿದೇಶ ಪ್ರವಾಸ ಕಥನ -2; ರಾಜಪ್ರಭುತ್ವದ ನೆಲದಲ್ಲಿ ಪ್ರಜಾಪ್ರಭುತ್ವ ಅಭಿವೃದ್ಧಿಯ ಬೆಳಕು

Tour:ವಿದೇಶ ಪ್ರವಾಸ ಕಥನ -2; ರಾಜಪ್ರಭುತ್ವದ ನೆಲದಲ್ಲಿ ಪ್ರಜಾಪ್ರಭುತ್ವ ಅಭಿವೃದ್ಧಿಯ ಬೆಳಕು

Team India: How much money is given to whom by BCCI in ₹125 crore?

Team India: ಅಗರ್ಕರ್ ಗೆ 1 ಕೋಟಿ!; ಬಿಸಿಸಿಐ ನೀಡಿದ ₹125 ಕೋಟಿಯಲ್ಲಿ ಯಾರಿಗೆ ಎಷ್ಟು ಹಣ?

Bengaluru: ಶಾಸಕರಿಗೆ ಶುಭ ಕೋರಿ ಹಾಕಿದ್ದ ಫ್ಲೆಕ್ಸ್‌ ಬಿದ್ದು ವೃದ್ಧ ಕೋಮಾಕ್ಕೆೆ

Bengaluru: ಶಾಸಕರಿಗೆ ಶುಭ ಕೋರಿ ಹಾಕಿದ್ದ ಫ್ಲೆಕ್ಸ್‌ ಬಿದ್ದು ವೃದ್ಧ ಕೋಮಾಕ್ಕೆೆ

Bengaluru: ನಿಯಂತ್ರಣ ತಪ್ಪಿದ ಬುಲೆಟ್‌ ತಡೆಗೋಡೆಗೆ ಡಿಕ್ಕಿ: ಸವಾರ ಸಾವು

Bengaluru: ನಿಯಂತ್ರಣ ತಪ್ಪಿದ ಬುಲೆಟ್‌ ತಡೆಗೋಡೆಗೆ ಡಿಕ್ಕಿ: ಸವಾರ ಸಾವು

Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್‌ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…

Education:ಶಿಕ್ಷಣ ಮಾರ್ಗದರ್ಶಿ-ಪಬ್ಲಿಕ್‌ ಪರೀಕ್ಷೆಯ ಸಿದ್ಧತೆಇಂದಿನಿಂದಲೇ ಆರಂಭಗೊಳ್ಳಲಿ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.