ಹಂದಿ ಜೋಗಿಗಳಿಗೆ ಭೂಗಳ್ಳರ ಕಿರುಕುಳ: ರಕ್ಷಣೆ ಕೋರಿದ ಹೆಚ್.ವಿಶ್ವನಾಥ್
Team Udayavani, Feb 18, 2022, 4:22 PM IST
ಪಿರಿಯಾಪಟ್ಟಣ: ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ಭೂಗಳ್ಳರು ಹಂದಿ ಜೋಗಿಗಳ ಕಾಲೋನಿಯನ್ನು ಕಬಳಿಸಲು ಹುನ್ನಾರ ನಡೆಸಿ ಕಿರುಕುಳ ನೀಡುತ್ತಿದ್ದು, ಇವರಿಗೆ ಆತ್ಮಸ್ಥೈರ್ಯ ಹಾಗೂ ಕೊಳಗೇರಿ ಪ್ರದೇಶಕ್ಕೆ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಲು ಅಧಿಕಾರಿಗಳಿಗೆ ಸೂಚನೆ ಬೇಕು ಎಂದು ವಿಧಾನ ಪರಿಷತ್ ಸದಸ್ಯ ಎ.ಹೆಚ್.ವಿಶ್ವನಾಥ್ ರವರು ವಸತಿ ಸಚಿವ ವಿ.ಸೋಮಣ್ಣ ಅವರನ್ನು ಭೇಟಿ ಮಾತನಾಡಿದರು.
ಪಟ್ಟಣದ ಹೃದಯದ ಭಾಗದಲ್ಲಿರುವ ಹಂದಿ ಜೋಗಿಗಳ ಕಾಲೋನಿಯನ್ನು ಘೋಷಿತ ಕೊಳಚೆ ಪ್ರದೇಶ ಎಂದು ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿಗೆ ಸೇರ್ಪಡೆ ಮಾಡಿಕೊಂಡು ಇದನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಉಲ್ಲೇಖಿಸಿ 2001 ರಲ್ಲಿ ಆದೇಶ ಹೊರಡಿಸಿತ್ತು. ಈ ಬಗ್ಗೆ ಯಾರಾದರೂ ತಕರಾರು ಅರ್ಜಿ ಸಲ್ಲಿಸಲು 15 ದಿನಗಳ ಕಾಲಮಿತಿ ನೀಡಲಾಗಿತ್ತು. ಈ ಸಂದರ್ಭದಲ್ಲಿ ಯಾರೂ ಕೂಡ ತಕರಾರು ಸಲ್ಲಿಸದ ಕಾರಣ ಪುರಸಭೆ ವತಿಯಿಂದ 25 ಗುಂಟೆ ಜಾಗವನ್ನು ಮಂಜೂರು ಮಾಡಿ ಹಂದಿಜೋಗಿಗಳಿಗೆ ಹಕ್ಕುಪತ್ರ ಕೂಡ ನೀಡಲಾಗಿತ್ತು. ಹೀಗಿರುವಾಗ ಈ ಜನ ಅಂದಿನಿಂದ ಇಂದಿನ ವರೆಗೂ ಈ ಜಾಗದಲ್ಲಿ ವಾಸ ಮಾಡಿಕೊಡು ಬರುತ್ತಿದ್ದಾರೆ.
ಆದರೆ ರಾಜ್ಯಪತ್ರದಲ್ಲಿ ಕೊಳಗೇರಿ ಪ್ರದೇಶ ಎಂದು ಘೋಷಣೆಯಾಗಿ 21 ವರ್ಷ ಕಳೆದರೂ ಈ ಜಾಗಕ್ಕೆ ಸಂಬಂಧಿಸಿದಂತೆ ಜಿಲ್ಲಾ ಹಾಗೂ ರಾಜ್ಯದ ಉಚ್ಚ ನ್ಯಾಯಾಲಯಗಳಲ್ಲಿ ಯಾವುದೇ ರೀತಿಯ ವ್ಯಾಜ್ಯಗಳಿಲ್ಲದಿದ್ದರೂ ಪುರಸಭೆ ಹಾಗೂ ಕೋಳಗೇರಿ ಮಂಡಳಿಯವರು ಈ ಜನಕ್ಕೆ ನೀಡಬೇಕಾದ ಯಾವುದೇ ಮೂಲಭೂತ ಸೌಲಭ್ಯ ನೀಡದೆ ಉದಾರಸೀನ ಮಾಡುತ್ತ ಬಂದಿದ್ದಾರೆ. ಇದರ ನಡುವೆ 2016 ರಲ್ಲಿ ಕೆಲವು ಖಾಸಗಿ ವ್ಯಕ್ತಿಗಳು ಅನಗತ್ಯವಾಗಿ ಸುಳ್ಳು ತಕರಾರು ಅರ್ಜಿ ಸಲ್ಲಿಸಿ ಖ್ಯಾತೆ ತೆಗೆದಾಗ ಮಾನ್ಯ ಜಿಲ್ಲಾದಿಕಾರಿಗಳು ಈ ಅರ್ಜಿಗೆ ಸಂಬಂಧಿಸಿದಂತೆ ಯಾವುದೇ ದೃಡೀಕೃತ ದಾಖಲೆಗಳನ್ನು ನೀಡದ ಕಾರಣ ಪುರಸಭಾ ಮುಖ್ಯಾಧಿಕಾರಿಗೆ 1.7 ಗುಂಟೆ ಜಾಗವನ್ನು ಅಳತೆ ಮಾಡಿ ನಕಾಸೆ ತಯಾರಿಸಿ 38 ಹಂದಿ ಜೋಗಿ ಕುಟುಂಬಗಳಿಗೆ ಹಕ್ಕುಪತ್ರ ನೀಡಬೇಕು, ಒಂದು ವೇಳೆ 38 ಕುಟುಂಬಗಳನ್ನು ಹೊರತು ಪಡಿಸಿ ಬೇರೆ ಯಾರಾದರೂ ಈ ಜಾಗದ ನೈಜ್ಯ ಮಾಲೀಕತ್ವ ಹೊಂದಿರುವುದು ಕಂಡು ಬಂದರೆ ಅವರಿಗೆ ಪರಿಹಾರ ನೀಡಿ ಎಂದು ಆದೇಶ ಮಾಡಿದ್ದಾರೆ. ಆದರೆ ಈ ಆದೇಶವನ್ನು ಪುರಸಭಾ ಅಧಿಕಾರಿಗಳು ತಿರುಚಚುವ ಮೂಲಕ ಭೂಗಳ್ಳರು ಹಾಗೂ ಜನಪ್ರತಿಗಳ ಮೂಲಕ ಹಂದಿಜೋಗಿಗಳನ್ನು ಒಕ್ಕಲೆಬ್ಬಿಸಲು ಹೊಟಿದ್ದಾರೆ ಆದ್ದರಿಂದ ಇವರಿಗೆ ಕಿರುಕುಳ ತಪ್ಪಿಸಿ ಕೊಳಗೇರಿ ಪ್ರದೇಶಕ್ಕೆ ಸಿಗಬೇಕಾದ ಸವಲತ್ತುಗಳನ್ನು ಕೂಡಲೇ ಮಂಜೂರು ಮಾಡುವಂತೆ ವಸತಿ ಸಚಿವ ವಿ.ಸೋಮಣ್ಣ, ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿ ಅಧ್ಯಕ್ಷರಾದ ಮಹೇಶ್ ಕುಮಠಳ್ಳಿ, ಹಾಗೂ ಆಯುಕ್ತರಾದ ಬಿ.ವೆಂಕಟೇಶ್ ರವರಲ್ಲಿ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಉಪಾಧ್ಯಕ್ಷ ನೇರಳಕುಪ್ಪೆ ನವೀನ್, ಹಂದಿಜೋಗಿ ಸಮುದಾಯದ ಮುಖಂಡರಾದ ಯೋಗೇಶ್ ರಮೇಶ್ ಉಪಸ್ಥಿತರಿದ್ದರು.
ಹಂದಿಜೋಗಿಗಳು ವಾಸವಾಗಿರುವ ಈ ಜಾಗವು ಸುಮಾರು 10-15 ಕೋಟಿ ಬೆಲೆ ಬಾಳುವ ಆಸ್ತಿಯಾಗಿದ್ದು, ಇದನ್ನು ಕಬಳಿಸಲು ಹುನ್ನಾರ ನಡೆಯುತ್ತಿದೆ. ಈ ಜಾಗದಲ್ಲಿ ನಮ್ಮ ಪೂರ್ವಿಕರು ನೂರಾರು ವರ್ಷಗಳಿಂದಲೂ ವಾಸ ಮಾಡಿಕೊಂಡು ಬಂದಿದ್ದಾರೆ ಹೀಗಿದ್ದರೂ ನಮ್ಮನ್ನು ಒಕ್ಕಲೆಬ್ಬಿಸುವ ಉದ್ದೇಶದಿಂದ ಇಲ್ಲಿನ ಅಧಿಕಾರಿಗಳು ನಮಗೆ ಮನೆ, ಶೌಚಾಲಯ, ಕುಡಿಯುವ ನೀರು, ಬೆಳಕು, ಒಳ ಚರಂಡಿ ವ್ಯವಸ್ಥೆ ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳನ್ನು ನೀಡುತ್ತಿಲ್ಲ. ಈ ಜಾಗದಲ್ಲಿ ಅಂಗನವಾಡಿಯನ್ನು ನಾವೇ ನಿರ್ಮಿಸಿಕೊಂಡಿದ್ದರೂ ನಮ್ಮ ಮಕ್ಕಳಿಗೆ ಸರ್ಕಾರದ ಯಾವುದೇ ಸಮಲತ್ತು ನೀಡುತ್ತಿಲ್ಲ ಹಾಗಾಗಿ ಮಕ್ಕಳು ಅಪೌಷ್ಠಿಕತೆ ಹಾಗೂ ವಟಾರದ ಜನರೆಲ್ಲ ರೋಗ ಭೀತಿಯಿಂದ ನರಳುತ್ತಿದ್ದಾರೆ.
ನಾಗಮಣಿ, ಹಂದಿಜೋಗಿ ಸಮುದಾಯದ ಹೋರಾಟಗಾರ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.