ಪ್ರಚೋದನಕಾರಿ ಹೇಳಿಕೆ: ಮುಕ್ರಂಖಾನ್ ಬಂಧನಕ್ಕೆ 24 ಗಂಟೆಗಳ ಗಡುವು
ಸೇನೆ ಬಂದರೂ ಹೆದರಲ್ಲ, ಮನೆಗೆ ದಾಳಿ ಮಾಡುತ್ತೇವೆ : ಸಿದ್ಧಲಿಂಗ ಸ್ವಾಮೀಜಿ
Team Udayavani, Feb 18, 2022, 7:44 PM IST
ಸೇಡಂ: ಪ್ರಚೋದನಕಾರಿ ಹಾಗೂ ವಿವಾದಾತ್ಮಕ ಹೇಳಿಕೆ ನೀಡಿದ್ದ ಮುಕ್ರಂಖಾನ್ ವಿರುದ್ಧ ತೊಡೆ ತಟ್ಟಿದ್ದ ಆಂದೋಲಾದ ಸಿದ್ಧಲಿಂಗ ಸ್ವಾಮೀಜಿ ಕಡೆಗೂ ಪಟ್ಟಣ ಪ್ರವೇಶಕ್ಕೆ ಯತ್ನಿಸಿದ್ದಾರೆ ಆದರೆ ಪೊಲೀಸರು ಅವರನ್ನು 7 ಕಿ.ಮೀ. ದೂರದಲ್ಲೇ ತಡೆದಿದ್ದಾರೆ.
ಶ್ರೀರಾಮಸೇನೆಯ ಮುಖಂಡ ಗಂಗಾಧರ ಕುಲಕರ್ಣಿ ಹುಕ್ಕೇರಿ ಅವರ ವಿಡಿಯೋ ಹೇಳಿಕೆಯಂತೆ ಆಂದೋಲಾ ಶ್ರೀಗಳೊಂದಿಗೆ ಮುಕ್ರಂಖಾನ್ ಮನೆಗೆ ಮುತ್ತಿಗೆ ಹಾಕುವ ಬಗ್ಗೆ ಕರೆ ನೀಡಿದ್ದರು. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪಟ್ಟಣ ಸೇರಿದಂತೆ 5 ಕಿ.ಮೀ. ವ್ಯಾಪ್ತಿಯಲ್ಲಿ144 ಸೆಕ್ಷನ್ ಜಾರಿ ಮಾಡಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದರು.
ಈ ಹಿನ್ನೆಲೆಯಲ್ಲಿ ಆಂದೋಲಾ ಶ್ರೀಗಳನ್ನು ನೀಲಹಳ್ಳಿ ಗ್ರಾಮದ ಬಳಿಯೇ ತಡೆಯಲಾಗಿತ್ತು. ಈ ವೇಳೆ ನಿರಂತರ ಎರಡು ಗಂಟೆಗಳ ಕಾಲ ಪ್ರತಿಭಟನೆ ನಡೆಸಲಾಯಿತು. ಇದರಿಂದ ರಾಜ್ಯ ಹೆದ್ದಾರಿ ಸಂಪೂರ್ಣ ಬಂದ್ ಆಗಿತ್ತು. ಮುಕ್ರಂಖಾನ್ ಬಂಧಿಸುವಂತೆ ಹಿಂದೂಪರ ಸಂಘಟನೆಗಳ ಒತ್ತಾಯಿಸಿದವು.
ನಂತರ ಸ್ಥಳಕ್ಕೆ ಎಸ್ಪಿ ಇಶಾ ಪಂತ್ ಅವರು ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಇದಕ್ಕೆ ಮಣಿಯದ ಸಂಘಟಕರು ಪ್ರಚೋದನಕಾರಿ ಹೇಳಿಕೆ ನೀಡಿದರೂ ಸಹ ಏಕೆ ಸ್ವಯಂ ಪ್ರಕರಣ ದಾಖಲಿಸಿಲ್ಲ ಎಂದು ಪ್ರಶ್ನಿಸಿದರು. ಆಗ ೨೪ ಗಂಟೆಯಲ್ಲಿ ಮುಕ್ರಂಖಾನ್ ಬಂಧಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.
ಈ ವೇಳೆ ಶ್ರೀರಾಮಸೇನೆಯ ಗಂಗಾಧರ ಕುಲಕರ್ಣಿ ಮಾತನಾಡಿ, ಹಿಂದೂ ಮುಖಂಡರ ಬಗ್ಗೆ ಕೆಲ ದೇಶದ್ರೋಹಿಗಳು ಹೀಯಾಳುಸುವ ಮೂಲಕ ತೇಜೋವಧೆ ಮಾಡಲು ಮುಂದಾಗಿದ್ದಾರೆ. ಅಂತರವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಮತ್ತು ಆಂದೋಲಾದ ಸಿದ್ಧಲಿಂಗ ಸ್ವಾಮೀಜಿಯವರಿಗೆ ಭದ್ರತೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ವಿವಾದಾತ್ಮಕ ಹೇಳಿಕೆ ನೀಡಿದವರನ್ನು ಬಿಟ್ಟು ಹಿಂದೂಪರ ಹೋರಾಟಗಾರರನ್ನು ತಡೆಯುವ ಪೊಲೀಸರ ನಡೆಯನ್ನು ಅವರು ಕಟುವಾಗಿ ಟೀಕಿಸಿದರು.
ಆಂದೋಲಾದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಎಸ್ಪಿ 24 ಗಂಟೆಗಳ ಒಳಗೆ ಮುಕ್ರಂಖಾನ್ ಬಂಧಿಸುವ ಆಶ್ವಾಸನೆ ನೀಡಿದ್ದಾರೆ. ಬಂಧಿಸದೇ ಹೋದರೆ ಭಾರತದ ಸಂವಿಧಾನಕ್ಕೆ ಚ್ಯುತಿ ತಂದಂತಾಗುತ್ತದೆ. ನ್ಯಾಯಾಂಗ ಬಂಧನಕ್ಕೆ ಒಪ್ಪಿಸದೇ ಹೋದರೆ ಶನಿವಾರ ೩ ಗಂಟೆಗೆ ಮುಕ್ರಂಖಾನ್ ಮನೆಗೆ ದಾಳಿ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
25 ನೇ ಗಂಟೆಗೆ ಮುಕ್ರಂಖಾನ್ ಮನೆಗೆ ದಾಳಿ, ಸೇನೆ ಬಂದರೂ ತಡೆಯಲಾಗಲ್ಲ
24 ಗಂಟೆಯಲ್ಲಿ ಮುಕ್ರಂಖಾನ್ ಬಂಧನವಾಗದೇ ಹೋದಲ್ಲಿ 25 ನೇ ಗಂಟೆಗೆ ನಾವು ಮುಕ್ರಂಖಾನ್ ಮನೆಗೆ ದಾಳಿ ಮಾಡ್ತೇವೆ. ಆಗ ಸೇನೆ ಬಂದರೂ ಸಹ ತಡೆಯಲು ಆಗಲ್ಲ. ಮುಂದೆ ಲಾಠಿ ಚಾರ್ಜ, ಗೋಲಿಬಾರ್ ಆದರೆ ಪೊಲೀಸ್ ಇಲಾಖೆಯೇ ನೇರ ಹೊಣೆ. ಭಯೋತ್ಪಾದಕರನ್ನು ಪೊಲೀಸರು ಮಟ್ಟ ಹಾಕದೇ ಹೋದರೆ ನಾವೇ ಹದ್ದುಬಸ್ತಿನಲ್ಲಿಡ್ತೇವೆ. ಮುಕ್ರಂ ಖಾನ್ ಅಕ್ರಮವಾಗಿ ಬೇರೆಯವರ ರೈತರ ಹೊಲ ಒತ್ತುವರಿ ಮಾಡಿ ಮನೆ ಕಟ್ಟಿದ್ದಾರೆ. ಅಲ್ಲಿಂದ ಅವರನ್ನು ಓಡಿಸುತ್ತೇವೆ ಎಂದು ಆಂದೋಲಾದ ಸಿದ್ಧಲಿಂಗ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Shimoga; ಜಮೀರ್ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
B. S. Yediyurappa ವಿರುದ್ಧ ಎಫ್ಐಆರ್ಗೆ ಸಚಿವರ ಒತ್ತಡ
BJP ಸರಕಾರ ಕಾಲದ ಕೋವಿಡ್, ಗಣಿ ತನಿಖೆಗೆ ಎಸ್ಐಟಿ: ಸಚಿವ ಸಂಪುಟ ನಿರ್ಧಾರ
MUST WATCH
ಹೊಸ ಸೇರ್ಪಡೆ
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್ಗಳಿಗೆ ನಿರ್ಬಂಧ
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.