ಸೆಂಟಿಮೆಂಟ್ ಹಂದರದೊಳಗೆ ಆ್ಯಕ್ಷನ್ ಅಬ್ಬರ
Team Udayavani, Feb 19, 2022, 11:24 AM IST
ಆ್ಯಕ್ಷನ್ ಮತ್ತು ಮಾಸ್ ಕಂಟೆಂಟ್ ಸಿನಿಮಾಗಳ ಮೂಲಕವೇ ಗುರುತಿಸಿಕೊಂಡಿರುವ ನಟ ವಿನೋದ್ ಪ್ರಭಾಕರ್ ಈ ವಾರ “ವರದ’ನಾಗಿ ಮತ್ತೂಂದು ಔಟ್ ಆ್ಯಂಡ್ ಔಟ್ ಆ್ಯಕ್ಷನ್ ಪ್ಯಾಕ್ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ.
ತಂದೆ-ಮಗನ ನಡುವಿನ ಬಾಂಧವ್ಯ, ಫ್ಯಾಮಿಲಿ ಸೆಂಟಿಮೆಂಟ್, ಅದರ ಸುತ್ತ ನಡೆಯುವ ಒಂದಷ್ಟುವಿರೋಧ-ಪ್ರತಿರೋದಗಳ ಸುತ್ತ “ವರದ’ನ ಕಥೆ ಸಾಗುತ್ತದೆ. ಭರ್ಜರಿ ಫೈಟ್ಸ್, ಖಡಕ್ ಡೈಲಾಗ್ಸ್,ಅಲ್ಲಲ್ಲಿ ಬರುವ ಸಾಂಗ್ಸ್, ಕಾಮಿಡಿಗಾಗಿ ಒಂದಷ್ಟು ಪಾತ್ರಗಳು… ಹೀಗೆ ಒಂದು ಪಕ್ಕಾ ಔಟ್ ಆ್ಯಂಡ್ ಔಟ್ ಮಾಸ್ ಆ್ಯಕ್ಷನ್ ಎಂಟರ್‌ಟೈನ್ಮೆಂಟ್ ಸಿನಿಮಾದಲ್ಲಿ ಏನೇನು ಅಂಶಗಳಿರಬೇಕೋ ಅದೆಲ್ಲವನ್ನು “ವರದ’ದಲ್ಲಿ ಸೇರಿಸಿ ತೆರೆಮೇಲೆ ತಂದಿದ್ದಾರೆ ನಿರ್ದೇಶಕರು.
ಜೊತೆಗೆ ಈ ಬಾರಿ ವಿನೋದ್ ಸಿನಿಮಾದಲ್ಲಿ ಸೆಂಟಿಮೆಂಟ್ ಅಂಶಗಳನ್ನು ಕೂಡಾ ಸೇರಿಸಿದ್ದು, ಫ್ಯಾಮಿಲಿ ಆಡಿಯನ್ಸ್‌ಗೆ ಇಷ್ಟವಾಗಬಹುದು. ಈ ಅಂಶಗಳನ್ನು ಹೊರತುಪಡಿಸಿ “ವರದ’ನಲ್ಲಿ ಬೇರೇನೂ ಹೆಚ್ಚಾಗಿ ನಿರೀಕ್ಷಿಸುವಂತಿಲ್ಲ. ತಮ್ಮ ಹಿಂದಿನ ಸಿನಿಮಾಗಳಂತೆ ಈ ಸಿನಿಮಾದಲ್ಲೂ”ವರದ’ನ ಅವತಾರದಲ್ಲಿ ವಿನೋದ್ ಪ್ರಭಾಕರ್ ಆ್ಯಕ್ಷನ್ ಹೀರೋ ಆಗಿ ತೆರೆಮೇಲೆ ಅಬ್ಬರಿಸಿದ್ದಾರೆ.
ನಾಯಕಿ ಅಮಿತಾ ರಂಗನಾಥ್ ಮೊದಲ ನೋಟದಲ್ಲೇ ಇಷ್ಟವಾಗುತ್ತಾರೆ. ಉಳಿದಂತೆ ಚರಣ್ ರಾಜ್, ಅಶ್ವಿನಿ ಗೌಡ ಮೊದಲಾದ ಕಲಾವಿದರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ವಿನೋದ್ ಪ್ರಭಾಕರ್ ಅವರ ಈ ಹಿಂದಿನ ಸಿನಿಮಾಗಳಂತೆ, ಆ್ಯಕ್ಷನ್ ಕಂಟೆಂಟ್ ಸಿನಿಮಾಗಳನ್ನು ಇಷ್ಟಪಡುವವರು ಒಮ್ಮೆ ಥಿಯೇಟರ್‌ನಲ್ಲಿ “ವರದ’ನ ಅಬ್ಬರವನ್ನು ನೋಡಿ ಬರಬಹುದು.
…………………………………………………………………………………………………………………………
ಚಿತ್ರ: ವರದ
ರೇಟಿಂಗ್: ***
ನಿರ್ಮಾಣ-ನಿರ್ದೇಶನ: ಉದಯ ಪ್ರಕಾಶ್
ತಾರಾಗಣ: ವಿನೋದ್ ಪ್ರಭಾಕರ್, ಅಮಿತಾ ರಂಗನಾಥ್, ಚರಣ್ ರಾಜ್,ಅನಿಲ್ ಸಿದ್ಧು, ಅಶ್ವಿನಿ ಗೌಡ, ಎಂ. ಕೆ ಮಠ, ಉಮೇಶ್ ಬಣಕಾರ್ ಮತ್ತಿತರರು.
-ಆರ್ ಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Sandalwood: ಮಾಸ್ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
MUST WATCH
ಹೊಸ ಸೇರ್ಪಡೆ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.