![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Feb 19, 2022, 1:40 PM IST
ಮಂಡ್ಯ: ಜಿಲ್ಲೆಯ ಗ್ರಾಮಗಳಿಗೆ ಸ್ಮಶಾನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಳೆದ ಮೂರು ದಿನಗಳಿಂದ ನಗರದ ಜಿಲ್ಲಾಧಿಕಾರಿಕಚೇರಿ ಆವರಣದಲ್ಲಿ ಕರ್ನಾಟಕ ಪ್ರಾಂತಕೃಷಿ ಕೂಲಿಕಾರರ ಸಂಘ, ವಸತಿ ಮತ್ತು ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಜಿಲ್ಲಾಧಿಕಾರಿ ಭರವಸೆ ನಂತರ ವಾಪಸ್ ಪಡೆಯಲಾಯಿತು.
ಶುಕ್ರವಾರ ಸಂಜೆ ಅಣಕು ಶವವನ್ನು ಸುಟ್ಟು ಅನಿರ್ದಿಷ್ಟಾವಧಿ ಧರಣಿಯನ್ನು ವಾಪಸ್ ಪಡೆದರು. ಸರ್ಕಾರಿ ಭೂಮಿಯಲ್ಲಿ ವಾಸ ಮಾಡುತ್ತಿರುವ ಬಡವರಿಗೆಹಕ್ಕುಪತ್ರಕ್ಕಾಗಿ, ನಿವೇಶನ ರಹಿತರಿಗೆ ನಿವೇಶನಕ್ಕಾಗಿ, 94(ಸಿ) ಮತ್ತು 50, 53,57ರ ಅಡಿಯಲ್ಲಿ ಅರ್ಜಿ ಹಾಕಿರುವವರಿಗೆ ಹಕ್ಕುಪತ್ರ, ಆರ್‌ಟಿಸಿ ಗ್ರಾಮಕ್ಕೊಂದು ಸ್ಮಶಾನ ಕಲ್ಪಿಸಬೇಕು. ಈಗಾಗಲೇ ಮಾರ್ಚ್ 2019ರ ಹಿಂದೆ 94(ಸಿ), 57ರ ಅಡಿಯಲ್ಲಿಸರ್ಕಾರಿ ಭೂಮಿಯಲ್ಲಿ ವಾಸಿಸುತ್ತಿರುವ ಮತ್ತು ಬೇಸಾಯ ಮಾಡುತ್ತಿರುವವರು ಅರ್ಜಿ ಸಲ್ಲಿಸಿದ್ದು, ಈವರೆಗೂ ಹಕ್ಕುಪತ್ರನೀಡಿಲ್ಲ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದ್ದರು.
ಶುಕ್ರವಾರ ಜಿಲ್ಲಾಧಿಕಾರಿ ಎಸ್.ಅಶ್ವಥಿ ಅವರು ಪ್ರತಿಭಟನಾಕಾರರಿಗೆ ಬೇಡಿಕೆಈಡೇರಿಸುವ ಭರವಸೆ ನೀಡಿದ ನಂತರಧರಣಿ ವಾಪಸ್ ಪಡೆಯಲಾಯಿತು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪುಟ್ಟಮಾಧು, ಪ್ರಧಾನ ಕಾರ್ಯದರ್ಶಿಬಿ.ಹನುಮೇಶ್, ಮುಖಂಡರಾದ ಬಿ.ಎಂ.ಶಿವಮಲ್ಲಯ್ಯ, ಸರೋಜಮ್ಮ, ಅಮಾಸಯ್ಯ,ರಾಜು, ಅಬ್ದುಲ್ಲಾ, ಅನಿತಾ, ಅರುಣ್ ಕುಮಾರ್, ರಾಮಣ್ಣ, ಗರೀಶ್, ಕಪನಿಗೌಡ, ಸಿ.ಕುಮಾರಿ ಭಾಗವಹಿಸಿದ್ದರು.
You seem to have an Ad Blocker on.
To continue reading, please turn it off or whitelist Udayavani.