‘ಮಳೆ-ಬೆಳೆ ಸಂಪಾಯಿತಲೇ ಪರಾಕ್’ : ಶ್ರೀ ಮೈಲಾರಲಿಂಗ ಸ್ವಾಮಿ ಕಾರ್ಣಿಕೋತ್ಸವ
ದೈವವಾಣಿ ನುಡಿದು ಕೆಳಗಿಳಿದ ಗೊರವಯ್ಯ
Team Udayavani, Feb 19, 2022, 3:39 PM IST
ಹೂವಿನಹಡಗಲಿ : ಐತಿಹಾಸಿಕ ಶ್ರೀ ಮೈಲಾರಲಿಂಗ ಸ್ವಾಮಿ ಕಾರ್ಣಿಕೋತ್ಸವ “ಮಳೆ ಬೆಳೆ ಸಂಪಾಯಿತಲೇ ಪರಾಕ್’ ಎನ್ನುವ ದೈವವಾಣಿಯನ್ನು ಶ್ರೀ ಕಾರ್ಣಿಕದ ಗೊರವಯ್ಯ
ರಾಮಣ್ಣನು ನುಡಿದನು.
ಪ್ರತಿ ವರ್ಷದ ಧಾರ್ಮಿಕ ಸಂಪ್ರದಾಯದಂತೆ ಬೆಳಗ್ಗೆ ಕಾರ್ಣಿಕ ನುಡಿ ನಿಮಿತ್ತವಾಗಿ ದೇವಸ್ಥಾನದಲ್ಲಿ ಅನೇಕ ಧಾರ್ಮಿಕ ವಿಧಿವಿಧಾನಗಳ ಮೂಲಕವಾಗಿ ಪೂಜೆ ಸಲ್ಲಿಸಲಾಯಿತು. ವಂಶಪಾರಂಪರ್ಯ ಧಾರ್ಮಿಕ ಗುರುಗಳಾದ ಶ್ರೀಗುರು ವೆಂಕಪ್ಪಯ್ಯ ಒಡೆಯರ ಸಂಜೆ ಸುಮಾರು 4.30ಕ್ಕೆ ಪಲ್ಲಕ್ಕಿಯಲ್ಲಿ ಶ್ರೀ ಮೈಲಾರಲಿಂಗಸ್ವಾಮಿ ದೇವರನ್ನು ಪ್ರತಿಷ್ಠಾಪನೆ ಮಾಡಿಕೊಂಡು ಕುದುರೆ ಮೂಲಕವಾಗಿ ಮೆರವಣಿಗೆಯಲ್ಲಿ ಡೆಂಕನ ಮರಡಿಗೆ ಬಂದರು. ಡೆಂಕನ ಮರಡಿಯಲ್ಲಿ ಈಗಾಗಲೇ ಕಾರ್ಣಿಕ ನುಡಿಗೆ ಸಿದ್ಧಗೊಂಡಿರುವ ಸ್ಥಳಕ್ಕೆ ಧಾವಿಸಿ ಕಾರ್ಣಿಕ
ನುಡಿಯುವ ಗೊರವಯ್ಯನಿಗೆ ಆಶೀರ್ವಾದ ಮಾಡುವ ಮೂಲಕವಾಗಿ ಐತಿಹಾಸಿಕ ಕಾರ್ಣಿಕ ನುಡಿ ನುಡಿಯಲು ಕಾರ್ಣಿಕದ ಗೊರವಯ್ಯ ನೆರೆದಿದ್ದ ಭಕ್ತ ಸಮೂಹ ನೋಡ ನೋಡುತ್ತಿದ್ದಂತೆ ಕಬ್ಬಿಣದ ಬಿಲ್ಲನ್ನು ಏರಿ ಸದ್ದಲೇ ಎನ್ನುವ ಆದೇಶವನ್ನು ಭಕ್ತ ಸಮೂಹಕ್ಕೆ ನೀಡಿ ತದೇಕ ಚಿತ್ತದಿಂದ ಅಕಾಶವನ್ನು ವೀಕ್ಷಣೆ ಮಾಡಿದನು. ನಂತರದಲ್ಲಿ ಮಳೆ-ಬೆಳೆ ಸಂಪಾಯಿತಲೇ ಪರಾಕ್ ಎನ್ನುವ ದೈವವಾಣಿಯನ್ನು ನುಡಿದ ಭುವಿಗೆ ಧುಮುಕಿದನು. ಕನಕ ಗುರುಪೀಠದ ಶ್ರೀಗಳಾದ ನಿರಂಜನಾನಂದ ಪುರಿ ಮಹಾಸ್ವಾಮೀಜಿ, ಇಟಗಿ ಮಠದ ಶ್ರಿಗಳು, ಶಾಸಕ ಪಿ.ಟಿ. ಪರಮೇಶ್ವರನಾಯ್ಕ, ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್, ಪೊಲೀಸ್ ವರಿಷ್ಠಾಧಿಕಾರಿ ಅರುಣ್, ಜಿಲ್ಲಾಮಟ್ಟದ ಅಧಿಕಾರಿಗಳು, ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಯು.ಎಚ್. ಪ್ರಕಾಶ್ ರಾವ್ ಒಳಗೊಂಡಂತೆ ತಾಲೂಕುಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು, ಮುಖಂಡರುಗಳು ಹಾಜರಿದ್ದರು.
ಇದನ್ನೂ ಓದಿ : ಸಾಗರ: ಕಾರಿನ ಮೇಲೆ ಬಿದ್ದ ಬೃಹತ್ ಮರದ ರೆಂಬೆ; ಚಾಲಕ ಪಾರು
ಕಾರ್ಣಿಕದ ಲೆಕ್ಕಾಚಾರ
“ಮಳೆ-ಬೆಳೆ ಸಂಪಾಯಿತಲೇ ಪರಾಕ್’ ನುಡಿಯನ್ನು ಹೇಳುವ ಮೂಲಕವಾಗಿ ನಾಡಿನ ದೇಶದ ಮನುಕುಲಕ್ಕೆ ಸಂತೋಷ ಹೆಚ್ಚಾಗಲಿದ್ದು ರೈತಾಪಿ ವರ್ಗಕ್ಕೆ ಹಸನಾದ ದಿನಗಳು ಬರುತ್ತವೆ. ರೈತರು ಸಂಕಷ್ಟದಿಂದ ಪಾರಾಗುತ್ತಾರೆ. ಭವಿಷ್ಯದಲ್ಲಿ ಸಾಂಕ್ರಾಮಿಕ ರೋಗಗಳಿಂದ ದೂರವಿರುತ್ತಾನೆ ಎನ್ನುವ ಲೆಕ್ಕಾಚಾರವನ್ನು ಜನತೆ ಹಾಕಿಕೊಂಡು ತಮ್ಮದೇ ಆದ ಲೆಕ್ಕಾಚಾರದಲ್ಲಿ ಕಾರ್ಣಿಕ ನುಡಿಯನ್ನು ವಿಶ್ಲೇಷಣೆ ಮಾಡಿದರು.
ನಿಯಮ ಸಡಿಲಿಕೆ
ಕೊರೊನಾ ಹಿನ್ನೆಲೆಯಲ್ಲಿ ಜಾರಿ ಮಾಡಿದ್ದ ನಿಯಮವನ್ನು ಕೊನೆ ದಿನದಲ್ಲಿ ಸಡಿಲಿಕೆ ಮಾಡಿ ಜಾತ್ರೆಗೆ ಬರುವ ಭಕ್ತರಿಗೆ ಶ್ರೀ ಮೈಲಾರಲಿಂಗ ಸ್ವಾಮಿ ದರ್ಶನ ಪಡೆಯಲು ದೇವಸ್ಥಾನವನ್ನು ತೆರವುಗೊಳಿಸಲಾಗಿತ್ತು. ಹೊರಗಿನ ಭಕ್ತರಿಗೆ ನಿಷೇಧ ಕೊರೊನಾ ನಿಯಮವಿದ್ದರೂರು ಭಕ್ತರು ಜಾಸತ್ರೆಗೆ ಬರುವುದರಲ್ಲಿ ಹಿಂದೆ ಬàಳಲಿಲ್ಲ ಸುಮಾರು 4-5 ಲಕ್ಷ ಜನ ಸಂಕ್ಯೆ ಭಕ್ತರು ಜಾತ್ರೆಗೆ ಆಗಮಿಸಿರುವುದು ಕಂಡು ಬಂದಿತು. ಕ್ಷೇತ್ರದ ಹೊರಗಡೆಯಿಮದಲೇ ಬ್ಯಾರಿಕೇಡ್ ಹಾಕಿದ್ದರೂ ಸಹ ಭಕ್ತರು ಕಿಮೀಗಟ್ಟಲೆ ನಡೆದುಕೊಂಡು ಬಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ
Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್ ಯಡಿಯೂರಪ್ಪ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Gundlupete: ವಿದ್ಯುತ್ ತಂತಿಗೆ ಸಿಲುಕಿ ಮರಿಯಾನೆ ಸಾವು
Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ
Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.