ಸಾತಂತ್ರ್ಯ ಬಂದರೂ ಡಾಂಬಾರ್‌ ಕಾಣದ ರಸ್ತೆ


Team Udayavani, Feb 19, 2022, 2:51 PM IST

ಸಾತಂತ್ರ್ಯ ಬಂದರೂ ಡಾಂಬಾರ್‌ ಕಾಣದ ರಸ್ತೆ

ಹುಳಿಯಾರು: ಸಾತಂತ್ರ್ಯ ಬಂದ 75 ವರ್ಷಗಳಾಗಿದ್ದರೂ ಹುಳಿಯಾರು ಹೋಬಳಿಯ ಅನೇಕ ತಾಂಡ್ಯಗಳ ರಸ್ತೆಗಳು ಡಾಂಬಾರ್‌ ಕಾಣದೆ ಸುಗಮ ಸಂಚಾರಕ್ಕೆ ತೊಡಕಾಗಿದೆ. ಆದರೂ, ಅಲ್ಲಿಂದಇಲ್ಲಿಯವರೆಗೆ ಯಾವೊಬ್ಬ ಅಧಿಕಾರಿಯಾಗಲಿ, ಜನಪ್ರತಿನಿಧಿಯಾಗಲಿ ಗಮನ ಹರಿಸದಿರುವುದುಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಹುಳಿಯಾರು ಹೋಬಳಿಯ ಬರಕನಾಲ್‌ ಬಳಿಯ ಗೋಪಾಲನಾಯ್ಕನ ತಾಂಡ್ಯ ಮತ್ತು ಖಾನನಾಯಕನ ತಾಂಡ್ಯ, ಉಂಬಳನಾಯಕನ ತಾಂಡ್ಯ ಮತ್ತು ದೊಡ್ಡ ಹಟ್ಟಿಯ ಗ್ರಾಮಗಳು ಯರೇಹಳ್ಳಿಯನ್ನು ಸಂಪರ್ಕಿಸುತ್ತವೆ. ಆದರೆ, ಈ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆಗಳು ಸಾತಂತ್ರ್ಯ ಸಾತಂತ್ರ್ಯ ಬಂದು 75 ವರ್ಷಗಳು ಕಳೆದರೂ, ಡಾಂಬರನ್ನೇ ಕಾಣದೆ ಬಹುತೇಕ ಗುಂಡಿಮಯವಾಗಿವೆ. ಕೆಲವು ಗ್ರಾಮಗಳಿಗೆ ತೆರಳುವ ರಸ್ತೆಯು ಸಂಪೂರ್ಣ ಹದಗೆಟ್ಟಿದೆ. ಮೂರ್ನಲ್ಕು ಕಿ.ಮೀ ರಸ್ತೆಯುದ್ದಕ್ಕೂ ಹೊಂಡಗಳು ನಿರ್ಮಾಣವಾಗಿವೆ. ದೊಡ್ಡ ದೊಡ್ಡ ಹೊಂಡದ ಜೊತೆಗೆ ಜೆಲ್ಲಿ ಕಲ್ಲುಮೇಲೆದ್ದು ಓಡಾಡಲು ಕಷ್ಟಕರವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಬಸ್ ಸೌಕರ್ಯವಿಲ್ಲ: ಈ ಗ್ರಾಮಗಳಲ್ಲಿ ಸುಮಾರು 300 ಕುಟುಂಬಗಳು ವಾಸಿಸುತ್ತಿದ್ದು, ಸುಮಾರು 1500 ಜನಸಂಖ್ಯೆಯನ್ನು ಹೊಂದಿದೆ. ಈ ಗ್ರಾಮ ಗಳಿಗೆ ಬಸ್‌ ಸೌಕರ್ಯ ಇಲ್ಲದ ಕಾರಣ ಇವರೆಲ್ಲರೂಈ ರಸ್ತೆಯ ಮೂಲಕ ಪಟ್ಟಣಕ್ಕೆ ತೆರಳಬೇಕು. 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆಹೋಗಿ ಬರಬೇಕಾದರೆ ಏಳೆಂಟು ಕಿ.ಮೀ ಪ್ರತಿನಿತ್ಯನಡೆಯಬೇಕು. ಕೂಲಿ ಕಾರ್ಮಿಕರು, ಸಣ್ಣ ಹಿಡುವಳಿದಾರರು ಹೆಚ್ಚಾಗಿ ಇರುವ ಇಲ್ಲಿನ ಕುಟುಂಬಗಳು ಮನೆಗೆ ಬೇಕಾಗುವ ಆಹಾರ ಸಾಮಗ್ರಿಗಳು,

ತೋಟಗಳಿಗೆ ನೀಡಬೇಕಾಗುವ ಗೊಬ್ಬರ, ಸುಣ್ಣಗಳನ್ನು ತರಬೇಕಾದರೆ ಬಾಡಿಗೆ ವಾಹನ ಮತ್ತು ಸ್ವಂತವಾಹನಗಳಲ್ಲಿ ಈ ರಸ್ತೆಯಲ್ಲೇ ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಜೆಲ್ಲಿ ಕಲ್ಲಿನ ನಡುವೆಯೇ ಸಂಚಾರ: ಆದರೆ ಮಳೆಗಾಲದಲ್ಲಿ ರಸ್ತೆಯ ಗುಂಡಿಗಳಲ್ಲಿ ನೀರು ನಿಂತು ಕೆಸರುಗದ್ದೆಯಾಗಿ ಮಾರ್ಪಡುತ್ತದೆ. ಬೇಸಿಗೆಯಲ್ಲಿ ಧೂಳಿನ ಸಂಕಟ ಎದುರಿಸುವಂತಾಗಿದೆ. ಇದರಿಂದರಸ್ತೆಯಲ್ಲಿ ವಾಹನ ಸಂಚರಿಸಿದ ನಂತರ ಧೂಳುಆವೃತವಾಗುತ್ತದೆ. ಕಾಲ್ನಡಿಗೆಯಲ್ಲಿ ತೆರಳುವ ಸಾರ್ವಜನಿಕರಿಗೆ ಇದರಿಂದ ತೊಂದರೆಯುಂಟಾಗಿದೆ.

ವಿಪರೀತ ಧೂಳಿನಿಂದ ಜನರು ಹೈರಾಣಾಗುವ ಜೊತೆಗೆ ಬೈಕ್‌ ಸವಾರರು ಜೀವ ಕೈಯಲ್ಲಿಡಿದುಕೊಂಡು ಓಡಾಡಬೇಕಿದೆ. ಜೆಲ್ಲಿ ಕಲ್ಲಿನ ನಡುವೆಯೇಸವಾರರು ಸಂಚರಿಸುತ್ತಿದ್ದು, ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತ ಕಟ್ಟಿಟ್ಟ ಬುತ್ತಿ ಎನ್ನುವಂತ್ತಾಗಿದೆ.

ಮನವಿ ಮಾಡಿದರೂ ಪ್ರಯೋಜನವಿಲ್ಲ: ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿಯಲ್ಲಿ ಈ ರಸ್ತೆ ಸೇರಿಸಿದರೆ ಆರೇಳು ಗ್ರಾಮಗಳ ರಸ್ತೆಗಳು

ಡಾಂಬರ್‌ ಕಾಣುತ್ತವೆ. ಅಲ್ಲದೆ, ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಲ್ಲಿ ರಸ್ತೆ ದುರಸ್ಥಿ ಮಾಡಬಹುದಾದರೂ ಯಾರೊಬ್ಬರೂ ಇತ್ತ ಗಮನ ಹರಿಸಿಲ್ಲ. ಅನೇಕ ಬಾರಿಡಾಂಬರೀಕರಣ ಮಾಡಲು ಅಧಿಕಾರಿಗಳು ಮತ್ತುಜನಪ್ರತಿನಿಧಿಗಳಿಗೆ ಮನವಿ ಮಾಡಿದ್ಧರೂಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಪ್ರತಿ ಚುನಾವಣೆಗೆ ಮತ ಕೇಳಲು ಬಂದಾಗ ಡಾಂಬರೀಕರಣ ಮಾಡುವ ಭರವಸೆ ನೀಡುತ್ತರಾದರೂ ಗೆದ್ದ ನಂತರ ಇತ್ತ ತಿರುಗಿಯೂ ಸಹನೋಡುವುದಿಲ್ಲ ಎಂಬುದು ಇಲ್ಲಿನ ನಿವಾಸಿಗಳಆರೋಪವಾಗಿವೆ. ಇನ್ನಾದರೂ ಇತ್ತ ಗಮನಹರಿಸಿರಸ್ತೆ ದುರಸ್ಥಿಗೆ ಮುಂದಾಗಲಿ ಎಂಬುದು ಸ್ಥಳೀಯರ ಮನವಿಯಾಗಿದೆ.

ಒಮ್ಮೆಲೆ ಎರಡು ವಾಹನ ಓಡಾಡಲ್ಲ..

ಈ ತಾಂಡ್ಯಗಳಿಂದ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಗುಂಡಿ, ಜಲ್ಲಿ ರಸ್ತೆಯಾಗಿರುವ ಜೊತೆಗೆ ಕಿರಿದಾಗಿವೆ. ಒಮ್ಮೆಲೆ ನಾಲ್ಕು ಚಕ್ರದ ವಾಹನಗಳು ಎದುರು ಬದರು ಬಂದರೆ ಪಾಸ್‌ ಮಾಡಲು ಹರಸಾಹಸ ಪಡಬೇಕಿದೆ. ಈ ಹಿಂದೆ ಬಾಲದೇವರಹಟ್ಟಿಯಿಂದ ಡಾಂಬರೀಕರಣ ಮಾಡಲು ಮುಂದಾದರಾದರೂ ಅರ್ಧಂಬರ್ಧ ಮಾಡಿ ಸುಮ್ಮನಾದರು. ಹೀಗಾಗಿ ಈ ರಸ್ತೆ ಇನ್ನೂ ಓಡಾಡಲು ಯೋಗ್ಯವಾಗಿಲ್ಲ. ಈ ಭಾಗದ ರಾಜಕೀಯ ಮುಖಂಡರು ಈಗ ಆಗುತ್ತದೆ, ಆಗ ಆಗುತ್ತದೆ ಎನ್ನುತ್ತಾರಾದರೂ ಇದೂವರೆವಿಗೂ ಆಗುವ ಲಕ್ಷಣಗಳು ಕಾಣಸಿಗುತ್ತಿಲ್ಲ ಎಂದು ಬರಕನಹಾಲ್‌ ತಾಂಡ್ಯಾ ನಿವಾಸಿ ಲಕ್ಕಾನಾಯ್ಕ ಆರೋಪಿಸಿದ್ದಾರೆ.

ಈ ತಾಂಡ್ಯಗಳ ರಸ್ತೆಗಳು ಏಕೆ ಇನ್ನೂ ಡಾಂಬರೀಕರಣ ಆಗಿಲ್ಲವೂ ತಿಳಿಯದಾಗಿದೆ. ಪಿಡ್ಲ್ಯೂಡಿ, ಹೇಮಾವತಿ ಯೋಜನೆಯಿಂದ ಡಾಂಬರ್‌ ರಸ್ತೆಯನ್ನಾಗಿಪರಿವರ್ತಿಸಬಹುದಾಗಿದೆ. ಈಗ ಯಾವುದಾದರೂ ಗ್ರ್ಯಾಂಟ್‌ ಬಂದರೆಮೊದಲ ಆದ್ಯತೆ ಮೇರೆಗೆ ಇಲಾಖೆಯಿಂದಾದರೂ ಕಾಮಗಾರಿ ಕೈಗೆತ್ತಿಕೊಳ್ಳುತ್ತೇವೆ. ಸೋಮಶೇಖರ್, ಜಿಪಂ, ಎಇಇ, ಚಿಕ್ಕನಾಯಕನಹಳ್ಳಿ

ಟಾಪ್ ನ್ಯೂಸ್

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

north

Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್‌ ಪರೀಕ್ಷೆ

Horoscope new-1

Daily Horoscope: ಕ್ಷಣಿಕ ಸಮಸ್ಯೆಗಳನ್ನು ನಿರ್ಲಕ್ಷಿಸಿರಿ, ನಿರೀಕ್ಷಿತ ಆರ್ಥಿಕ ನೆರವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-kunigal

Kunigal: ಕೆಂಪನಹಳ್ಳಿ ಗ್ರಾಮದಲ್ಲಿ ಸರಣಿ ಕಳ್ಳತನ

14-kunigal

Kunigal: ಟೈರ್ ಸ್ಪೋಟಗೊಂಡು ಕಾರು ಪಲ್ಟಿ: ಐಟಿ ಉದ್ಯೋಗಿ ದುರ್ಮರಣ

K. N. Rajanna: “ಸರ್ಕಾರ ತೆಗಿತೀನಿ ಅನ್ನೋದು ಪ್ರಜಾಪ್ರಭುತ್ವಕ್ಕೆ ಅವಮಾನ’

K. N. Rajanna: “ಸರ್ಕಾರ ತೆಗಿತೀನಿ ಅನ್ನೋದು ಪ್ರಜಾಪ್ರಭುತ್ವಕ್ಕೆ ಅವಮಾನ’

koratagere

Koratagere: ಗೃಹ ಸಚಿವರ ಸ್ವ ಕ್ಷೇತ್ರದಲ್ಲೇ ಮಲ ಹೊತ್ತ 10 ವರ್ಷದ ಬಾಲಕ!

Accident-logo

Kunigal: ಬೈಕ್, ಕ್ಯಾಂಟರ್ ಮುಖಾಮುಖಿ ಢಿಕ್ಕಿ; ಇಬ್ಬರು ಸ್ಥಳದಲ್ಲೇ ಮೃತ್ಯು 

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.