ಮೈ ನವಿರೇಳಿಸಿದ ಹೋರಿ ಹಬ್ಬ : ಭಾರೀ ಸಂಖ್ಯೆಯಲ್ಲಿ ಆಗಮಿಸಿದ್ದ ಹೋರಿಪ್ರಿಯರು
Team Udayavani, Feb 19, 2022, 4:11 PM IST
ಸೊರಬ: ಮಲೆನಾಡು ಹಾಗೂ ಬಯಲುಸೀಮೆ ಭಾಗದ ರೈತರ ಹಬ್ಬವಾಗಿರುವ ಜನಪದ ಕ್ರೀಡೆ, ಸಾಂಪ್ರದಾಯಿಕ ಹೋರಿ ಬೆದರಿಸುವ ಹಬ್ಬ ತಾಲೂಕಿನ ಬಾರಂಗಿ ಗ್ರಾಮದಲ್ಲಿ ಶುಕ್ರವಾರ
ಜರುಗಿತು.
ದೀಪಾವಳಿ ಹಾಗೂ ಸಂಕ್ರಾಂತಿ ಹಬ್ಬದ ನಂತರ ಗ್ರಾಮೀಣ ಪ್ರದೇಶಗಳಲ್ಲಿ ಹೋರಿ ಬೆದರಿಸುವ ಹಬ್ಬ ಮಹತ್ವ ಪಡೆದಿದ್ದು, ಅಖಾಡದಲ್ಲಿ ಹೋರಿಗಳು ಓಡಿ ಹೋಗುವುದನ್ನು ನೋಡಲು
ತಾಲೂಕಿನ ವಿವಿಧ ಗ್ರಾಮಗಳು ಸೇರಿದಂತೆ ನೆರೆಯ ತಾಲೂಕು, ಜಿಲ್ಲೆಗಳಿಂದ ಭಾರೀ ಸಂಖ್ಯೆಯಲ್ಲಿ ಹೋರಿ ಪ್ರಿಯರು ಆಗಮಿಸಿದ್ದರು. ಅಖಾಡದಲ್ಲಿ ಪೈಲ್ವಾನರ ಕೈಗೆ ಸಿಗದಂತೆ ಹೋರಿಗಳು ಓಡಿ ಹೋಗುವ ದೃಶ್ಯ ನೋಡುಗರ ಮೈನವಿರೇಳಿಸಿತು.
ಹೋರಿಗಳ ಮಾಲೀಕರು ಹೋರಿಗಳಿಗೆ ವಿವಿಧ ಬಗೆಯ ಜೂಲಗಳನ್ನು ಹೊದಿಸಿ, ಬಣ್ಣ ಬಣ್ಣದ ಬಲೂನುಗಳು ಹಾಗೂ ಕೊಬ್ಬರಿ ಕಟ್ಟಿ ಶೃಂಗರಿಸಿದ್ದರು. ಅಖಾಡದಲ್ಲಿ ಭಾರಂಗಿ ಮಹಾರಾಜ, ರಾಣೆಬೆನ್ನೂರು ಡಾನ್, ನೆಗವಾಡಿ ಗರುಡ, ನಳಲಿಕೊಪ್ಪ ಪರಮಾತ್ಮ, ಬೆಟಗೇರಿ ಡಾನ್, ಬಾರಂಗಿ ಮಹಾವೀರ, ಹಂಸಭಾವಿಯ ಕರ್ನಾಟಕ ನಂದಿ, ಬೆಣ್ಣಿಗೇರಿಯ ಮಿಡಿನಾಗ, ತಡಸನಹಳ್ಳಿ
ಡಾನ್, ಬಾರಂಗಿ ಓಂಕಾರ, ಶಿಕಾರಿಪುರ ಗಾಂಧಿನಗರದ ಸೂಪರ್, ಯಲವಳ್ಳಿ ಕಲ್ಲೇಶ, ಬೆಣ್ಣಿಗೇರಿಯ ಮಹಾತ್ಮ, ಗಿಣಿವಾಲದ ಉಗ್ರ ನರಸಿಂಹ, ಯಮ್ಮಿಗನೂರು ಕುರುಕ್ಷೇತ್ರ, ಕುಣೇತಪ್ಪದ ಅ ಪತಿ, ಮಾಸೂರಿನ ಎನ್ಟಿಸಿ ಸಾಹುಕಾರ್, ನರಸಾಪುರದ ಚಂದು, ಶಾಂತಗೇರಿ ಗೂಳಿ, ಕಪ್ಪನಹಳ್ಳಿ ಅರ್ಭಟ, ಹಾವೇರಿಯ ಹೊಯ್ಸಳ, ಹಿಂದೂ ಸಾಮ್ರಾಟ, ಸಮನವಳ್ಳಿ ಹುಲಿ, ಕಪ್ಪನಹಳ್ಳಿ ಅಂಬಿಗರ ಹುಲಿ, ಕದರಮಂಡಲಗಿ ಕೆಡಿಎಂ ಕಿಂಗ್, ಆನವಟ್ಟಿ ಮಲೆನಾಡು ದಂಗೆ, ರಾಗಿಕೊಪ್ಪ ಬುಲೆಟ್ ರಾಜ, ತಡಸನಹಳ್ಳಿ ತಾಂಡವ, ಪುನೀತ್ ರಾಜಕುಮಾರ ಸವಿನೆನಪಿಗಾಗಿ ಆನವಟ್ಟಿಯ ಪವರ್ ಸ್ಟಾರ್ ಸೇರಿದಂತೆ ವಿವಿಧ ಹೆಸರುಗಳ ಹೋರಿಗಳು ಅಖಾಡದಲ್ಲಿ ಓಡಿದವು. ಯುವಕರು ಹೋರಿಗಳನ್ನು ಹಿಡಿದು ಬಲ ಪ್ರದರ್ಶಿಸಿದರೆ, ಜನತೆ ಅದನ್ನು ನೋಡಿ ರೋಮಾಂಚನಗೊಂಡರು. ಅಖಾಡದಲ್ಲಿ ತೇರಿನಂತೆ ಕಾಣುವ ಪೀಪಿ ಹೋರಿಗಳು ಓಡಿ ಬರುತ್ತಿದ್ದಂತೆ ನೆರೆದವರಿಂದ ಕೇಕೆ, ಶಿಳ್ಳೆ, ಚಪ್ಪಾಳೆಗಳು ಜೋರಾಗಿಯೇ ಕೇಳಿಬಂದಿತು.
ಇದನ್ನೂ ಓದಿ : ಬಾಲ್ಯವಿವಾಹ ತಡೆಯುವಲ್ಲಿ ಗ್ರಾ.ಪಂ ಪಾತ್ರ ಮುಖ್ಯ : ಚೈಲ್ಡ್ಲೈನ್ 1098 ಸದುಪಯೋಗಕ್ಕೆ ಕರೆ
ಹೋರಿ ಹಬ್ಬದ ಆಯೋಜಿಸಿದ್ದ ಬಾರಂಗಿ ಹಾಗೂ ಸುತ್ತಲಿನ ಗ್ರಾಮಸ್ಥರು ಅಖಾಡದಲ್ಲಿ ಎರಡು ಬದಿಯಲ್ಲಿ ಸುರಕ್ಷತಾ ಕ್ರಮ ಕೈಗೊಂಡು, ಅಖಾಡದಲ್ಲಿ ಕ್ರಮವಾಗಿ ಒಂದೊಂದೇ
ಹೋರಿಗಳನ್ನು ಓಡಿಸಿದರು. ಇದರಿಂದ ಯಾವುದೇ ಅಪಾಯ ಸಂಭವಿಸಲಿಲ್ಲ.
ಆಯೋಜಕರು ಉತ್ತಮ ರೀತಿಯಲ್ಲಿ ಸುರಕ್ಷತೆಗೆ ಗಮನ ನೀಡಿದ್ದರು. ಇದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು. ಅಖಾಡದಲ್ಲಿ ಉತ್ತಮವಾಗಿ ಓಡಿದ ಹೋರಿಗಳು ಹಾಗೂ ಬಲ ಪ್ರದರ್ಶನ ತೋರಿದ ಯುವಕರನ್ನು ಗುರುತಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ADGP V/s HDK: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್ ಐಆರ್ ದಾಖಲು-HDK ಎ1
Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್
MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
MUST WATCH
ಹೊಸ ಸೇರ್ಪಡೆ
Director Guruprasad: ಗುರುಪ್ರಸಾದ್ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.