2023 ರ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧಿವೇಶನ: ಮುಂಬಯಿ ಆಯ್ಕೆ
ನೀತಾ ಅಂಬಾನಿ ಮಹತ್ವದ ಪಾತ್ರ, ದೇಶಕ್ಕೆ ಹೆಮ್ಮೆಯ ವಿಷಯವೆಂದ ಮಹಾರಾಷ್ಟ್ರ ಸಿಎಂ
Team Udayavani, Feb 19, 2022, 4:19 PM IST
ಮುಂಬಯಿ: 2023 ರಲ್ಲಿ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧಿವೇಶನವನ್ನು ಮುಂಬಯಿಯಲ್ಲಿ ಆಯೋಜಿಸಲಾಗುತ್ತಿದೆ. 2022 ರ ಸಮಿತಿಯ ಮತದಾನದ ಅಧಿವೇಶನದ ನಂತರ ಕನಸುಗಳ ನಗರಿಯನ್ನು ಅಧಿಕೃತವಾಗಿ ಆತಿಥೇಯ ನಗರ ಎಂದು ಹೆಸರಿಸಲಾಯಿತು.
ಒಟ್ಟು 82 ಐಒಸಿ ಸದಸ್ಯರು ಮತದಾನಕ್ಕೆ ಅರ್ಹರಾಗಿದ್ದರು,, ಅವರಲ್ಲಿ 6 ಮಂದಿ ಗೈರು ಹಾಜರಾಗಿದ್ದರೆ, 75 ಸದಸ್ಯರು ಹೌದು ಎಂದು ಮತ ಚಲಾಯಿಸಿದರು. ಮುಂದಿನ ಐಒಸಿ ಅಧಿವೇಶನದ ಆತಿಥೇಯ ಮುಂಬಯಿ ವಿರುದ್ಧ ಕೇವಲ ಒಂದು ಮತ ಬಿದ್ದಿದೆ.
ಒಲಿಂಪಿಕ್ ಸಮಿತಿಯ ಅಧಿವೇಶನವು IOC ಯ ಸದಸ್ಯರ ಸಾಮಾನ್ಯ ಸಭೆಯಾಗಿದೆ. ಇದು IOC ಯ ಸರ್ವೋಚ್ಚ ಅಂಗವಾಗಿದೆ ಮತ್ತು ಅದರ ನಿರ್ಧಾರಗಳು ಅಂತಿಮವಾಗಿರುತ್ತದೆ. ಈವೆಂಟ್‌ನ 2023ರ ಅಧಿವೇಶನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ನಡೆಯಲಿದೆ.
ಇಂತಹ ಪ್ರತಿಷ್ಠಿತ ಒಲಿಂಪಿಕ್ ಕ್ರೀಡಾಕೂಟಕ್ಕಾಗಿ ಇಂದು ಭಾರತೀಯ ನಿಯೋಗವನ್ನು ಮುನ್ನಡೆಸುತ್ತಿರುವುದು ಗೌರವವಾಗಿದೆ” ಎಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಸದಸ್ಯರಾದ ನೀತಾ ಅಂಬಾನಿ ಹೇಳಿದ್ದಾರೆ.
ಮುಂಬಯಿ 2023 ರ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧಿವೇಶನವನ್ನು ಆಯೋಜಿಸುವುದು ಕೇವಲ ಹೆಮ್ಮೆಯ ವಿಷಯವಲ್ಲ ಆದರೆ ಕ್ರೀಡಾ ದಿಗಂತದಲ್ಲಿ ಭಾರತವನ್ನು ಮುಂದಕ್ಕೆ ತಳ್ಳುವ ಅವಕಾಶವೂ ಆಗಿದೆ. 2023 ರ ಅಧಿವೇಶನವನ್ನು ಮಹಾರಾಷ್ಟ್ರದ ಮುಂಬೈಗೆ ತರುವ ಪ್ರಯತ್ನಕ್ಕಾಗಿ ನೀತಾ ಅಂಬಾನಿ ಜಿ! ಅವರಿಗೆ ಕೃತಜ್ಞತೆಗಳು ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಟ್ವೀಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
MUST WATCH
ಹೊಸ ಸೇರ್ಪಡೆ
Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್ ಡಿಕ್ಕಿ: ಮೊಪೆಡ್ ಸವಾರ ಸಾವು
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.