ಮುಳುಗಡೆ ಜನರ ಮುಗಿಯದ ಕಥೆ; ಹೊಸ ಊರಿನ ಜನರ ಮಾಸದ ಹಳೆಯ ನೆನಪುಗಳು

ಊರು (ಪುನರ್‌ ವಸತಿ ಕೇಂದ್ರಗಳು)ಗಳಲ್ಲಿ ಪುನಃ ನಿರ್ಮಾಣ ಮಾಡಲಾಗಿದೆಯಾದರೂ ಹಳೆಯ ಸವಿ ನೆನಪುಗಳು ಮಾತ್ರ ಇಂದಿಗೂ ಮಾಸಿಲ್ಲ.

Team Udayavani, Feb 19, 2022, 5:20 PM IST

ಮುಳುಗಡೆ ಜನರ ಮುಗಿಯದ ಕಥೆ; ಹೊಸ ಊರಿನ ಜನರ ಮಾಸದ ಹಳೆಯ ನೆನಪುಗಳು

ಕೃಷ್ಣೆಯ ಒಡಲಿನಲ್ಲಿ ಕಳೆದೊಂದು ವಾರದಿಂದ ಹಿನ್ನೀರು ಕಡಿಮೆಯಾಗುತ್ತಿದ್ದು, ಈವರೆಗೆ ಮುಳುಗಿದ ಶಾಲೆ-ದೇವಾಲಯಗಳು ಪುನಃ ಕಾಣುತ್ತಿವೆ. ಹೊಸ ಊರಿನಲ್ಲಿದ್ದ ಜನರು, ಹಳೆಯ ಊರಿನ ದೇವಾಲಯಗಳಿಗೆ ಹೋಗಿ ಪೂಜೆ ಮಾಡಿಸಿಕೊಂಡು ಬರುತ್ತಿರುವುದು ಎಲ್ಲೆಡೆ ಕಾಣುತ್ತಿದೆ.

ಬಾಗಲಕೋಟೆ: ಇದು ಕೃಷ್ಣೆಯ ಒಡಲು. ಲಕ್ಷಾಂತರ ರೈತರ ಆರ್ಥಿಕ ಬದುಕು ಹಸನಾಗಿಸಿದ ಖ್ಯಾತಿ ಇದೆ. ಆದರೆ ಅಷ್ಟೇ ಜನರು ಬದುಕಿಗಾಗಿ ಬವಣೆ ಪಟ್ಟ ಪ್ರಸಂಗಗಳೂ ಇವೆ. ಪ್ರತಿವರ್ಷವೂ ಹಿನ್ನೀರು ಬಂದು ಸರಿದಾಗೊಮ್ಮೆ ಆ ಒಡಲು ನೋಡಿ ಜನರು ಕಣ್ಣೀರು ಹಾಕುತ್ತಾರೆ. ಇದಕ್ಕೆಲ್ಲ ಕಾರಣ ಹಲವು. ಹೌದು. ಹಿನ್ನೀರು ಬಂದು ಸಂತ್ರಸ್ತರ ಬದುಕಿಗಷ್ಟೇ ತೊಂದರೆಯಾಗಿಲ್ಲ. ಸಾವಿರಾರು ಜನರಿಗೆ ಆಶ್ರಯವಾಗಿದ್ದ ಗಿಡ-ಮರಗಳು, ದೇವಸ್ಥಾನಗಳು, ಶಾಲೆಗಳೂ ಮುಳುಗಿವೆ.

ಮುಳುಗಿದ ಹಳೆಯ ಶಾಲೆ, ದೇವಸ್ಥಾನಗಳ ಹೆಸರಿನಲ್ಲೇ ಹೊಸ ಊರು (ಪುನರ್‌ ವಸತಿ ಕೇಂದ್ರಗಳು)ಗಳಲ್ಲಿ ಪುನಃ ನಿರ್ಮಾಣ ಮಾಡಲಾಗಿದೆಯಾದರೂ ಹಳೆಯ ಸವಿ ನೆನಪುಗಳು ಮಾತ್ರ ಇಂದಿಗೂ ಮಾಸಿಲ್ಲ.

ಕೃಷ್ಣೆಯ ಒಡಲು ಸೇರಿದ 192 ಹಳ್ಳಿಗಳು:
ಜಿಲ್ಲೆಯನ್ನು ಇಂದಿಗೂ ಮುಳುಗಡೆ ಜಿಲ್ಲೆ, ತ್ಯಾಗಿಗಳ ಜಿಲ್ಲೆ ಎಂದೇ ಕರೆಯಲಾಗುತ್ತದೆ. ಕಾರಣ ಅಖಂಡ ವಿಜಯಪುರ ಜಿಲ್ಲೆಯ 192 ಹಳ್ಳಿಗಳು ಕೃಷ್ಣೆಯ ಹಿನ್ನೀರ ಒಡಲಿನಲ್ಲಿ ಮುಳುಗಿವೆ. ಅದಕ್ಕಾಗಿ 136 ಪುನರ್‌ವಸತಿ ಕೇಂದ್ರ ಸ್ಥಾಪಿಸಿ, ಪುನರ್‌ವಸತಿ, ಪುನರ್‌ ನಿರ್ಮಾಣ ಕಾರ್ಯ ನಡೆದಿದೆಯಾದರೂ ಅದೂ ಪೂರ್ಣ ಪ್ರಮಾಣದಲ್ಲಾಗಿಲ್ಲ.

ಇಂದಿಗೂ ಹಲವಾರು ಹಳ್ಳಿಗಳ ಜನರು, ತಮ್ಮ ಭಾವ-ಭಕುತಿಗಾಗಿ ಹಳೆಯ ಊರಿನಲ್ಲೇ ಇದ್ದಾರೆ. ಹಿನ್ನೀರು ಬಂದಾಗೊಮ್ಮೆ ಹೊಸ ಊರಿಗೆ ಬಂದರೆ, ನೀರು ಸರಿದಾಗ ಪುನಃ ಹಳೆಯ ಊರಿಗೆ ಹೋಗಿ ಮನೆ ಸ್ವಚ್ಛ ಮಾಡಿಕೊಂಡು, ದೀಪಹಚ್ಚಿ ಕೆಲ ದಿನ ವಾಸ  ಮಾಡುವ ಕುಟುಂಬಗಳೂ ಇವೆ. ಅದರಲ್ಲೂ ತಾಲೂಕಿನ ಕದಾಂಪುರ, ಸಾಳಗುಂದಿ, ಯಂಕಂಚಿ, ಮನಿನಾಗರ, ಹೊನ್ನರಹಳ್ಳಿ ಹೀಗೆ ಸುಮಾರು 11ಕ್ಕೂ ಹೆಚ್ಚು ಹಳ್ಳಿಯ ಜನರು ಹಳೆಯ ಹಳ್ಳಿಯಲ್ಲೇ ವಾಸವಾಗಿದ್ದಾರೆ. ಕಾರಣ ಅವರ ಮನೆ ಮುಳುಗಿದರೆ, ಹೊಲ ಪೂರ್ಣ ಮುಳುಗಿಲ್ಲ. ಅದು ಆಲಮಟ್ಟಿ ಜಲಾಶಯವನ್ನು 524.256 ಮೀಟರ್‌ಗೆ ಎತ್ತರಿಸಿದಾಗ ಮಾತ್ರ ಪೂರ್ಣ ಪ್ರಮಾಣದಲ್ಲಿ ಮುಳುಗಡೆಯಾಗುತ್ತದೆ.ಹೀಗಾಗಿ ಹೊಲ ನೋಡಿಕೊಳ್ಳಲು ಅವರೆಲ್ಲ ಹಳೆಯ ಊರಲ್ಲೇ ಇರಬೇಕಾದ ಅನಿವಾರ್ಯತೆ ಇದೆ.

ಬೀಳಗಿಯಲ್ಲಿ ಭಾವಾನುಭವಗಳೇ ಹೆಚ್ಚು:
ಕೃಷ್ಣೆ-ಘಟಪ್ರಭೆ ಒಡಲಿನಲ್ಲಿ ಅತಿ ಹೆಚ್ಚು ಮುಳುಗಡೆ ಹಳ್ಳಿಗಳು ಬರುತ್ತವೆ. ಅದರಲ್ಲೂ ಬಾಗಲಕೋಟೆಯ ಕಲಾದಗಿಯಿಂದ ಬೀಳಗಿ ತಾಲೂಕಿನ ಚಿಕ್ಕಸಂಗಮದವರೆಗೆ ಸುಮಾರು ಸುಮಾರು 56ಕ್ಕೂ ಹೆಚ್ಚು ಹಳ್ಳಿಗಳು ಮುಳುಗಡೆಯಾಗಿವೆ. ಆಲಮಟ್ಟಿ ಜಲಾಶಯ ನಿರ್ಮಾಣದಿಂದ ಅತಿ ಹೆಚ್ಚು ಹಳ್ಳಿಗಳನ್ನು ಕಳೆದುಕೊಂಡ ತಾಲೂಕುಗಳಲ್ಲಿ ಬೀಳಗಿ ಮೊದಲು. ಆಲಮಟ್ಟಿ ಜಲಾಶಯವನ್ನು ಈಗಿರುವ 519.60 ಮೀಟರ್‌ನಿಂದ 524.256 ಮೀಟರ್‌ಗೆ ಎತ್ತರಿಸಿದಾಗ ಈ ತಾಲೂಕಿನ ಮೂಲ ಹಳ್ಳಿಗಳಲ್ಲಿ 14 ಹಳ್ಳಿಗಳು ಮಾತ್ರ ಉಳಿಯಲಿವೆ. ಉಳಿದವುಗಳೆಲ್ಲ ಪುನರ್‌ವಸತಿ ಕೇಂದ್ರಗಳೇ. ಹೀಗಾಗಿ ಬೀಳಗಿ, ಬಾಗಲಕೋಟೆ, ಹುನಗುಂದ, ಜಮಖಂಡಿ ತಾಲೂಕಿನಲ್ಲಿ ಹಿನ್ನೀರ ಒಡಲಿನ ಭಾವಾನುಭವಗಳೇ ಹೆಚ್ಚು.

ಒಡಲ ತುಂಬಾ ದೇವಾಲಯಗಳ ಭಕುತಿ:
ಹಿನ್ನೀರ ಪ್ರದೇಶ ವ್ಯಾಪ್ತಿಯ ಶಾಲೆ, ಮನೆಗಳು ಸಾವಿರಾರು ಮುಳುಗಿವೆ. ಅವುಗಳ ಬಗ್ಗೆ ಜನರಿಗೆ ಭಾವಾನುಭವ ಇದ್ದರೂ, ಅತಿ ಹೆಚ್ಚು ಮನಸ್ಸಿಗೆ ನೋವು ತರುವುದೇ ಇಲ್ಲಿನ ದೇವಾಲಯಗಳ ಭಕುತಿ. ಉತ್ತರ ಕರ್ನಾಟಕ, ಅದರಲ್ಲೂ ಜಿಲ್ಲೆಯ ಜನರಿಗೆ ದೇವಾಲಯ, ದೇವರ ಮೇಲೆ ಅತಿ ಹೆಚ್ಚು ಭಕ್ತಿ-ಭಾವ. ಇಲ್ಲಿನ ದೇವಾಲಯಗಳ ಜಾತ್ರೆ, ವಾರ್ಷಿಕೋತ್ಸವ, ಕಾರ್ತಿಕೋತ್ಸವ ಹೀಗೆ ಹಲವು ಸಂಭ್ರಮಗಳಲ್ಲಿ ಪ್ರತಿಯೊಂದು ಹಳ್ಳಿಯ ಜನ ಭಕ್ತಿ-ಭಾವದಿಂದ ಭಾಗವಹಿಸಿ ಸಂಭ್ರಮಿಸುತ್ತಿದ್ದರು. ಆ ಎಲ್ಲ ದೇವಾಲಯಗಳನ್ನು ಹೊಸ ಊರಲ್ಲಿ ಪುನರ್‌ ನಿರ್ಮಾಣ ಮಾಡಲಾಗಿದೆಯಾದರೂ ಮೂಲ ಹಳ್ಳಿಯ ಪಾದಗಟ್ಟಿಗೆ ಹೋಗಿ ದೇವರ ಗರ್ಭಗುಡಿಗೆ ಹಣೆಹಚ್ಚಿ ನಮಸ್ಕರಿಸಿದಾಗಲೇ ಅವರಿಗೆ ಒಂದು ರೀತಿಯ ಖುಷಿ, ನೆಮ್ಮದಿ.

ಆದರೆ ಆ ಹಳೆಯ ಹಳ್ಳಿಗಳ ತುಂಬಾ ಪ್ರತಿವರ್ಷ ಸುಮಾರು 6ರಿಂದ 7 ತಿಂಗಳವರೆಗೂ ಕೃಷ್ಣೆಯ (ಆಲಮಟ್ಟಿ ಜಲಾಶಯ) ಒಡಲಿನ ಹಿನ್ನೀರು ಆವರಿಸಿಕೊಳ್ಳುತ್ತದೆ. ಆಗ ದೇವಾಲಯಗಳ ಕಳಸದವರೆಗೂ ನೀರು ಬಂದಿರುತ್ತದೆ. ಇದರಿಂದ ಆ ದೇವಾಲಯಗಳ ಪ್ರವೇಶಕ್ಕೆ ಅವಕಾಶವಿರಲ್ಲ. ಇನ್ನು ಬೀಳಗಿ ತಾಲೂಕಿನ ಬಾಡಗಿಯ ಭಕ್ಕೇಶ್ವರ ದೇವಾಲಯ ಎದುರು ಬೃಹತ್‌ ಗಂಟೆಯೊಂದಿದ್ದು, ಹಿನ್ನೀರಿನ ತೆರೆಗಳಿಗೆ ಆ ಗಂಟೆಯ ನೀನಾದ ತನ್ನಿಂದ ತಾನೆ ಕೇಳಿಸುತ್ತದೆ. ಇಂತಹ ಹಲವಾರು ಸುಂದರ ಕ್ಷಣಗಳನ್ನು ಹಿನ್ನೀರು ಆವರಿಸಿಕೊಂಡಾಗಲೊಮ್ಮೆ ಕಾಣಬಹುದು. ಆದರೆ ಅಂತಹ ಕ್ಷಣಗಳನ್ನು ಕಾಣುವ ಜನ, ಹಳೆಯ ನೆನಪು ಮೆಲಕು ಹಾಕಿ ಭಾವನೆಗಳಿಂದ ಕಣ್ಣೀರಾಗುತ್ತಾರೆ.

ಶ್ರೀಶೈಲ ಕೆ. ಬಿರಾದಾರ

ಟಾಪ್ ನ್ಯೂಸ್

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?

1-a-ct

Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Krantiveer Brigade launched by worshipping the feet of 1008 saints: KS Eshwarappa

Politicss; 1008 ಸಾಧುಸಂತರ ಪಾದಪೂಜೆ‌ ಮೂಲಕ‌ ಕ್ರಾಂತಿವೀರ ಬ್ರಿಗೇಡ್‌ ಗೆ ಚಾಲನೆ: ಈಶ್ವರಪ್ಪ

India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ

India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ

Rabkavi Banhatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು

Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು

4-

ವಿಳಾಸ ಕೇಳುವ ನೆಪದಲ್ಲಿ ವ್ಯಕ್ತಿಯ ಕೊರಳಲ್ಲಿದ್ದ ಚಿನ್ನದ ಚೈನ್‌ ಕದ್ದ ಅಪರಿಚಿತ ವ್ಯಕ್ತಿ

Mudhol: ಬಸ್ ಗೆ ಡಿಕ್ಕಿ ಹೊಡೆದ ಬೈಕ್… ಸವಾರರಿಗೆ ಗಂಭೀರ ಗಾಯ

Mudhol: ಬಸ್ ಗೆ ಡಿಕ್ಕಿ ಹೊಡೆದ ಬೈಕ್… ಸವಾರರಿಗೆ ಗಂಭೀರ ಗಾಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

BJP Congress;ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರಿಗೆ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Yakshagana Tenku

Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.