ಹ್ಯಾಟ್ರಿಕ್‌ ವಿಜಯಕ್ಕೆ ಟೀಮ್‌ ಇಂಡಿಯಾ ಸ್ಕೆಚ್‌

ಗೆಲುವಿನ ಮುಖ ಕಾಣಲು ತವಕಿಸುತ್ತಿರುವ ಪೊಲಾರ್ಡ್‌ ಪಡೆ

Team Udayavani, Feb 20, 2022, 7:35 AM IST

ಹ್ಯಾಟ್ರಿಕ್‌ ವಿಜಯಕ್ಕೆ ಟೀಮ್‌ ಇಂಡಿಯಾ ಸ್ಕೆಚ್‌

ಕೋಲ್ಕತಾ: ಟಿ20 ಸ್ಪೆಷಲಿಸ್ಟ್‌ ಖ್ಯಾತಿಯ ವೆಸ್ಟ್‌ ಇಂಡೀಸ್‌ ವಿರುದ್ಧ ಪ್ರಾಬಲ್ಯ ಮುಂದುವರಿಸಿದ ಭಾರತ ಈಗಾಗಲೇ ಸರಣಿ ಯನ್ನು ವಶಪಡಿಸಿಕೊಂಡಿದೆ. ಮುಂದಿರುವುದು ಕ್ಲೀನ್‌ ಸ್ವೀಪ್‌ ಯೋಜನೆ.

ಏಕದಿನದಂತೆ ಚುಟುಕು ಕ್ರಿಕೆಟ್‌ ಸರಣಿಯನ್ನೂ 3-0 ಅಂತರ ದಿಂದ ಗೆಲ್ಲುವ ಯೋಜನೆಯಲ್ಲಿದೆ ಟೀಮ್‌ ಇಂಡಿಯಾ. ಹೀಗಾಗಿ ರವಿವಾರದ ಅಂತಿಮ ಮುಖಾಮುಖಿಯ ಕೌತುಕ ಹೆಚ್ಚಿದೆ.

ಇನ್ನೊಂದೆಡೆ ಭಾರತಕ್ಕೆ ಆಗಮಿಸಿದ ಬಳಿಕ ಗೆಲುವಿನ ಮುಖವನ್ನೇ ಕಾಣದ ವೆಸ್ಟ್‌ ಇಂಡೀಸ್‌ಗೆ ಇದು ಕೊನೆಯ ಅವಕಾಶ. ಈ ಪಂದ್ಯವನ್ನು ಗೆದ್ದರೆ ಒಂದಿಷ್ಟು ಪ್ರತಿಷ್ಠೆ ಗಳಿಸ ಬಹುದು. ಇದು ಅಸಾಧ್ಯವೇನೂ ಅಲ್ಲ. ಸ್ವಲ್ಪವೇ ಜಾಸ್ತಿ ಪ್ರಯತ್ನ ಹಾಕಿದ್ದರೆ ದ್ವಿತೀಯ ಮುಖಾಮುಖಿಯನ್ನೇ ಗೆದ್ದು ಸರಣಿಯನ್ನು ಸಮಬಲಕ್ಕೆ ತರುವ ಅವಕಾಶ ವಿಂಡೀಸ್‌ ಮುಂದಿತ್ತು. ಆದರೆ ಅದೃಷ್ಟ ಇರಲಿಲ್ಲ. 186 ರನ್‌ ಚೇಸಿಂಗ್‌ ವೇಳೆ ಪೊಲಾರ್ಡ್‌ ಪಡೆ ಕೇವಲ 8 ರನ್ನುಗಳಿಂದ ಹಿಂದುಳಿಯಿತು. ಇನ್ನೂ 7 ವಿಕೆಟ್‌ ಕೈಯಲ್ಲಿ ಉಳಿದಿತ್ತು ಎಂಬುದನ್ನು ಮರೆಯುವಂತಿಲ್ಲ. ಹೀಗಾಗಿ ಪ್ರವಾಸಿಗರ ಪಾಲಿಗೆ ಇದೊಂದು ವೀರೋಚಿತ ಸೋಲು.

ಗಾಯಕ್ವಾಡ್‌, ಅಯ್ಯರ್‌ ಆಟ
ವಿರಾಟ್‌ ಕೊಹ್ಲಿ ಮತ್ತು ರಿಷಭ್‌ ಪಂತ್‌ ಅವರ ಅರ್ಧ ಶತಕ ದ್ವಿತೀಯ ಪಂದ್ಯದ ಆಕ ರ್ಷಣೆ ಆಗಿತ್ತು. ಆದರೆ ಇಬ್ಬರೂ ವಿಶ್ರಾಂತಿಗೆ ತೆರ ಳಿರುವುದರಿಂದ ಅಂತಿಮ ಪಂದ್ಯಕ್ಕೆ ಲಭ್ಯರಾಗು ವುದಿಲ್ಲ. ಹೀಗಾಗಿ ಭಾರತ ತಂಡದಲ್ಲಿ ದೊಡ್ಡ ಮಟ್ಟದ ಬದಲಾವಣೆ ಸಂಭವಿಸಲಿದೆ. ಬಹಳ ಸಮಯದಿಂದ ಕಾಯುತ್ತಿದ್ದ ಋತುರಾಜ್‌ ಗಾಯಕ್ವಾಡ್‌ ಮತ್ತು ಶ್ರೇಯಸ್‌ ಅಯ್ಯರ್‌ ಇವರಿಬ್ಬರ ಸ್ಥಾನವನ್ನು ತುಂಬುವುದು ಖಚಿತ.

ಕೆ.ಎಲ್‌. ರಾಹುಲ್‌ ಗೈರಲ್ಲಿ ಇಶಾನ್‌ ಕಿಶನ್‌ ಆರಂಭಿಕನಾಗಿ ಹಾರ್ಡ್‌ ಹಿಟ್ಟಿಂಗ್‌ ಪ್ರದರ್ಶನ ನೀಡಿಲ್ಲ. ಮೊದಲ ಪಂದ್ಯದಲ್ಲಿ 42 ಎಸೆತಗಳಿಂದ 35 ರನ್‌ ಮಾಡಿದರೆ, ದ್ವಿತೀಯ ಮುಖಾ ಮುಖೀಯಲ್ಲಿ 10 ಎಸೆತ ಎದುರಿಸಿ ಎರಡೇ ರನ್‌ ಮಾಡಿ ವಾಪಸಾಗಿದ್ದರು. ಆದರೆ ಇಶಾನ್‌ ಕಿಶನ್‌ಗೆ ಇನ್ನೊಂದು ಅವಕಾಶ ಸಿಗುವುದರಲ್ಲಿ ಅನುಮಾನವಿಲ್ಲ. ಕಾರಣ, ಪಂತ್‌ಗೆ ಬದಲಿಯಾಗಿ ಕೀಪಿಂಗ್‌ ಮಾಡಬೇಕಾಗುತ್ತದೆ. ಆದರೆ ಅವರ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬದಲಾವಣೆ ಸಂಭವಿಸಬಹುದು. ಗಾಯಕ್ವಾಡ್‌ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸುವುದು ಹೆಚ್ಚು ಸೂಕ್ತವೆನಿಸುತ್ತದೆ.

ಐಪಿಎಲ್‌ನಲ್ಲಿ ಕೆಕೆಆರ್‌ ನಾಯಕನಾಗಿ ನೇಮಕಗೊಂಡಿರುವ ಶ್ರೇಯಸ್‌ ಅಯ್ಯರ್‌ ಈಗ ನೂತನ “ಹೋಮ್‌ ಗ್ರೌಂಡ್‌’ನಲ್ಲಿದ್ದಾರೆ. ಈ ಅವಕಾಶವನ್ನು ಅವರು ಚೆನ್ನಾಗಿಯೇ ಬಳಸಿಕೊಳ್ಳಬೇಕಿದೆ.

ಬೌಲಿಂಗ್‌ ಬದಲಾವಣೆ
ಭಾರತದ ಬೌಲಿಂಗ್‌ ವಿಭಾಗದಲ್ಲೂ ಕೆಲವು ಬದಲಾವಣೆ ಸಂಭವಿಸಬಹುದು. ಏಕೈಕ ಅನುಭವಿಯಾಗಿರುವ ಕಾರಣ ಭುವನೇಶ್ವರ್‌ ಕುಮಾರ್‌ ಮುಂದುವರಿಯಬಹುದು. ಕಳಪೆ ಫೀಲ್ಡಿಂಗ್‌ ನಡೆಸಿದರೂ ದ್ವಿತೀಯ ಪಂದ್ಯದ “ಗೇಮ್‌ ಚೇಂಜಿಂಗ್‌ ಓವರ್‌’ ಭುವಿಗೆ ಲೈಫ್ಲೈನ್‌ ಕೊಟ್ಟಿದೆ. ಆಲ್‌ರೌಂಡರ್‌ ದೀಪಕ್‌ ಹೂಡಾ, ಪೇಸ್‌ ಬೌಲರ್‌ಗಳಾದ ಆವೇಶ್‌ ಖಾನ್‌, ಮೊಹಮ್ಮದ್‌ ಸಿರಾಜ್‌ ರೇಸ್‌ನಲ್ಲಿರುವ ಪ್ರಮುಖರು. ಆವೇಶ್‌ ಖಾನ್‌ ಮೊನ್ನೆಯ ಮೆಗಾ ಹರಾಜಿನಲ್ಲಿ ಅತ್ಯಧಿಕ ಮೊತ್ತಕ್ಕೆ ಮಾರಾಟಗೊಂಡ “ಅನ್‌ ಕ್ಯಾಪ್ಡ್’ ಆಟಗಾರನಾಗಿದ್ದಾರೆ. ಹರ್ಷಲ್‌, ಚಹರ್‌ ಅವರಿಗೆ ವಿಶ್ರಾಂತಿ ಲಭಿಸಬಹುದು.

ಭಾರತದ ಫೀಲ್ಡಿಂಗ್‌ ತೀರಾ ಕಳಪೆಯಾಗಿದೆ. ಸುಲಭ ಕ್ಯಾಚ್‌ಗಳೆಲ್ಲ ನೆಲ ಕಾಣುತ್ತಿವೆ. ವಿಶ್ವಕಪ್‌ ಹಿನ್ನೆಲೆಯಲ್ಲಿ ಕ್ಷೇತ್ರರಕ್ಷಣೆ ಸುಧಾರಣೆ ಅತ್ಯಗತ್ಯ.

ತಂಡವಾಗಿ ಆಡದ ವಿಂಡೀಸ್‌
ಇಂಗ್ಲೆಂಡ್‌ ವಿರುದ್ಧ 3-2 ಅಂತರದಿಂದ ಟಿ20 ಸರಣಿ ಗೆದ್ದು ಬಂದ ವೆಸ್ಟ್‌ ಇಂಡೀಸ್‌ ಭಾರತದಲ್ಲಿ ಗೆಲುವನ್ನೇ ಕಾಣದಿರುವುದು ಅಚ್ಚರಿ ಮೂಡಿಸುತ್ತದೆ. ನಿಕೋಲಸ್‌ ಪೂರಣ್‌ ಸತತ 2 ಅರ್ಧ ಶತಕ ಬಾರಿಸಿ ಅಪಾಯಕಾರಿಯಾಗಿ ಗೋಚರಿಸಿದ್ದಾರೆ. ಮತ್ತೋರ್ವ ಹಿಟ್ಟರ್‌ ಪೊವೆಲ್‌ ದ್ವಿತೀಯ ಪಂದ್ಯದಲ್ಲೇನೋ ಸಿಡಿದು ನಿಂತರು. ಆದರೆ “ಫಿನಿಶಿಂಗ್‌ ರೋಲ್‌’ನಲ್ಲಿ ಯಶಸ್ವಿಯಾಗಲಿಲ್ಲ. ಆಫ್ ಸ್ಪಿನ್ನಿಂಗ್‌ ಆಲ್‌ರೌಂಡರ್‌ ರೋಸ್ಟನ್‌ ಚೇಸ್‌ ಉತ್ತಮ ಪರಿಣಾಮ ಬೀರಿದ್ದಾರೆ. ಆದರೆ ವಿಂಡೀಸ್‌ ತಂಡವಾಗಿ ಆಡುವುದು ಬಹಳ ಮುಖ್ಯ.

ಕೊಹ್ಲಿ , ಪಂತ್‌ಗೆ “ಬಯೋ ಬ್ರೇಕ್‌’
ವಿರಾಟ್‌ ಕೊಹ್ಲಿ ಮತ್ತು ರಿಷಭ್‌ ಪಂತ್‌ ಅವರಿಗೆ ಬಿಸಿಸಿಐ 10 ದಿನಗಳ ಬಯೋಬಬಲ್‌ ಬ್ರೇಕ್‌ ನೀಡಿದೆ. ಇಬ್ಬರೂ ಮನೆಗೆ ತೆರಳಲಿದ್ದು, ವೆಸ್ಟ್‌ ಇಂಡೀಸ್‌ ಎದುರಿನ ಅಂತಿಮ ಟಿ20 ಪಂದ್ಯ ಹಾಗೂ ಪ್ರವಾಸಿ ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಗೆ ಲಭ್ಯರಿರುವುದಿಲ್ಲ.

“ಆಟಗಾರರ ಒತ್ತಡ, ಮಾನಸಿಕ ಆರೋಗ್ಯವನ್ನು ಗಮನದಲ್ಲಿರಿಸಿ ಎಲ್ಲ ಮಾದರಿಯಲ್ಲೂ ಆಟಗಾರಿಗೆ ಬ್ರೇಕ್‌ ನೀಡಲು ಬಿಸಿಸಿಐ ನಿರ್ಧರಿಸಿದೆ.

ಈಗಾಗಲೇ ಭಾರತ ಸರಣಿ ಜಯಿಸಿರುವುದರಿಂದ ಕೊಹ್ಲಿ ಮತ್ತು ಪಂತ್‌ ಅವರನ್ನು ಬಯೋ ಬ್ರೇಕ್‌ಗೆ ಆಯ್ಕೆ ಮಾಡಲಾಗಿದೆ. ಇವರಿನ್ನು ಲಂಕಾ ಎದುರಿನ 2 ಪಂದ್ಯಗಳ ಟೆಸ್ಟ್‌ ಸರಣಿ ವೇಳೆ ತಂಡಕ್ಕೆ ಮರಳಲಿದ್ದಾರೆ’ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸತತವಾಗಿ ಜೈವಿಕ ಸುರಕ್ಷಾ ವಲಯದಲ್ಲಿದ್ದು ಆಡುವುದು ಸುಲಭವಲ್ಲ ಎಂದು ರಿಷಭ್‌ ಪಂತ್‌ ಶುಕ್ರವಾರ ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸುವಾಗ ಹೇಳಿದ್ದರು.

 ಆರಂಭ: 7.00 l ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ಟಾಪ್ ನ್ಯೂಸ್

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

IPL: Players from these countries are fully available for the next three seasons of IPL

IPL: ಇನ್ನು ಮೂರು ಸೀಸನ್‌ ಐಪಿಎಲ್‌ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Suside-Boy

Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.