ಬಗೆದಷ್ಟೂ ನಿಗೂಢ! ಚಿತ್ರಾ ರಾಮಕೃಷ್ಣ


Team Udayavani, Feb 20, 2022, 6:20 AM IST

ಬಗೆದಷ್ಟೂ ನಿಗೂಢ! ಚಿತ್ರಾ ರಾಮಕೃಷ್ಣ

ನ್ಯಾಶನಲ್‌ ಸ್ಟಾಕ್‌ ಎಕ್ಸ್‌ಚೇಂಜ್‌ನ (ಎನ್‌ಎಸ್‌ಇ) ಮಾಜಿ ಮುಖ್ಯಸ್ಥೆ ಚಿತ್ರಾ ರಾಮಕೃಷ್ಣ ಅವರ ಪ್ರಕರಣ ಅಪರೂಪದ್ದು . ಇಲ್ಲಿ ಮೂರು ಪಾತ್ರಗಳಿವೆ. ಒಂದು ಚಿತ್ರಾ ರಾಮಕೃಷ್ಣ, ಮತ್ತೊಬ್ಬರು ಅವರ ಸಲಹೆಗಾರರಾಗಿದ್ದ ಆನಂದ್‌ ಸುಬ್ರಹ್ಮಣ್ಯನ್‌. ಮೂರನೆಯ ಪಾತ್ರ – ಹಿಮಾಲಯದ ಯೋಗಿ! ಈ ಮೂರರ ನಡುವಿನ ಘಟನಾವಳಿಗಳು ತನಿಖಾಧಿಕಾರಿಗಳ ನಿದ್ದೆಗೆಡಿಸಿವೆ.

ಚಿತ್ರಾ ವಿರುದ್ಧದ ಆರೋಪಗಳೇನು?
2013ರಿಂದ 2016ರ ವರೆಗೆ ಎನ್‌ಎಸ್‌ಇ ಮುಖ್ಯಸ್ಥೆಯಾಗಿದ್ದ ಚಿತ್ರಾ, ತಾವು ಕೈಗೊಂಡ ಪ್ರತಿಯೊಂದು ಆಡಳಿತಾತ್ಮಕ ನಿರ್ಧಾರವನ್ನು ಹಿಮಾಲಯದ ಯೋಗಿಯೊಬ್ಬರ ಆಣತಿ ಮೇರೆಗೆ ಕೈಗೊಳ್ಳುತ್ತಿದ್ದರು ಎಂಬ ಆರೋಪ­ ವಿದೆ. ಎನ್‌ಎಸ್‌ಸಿಯ ಗೌಪ್ಯ ಮಾಹಿತಿಗಳನ್ನು ಯೋಗಿ ಬಳಿ ಹಂಚಿಕೊಂಡಿದ್ದಾರೆನ್ನಲಾಗಿದೆ. ಎನ್‌ಎಸ್‌ಇ ವತಿಯಿಂದ ಕೈಗೊಳ್ಳಬೇಕಾದ ವಾಣಿಜ್ಯ ಕಾರ್ಯತಂತ್ರಗಳು, ಸಂಸ್ಥೆಯ ಆಂತರಿಕ ವಿಚಾರಗಳ ಬಗ್ಗೆ ಯೋಗಿಯವರ ಬಳಿ ಚರ್ಚಿಸಿ ಚಿತ್ರಾ ನಿರ್ಧಾರ ಕೈಗೊಳ್ಳು­ ತ್ತಿದ್ದರು. ಅಷ್ಟೇ ಏಕೆ, ಎನ್‌ಎಸ್‌ಇ ಸಿಬಂದಿಯ ವೇತನ ಹೆಚ್ಚಳ ಪ್ರಸ್ತಾವನೆಯನ್ನೂ ಅವರ ಮುಂದಿಟ್ಟೇ ನಿರ್ಧಾರ ಮಾಡುತ್ತಿದ್ದರು ಚಿತ್ರಾ.

ಎಲ್ಲವೂ ನಿಗೂಢ!
ಚಿತ್ರಾರಿಗೆ ಯೋಗಿ ಎಂದು ಕರೆಯಿಸಿಕೊಂಡಾತ ಕಳಿಸಿರುವ ಇ-ಮೇಲ್‌ಗ‌ಳು ಅವರ ಬಗ್ಗೆ ಹೊಸ ಸಂಶಯಗಳನ್ನು ಹುಟ್ಟುಹಾಕಿವೆ. 2017ರ ಫೆಬ್ರವರಿಯಲ್ಲಿ ಯೋಗಿ ಕಳಿಸಿದ ಇ-ಮೇಲ್‌ನಲ್ಲಿ, ನಾನು ಮುಂದಿನ ತಿಂಗಳು ಸೀಶೆಲ್‌ಗೆ ಹೊರಡುತ್ತಿದ್ದೇನೆ. ನೀನು (ಚಿತ್ರಾ) ಬರುವುದಾ­ದರೆ ಲಗೇಜ್‌ ಸಿದ್ಧವಾಗಿಟ್ಟುಕೋ. ಕಾಂಚನಾ, ಭಾರ್ಗವ ಜತೆೆ ಕಂಚನ್‌ ಲಂಡನ್‌ಗೆ ಹೋಗುವ ಮುನ್ನ ಹಾಗೂ ನೀನು ನಿನ್ನ ಇಬ್ಬರು ಮಕ್ಕಳೊಂದಿಗೆ ನ್ಯೂಜಿಲೆಂಡ್‌ಗೆ ಹೋಗುವ ಮುನ್ನ ನೀನು ಬರಬಹುದು ಎಂದಿದ್ದಾರೆ. ಇಲ್ಲಿ ಕಾಂಚನಾ, ಕಂಚನ್‌ ಎಂದರೆ ಸುಬ್ರಹ್ಮಣ್ಯನ್‌ ಹಾಗೂ ಎನ್‌ಎಸ್‌ಇಯ ಚೆನ್ನೈ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರ ಪತ್ನಿ ಇರಬಹುದು ಎನ್ನಲಾಗಿದೆ. ಇನ್ನು, ಮಕ್ಕಳ ವಿಚಾರಕ್ಕೆ ಬರುವುದಾದರೆ, ಎನ್‌ಎಸ್‌ಇ ಆಂತರಿಕ ಮಾಹಿತಿ ಪ್ರಕಾರ ಚಿತ್ರಾರಿಗೆ ಕೇವಲ ಒಬ್ಬ ಮಗಳಿದ್ದಳು. ಆದರೆ ಇ-ಮೇಲ್‌ನಲ್ಲಿ ಇಬ್ಬರು ಮಕ್ಕಳು ಎಂದು ಪ್ರಸ್ತಾವವಾಗಿದೆ. ಇದು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಕೋಡ್‌ ವರ್ಡ್‌ನಲ್ಲಿ ಬರುತ್ತಿತ್ತು ಸೂಚನೆ!
ಚಿತ್ರಾ, ಯೋಗಿ ನಡುವೆ ಕೋಡ್‌ ವರ್ಡ್‌ಗಳಲ್ಲಿ ಇ-ಮೇಲ್‌ ವ್ಯವಹಾರ ನಡೆದಿದೆ. ಎನ್‌ಎಸ್‌ಸಿ ಮುಖ್ಯಸ್ಥರಿಗೆ ಸಲಹೆಗಾರರಾಗಿ ನೇಮಕಗೊಳ್ಳಲು ಅರ್ಹತೆ ಇಲ್ಲದ ಆನಂದ್‌ ಸುಬ್ರಹ್ಮಣ್ಯನ್‌ ಅವರನ್ನು ಚಿತ್ರಾ ಅವರು ನೇಮಿಸಿ ಕೊಂಡಿದ್ದಕ್ಕೂ ಇದೇ ಯೋಗಿ ಕಾರಣ ಎನ್ನಲಾಗಿದೆ. ಈ ಕುರಿತಂತೆ ಚಿತ್ರಾಗೆ ಯೋಗಿ ಕಳಿಸಿರುವ ಇ-ಮೇಲ್‌ನಲ್ಲಿ, ನೀರನ್ನು ಹೀರಿ­ಕೊಳ್ಳುವ ಶಕ್ತಿ “ಸ್ಟ್ರಾ’ಗೆ ಇರುತ್ತದೆ. ಕಂಚನ್‌ ಒಂದು ಸ್ಟ್ರಾ ಇದ್ದಂತೆ, ನಾನು ಹೀರಿಕೊಳ್ಳುವ ಶಕ್ತಿ ಎಂದು ಹೇಳಿದ್ದಾರೆ. ಈ ಮೇಲ್‌ ಬಂದ ಮೇಲೆ ಆನಂದ್‌ರವರ ನೇಮಕಾತಿಯಾಗಿದೆ. ಕಂಚನ್‌ ಎಂದರೆ ಆನಂದ್‌ ಅವರೇ? ಎಂಬ ಪ್ರಶ್ನೆ ಎದ್ದಿದೆ. ಇದಕ್ಕಿನ್ನೂ ಉತ್ತರ ಸಿಕ್ಕಿಲ್ಲ.

ಸುಬ್ರಹ್ಮಣ್ಯನ್‌ ಡಬಲ್‌ ರೋಲ್‌?
ಚಿತ್ರಾರ ಸಲಹೆಗಾರರಾಗಿದ್ದ ಆನಂದ್‌ ಸುಬ್ರಹ್ಮಣ್ಯನ್‌ ಅವರನ್ನು ಆ ಸ್ಥಾನಕ್ಕೆ ನೇಮಿಸಿದ್ದು ಯೋಗಿಯ ಸಲಹೆ­ ಯಿಂದ. ಅವರಿಗೆ ವಾರ್ಷಿಕವಾಗಿ ಕೋಟ್ಯಂತರ ರೂ. ಸಂಬಳ ಕೊಡಿಸಿದ್ದು ಯೋಗಿ! ಇಲ್ಲಿ ಹೆಚ್ಚು ಲಾಭ ಪಡೆದಿರು­ವುದು ಸುಬ್ರಹ್ಮಣ್ಯನ್‌. ಹಾಗಾಗಿ ಈ ಸುಬ್ರಹ್ಮಣ್ಯನ್‌ ಹಾಗೂ ಯೋಗಿ ಇಬ್ಬರೂ ಒಂದೇ ಆಗಿರಬಹುದೇ ಎಂಬ ಅನುಮಾನಗಳೂ ಎದ್ದಿವೆ.

ಟಾಪ್ ನ್ಯೂಸ್

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shiva-sene-Shinde

Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಶಿವಸೇನೆಗೆ

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Shiva-sene-Shinde

Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಶಿವಸೇನೆಗೆ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.