ಬೆಳಗಾವಿಯಲ್ಲಿ ವಿಮಾನ ಹಾರಾಟ ತರಬೇತಿ ಕೇಂದ್ರಕ್ಕೆ ಭರದ ಸಿದ್ಧತೆ
Team Udayavani, Feb 20, 2022, 11:37 AM IST
ಬೆಳಗಾವಿ: ಸಂಪೂರ್ಣ ನವೀಕರಣ ನಂತರ ಉಡಾನ್ ಯೋಜನೆಯಿಂದ ತನ್ನ ಚಿತ್ರಣವನ್ನೇ ಬದಲಾಯಿಸಿಕೊಂಡಿರುವ ಬೆಳಗಾವಿ ವಿಮಾನ ನಿಲ್ದಾಣ ಈಗ ಮತ್ತೂಂದು ಸಾಧನೆಯತ್ತ ಹೆಜ್ಜೆ ಇಟ್ಟಿದೆ. ಪೈಲಟ್ ಆಗಬೇಕೆಂಬ ಯುವ ಜನಾಂಗದ ಕನಸು ನನಸು ಮಾಡಲು ನಿಲ್ದಾಣದ ಆವರಣದಲ್ಲಿ ವಿಮಾನ ಹಾರಾಟ ತರಬೇತಿ ಕೇಂದ್ರ ಆರಂಭಿಸುತ್ತಿದ್ದು, ಕೇಂದ್ರದ ನಿರ್ಮಾಣ
ಕಾರ್ಯ ಭರದಿಂದ ನಡೆದಿದೆ.
ಈ ಭಾಗದ ಯುವಕರು ವಿಮಾನ ಹಾರಾಟ ತರಬೇತಿಗಾಗಿ ದೂರದ ಬೆಂಗಳೂರು, ಮೈಸೂರು ಇಲ್ಲವೇ ಹೊರ ರಾಜ್ಯಗಳಿಗೆ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಇತ್ತು. ಶೀಘ್ರದಲ್ಲೇ ಈ ಸಮಸ್ಯೆಗೆ ಪರಿಹಾರ ಕಲ್ಪಿಸಿಕೊಡಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಬೆಳಗಾವಿಯಲ್ಲೇ ವಿಮಾನ ಹಾರಾಟ ತರಬೇತಿ ಕೇಂದ್ರ ಆರಂಭ ಮಾಡುವ ಮೂಲಕ ಸಮಸ್ಯೆಯ ಪರಿಹಾರಕ್ಕೆ ಅವಕಾಶ ಮಾಡಿಕೊಟ್ಟಿದೆ.
ಉಡಾನ್ ಯೋಜನೆಯಡಿ ದೇಶದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ಮೂಲಕ ಕ್ರಿಯಾಶೀಲ ವಿಮಾನ ನಿಲ್ದಾಣವಾಗಿ ಗುರುತಿಸಿಕೊಂಡಿರುವ ಬೆಳಗಾವಿ ಈಗ ಅರ್ಹ ಯುವಕ-ಯುವತಿಯರಿಗೆ ವಿಮಾನ ಹಾರಾಟ ನಡೆಸುವ ತರಬೇತಿ ದೊರಕಿಸಿಕೊಡುವ ದಿನಗಳು ಕೂಡ ಸಮೀಪಿಸುತ್ತಿವೆ. ದೇಶದ ಕೆಲವೇ ನಗರಗಳಿಗೆ ಇಂತಹ ಅವಕಾಶ ಸಿಕ್ಕಿದೆ. ಅದರಲ್ಲಿ
ಬೆಳಗಾವಿಯೂ ಒಂದು ಎಂಬುದು ಗಮನಿಸಬೇಕಾದ ಸಂಗತಿ. ರಾಜ್ಯದಲ್ಲಿ ಬೆಳಗಾವಿ ಹೊರತುಪಡಿಸಿ ಕಲಬುರಗಿ ಹಾಗೂ ಹುಬ್ಬಳ್ಳಿಯಲ್ಲಿ ಸಹ ಇದೇ ರೀತಿಯ ತರಬೇತಿ ಕೇಂದ್ರಗಳು ಆರಂಭವಾಗಲಿವೆ.
ಈಗ ಅಂದುಕೊಂಡಂತೆ ಎಲ್ಲ ಕೆಲಸಗಳು ನಿಗದಿಂತ ಅವಧಿಯಲ್ಲಿ ಮುಗಿದರೆ ಬರುವ ಮೇ ತಿಂಗಳೊಳಗೆ ಬೆಳಗಾವಿ ವಿಮಾನ ನಿಲ್ದಾಣದ ಆವರಣದಲ್ಲಿ ವಿಮಾನ ಹಾರಾಟ ತರಬೇತಿ ಕೇಂದ್ರ ತಲೆ ಎತ್ತಲಿದೆ. ಇದು ಪೂರ್ಣಗೊಂಡರೆ ಬೆಳಗಾವಿಯ ಜತೆಗೆ ಸುತ್ತಲಿನ ಜಿಲ್ಲೆಗಳ ಜನರಿಗೂ ಅನುಕೂಲವಾಗಲಿದೆ. ಒಂದು ತಂಡದಲ್ಲಿ 100 ಜನರಿಗೆ ತರಬೇತಿ ಕೊಡಲಾಗುತ್ತದೆ.
ವಿಮಾನ ಹಾರಾಟ ತರಬೇತಿ ಕೇಂದ್ರ ಸ್ಥಾಪನೆಗೆ ಭಾರತೀಯ ವಿಮಾನಯಾನ ಪ್ರಾಧಿಕಾರ ಅನುಮೋದನೆ ಕೊಟ್ಟ ನಂತರ ಅದಕ್ಕೆ ಸಂಬಂಧಪಟ್ಟ ಟೆಂಡರ್ ಮೊದಲಾದ ಪ್ರಕ್ರಿಯೆಗಳು ತ್ವರಿತಗತಿಯಲ್ಲಿ ನಡೆದು ನಿರ್ಮಾಣ ಕಾರ್ಯವೂ ಭರದಿಂದ ನಡೆದಿದೆ. ಇನ್ನೊಂದೆರಡು ತಿಂಗಳಲ್ಲಿ ಸಂಪೂರ್ಣ ಸಿದ್ಧಗೊಳ್ಳಲಿರುವ ಕೇಂದ್ರವು ಪೈಲಟ್ ಹಾಗೂ ಸಹಾಯಕ ಸಿಬ್ಬಂದಿ
ಅಣಿಗೊಳಿಸಲು ನೆರವಾಗಲಿದೆ. ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವವರಿಗೆ ವಾಣಿಜ್ಯ ವಿಮಾನ ಪರವಾನಗಿ (ಸಿಪಿಎಲ್) ಸಿಗಲಿದೆ ಎಂಬುದು ವಿಮಾನಯಾನ ಪ್ರಾಧಿಕಾರ ಅಧಿಕಾರಿಗಳ ಹೇಳಿಕೆ.
ಖಾಸಗಿ ಸಂಸ್ಥೆಗಳಿಗೆ ಹೊಣೆ: ವಿಮಾನ ಹಾರಾಟ ಕ್ಷೇತ್ರದಲ್ಲಿ ಆಗತ್ಯ ತರಬೇತಿ ನೀಡುವ ಕೇಂದ್ರ ಸ್ಥಾಪನೆಗೆ ಎರಡು ಖಾಸಗಿ ತರಬೇತಿ ಸಂಸ್ಥೆಗಳಿಗೆ ಕೇಂದ್ರ ವಿಮಾನಯಾನ ಸಚಿವಾಲಯ ಒಪ್ಪಿಗೆ ನೀಡಿದೆ. ಇದಲ್ಲದೆ ವಿಮಾನಗಳ ದುರಸ್ತಿ, ಸ್ವತ್ಛತೆ, ನಿರ್ವಹಣೆಗೆ ಸಂಬಂಧಿಸಿದಂತೆ ಹ್ಯಾಂಗರ್ ಮತ್ತು ವಿಮಾನಗಳ ನಿಲುಗಡೆ ಸ್ಥಳ (ಏಫ್ರಾನ್)ಗಳ ನಿರ್ಮಾಣ ಕಾರ್ಯವನ್ನು ಬೆಂಗಳೂರಿನ ಸಂವರ್ಧನ ಟೆಕ್ನಾಲಜೀಸ್ ಹಾಗೂ ದೆಹಲಿಯ ರೆಡ್ ಬರ್ಡ್ ಫ್ಲೈಯಿಂಗ್ ಟ್ರೇನಿಂಗ್ ಅಕಾಡೆಮಿಗಳಿಗೆ ನೀಡಲಾಗಿದೆ. ಎರಡೂ ಕಂಪನಿಗಳಿಗೆ ತಲಾ ಐದು ಸಾವಿರ ಚದರ
ಮೀಟರ್ ಜಾಗವನ್ನು 25 ವರ್ಷಗಳ ಲೀಸ್ ಆಧಾರದ ಮೇಲೆ ಪಾರ್ಕಿಂಗ್ ಸ್ಥಳವನ್ನು ನಿರ್ಮಿಸಲು ನೀಡಲಾಗಿದೆ. ಎಲ್ಲವೂ ನಿರೀಕ್ಷೆಯಂತೆ ನಡೆದು ಕಾಮಗಾರಿ ಪೂರ್ಣಗೊಂಡ ಮೇಲೆ ವಿಮಾನ ಹಾರಿಸುವ ಕನಸಿಗೆ ರೆಕ್ಕೆ ಬರಲಿದೆ. ಈ ಮೂಲಕ ಯುವಕ-ಯುವತಿಯರ ಬಹು ದಿನಗಳ ಕನಸು ಸಾಕಾರಗೊಳ್ಳಲಿದೆ. ಅಷ್ಟೇ ಅಲ್ಲ ಬೆಳಗಾವಿಯ ಅಭಿವೃದ್ಧಿಯಲ್ಲಿ ಹೊಸ ಅಧ್ಯಾಯದ ಆರಂಭಕ್ಕೆ ಇದೂ ಸಹ ನೆರವಾಗಲಿದೆ.
ರನ್ ವೇಯಿಂದ ಹ್ಯಾಂಗರ್ ಮತ್ತು ಏಪ್ರಾನ್ ಗಳನ್ನು ಜೋಡಿಸುವ 247 ಮೀಟರ್ ವ್ಯಾಪ್ತಿಯ ಟ್ಯಾಕ್ಸಿ ವೇ ನಿರ್ಮಾಣವನ್ನು ಸಹ ಪ್ರಾಧಿಕಾರ ಕೈಗೊಂಡಿದೆ. ತರಬೇತಿ ಕೇಂದ್ರ ನಿರ್ಮಾಣ ಕಾರ್ಯ ಪೂರ್ಣಗೊಂಡ ನಂತರ ತರಬೇತಿಯ ಗುತ್ತಿಗೆ ಪಡೆದಿರುವ ಕಂಪನಿಗಳು ತಲಾ 50 ವಿದ್ಯಾರ್ಥಿಗಳಂತೆ ಏಕಕಾಲಕ್ಕೆ ಒಟ್ಟು 100 ವಿದ್ಯಾರ್ಥಿಗಳಿಗೆ ಒಂದು ವರ್ಷದ ವಿಮಾನ ಹಾರಾಟ
ತರಬೇತಿ ನೀಡಲಿವೆ. ವಿಜ್ಞಾನ ವಿಷಯದಲ್ಲಿ ದ್ವಿತೀಯ ಪಿಯುಸಿ ಪಾಸಾದವರು ಈ ತರಬೇತಿ ಪಡೆಯಲು ಅರ್ಹತೆ ಹೊಂದಿರುತ್ತಾರೆ.
– ಕೇಶವ ಆದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bagalakote: ಪ್ರೇಯಸಿ ಗೆಳತಿ ಹತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.