ಯೋಧನ ಮೇಲೆ ಹಲ್ಲೆಗೆ ಖಂಡನೆ
Team Udayavani, Feb 20, 2022, 2:00 PM IST
ರಾಯಚೂರು: ಲಿಂಗಸುಗೂರು ತಾಲೂಕಿನ ನೀಲೊಗಲ್ನಲ್ಲಿ ಬಿಎಸ್ ಎಫ್ ಯೋಧ ಅಮರೇಶನ ಮೇಲೆ ಹಲ್ಲೆ ನಡೆಸಿ ಆತನ ತಾಯಿ ವೀರಮ್ಮಳನ್ನು ಕೊಲೆಗೈದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ರಾಜ್ಯ ಮಾಜಿ ಸೈನಿಕರ ಸಂಘದ ಸದಸ್ಯರು ಶನಿವಾರ ಪ್ರತಿಭಟನೆ ನಡೆಸಿದರು.
ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ಜಿಲ್ಲಾ ಧಿಕಾರಿಗೆ ಮನವಿ ಸಲ್ಲಿಸಿದರು. ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆಯಲ್ಲಿ ಸುಮಾರು 20 ಜನರ ಗುಂಪು ಮನೆಗೆ ನುಗ್ಗಿ ದಾಳಿ ನಡೆಸಿದೆ. ಈ ವೇಳೆ ಯೋಧನ ಮೇಲೆ ದಬ್ಟಾಳಿಕೆ ಮಾಡಿದ್ದಲ್ಲದೇ, ಹಲ್ಲೆ ನಡೆಸಲಾಗಿದೆ. ಈ ವೇಳೆ ವೀರಮ್ಮಳನ್ನು ಕೊಲೆಗೈಯ್ಯಲಾಗಿದೆ ಎಂದು ದೂರಿದರು.
ಸಂಘದ ಸುಂದರ ಸಿಂಗ್, ಚನ್ನಾರೆಡ್ಡಿ, ಕೃಷ್ಣ ಪ್ರಸಾದ್, ಕೆ.ಎಸ್. ರಾವ್, ಶ್ಯಾಮಸುಂದರ್, ಅಲಿ, ನಾರಾಯಣ, ಅಜೀಜ್, ಮನೋಹರ್ ಸಿಂಗ್, ನರಸಿಂಹಲು, ಗೌಸ್ ಪಾಷಾ ಸೇರಿದಂತೆ ಅನೇಕರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.