ನಂದಿಬೆಟ್ಟ:ಟ್ರೆಕ್ಕಿಂಗ್ ವೇಳೆ 200 ಅಡಿ ಆಳಕ್ಕೆ ಬಿದ್ದ ಯುವಕ; ಹೆಲಿಕ್ಯಾಪ್ಟರ್ ಬಳಸಿ ರಕ್ಷಣೆ
ದುರ್ಗಮ ಪ್ರದೇಶಕ್ಕೆ ಬಿದಿದ್ದ ಯುವಕ; ಭಾರಿ ಕಾರ್ಯಾಚರಣೆ
Team Udayavani, Feb 20, 2022, 7:20 PM IST
ಚಿಕ್ಕಬಳ್ಳಾಪುರ : ವಿಶ್ವವಿಖ್ಯಾತ ನಂದಿಬೆಟ್ಟದ ತಪ್ಪಲಿನಲ್ಲಿ ಟ್ರೆಕ್ಕಿಂಗ್ ಗೆ ತೆರಳಿದ್ದ ವೇಳೆ ಜಾರಿ ಬಿದ್ದು ಅಪಾಯಕ್ಕೆ ಸಿಲುಕಿದ್ದ ಯುವಕನನ್ನು ವಾಯುಪಡೆಯ ಹೆಲಿಕ್ಯಾಪ್ಟರ್ ಬಳಸಿ ರಕ್ಷಿಸಿದ ಸಾಹಸಮಯ ಘಟನೆ ಭಾನುವಾರ ನಡೆದಿದೆ.
ಸ್ನೇಹಿತರೊಂದಿಗೆ ಟ್ರೆಕ್ಕಿಂಗ್ ಗೆ ತೆರಳಿದ್ದ ವೇಳೆ ದುರ್ಗಮ ಪ್ರದೇಶಕ್ಕೆ ಜಾರಿ ಬಿದ್ದು ಅಪಾಯಕ್ಕೆ ಸಿಲುಕಿದ್ದ ದೆಹಲಿ ಮೂಲದ, ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ ನಿಶಾಂಕ್ ಕೌಲ್ (19) ನನ್ನ ಸಕಾಲಿಕ ಕಾರ್ಯಾಚರಣೆ ನಡೆಸಿದ ವಾಯುಪಡೆ ರಕ್ಷಿಸುವಲ್ಲಿ ಯಶಸ್ವಿಯಾಗಿದೆ.
ವಾಯುಪಡೆಯ ಹೆಲಿಕ್ಯಾಪ್ಟರ್ ಮೂಲಕ ನಿಶಾಂಕ್ ನನ್ನ ನೇರವಾಗಿ ಏರ್ ಬೇಸ್ ಗೆ ಕರೆತಂದು ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ.
200 ಅಡಿ ಆಳದಲ್ಲಿ ಸಿಲುಕಿದ್ದ ನಿಶಾಂಕ್ ನನ್ನ ರಕ್ಷಿಸಿದ್ದೇವೆ ಎಂದು ಚಿಕ್ಕಬಳ್ಳಾಪುರ ಎಸ್ ಪಿ ಜಿ.ಕೆ.ಮಿಥುನ್ ಹೇಳಿದ್ದಾರೆ. ಯುವಕ ಸುರಕ್ಷಿತವಾಗಿದ್ದಾನೆ ಎಂದು ಸ್ಪಷ್ಟಪಡಿಸಿದ್ದು ಯುವಕನನ್ನು ರಕ್ಷಿಸಲು ಸಹಕರಿಸಿದ ಎಲ್ಲಾ ಸಿಬ್ಬಂದಿಯ ಜೊತೆಗೆ ತ್ವರಿತ ವಾ ಗಿ ಸಹಕರಿಸಿದ ವಾಯುಪಡೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ನಿಶಾಂತ್ ನನ್ನು ಅಗ್ನಿಶಾಮಕ, ಎಸ್‍ಡಿಆರ್ ಎಫ್, ಎನ್‍ಡಿಆರ್ ಎಫ್ ಮತ್ತು ಜಿಲ್ಲಾಡಳಿತವು ಸಮನ್ವಯದಿಂದ ಜಂಟಿ ಕಾರ್ಯಚರಣೆ ನಡೆಸಿ ವಾಯುಸೇನೆ ಸಹಕಾರದಿಂದ ರಕ್ಷಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಮೊದಲಿಗೆ ಸ್ಥಳೀಯ ಪೊಲೀಸರು ಮತ್ತು ಅಗ್ನಿಶಾಮಕದಳದ ಸಿಬ್ಬಂದಿ ಭಾರೀ ಪ್ರಯತ್ನ ಮಾಡಿದ್ದರು.
ವಾರಾಂತ್ಯಕ್ಕಾಗಿ ನಂದಿಬೆಟ್ಟಕ್ಕೆ ಬಂದ ನಿಶಾಂಕ್ ಮತ್ತು ಸ್ನೇಹಿತರು ಬ್ರಹ್ಮಗಿರಿ ಬೆಟ್ಟದಲ್ಲಿ ಟ್ರೆಕ್ಕಿಂಗ್ ಮಾಡಲು ಮುಂದಾಗಿದ್ದಾರೆ. ಈ ವೇಳೆ ನಿಶಾಂಕ್ ಕಾಲು ಜಾರಿ ಬಿದ್ದಿದ್ದು, ಕೂಡಲೇ ಸ್ನೇಹಿತರು ಸಹಾಯಕ್ಕಾಗಿ ಸರ್ಕಾರದ ಕಂಟ್ರೋಲ್ ರೂಂ ಗೆ ಕರೆ ಮಾಡಿದ್ದಾರೆ. ಕರೆಗೆ ತಕ್ಷಣ ಸ್ಪಂದಿಸಿದ ಸ್ಥಳೀಯ ಪೊಲೀಸರು ಹಾಗೂ ಆಗ್ನಿಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದು ಪ್ಯಾರಶೂಟ್ ಮೂಲಕ ನಿಶಾಂಕ್ ನನ್ನು ಪತ್ತೆ ಮಾಡಿ ರಕ್ಷಣೆ ಮಾಡಿದ್ದಾರೆ.
ಕೆಳಗೆ ಬಿದ್ದು, ಕಡಿದಾದ ಬಂಡೆಯೊಂದರಲ್ಲಿ ಸಿಲುಕಿಕೊಂಡಿದ್ದ ನಿಶಾಂಕ್ ಗೆ ಪೆಟ್ಟು ಬಿದ್ದ ಹಿನ್ನಲೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನಂದಿಬೆಟ್ಟದಲ್ಲಿ ಸುಮಾರು ವರ್ಷಗಳ ಬಳಿಕ ರೋಪ್‍ವೇ ನಿರ್ಮಾಣ ಮಾಡಲು ಸಚಿವ ಸಂಪುಟದ ಒಪ್ಪಿಗೆ ದೊರೆತ ಬೆನ್ನಲ್ಲೇ ಈ ಘಟನೆ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
ಕಸ್ತೂರಿಂಗನ್ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’
MUST WATCH
ಹೊಸ ಸೇರ್ಪಡೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.