ಕ್ಲಿಂಕರ್ ಬೆಲ್ಟ್ ಗೆ ಬೆಂಕಿ: ವಿಷ ಕಾರಿದ ಎಸಿಸಿ ಕಂಪನಿ
Team Udayavani, Feb 21, 2022, 11:59 AM IST
ವಾಡಿ: ಸಿಮೆಂಟ್ ಕ್ಲಿಂಕರ್ ಸಾಗಿಸುವ ಬೆಲ್ಟ್ ಗೆ ಬೆಂಕಿ ಹತ್ತಿ ಯಂತ್ರಗಳು ಉರಿದು ಅಗ್ನಿ ಅವಘಡ ಸಂಭವಿಸಿದ ಘಟನೆ ಸೋಮವಾರ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಎಸಿಸಿ ಸಿಮೆಂಟ್ ಕಂಪನಿಯಲ್ಲಿ ನಡೆದಿದೆ.
ಕಲ್ಲು, ಮ್ಯಾಂಗನೀಸ್ ಮಣ್ಣು, ಜಿಬಸಂ, ಕಲ್ಲಿದ್ದಲು, ನೀರು ಮಿಶ್ರಣಮಾಡಿ ಸಿಮೆಂಟ್ ಉತ್ಪಾದನೆಗೂ ಮುಂಚೆ ಕ್ಲಿಂಕರ್ ತಯಾರಿಸುವ ಎಸಿಸಿ ಘಟಕದಲ್ಲಿ ಸೋಮವಾರ ಬೆಳಗ್ಗೆ ಏಕಾಏಕಿ ಆಗಸಕ್ಕೆ ದಟ್ಟವಾದ ಹೊಗೆ ಹರಡಿತು. ನೀಲಿ ಆಗಸದಲ್ಲಿ ಕಪ್ಪು ಕಾರ್ಮೋಡ ಆವರಿಸಿಕೊಂಡಿತು. ವಾಡಿ ಪಟ್ಟಣದ ಮೇಲೆ ಕರಿಛಾಯೆ ಮೂಡಿಸಿತು. ಭಯಂಕರವಾದ ಹೊಗೆ ಕಂಡು ಕಾರ್ಮೋಡಗಳ ಚಲನೆಯಿರಬಹುದು ಎಂದು ನಗರದ ಜನ ಭಾವಿಸಿದ್ದರು. ಇದು ಎಸಿಸಿ ಕಂಪನಿ ಉಗುಳುತ್ತಿರುವ ವಿಷಕಾರಿ ಧೂಳು ಎಂದರಿತು ಧಂಗಾದರು.
ಘಟನೆಯಿಂದ ವಿಚಲಿತರಾದ ಎಸಿಸಿ ಕಂಪನಿಯ ಆಡಳಿತ ವರ್ಗ ಹಾಗೂ ಇಂಜಿನಿಯರ್ ಗಳು, ಅವಘಡ ಸಂಬವಿಸಿದ ಸ್ಥಳದತ್ತ ದೌಡಾಯಿಸಿದರು. ಕ್ಲಿಂಕರ್ ಸಾಗಿಸುವ ಬೆಲ್ಟ್ ಕತ್ತರಿಸಿದೆಯೋ ಅಥವ ಕ್ಲಿಂಕರ್ ಸೈಲೋ ಧ್ವಂಸಗೊಂಡಿದೆಯೋ ಎಂಬುದು ತನಿಖೆಯಿಂದ ಗೊತ್ತಾಗಲಿದೆ. ವಾಡಿ ನಗರ ಸೇರಿದಂತೆ ಸುತ್ತಲ ಗ್ರಾಮಗಳಾದ ಇಂಗಳಗಿ, ಕುಂದನೂರ, ಚಾಮನೂರ, ಹಳಕರ್ಟಿ, ಕಮರವಾಡಿ, ಕೊಂಚೂರ, ಬಳವಡಗಿ ಪರಸರವೂ ಕಲುಷಿತಗೊಂಡು ಜನರ ಆಕ್ರೋಶಕ್ಕೆ ಗುರಿಯಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ಹೊಸ ಸೇರ್ಪಡೆ
Mangaluru; ಕೆಲರೈ- ವಾಮಂಜೂರು ಸಂಪರ್ಕ ರಸ್ತೆ ಅವ್ಯವಸ್ಥೆ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Mangaluru: ವೆನ್ಲಾಕ್‌ನಲ್ಲಿ ದೊರೆಯಲಿದೆ ಕಿಮೋಥೆರಪಿ
Ullal: ತೊಕ್ಕೊಟ್ಟು ಜಂಕ್ಷನ್ – ಭಟ್ನಗರ ರಸ್ತೆಯಲ್ಲಿ ಉಲ್ಟಾ ಸಂಚಾರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.