ಸಾತನೂರು ತಾಲೂಕು ರಚನೆಗೆ ಕೂಗು


Team Udayavani, Feb 21, 2022, 1:38 PM IST

ಸಾತನೂರು ತಾಲೂಕು ರಚನೆಗೆ ಕೂಗು

ಕನಕಪುರ: ನೇಪಥ್ಯಕ್ಕೆ ಸರಿದಿದ್ದ ಸಾತನೂರು ಹೋಬಳಿ ಕೇಂದ್ರವನ್ನು ತಾಲೂಕು ಕೇಂದ್ರವನ್ನಾಗಿ ಮಾಡಬೇಕು ಎಂಬ ಕೂಗು ಮತ್ತೆ ಮುನ್ನೆಲೆಗೆ ಬಂದಿದೆ.

ಸಾತನೂರು ಹೋಬಳಿ ಕೇಂದ್ರವನ್ನು ತಾಲೂಕು ಕೇಂದ್ರವನ್ನಾಗಿ ಮಾಡಬೇಕು ಎಂಬ ಕೂಗು ಇಂದು ನಿನ್ನೆಯದಲ್ಲ. ಸುಮಾರು 5 ದಶಕಗಳ ಹಿಂದಿನಿಂದಲೂ ಸಾತನೂರು ತಾಲೂಕು ಕೇಂದ್ರವಾಗಬೇಕು ಎಂಬುದುಈ ಭಾಗದ ಜನರ ಕನಸಾಗಿತ್ತು. ಸ್ಥಳೀಯ ಕೆಲಹೋರಾಟಗಾರರು ಮುಖಂಡರು ಪಕ್ಷಾತೀತವಾಗಿ ತಾಲೂಕು ಹೋರಾಟ ಸಮಿತಿ ರಚಿಸಿ ಸರ್ಕಾರಗಳಿಗೆಮನವಿ ಸಲ್ಲಿಸಿ ಗಮನಸೆಳೆದಿದ್ದರು ಅಲ್ಲದೆ ಸಾತನೂರು ತಾಲೂಕು ಕೇಂದ್ರವಾಗುವ ಎಲ್ಲ ಸೌಲಭ್ಯಗಳನ್ನುಒಳಗೊಂಡಿದ್ದರು. ರಾಜಕೀಯ ಮೇಲಾಟದಿಂದಾಗಿಸಾತನೂರು ಹೋಬಳಿ ಕೇಂದ್ರ ತಾಲೂಕು ಕೇಂದ್ರವಾಗದೆ ನೇಪಥ್ಯಕ್ಕೆ ಸರಿಯಲು ಕಾರಣವಾಯಿತು ಎಂಬುದು ಈ ಭಾಗದ ಜನರ ಅಭಿಪ್ರಾಯ.

ಘಟಾನುಘಟಿ ನಾಯಕರನ್ನು ಕೊಟ್ಟ ಕ್ಷೇತ್ರ: ಕಳೆದ 5ದಶಕಗಳ ಹಿಂದೆ 1972ರಲ್ಲಿ ಸಾತನೂರು ಹೋಬಳಿಕೇಂದ್ರ ವಿಧಾನಸಭಾ ಕ್ಷೇತ್ರವಾಗಿ ರಚನೆಯಾಗಿತ್ತು. ಅನೇಕ ಘಟಾನುಘಟಿ ನಾಯಕರು ಇದೇ ಕ್ಷೇತ್ರದಿಂದಸ್ಪರ್ಧಿಸಿ ರಾಜಕೀಯ ಭವಿಷ್ಯ ಕಟ್ಟಿಕೊಂಡಿದ್ದಾರೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು, ಕೆಪಿಸಿಸಿಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಶಿವಲಿಂಗೇಗೌಡರಂತಹಮಹಾ ನಾಯಕರಿಗೆ ರಾಜಕೀಯ ಭವಿಷ್ಯ ಕಟ್ಟಿಕೊಟ್ಟಅಂದಿನ ಸಾತನೂರು ವಿಧಾನಸಭಾ ಕ್ಷೇತ್ರ ಅಭಿವೃದ್ಧಿ ಯನ್ನೇ ಕಾಣದೆ ಇಂದಿಗೂ ಹಿಂದುಳಿದಿರುವುದು ವಿಪರ್ಯಾಸವೇ ಸರಿ.

ಪಕ್ಷಾತೀತ ಬೆಂಬಲ: 1978ರಲ್ಲಿ ಜೆಡಿಎಸ್‌ನಿಂದ ಗೆಲುವು ಸಾಧಿಸಿದ ಶಿವಲಿಂಗೇಗೌಡರು ಅಧ್ಯಕ್ಷತೆಯಲ್ಲಿಅಚ್ಚಲು ಶಿವರಾಜು, ಪರಶಿವಯ್ಯ, ರಂಗಸ್ವಾಮಿಒಂದು ಸಮಿತಿ ರಚಿಸಿಕೊಂಡು ಸಾತನೂರುತಾಲೂಕು ಕೇಂದ್ರ ಮಾಡಬೇಕು ಎಂಬ ಹೋರಾಟ ಆರಂಭಿಸಿದರು. ರಾಜಕೀಯಮುಖಂಡರು ಪ್ರಜ್ಞಾವಂತ ನಾಗರಿಕರು,ಪಕ್ಷಾತೀತವಾಗಿ ತಾಲೂಕು ಹೋರಾಟ ಸಮಿತಿಬೆಂಬಲಿಸಿದರು. ಸರ್ಕಾರಗಳಿಗೂ ಮನವಿ ಸಲ್ಲಿಸಿ ಗಮನ ಸೆಳೆಯುವ ಪ್ರಯತ್ನ ಮಾಡಿದರು.

ತಾಲೂಕು ಕೇಂದ್ರಕ್ಕೆ ಡಿಕೆಶಿ ಕೊಕ್ಕೆ: ಸಾತನೂರು ತಾಲೂಕನ್ನಾಗಿ ಮಾಡಬೇಕು ಎಂಬ ಕೂಗು ಹೆಚ್ಚಾದಹಿನ್ನೆಲೆ 1984ರಲ್ಲಿ ಅಂದಿನ ಸರ್ಕಾರ ಸಮಿತಿ ರಚನೆಮಾಡಿ ಸಾತನೂರು ತಾಲೂಕು ರಚನೆ ಮಾಡುವ ಬಗ್ಗೆ ವರದಿ ನೀಡುವಂತೆ ಸೂಚಿಸಿತ್ತು. ಮೊದಲು ಹುಂಡೆಕಾರ್‌ ಸಮಿತಿ, ಗದ್ದಿಗೌಡರ ಸಮಿತಿ ಎರಡುಸಮಿತಿಗಳು ಸಾತನೂರನ್ನು ತಾಲೂಕು ಕೇಂದ್ರವಾಗಿಮಾಡಲು ಸಕಾರಾತ್ಮಕವಾದ ವರದಿ ಸಲ್ಲಿಸಿತ್ತು. ಆದರೆಶಾಸಕ ಡಿ.ಕೆ. ಶಿವಕುಮಾರ್‌ ಅವರಿಗೆ ಉಯ್ಯಂಬಳ್ಳಿ  ಯನ್ನು ತಾಲೂಕನ್ನಾಗಿ ಮಾಡುವ ಇರಾದೆ ಇತ್ತಂತೆ.ಹಾಗಾಗಿ ಸರ್ಕಾರಕ್ಕೆ ಒತ್ತಡತಂದು ಎಂ.ಬಿ.ಪ್ರಕಾಶ್‌ ಅವರಸಮಿತಿ ರಚನೆ ಮಾಡಿಸಮಿತಿಯಿಂದ ಉಯ್ಯಂಬಳ್ಳಿತಾಲೂಕು ಕೇಂದ್ರವಾಗಿ ಮಾಡಲುತಮಗೆ ಬೇಕಾದಂತೆ ವರದಿ ಸಲ್ಲಿಸಿದರು. ಇದರಿಂದ ಸಾತನೂರು ತಾಲೂಕು ಕೇಂದ್ರದಿಂದ ವಂಚಿತವಾಯಿತು ಎಂಬುದು ಜನರ ಆರೋಪ.

ನೇಪಥ್ಯಕ್ಕೆ ಸರಿದ ಸಮಿತಿ: ಮೂರು ದಶಕಗಳನಿರಂತರ ಹೋರಾಟದ ನಂತರ 2006ರಲ್ಲಿ ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಸಂದರ್ಭದಲ್ಲಿ ಸಾತನೂರು ಹೋಬಳಿ ಕೇಂದ್ರವನ್ನು ಟೌನ್‌ಶಿಪ್‌ ಮಾಡಲು ಘೋಷಣೆ ಮಾಡಿದ್ದರು. ಅದರಂತೆ 16322 ಎಕರೆ ಭೂಮಿಯನ್ನು ಸರ್ವೆ ನಡೆಸಲಾಗಿತ್ತು. ಅಂದುಕೊಂಡಂತೆ ನಡೆದಿದ್ದರೆಸಾತನೂರು ಎರಡು ದಶಕಗಳ ಹಿಂದೆ ಕೈಗಾರಿಕೆಹಾಗೂ ನಗರವಾಗಿ ಬೆಳೆದು ಸಾತನೂರು ಅಭಿವೃದ್ಧಿಆಗಬೇಕಿತ್ತು. ಆದರೆ, ಸಾತನೂರು ಟೌನ್‌ಶಿಪ್‌ಮಾಡಿದರೆ ನಮ್ಮ ಭೂಮಿ ಕೈತಪ್ಪಲಿದೆ ಎಂದು ರೈತರುನಡೆಸಿ ಪ್ರತಿಭಟನೆಯಿಂದ ಸಾತನೂರು ಅಭಿವೃದ್ಧಿಗೆ ಅಡ್ಡಗಾಲು ಆಯಿತು ಎಂಬ ಆರೋಪ ಕೂಡ ಇದೆ.

ಬಳಿಕ 2008ರಲ್ಲಿ ಸಾತನೂರು ವಿಧಾನಸಭಾ ಕ್ಷೇತ್ರಮರು ವಿಂಗಡನೆಯಾಗಿ ಕನಕಪುರ ವಿಧಾನಸಭಾ ಕ್ಷೇತ್ರಕ್ಕೆ ವಿಲೀನಗೊಂಡು ಸಾತನೂರು ತಾಲೂಕುಸಮಿತಿ ಹೋರಾಟ ನೇಪಥ್ಯಕ್ಕೆ ಸರಿದಿತ್ತು. ಈ ಭಾಗದ ಜನರ ಕನಸು ಕನಸಾಗಿಯೇ ಉಳಿಯಿತು.

ರಾಜಕೀಯ ಮೇಲಾಟದಿಂದ ವಂಚಿತ: 2004ರಲ್ಲಿ ಹಾರೋಹಳ್ಳಿಯನ್ನು ತಾಲೂಕು ಕೇಂದ್ರವಾಗಿ ಮಾಡಿಎಂದು ಶಾಸಕ ಡಿ.ಕೆ.ಶಿವಕುಮಾರ್‌ ಸರ್ಕಾರಕ್ಕೆ ಪತ್ರಬರೆದಿದ್ದರಂತೆ. ಅಲ್ಲದೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ಸಮಿಶ್ರ ಸರ್ಕಾರದ ಅವಧಿಯಲ್ಲಿ ಹಾರೋಹಳ್ಳಿಯನ್ನುಘೋಷಣೆ ಮಾಡಿ ಹಾರೋಹಳ್ಳಿ ಈಗಾಗಲೆ ತಾಲೂಕುಕೇಂದ್ರವಾಗಿ ರಚನೆಯಾಗಿದೆ. ರಾಜಕೀಯ ಮೇಲಾಟಮತ್ತು ಇಚ್ಛಾಶಕ್ತಿ ಕೊರತೆಯಿಂದ ಸಾತನೂರು ನೇಪಥ್ಯಕ್ಕೆ ಸರಿದಂತಾಗಿದೆ.

ಪಕ್ಷಾತೀತ ಬೆಂಬಲ ಅಗತ್ಯ: ಮತ್ತೂಮ್ಮೆ ಸಾತನೂರನ್ನು ತಾಲೂಕು ಕೇಂದ್ರವಾಗಿ ಮಾಡಬೇಕು ಎಂಬ ಕೂಗು ಮುನ್ನೆಲೆಗೆ ಬಂದಿದೆ. ಪಕ್ಷಾತೀತವಾಗಿಪ್ರಾಧಿಕಾರದ ಅಧ್ಯಕ್ಷ ಹೊನ್ನಿಗನಹಳ್ಳಿ ಜಗನ್ನಾಥ್‌ಹಾಗೂ ಜೆಡಿಎಸ್‌ ಮುಖಂಡ ಅನು ಕುಮಾರ್‌ಸೇರಿದಂತೆ ಇತರೆ ಮುಂಖಡರು ಮತ್ತೆ ಧ್ವನಿ ಎತ್ತಿದ್ದಾರೆ.ಸಾತನೂರು ಹೋಬಳಿ ಕೇಂದ್ರದಲ್ಲೇ ರಾಷ್ಟ್ರೀಯಹೆದ್ದಾರಿಯೂ ಹಾದುಹೋಗಿದೆ. ಸುಸಜ್ಜಿತವಾದಆಸ್ಪತ್ರೆ, ಆರಕ್ಷಕ ಠಾಣೆ, ನಾಡ ಕಚೇರಿ, ಅರಣ್ಯಇಲಾಖೆ ಸೇರಿದಂತೆ ಕೆಲ ಇಲಾಖೆಗಳಿದ್ದು, ತಾಲೂಕುಕೇಂದ್ರಕ್ಕೆ ಬೇಕಾದ ಎಲ್ಲ ಮೂಲ ಸೌಲಭ್ಯ ಹೊಂದಿದೆ.ಕ್ಷೇತ್ರದ ಶಾಸಕರು, ಸಂಸದರು ಎಲ್ಲ ರಾಜಕೀಯಮುಖಂಡರು ಪಕ್ಷಾತೀತವಾಗಿ ಕೈಜೋಡಿಸಿದರೆ ಸಾಧ್ಯ ಎಂಬುದು ಜನಾಭಿಪ್ರಾಯ. ರಾಜಕೀಯ ಇಚ್ಛಾಶಕ್ತಿ ಮತ್ತು ಪಕ್ಷಾತೀತ ಹೋರಾಟ ನಡೆಯುವುದೇ ಈಭಾಗದ ಜನರ ಕನಸು ನನಸಾಗುವುದೇ ಅಥವಾ ಮತ್ತೆ ನೇಪಥ್ಯಕ್ಕೆ ಸರಿಯುವುದೇ ಕಾದು ನೋಡಬೇಕು.

ಸಾತನೂರಿಗಿತ್ತು ವಿಶಿಷ್ಟ ಸ್ಥಾನಮಾನ : 1985 ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಡಿ.ಕೆ.ಶಿವಕುಮಾರ್‌ ವಿರುದ್ಧಗೆಲುವು ಸಾಧಿಸಿದರು. ಆ ನಂತರ 1989ರಲ್ಲಿ ಜೆಡಿಎಸ್‌ ಕೈತಪ್ಪಿ ಸಾತನೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್‌ ತೆಕ್ಕೆಗೆ ಜಾರಿತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ವಿ.ಕೆ.ಸ್ವಾಮಿ ವಿರುದ್ಧಗೆದಿದ್ದರು. ಅಲ್ಲಿಂದ ಡಿಕೆಶಿ ರಾಜಕೀಯ ಉಜ್ವಲ ಭವಿಷ್ಯ ಆರಂಭವಾಯಿತು. ಇಂತಹ ಘಟಾನುಘಟಿ ನಾಯಕರು ಸ್ಪರ್ಧೆ ಮಾಡಿದ ಸಾತನೂರು ವಿಧಾನಸಭಾ ಕ್ಷೇತ್ರರಾಜ್ಯಮಟ್ಟದಲ್ಲಿ ಗುರುತಿಸಿಕೊಂಡು ಅಭಿವೃದ್ಧಿಯತ್ತ ದಾಪುಗಾಲು ಹಾಕುವ ಎಲ್ಲ ಅವಕಾಶಗಳಿತ್ತು.

ಹೋಬಳಿ ಕೇಂದ್ರವನ್ನು ತಾಲೂಕು ಕೇಂದ್ರವಾಗಿ ರಚನೆ ಮಾಡಲು ಎಲ್ಲ ಸೌಲಭ್ಯಗಳು ಇವೆ. ಆನೇಕ ಹೋರಾಟಗಳು ನಡೆದಿವೆ. ಸಾತನೂರು ತಾಲೂಕು ಕೇಂದ್ರ ವಾದರೆ ಅಭಿವೃದ್ಧಿಯ ಜೊತೆಗೆ ಈ ಭಾಗದ ಜನರುಅಲೆದಾಡುವುದು ತಪ್ಪಲಿದೆ. ಇದಕ್ಕೆ ಪಕ್ಷಾತೀತ ಬೆಂಬಲ ಮತ್ತು ರಾಜಕೀಯಇಚ್ಛಾಶಕ್ತಿಬೇಕು -ಹೊನ್ನಿಗನಹಳ್ಳಿ ಜಗನ್ನಾಥ್‌, ಅಧ್ಯಕ್ಷರು ಯೋಜನಾ ಪ್ರಾಧಿಕಾರ ಕನಕಪುರ

 

-ಬಾಣಗಹಳ್ಳಿ ಬಿ.ಟಿ.ಉಮೇಶ್‌

ಟಾಪ್ ನ್ಯೂಸ್

Building ನಿರ್ಮಾಣ ಕಾಮಗಾರಿ: ಕಾರ್ಮಿಕ ಇಲಾಖೆ ಸೂಚನೆ

Building ನಿರ್ಮಾಣ ಕಾಮಗಾರಿ: ಕಾರ್ಮಿಕ ಇಲಾಖೆ ಸೂಚನೆ

River

Monsoon Rain: ಆರಿದ್ರ ಅಬ್ಬರಕ್ಕೆ ಜನಜೀವನ ತತ್ತರ,  ಇಬ್ಬರು ಸಾವು

mamata

Governor;ಜು.10ಕ್ಕೆ ಸಿಎಂ ಮಮತಾ ವಿರುದ್ಧ ಮಾನಹಾನಿ ಪ್ರಕರಣ ವಿಚಾರಣೆ

1-weww

Madhya Pradesh;ಜು.15ಕ್ಕೆ ಭೋಜಶಾಲಾ ಸಮೀಕ್ಷೆಯ ವರದಿ ಸಲ್ಲಿಸಿ: ಹೈಕೋರ್ಟ್‌

Manjeshwar ಜುವೆಲರಿ ದರೋಡೆ: ಇನ್ನಿಬ್ಬರ ಬಂಧನ

Manjeshwar ಜುವೆಲರಿ ದರೋಡೆ: ಇನ್ನಿಬ್ಬರ ಬಂಧನ

ರಾಷ್ಟ್ರ ಸಂತ ವಿರಾಗ ಸಾಗರ ಮುನಿಮಹಾರಾಜ್‌ ಸಮಾಧಿ ಮರಣ

ರಾಷ್ಟ್ರ ಸಂತ ವಿರಾಗ ಸಾಗರ ಮುನಿಮಹಾರಾಜ್‌ ಸಮಾಧಿ ಮರಣ

Ajilamogaru: ಗಾಳ ಹಾಕುತ್ತಿದ್ದ ವ್ಯಕ್ತಿ ನೀರು ಪಾಲು

Ajilamogaru: ಗಾಳ ಹಾಕುತ್ತಿದ್ದ ವ್ಯಕ್ತಿ ನೀರು ಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Magadi; A bear attacked a man on his way to the farm

Magadi; ಜಮೀನಿಗೆ ತೆರಳುತ್ತಿದ್ದ ವ್ಯಕ್ತಿ ಮೇಲೆ ಕರಡಿ ದಾಳಿ; ಗಂಭೀರ ಗಾಯ

DK-Shivakumar

Chennapattana ನನ್ನ ನಾಯಕತ್ವದಲ್ಲೇ ಬೆಂಗಳೂರಿಗೆ ಸೇರಲಿದೆ: ಡಿಕೆಶಿ

JDS-BJP ನಾಳೆ ಚನ್ನಪಟ್ಟಣ ಮೈತ್ರಿ ಅಭ್ಯರ್ಥಿ ಹೆಸರು ಅಖೈರು?

JDS-BJP ನಾಳೆ ಚನ್ನಪಟ್ಟಣ ಮೈತ್ರಿ ಅಭ್ಯರ್ಥಿ ಹೆಸರು ಅಖೈರು?

DK Shivakumar ಚೇರ್‌ ಖಾಲಿ ಇರುವುದಕ್ಕೆ ನಾನು ಬಂದು ಕೂತಿದ್ದೇನೆ

DK Shivakumar ಚೇರ್‌ ಖಾಲಿ ಇರುವುದಕ್ಕೆ ನಾನು ಬಂದು ಕೂತಿದ್ದೇನೆ

3

Fraud: ದೋಷ ಪರಿಹರಿಸುವುದಾಗಿ ನಂಬಿಸಿ ಬುಡುಬುಡಿಕೆ ವೇಷ ಧರಿಸಿ ವಂಚನೆ

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

Building ನಿರ್ಮಾಣ ಕಾಮಗಾರಿ: ಕಾರ್ಮಿಕ ಇಲಾಖೆ ಸೂಚನೆ

Building ನಿರ್ಮಾಣ ಕಾಮಗಾರಿ: ಕಾರ್ಮಿಕ ಇಲಾಖೆ ಸೂಚನೆ

River

Monsoon Rain: ಆರಿದ್ರ ಅಬ್ಬರಕ್ಕೆ ಜನಜೀವನ ತತ್ತರ,  ಇಬ್ಬರು ಸಾವು

mamata

Governor;ಜು.10ಕ್ಕೆ ಸಿಎಂ ಮಮತಾ ವಿರುದ್ಧ ಮಾನಹಾನಿ ಪ್ರಕರಣ ವಿಚಾರಣೆ

1-weww

Madhya Pradesh;ಜು.15ಕ್ಕೆ ಭೋಜಶಾಲಾ ಸಮೀಕ್ಷೆಯ ವರದಿ ಸಲ್ಲಿಸಿ: ಹೈಕೋರ್ಟ್‌

Manjeshwar ಜುವೆಲರಿ ದರೋಡೆ: ಇನ್ನಿಬ್ಬರ ಬಂಧನ

Manjeshwar ಜುವೆಲರಿ ದರೋಡೆ: ಇನ್ನಿಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.