ಎಫ್ಐಎಚ್ ವನಿತಾ ಪ್ರೊ ಲೀಗ್ ಹಾಕಿ: ಸವಿತಾ ಪುನಿಯಾ ನಾಯಕಿ
Team Udayavani, Feb 22, 2022, 6:30 AM IST
ಹೊಸದಿಲ್ಲಿ: ಸ್ಪೇನ್ ವಿರುದ್ಧ ಇದೇ ತಿಂಗಳು ಭುವನೇಶ್ವರದಲ್ಲಿ ನಡೆಯುವ ಎಫ್ಐಎಚ್ ವನಿತಾ ಪ್ರೊ ಲೀಗ್ ಹಾಕಿ ಪಂದ್ಯಾವಳಿಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದೆ.
ರಾಣಿ ರಾಮ್ಪಾಲ್ ಗಾಯಾಳಾಗಿರುವ ಕಾರಣ ಗೋಲ್ ಕೀಪರ್ ಸವಿತಾ ಪುನಿಯಾ ತಂಡವನ್ನು ಮುನ್ನಡೆಸಲಿದ್ದಾರೆ. ಡಿಫೆಂಡರ್ ದೀಪ್ ಗ್ರೇಸ್ ಎಕ್ಕಾ ಉಪನಾಯಕಿಯಾಗಿದ್ದಾರೆ.
ಜಾರ್ಖಂಡ್ನ ಯುವ ಆಟಗಾರ್ತಿ ಸಂಗೀತಾ ಕುಮಾರಿ ಈ ತಂಡದ ಹೊಸ ಮುಖವಾಗಿದ್ದಾರೆ. ಸವಿತಾ ಸೇರಿದಂತೆ ತಂಡದಲ್ಲಿ 3 ಗೋಲ್ ಕೀಪರ್ಗಳಿದ್ದಾರೆ. ಉಳಿದಿಬ್ಬರೆಂದರೆ ರಜನಿ ಎಟಿಮರ್ಪು ಮತ್ತು ಬಿಚುದೇವಿ ಖೈರ್ಬಾಮ್.
ಸವಿತಾ ನಾಯಕತ್ವದಲ್ಲಿ ಕಳೆದ ತಿಂಗಳು ಮಸ್ಕತ್ನಲ್ಲಿ ನಡೆದ ಏಶ್ಯ ಕಪ್ ಕೂಟದಲ್ಲಿ ಭಾರತ ತೃತೀಯ ಸ್ಥಾನಿಯಾಗಿತ್ತು. ಅಂದಿನ ತಂಡಕ್ಕೇ ಮತ್ತೆ ನಾಲ್ವರನ್ನು ಸೇರಿಸಿ ಈಗಿನ ತಂಡವನ್ನು ಅಂತಿಮಗೊಳಿಸಲಾಗಿದೆ. 5 ಮಂದಿ ಮೀಸಲು ಆಟಗಾರ್ತಿಯರೂ ಇದ್ದಾರೆ. ಭಾರತ-ಸ್ಪೇನ್ ಮುಖಾಮುಖಿ ಫೆ. 26 ಮತ್ತು 27ರಂದು ನಡೆಯಲಿದೆ.
ಇದನ್ನೂ ಓದಿ:ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್, ಯುಪಿ ಯೋಧ ಸೆಮಿಫೈನಲ್ ಪ್ರವೇಶ
ಭಾರತ ತಂಡ; ಗೋಲ್ಕೀಪರ್: ಸವಿತಾ ಪುನಿಯಾ (ನಾಯಕಿ), ಬಿಚುದೇವಿ ಖೈರ್ಬಾಮ್, ರಜನಿ ಎಟಿಮರ್ಪು.
ಡಿಫೆಂಡರ್: ದೀಪ್ ಗ್ರೇಸ್ ಎಕ್ಕಾ, ಗುರ್ಜಿತ್ ಕೌರ್, ನಿಕ್ಕಿ ಪ್ರಧಾನ್, ಉದಿತಾ, ಇಶಿಕಾ ಚೌಧರಿ. ಮಿಡ್ ಫೀಲ್ಡರ್: ನಿಶಾ, ಸಲೀಮಾ ಟೇಟೆ, ಸುಶೀಲಾ ಚಾನು, ಜ್ಯೋತಿ, ಮೋನಿಕಾ, ನೇಹಾ, ನವಜೋತ್ ಕೌರ್, ನಮಿತಾ ಟೋಪೊ.ಫಾರ್ವರ್ಡ್ಸ್: ವಂದನಾ ಕಟಾರಿಯಾ, ಶರ್ಮಿಳಾದೇವಿ, ನವನೀತ್ ಕೌರ್, ಲಾಲ್ರೆಮ್ಸಿಯಾಮಿ, ಸಂಗೀತಾ ಕುಮಾರಿ, ರಾಜ್ವಿಂದರ್ ಕೌರ್. ಮೀಸಲು ಆಟಗಾರ್ತಿಯರು: ರಶ್ಮಿತಾ ಮಿಂಝ್, ಅಕ್ಷತಾ, ಸೋನಿಕಾ, ಮರಿಯಾನಾ ಕುಜುರ್, ಐಶ್ವರ್ಯಾ ರಾಜೇಶ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
FIP Padel: ಭಾರತದ ಮೊದಲ ಎಫ್ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.