ಮೈತ್ರಿ ಅಗತ್ಯವಿಲ್ಲ, ಬಹುಮತ ಖಚಿತ
ಸಂದರ್ಶನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ; ಕಿಸಾನ್ ನಿಧಿಯಿಂದ ರೈತರಿಗೆ ಅನುಕೂಲ
Team Udayavani, Feb 22, 2022, 7:15 AM IST
ಹೊಸದಿಲ್ಲಿ: ಉತ್ತರಪ್ರದೇಶದಲ್ಲಿ ಬಿಜೆಪಿಯು ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೇರಲಿದೆ. ನಮ್ಮ ಪಕ್ಷಕ್ಕೆ ಚುನಾವಣೋತ್ತರ ಮೈತ್ರಿಯ ಅಗತ್ಯವೇ ಎದುರಾಗದು ಎಂಬ ವಿಶ್ವಾಸವನ್ನು ಶಾ ವ್ಯಕ್ತಪಡಿಸಿದ್ದಾರೆ. ಆಂಗ್ಲ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದರು. ಎಸ್‌ಪಿ ನಾಯಕ ಅಖಿಲೇಶ್ ರೊಂದಿಗೆ ಕೈಜೋಡಿಸಿರುವ ಆರ್‌ಎಲ್‌ಡಿ ನಾಯಕ ಜಯಂತ್ ಚೌಧರಿಯನ್ನು ಅಮಿತ್ ಶಾ ಅವರು “ಕೆಟ್ಟ ಮೈತ್ರಿಯ ಲ್ಲಿರುವ ಒಳ್ಳೆಯ ವ್ಯಕ್ತಿ’ ಎಂದು ಬಣ್ಣಿಸಿದ್ದಾರೆ.
ವೋಟಿಂಗ್ ಸ್ವರೂಪ “ಧ್ರುವೀಕರಣ’ವಲ್ಲ: ಉತ್ತರ ಪ್ರದೇಶ ಚುನಾವಣೆಯು ಹಿಂದೂ ವರ್ಸಸ್ ಮುಸ್ಲಿಂ ಚುನಾವಣೆಯಲ್ಲ. ಇಲ್ಲಿ ಮುಸ್ಲಿಮರು, ಹಿಂದೂಗಳು ಅಥವಾ ಯಾದವರು ಎಂಬ ಪ್ರಶ್ನೆಯೇ ಬರುವುದಿಲ್ಲ ಎಂದೂ ಶಾ ಸ್ಪಷ್ಟಪಡಿಸಿದ್ದಾರೆ. ಉ.ಪ್ರ. ಸಿಎಂ ಯೋಗಿ ಆದಿತ್ಯನಾಥ್ ಅವರ “80-20′ ಹೇಳಿಕೆ ಕುರಿತ ಪ್ರಶ್ನೆಗೆ ಶಾ ಈ ರೀತಿ ಉತ್ತರಿಸಿದ್ದಾರೆ. ಇದೇ ವೇಳೆ, ಯುಪಿಯಲ್ಲಿ ಧ್ರುವೀ ಕರಣ ನಡೆಯುತ್ತಿದೆಯೇ ಎಂಬ ಪ್ರಶ್ನೆಗೆ, “ಖಂಡಿತಾ ನಡೆಯುತ್ತಿದೆ. ಬಡವರು ಮತ್ತು ರೈತರು ಧ್ರುವೀ ಕರಣಗೊಂಡಿದ್ದಾರೆ. ಬಹುತೇಕ ರೈತರು ಕಿಸಾನ್ ಕಲ್ಯಾಣ್ ನಿಧಿಯೋಜನೆಯಿಂದ ಹಣ ಪಡೆಯುತ್ತಿದ್ದಾರೆ. ಹೀಗಾಗಿ ನನಗೆ ಧ್ರುವೀಕರಣ ಸ್ಪಷ್ಟವಾಗಿ ಗೋಚರಿಸುತ್ತಿದೆ’ ಎಂದಿದ್ದಾರೆ. ಜತೆಗೆ, ಓಟಿಂಗ್ ಸ್ವರೂಪವನ್ನು ಧ್ರುವೀ ಕರಣ ಎಂದು ಬಣ್ಣಿಸಲಾಗದು ಎಂದೂ ಹೇಳಿದ್ದಾರೆ.
ಪಂಜಾಬ್‌ನಲ್ಲಿ ಸಮ್ಮಿಶ್ರ ಸರಕಾರ?: ಪಂಜಾಬ್ ವಿಧಾನಸಭೆ ಚುನಾವಣೆ ಬಗ್ಗೆಯೂ ಸಂದರ್ಶನದಲ್ಲಿ ಮಾತನಾಡಿರುವ ಅಮಿತ್ ಶಾ, “ಪಂಜಾಬ್‌ನಲ್ಲಿ ಏನಾ ಗುತ್ತದೆ ಎಂದು ಯಾರಿಗೂ ಊಹಿಸಲು ಸಾಧ್ಯ ವಿಲ್ಲ. ನಾವು ನಮ್ಮಿಂದಾದಷ್ಟು ಪ್ರಯತ್ನ ಪಟ್ಟಿದ್ದೇವೆ. ಒಂದು ವೇಳೆ ಅತಂತ್ರ ವಿಧಾನಸಭೆ ಸೃಷ್ಟಿಯಾದರೂ, 2-3 ಪಕ್ಷ ಗಳು ಜತೆಗೂಡಿ ಸರಕಾರ ರಚಿಸಬಹು ದಲ್ಲವೇ’ ಎಂದು ಪ್ರಶ್ನಿಸಿದ್ದಾರೆ. ಇನ್ನು, ಆಮ್ ಆದ್ಮಿ ಪಕ್ಷಕ್ಕೆ ಸಿಕ್ಖ್ ಪ್ರತ್ಯೇಕತಾ ವಾದಿ ಸಂಘಟನೆಗಳೊಂದಿಗೆ ನಂಟು ಇದೆ ಎಂಬ ಆರೋಪಕ್ಕೆ ಸಂಬಂಧಿಸಿ ಸಿಎಂ ಚನ್ನಿ ನನಗೆ ಪತ್ರ ಬರೆದಿ ದ್ದಾರೆ. ಯಾವುದೇ ಪಕ್ಷವು ಪ್ರತ್ಯೇಕತಾವಾದಿಗಳೊಂದಿಗೆ ನಂಟು ಹೊಂದಿರುವುದು, ರಾಜಕೀಯ ಲಾಭಕ್ಕಾಗಿ ಅವ ರನ್ನು ಬಳಸಿಕೊಳ್ಳು ವುದು ಗಂಭೀರ ವಿಚಾರ. ಇದನ್ನು ಯಾವ ಸರಕಾರವೂ ಹಗುರವಾಗಿ ಪರಿಗಣಿಸದು. ನಾವು ಆ ಬಗ್ಗೆ ತನಿಖೆ ನಡೆಸಲಿದ್ದೇವೆ. ತನಿಖೆ ಅನಂತರ ಎಲ್ಲವೂ ಬಹಿರಂಗ ವಾಗಲಿದೆ ಎಂದೂ ಅಮಿತ್ ಶಾ ಹೇಳಿದ್ದಾರೆ.
ರಾಹುಲ್ ಚೀನ ನಿಯೋಗವನ್ನು ಭೇಟಿ ಮಾಡಿದ್ದೇಕೆ?
“ಪ್ರಧಾನಿ ಮೋದಿ ನೇತೃತ್ವದ ಸರಕಾರದ ಕಾಶ್ಮೀರ ಸಂಬಂಧ ನೀತಿಗಳು ಪಾಕಿಸ್ಥಾನ ಮತ್ತು ಚೀನವನ್ನು ಮತ್ತಷ್ಟು ಹತ್ತಿರವಾಗಿಸಿದವು’ ಎಂದು ಸಂಸತ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ ಹೇಳಿಕೆಗೂ ಸಂದರ್ಶನದಲ್ಲಿ ಅಮಿತ್ ಶಾ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಅವರಿಗೆ ದೇಶದ ಇತಿಹಾಸ ಗೊತ್ತಿಲ್ಲ. ಹೀಗಿರುವಾಗ ಅವರು ಸಂಸತ್‌ನಲ್ಲಿ ಹೇಳಿಕೆಯನ್ನೇ ನೀಡಬಾರದಿತ್ತು. 1962ರಲ್ಲಿ ಏನಾಗಿತ್ತು, ಯಾರಿಂದ ಆಗಿತ್ತು ಎಂಬುದೂ ಅವರಿಗೆ ಗೊತ್ತಿಲ್ಲ. ಚೀನ ಹಾಕಿದ ಪ್ರತಿಯೊಂದು ಸವಾಲಿಗೂ ನರೇಂದ್ರ ಮೋದಿ ಸರಕಾರ ತಕ್ಕ ಪ್ರತ್ಯುತ್ತರ ನೀಡಿದೆ ಎಂದಿದ್ದಾರೆ ಶಾ. ಜತೆಗೆ ಸಂಸತ್‌ನಲ್ಲಿ ಇಷ್ಟೆಲ್ಲ ಮಾತನಾಡಿರುವ ರಾಹುಲ್ ಗಾಂಧಿ ಅವರು, ಶಿಷ್ಟಾಚಾರವನ್ನೇ ಉಲ್ಲಂ ಸಿ ಚೀನದ ನಿಯೋಗವನ್ನು ಭೇಟಿಯಾಗಿ ದ್ದೇಕೆ? ಅವರೊಂದಿಗೆ ಏನನ್ನು ಚರ್ಚೆ ಮಾಡಿದಿರಿ ಎಂದೂ ಶಾ ಪ್ರಶ್ನಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra: ಏಕ್ನಾಥ್ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ
Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ
Maharaja: ಬಾಂಧವ್ಯವೃದ್ಧಿ ಬಳಿಕ 29ಕ್ಕೆ ಚೀನಾದಲ್ಲಿ ಮೊದಲ ಬಾರಿಗೆ ತಮಿಳು ಸಿನಿಮಾ ರಿಲೀಸ್!
Actress: ಫ್ರೆಂಚ್ ಗೆಳೆಯನೊಂದಿಗೆ ಬ್ರೇಕ್ಅಪ್ ಆಗಿದೆ: ಮಲ್ಲಿಕಾ ಶೆರಾವತ್
Chhattisgarh: ಹಳಿ ತಪ್ಪಿದ ಗೂಡ್ಸ್ ರೈಲಿನ 20 ಬೋಗಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ
MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.