ಉಕ್ರೇನ್ ಮೇಲೆ ರಷ್ಯಾ ದಾಳಿ: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 1,000 ಅಂಕ ಇಳಿಕೆ
ಎನ್ ಎಸ್ ಇ ನಿಫ್ಟಿ ಕೂಡಾ 285 ಅಂಕಗಳಷ್ಟು ಕುಸಿತವಾಗಿದ್ದು, 16,922ಅಂಕಗಳಿಗೆ ಇಳಿಕೆಯಾಗಿದೆ.
Team Udayavani, Feb 22, 2022, 10:05 AM IST
ಮುಂಬಯಿ: ಉಕ್ರೇನ್ ಮೇಲೆ ದಾಳಿ ನಡೆಸಲು ರಷ್ಯಾ ತುದಿಗಾಲಲ್ಲಿ ನಿಂತಿದೆ ಎಂಬ ಆರೋಪದ ಬೆನ್ನಲ್ಲೇ ಉಕ್ರೇನ್ ನ ಐವರು ಸೈನಿಕರನ್ನು ಹತ್ಯೆಗೈದಿರುವುದಾಗಿ ರಷ್ಯಾ ಹೇಳಿಕೊಂಡಿದೆ. ಈ ಯುದ್ಧ ಭೀತಿಯ ಪರಿಣಾಮ ಷೇರುಪೇಟೆ ಹೂಡಿಕೆದಾರರ ಮೇಲೆ ಬೀರಿದ್ದು, ಮಂಗಳವಾರ (ಫೆ.22) ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿಯೇ 1,000ಕ್ಕೂ ಅಧಿಕ ಅಂಕ ಕುಸಿತ ಕಂಡಿದೆ.
ಇದನ್ನೂ ಓದಿ:ಬಿಜೆಪಿಗೆ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರ ಖಚಿತ: ಸಿಎಂ ಬಸವರಾಜ ಬೊಮ್ಮಾಯಿ ವಿಶ್ವಾಸ
ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 1,004 ಅಂಕಗಳಷ್ಟು ಭಾರೀ ಇಳಿಕೆಯಾಗಿದ್ದು, 56,680 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 285 ಅಂಕಗಳಷ್ಟು ಕುಸಿತವಾಗಿದ್ದು, 16,922ಅಂಕಗಳಿಗೆ ಇಳಿಕೆಯಾಗಿದೆ.
ಟಿಸಿಎಸ್ ಷೇರು ಮೌಲ್ಯ ಭಾರೀ ಕುಸಿತ ಕಂಡಿದೆ. ಅಲ್ಲದೇ ಎಲ್ ಆ್ಯಂಡ್ ಟಿ, ಡಾ.ರೆಡ್ಡೀಸ್, ಯುಪಿಎಲ್ ಮತ್ತು ಬಜಾಜ್ ಫಿನ್ ಸರ್ವ್ ಷೇರುಗಳ ಮೌಲ್ಯ ನಷ್ಟ ಈಡಾಗಿದೆ. ಕೇವಲ ಒಎನ್ ಜಿಸಿ ಷೇರು ಮಾತ್ರ ಲಾಭಗಳಿಸಿದೆ.
ಡಾ.ರೆಡ್ಡೀಸ್, ಎಲ್ ಆ್ಯಂಡ್ ಟಿ, ಟಿಸಿಎಸ್, ಟೆಕ್ ಮಹೀಂದ್ರ, ಎಚ್ ಡಿಎಫ್ ಸಿ ಮತ್ತು ಬಜಾಜ್ ಫಿನ್ ಸರ್ವ್ ಷೇರುಗಳ ಮೌಲ್ಯ ಶೇ.3.06ರಷ್ಟು ಕುಸಿತ ಕಂಡಿದೆ. ಸೋಮವಾರ ಮುಂಬಯಿ ಷೇರುಪೇಟೆಯ ಸೆನ್ಸೆಕ್ಸ್ 149 ಅಂಕಗಳ ಇಳಿಕೆಯೊಂದಿಗೆ 57,684 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿತ್ತು. ಎನ್ ಎಸ್ ಇ ನಿಫ್ಟಿ 70 ಅಂಕ ಕುಸಿದಿದ್ದು, 17,207 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಕೊನೆಗೊಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.