ಗಾಂಜಾಕ್ಕಾಗಿಯೇ ಸಿಗರೇಟ್ ಸೇದುತ್ತಿರುವ ಯುವಕರು? 1 ತಿಂಗಳಲ್ಲಿ 26 ಗಾಂಜಾ ವ್ಯಸನಿಗಳ ಬಂಧನ!
Team Udayavani, Feb 22, 2022, 11:32 AM IST
ಮಹಾನಗರ : ನೋಡುವಾಗ ಸಿಗರೇಟ್ ಸೇದುತ್ತಿರುವಂತೆ ಕಂಡರೂ ಅದು ಸಿಗರೇಟ್ ಮಾತ್ರವೇ ಆಗಿರುವುದಿಲ್ಲ. ಬದಲಾಗಿ ಅದರೊಂದಿಗೆ ಗಾಂಜಾ ಕೂಡ ಸೇವಿಸಲಾಗುತ್ತದೆ!
ಸಿಗರೇಟ್ ಸೇದುತ್ತಿರುವ ಯುವಕರ ಪೈಕಿ ಹಲವಾರು ಮಂದಿ ಗಾಂಜಾ ವ್ಯಸನಿಗಳು ಕೂಡ ಆಗಿರುವುದು ಪೊಲೀಸರ ವಿಚಾರಣೆ ವೇಳೆ ಗೊತ್ತಾಗಿದೆ. ಗಾಂಜಾ ನಶೆಗಾಗಿಯೇ ಹೆಚ್ಚಿನ ಯುವಕರು ಸಿಗ ರೇಟ್ ಸೇದುತ್ತಿರುವುದು ಕಂಡುಬಂದಿದೆ. ಒಂದು ತಿಂಗಳಿನಲ್ಲಿ ಮಂ ಗಳೂರು ಪೊಲೀಸರು ವಿವಿಧೆಡೆ ಸಿಗರೇಟ್ ಸೇದುತ್ತಿದ್ದ ಯುವಕರನ್ನು ವಿಚಾರಿಸಿ ಅನಂತರ ಅವರನ್ನು ವೈದ್ಯಕೀಯ ತಪಾಸಣೆಗೆ ಅದರಲ್ಲಿ ಬಹುತೇಕ ಮಂದಿ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ.
ಮಂಗಳೂರು ನಗರ, ಉಳ್ಳಾಲ, ಕೊಣಾಜೆ ಸೇರಿದಂತೆ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯ ವಿವಿಧೆಡೆ ನಡೆಸಿರುವ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಜ. 22ರಿಂದ ಫೆ. 20ರ ವರೆಗೆ ಒಂದು ತಿಂಗಳ ಅವಧಿಯಲ್ಲಿ 26 ಮಂದಿ ಗಾಂಜಾ ವ್ಯಸನಿಗಳನ್ನು ಬಂಧಿಸಲಾಗಿದೆ. ಬಂ ಧಿತರೆಲ್ಲರೂ 20 ರಿಂದ 30 ವರ್ಷ ವಯೋ ಮಾನದವರು.
ಗಾಂಜಾ ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಆರೋಪದಲ್ಲಿ ಇವರನ್ನು ಬಂಧಿಸಲಾಗಿದೆ. ಉರ್ವ ಅಶೋಕನಗರ ಮೈದಾನ ಬಳಿ ಓರ್ವನನ್ನು, ನರಿಂಗಾನ ಗ್ರಾಮ ಕಲ್ಲರ ಕೋಡಿಯಲ್ಲಿ ಇಬ್ಬರನ್ನು, ನರಿಂಗಾನ ಗ್ರಾಮ ನೆತ್ತಿಲಪದವು ಸೈಟ್ ಬಳಿ , ಮುಡಿಪು ದರ್ಖಾಸು ಬಳಿ, ನಗರದ ಪುಟ್‌ಬಾಲ್ ಮೈದಾನ ಬಳಿ ತಲಾ ಓರ್ವರನ್ನು, ಫಳ್ನೀರ್‌ನ ಲಾಡ್ಜ್ ಪರಿಸರದಲ್ಲಿ 6 ಮಂದಿಯನ್ನು, ನರಿಂಗಾನ ಗ್ರಾಮದ ತೌಡುಗೋಳಿ ಕ್ರಾಸ್ ಬಳಿ, ದಂಬೇಲ್ ಸೇತುವೆ ಬಳಿ , ಸುಂಕದಕಟ್ಟೆ ವ್ಯಾಯಾಮ ಶಾಲೆ ಬಳಿ ಚಿಲಿಂಬಿ ಬಳಿ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಉರ್ವ ಇನ್ಫೋಸಿಸ್ ಹಿಂಭಾಗದ ರಸ್ತೆ, ಸೋಮೇಶ್ವರ ಉಚ್ಚಿಲ ಪೆರಿಬೈಲ್ ಬೀಚ್‌ನಲ್ಲಿ, ಕೋಡಿಕಲ್ ನಾಗಬ್ರಹ್ಮ ಚಾವಡಿ ಬಳಿ, ಕುಂಟಿಕಾನ ಫ್ರೈ ಓವರ್ ಕೆಳಗೆ, ಕೋಡಿಕಲ್ ಸರಕಾರಿ ಶಾಲೆ ಬಳಿ, ನೀರುಮಾರ್ಗ ಬಸ್ ನಿಲ್ದಾಣ ಬಳಿ, ಕುತ್ತಾರು ಶಾಂತಿಬಾಗ್ ಬಳಿ, ವಳಚ್ಚಿಲ್ ಪದವು ಬಳಿ, ಲೇಡಿಹಿಲ್ ಬಸ್‌ನಿಲ್ದಾ ಣದಲ್ಲಿ ಹೀಗೆ ವಿವಿಧೆಡೆ ಮಾದಕ ವಸ್ತು ವ್ಯಸನಿಗಳನ್ನು ಬಂಧಿಸಲಾಗಿದೆ.
ಇದನ್ನೂ ಓದಿ : ಥಿಯೇಟರ್ ಮುಂದೆ ಫ್ಯಾನ್ಸ್ ಕಟೌಟ್! ಫೆ. 25ಕ್ಕೆ ‘ಓಲ್ಡ್ ಮಾಂಕ್’ ಚಿತ್ರ ತೆರೆಗೆ
ಮತ್ತೆ ದೃಢಪಟ್ಟ ಕೇರಳ ಲಿಂಕ್
ಮಂಗಳೂರಿಗೆ ಕೇರಳದಿಂದ ಅತ್ಯಧಿಕ ಪ್ರಮಾಣದಲ್ಲಿ ಗಾಂಜಾ ಸೇರಿದಂತೆ ವಿವಿಧ ರೀತಿಯ ಮಾದಕ ವಸ್ತುಗಳು ಪೂರೈ ಕೆಯಾಗುತ್ತಿರುವುದನ್ನು ಪೊಲೀಸರು ಈಗಾಗಲೇ ಕಂಡುಕೊಂಡಿದ್ದು ಇದಕ್ಕೆ ಪುಷ್ಟಿ ನೀಡುವಂತೆ ಮತ್ತೆರಡು ಪ್ರಕರಣಗಳು ಇತ್ತೀಚೆಗೆ ಪತ್ತೆಯಾಗಿವೆ. ಫೆ. 15ರಂದು ಮಂಗಳೂರು ತಾಲೂಕು ಮಂಜನಾಡಿ ಗ್ರಾಮದ ಊರುಮನೆ ಕ್ರಾಸ್‌ನಲ್ಲಿ ಮೂವರನ್ನು ಬಂಧಿಸಿ 1.340 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿತ್ತು. ಫೆ. 16ರಂದು ಕೇರಳದ ಕುಂಜತ್ತೂರು ಪರಿಸರದಿಂದ ಮಂಗಳೂರಿಗೆ ಸಾಗಾಟ ಮಾಡುತ್ತಿದ್ದ 2.220 ಕೆಜಿ ಗಾಂಜಾವನ್ನು ತಲಪಾಡಿ ಗ್ರಾಮದ ನಾರ್ಲ ಪಡೀಲ್ ರಾಮನಗರ ಎಂಬಲ್ಲಿ ಪತ್ತೆ ಹಚ್ಚಿ ಇಬ್ಬರನ್ನು ಬಂಧಿಸಲಾಗಿತ್ತು.
ಸಿಗರೇಟ್ ಸಿಗುವಲ್ಲೇ ಗಾಂಜಾ ಲಭ್ಯ ?!
ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್ ಸೇದುವಂತಿಲ್ಲ. ಆದಾಗ್ಯೂ ಬಸ್ ನಿಲ್ದಾಣ, ಮೈದಾನ, ರಸ್ತೆ ಬದಿ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಎಗ್ಗಿಲ್ಲದೆ ಸಿಗರೇಟ್ ಸೇವನೆ ನಡೆಯುತ್ತಿದೆ. ಜಿಲ್ಲಾ ತಂಬಾಕು ನಿಯಂತ್ರಣ ಘಟಕ “ಕೋಟಾ’ ತಂಡ ಹಲವೆಡೆ ಕಾರ್ಯಾಚರಣೆ ನಡೆಸುತ್ತಿದೆ. ಈ ವೇಳೆ ಸ್ಮಗ್ಲಿಂಗ್ ಮಾಡಿರುವ ಸಿಗರೇಟ್ ಪ್ಯಾಕೇಟ್‌ಗಳು ಕೂಡ ಪತ್ತೆಯಾಗಿವೆ. ನಿರ್ದಿಷ್ಟ ನಿಯಮ ಪಾಲನೆ ಮಾಡದೆ, ತೆರಿಗೆ ಪಾವತಿಸದೆ ಕೆಲವು ಕಂಪೆನಿಗಳು ಸಿಗರೇಟ್ ಪೂರೈಕೆ ಮಾಡುತ್ತಿದ್ದು, ಇದು ಕಡಿಮೆ ಬೆಲೆಗೆ ವಿದ್ಯಾರ್ಥಿಗಳು ಸಹಿತ ಯುವಕರ ಕೈಗೆ ಸಿಗುತ್ತಿದೆ. ನಿಯಮಬಾಹಿರವಾಗಿ ಸಿಗರೇಟ್ ಮಾರಾಟ ಮಾಡುವ ಅಂಗ ಡಿಗಳಿಗೆ ಗಾಂಜಾ ಕೂಡ ಸುಲಭವಾಗಿ ಪೂರೈಕೆಯಾಗುತ್ತವೆ ಎನ್ನಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ವೆನ್ಲಾಕ್ ಆಸ್ಪತ್ರೆ ಹೊರರೋಗಿ ವಿಭಾಗ ವಿಸ್ತರಣೆ
Mangaluru: 7 ಕೆರೆ, ಪಾರ್ಕ್ ಅಭಿವೃದ್ಧಿಗೆ ಅಮೃತ 2.0
Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್
Fraud Case: ಹೂಡಿಕೆ ನೆಪ: ಮಹಿಳೆಯಿಂದ 56.64 ಲಕ್ಷ ರೂ. ವಂಚನೆ
Kulai ಜೆಟ್ಟಿ ಕಾಮಗಾರಿ: ಚೆನ್ನೈ ಐಐಟಿಯಿಂದ ವರದಿ ಪಡೆಯಲು ಮೀನುಗಾರಿಕೆ ಸಚಿವರ ನಿರ್ಧಾರ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.