ಆರ್‌ಟಿಒ, ಕಮಿಷನರ್‌ ಕಚೇರಿ ಮುಂಭಾಗ ಪಾದಚಾರಿಗಳ ಪರದಾಟ


Team Udayavani, Feb 22, 2022, 11:40 AM IST

ಆರ್‌ಟಿಒ, ಕಮಿಷನರ್‌ ಕಚೇರಿ ಮುಂಭಾಗ ಪಾದಚಾರಿಗಳ ಪರದಾಟ

ಸ್ಟೇಟ್‌ಬ್ಯಾಂಕ್‌ : ವಾಹನಗಳ ಅತಿಯಾದ ವೇಗ, ಓವರ್‌ಟೇಕ್‌ ಭರಾಟೆ ನಡುವೆ ಪಾದಚಾರಿಗಳು ಸುರಕ್ಷಿತವಾಗಿ ರಸ್ತೆ ದಾಟಿದರೆ ಅದೊಂದು ಸಾಹಸ! ನಗರದ ಕೇಂದ್ರಭಾಗವಾಗಿರುವ ಆರ್‌ಟಿಒ ಕಚೇರಿ ಮತ್ತು ಪೊಲೀಸ್‌ ಆಯುಕ್ತರ ಕಚೇರಿಯ ಮುಂಭಾಗದಲ್ಲೇ ಇಂತಹ ಅವ್ಯವಸ್ಥೆ ಇದೆ. ದಿನನಿತ್ಯ ನೂರಾರು ಮಂದಿ ಪಾದಚಾರಿಗಳು ಪ್ರಾಣಭಯದಲ್ಲೇ ನಡೆದಾಡುವಂತಾಗಿದೆ.

4 ಲೇನ್‌ಗಳೂ ಒಂದೇ ದಿಕ್ಕಿನತ್ತ
ಕ್ಲಾಕ್‌ಟವರ್‌ನಿಂದ ಸ್ಟೇಟ್‌ಬ್ಯಾಂಕ್‌ನ ಹ್ಯಾಮಿಲ್ಟನ್‌ ಸರ್ಕಲ್‌ವರೆಗೂ ಡಿವೈಡರ್‌ಗಳನ್ನು ತೆರವುಗೊಳಿಸಲಾಗಿದೆ. ಹಾಗಾಗಿ ಅಗಲವಾದ ಒಂದೇ ರಸ್ತೆಯಾಗಿ ರೂಪು ಗೊಂಡಿದೆ. ಇಲ್ಲಿ ಸಂಪೂರ್ಣ ಏಕಮುಖ ಸಂಚಾರಕ್ಕೆ ಅನುವು ಮಾಡಿ ಕೊಡಲಾಗಿದೆ. ಇದರಿಂದಾಗಿ ಒಂದೇ ಅಗಲವಾದ ರಸ್ತೆಯಲ್ಲಿ ನಾಲ್ಕು ಲೇನ್‌ಗಳಲ್ಲಿ (ಸಾಲು) ವಾಹನಗಳು ಒಂದೇ ದಿಕ್ಕಿನತ್ತ ಮುನ್ನುಗ್ಗುತ್ತಿವೆ.

ಸ್ಪೀಡ್‌ಬ್ರೇಕರ್‌ ಇಲ್ಲ
ಕ್ಲಾಕ್‌ಟವರ್‌ನಿಂದ ಹ್ಯಾಮಿಲ್ಟನ್‌ ಸರ್ಕಲ್‌ವರೆಗೂ ಒಂದೇ ಒಂದು ಸ್ಪೀಡ್‌ಬ್ರೇಕರ್‌(ಹಂಪ್ಸ್‌) ಇಲ್ಲ. ಈ ಹಿಂದೆ ಇದ್ದ ಹಂಪ್ಸ್‌ಗಳನ್ನು ತೆರವುಗೊಳಿಸಲಾಗಿದೆ. ಹಾಗಾಗಿ ವಾಹನಗಳು ಕ್ಲಾಕ್‌ಟವರ್‌ನಿಂದ ಎ.ಬಿ.ಶೆಟ್ಟಿ ಸರ್ಕಲ್‌, ಹ್ಯಾಮಿಲ್ಟನ್‌ ಸರ್ಕಲ್‌ವರೆಗೂ ಒಂದೇ ವೇಗದಲ್ಲಿ ಸಂಚರಿಸುತ್ತಿವೆ. ಇದರ ನಡುವೆ ಹಿರಿಯರು, ಮಕ್ಕಳು, ಮಹಿಳೆಯರು ಮಾತ್ರವಲ್ಲದೆ ಯುವಕರು ಕೂಡ ರಸ್ತೆ ದಾಟುವುದು ಭಾರೀ ಸವಾಲಾಗಿದೆ. ಸಂಪೂರ್ಣವಾಗಿ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುವುದರಿಂದ, ಸ್ಪೀಡ್‌ ಬ್ರೇಕರ್‌ಗಳನ್ನು ತೆರವುಗೊಳಿಸಿರುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ಈ ರಸ್ತೆ ಅನುಕೂಲವಾಗಿದೆಯಾದರೂ ಪಾದಚಾರಿ ಗಳಿಗೆ ಭಾರೀ ಅಪಾಯಕಾರಿಯಾಗಿ ಪರಿಣಮಿಸಿದೆ.

ಓವರ್‌ಟೇಕ್‌ ಭರಾಟೆ
ನಗರದಲ್ಲಿ ಅತ್ಯಂತ ಹೆಚ್ಚು ಎಂಬಂತೆ ಈ ರಸ್ತೆಯಲ್ಲಿ ಓವರ್‌ಟೇಕ್‌ ನಡೆಯುತ್ತಿದೆ. ರಸ್ತೆ ದಾಟುತ್ತಿರುವವರನ್ನು ಕಂಡು ಯಾವು ದಾದರೂ ವಾಹನದ ಚಾಲಕ ವೇಗ ತಗ್ಗಿಸಿ ದರೆ ಆ ಕ್ಷಣದಲ್ಲೇ ಹಿಂದಿನ ವಾಹನದ ಚಾಲಕ ಓವರ್‌ಟೇಕ್‌ ಮಾಡಿ ಬರುತ್ತಾನೆ. ಇದು ಭಾರೀ ಅಪಾಯವನ್ನುಂಟು ಮಾಡುತ್ತಿದೆ.

ವಾಹನ ತಪಾಸಣೆಗೆ ಮಾತ್ರ ಆದ್ಯತೆ!
ಆರ್‌ಟಿಒ ಕಚೇರಿ, ಪೊಲೀಸ್‌ ಆಯುಕ್ತರ ಕಚೇರಿ ಮಾತ್ರವಲ್ಲದೆ ಇಲ್ಲಿ ಎಲ್‌ಐಸಿ, ಬ್ಯಾಂಕ್‌, ಮಾಲ್‌, ಅಂಚೆಕಚೇರಿ, ಬಿಎಸ್‌ಎನ್‌ಎಲ್‌ ಮತ್ತಿತರ ಪ್ರಮುಖ ಕಚೇರಿಗಳಿದ್ದು ಇದು ಸದಾ ಜನರು ಓಡಾಡುವ ಸ್ಥಳ. ಪೊಲೀಸ್‌ ಆಯುಕ್ತರ ಕಚೇರಿ ಎದುರು ಒಂದಿಬ್ಬರು ಸಂಚಾರಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಾರೆ. ಆದರೆ ಅವರು ಪಾದಚಾರಿಗಳ ಪಾಲಿಗೆ ಅಸಹಾಯಕರಾಗಿದ್ದಾರೆ. ಯಾವುದೇ ಸ್ಪೀಡ್‌ಬ್ರೇಕರ್‌, ಸೂಚನ ಫ‌ಲಕ, ಝೀಬ್ರಾ ಕ್ರಾಸ್‌ ಇಲ್ಲದಿರುವುದರಿಂದ ಪೊಲೀಸರಿಗೂ ವಾಹನಗಳ ವೇಗ ತಗ್ಗಿಸಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಸಾಧ್ಯವಾಗುತ್ತಿಲ್ಲ. ಮಾತ್ರವಲ್ಲದೆ ಸಂಚಾರಿ ಪೊಲೀಸರು ವಾಹನಗಳ ತಪಾಸಣೆಗೆ ಮಾತ್ರವೇ ಹೆಚ್ಚು ಆದ್ಯತೆ ನೀಡುತ್ತಿರುವುದು ಕಂಡುಬಂದಿದೆ.

ರಸ್ತೆ ದಾಟುವವರ ಸುರಕ್ಷೆಗಾಗಿ
– ವೈಜ್ಞಾನಿಕ ರೀತಿಯ ಸ್ಪೀಡ್‌ ಬ್ರೇಕರ್‌ಗಳನ್ನು ಅಳವಡಿಸುವುದು.
– ರಸ್ತೆ ದಾಟಲು ಝೀಬ್ರಾ ಕ್ರಾಸ್‌ ಗುರುತು ಹಾಕುವುದು.
– ರಸ್ತೆ ದಾಟುವವರ ನೆರವಿಗಾಗಿ ಸಂಚಾರಿ ಪೊಲೀಸರ ನಿಯೋಜನೆ
– ಅತೀವೇಗ, ನಿರ್ಲಕ್ಷ್ಯದ ಚಾಲನೆ ಮಾಡುವವರ ಮೇಲೆ ನಿಗಾ

–   ಸಂತೋಷ್‌ ಬೊಳ್ಳೆಟ್ಟು

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.