ಹೈನುಗಾರಿಕೆ ಉಪಜೀವನದ ಆಧಾರ ಸ್ತಂಭ

ಸಮಾಧಾನಕರ ಬಹುಮಾನವಾಗಿ ಒಂದು ಹಿಂಡಿ ಚೀಲ, ಒಂದು ಕ್ಯಾಲ್ಸಿಯಂ ಡಬ್ಬಿ ಹಾಗೂ ಇತರೆ ಉಪಕರಣ ನೀಡಲಾಯಿತು.

Team Udayavani, Feb 22, 2022, 5:05 PM IST

ಹೈನುಗಾರಿಕೆ ಉಪಜೀವನದ ಆಧಾರ ಸ್ತಂಭ

ಧಾರವಾಡ: ಗರಗದ ಮಡಿವಾಳೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ಗರಗದಲ್ಲಿ ಹಾಲು ಕರೆಯುವ ಸ್ಪರ್ಧೆ ಹಾಗೂ ಕರುಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಅತಿಥಿಯಾಗಿದ್ದ ಜಿಪಂ ಸಿಇಒ ಡಾ|ಸುರೇಶ ಇಟ್ನಾಳ ಮಾತನಾಡಿ, ಪ್ರತಿಯೊಬ್ಬರಿಗೂ ಹೈನುಗಾರಿಕೆ ಉಪಜೀವನದ ಆಧಾರ ಸ್ಥಂಭವಾಗಿದೆ. ಇದನ್ನು ಕೃಷಿ ಜತೆಗೆ ಉಪಕಸುಬಾಗಿ ಮಾಡಿಕೊಂಡು ಜೀವನದ ಆರ್ಥಿಕತೆ ವೃದ್ಧಿಸಿಕೊಳ್ಳಬೇಕು ಎಂದರು.

ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕ ಡಾ|ಉಮೇಶ ಕೊಂಡಿ, ಪಶುವೈದ್ಯ ಸೇವಾ ಇಲಾಖೆಯ ಗರಗದ ಪಶು ವೈದ್ಯಾಧಿಕಾರಿ ಡಾ|ರಮೇಶ ಹೆಬ್ಬಳ್ಳಿ ಮಾತನಾಡಿದರು.

ಸಹಾಯಕ ನಿರ್ದೇಶಕ ಡಾ|ಶ್ರೀಕಾಂತ ಅರಗಂಜಿ, ತಾಪಂ ಸದಸ್ಯೆ ಪಾರ್ವತಿ ದಂಡಿನ, ಡಾ|ಎಚ್‌. ಆರ್‌. ಬಾಲನಗೌಡ್ರ, ಡಾ|ಆನಂದ ತಡೆಪ್ಪನವರ, ಡಾ|ಪ್ರಕಾಶ ಬೆನ್ನೂರ, ಡಾ|ಅಪ್ತಾಭ ಯಲ್ಲಾಪೂರ, ಡಾ|ತಿಪ್ಪಣ್ಣ ರಾಂಪೂರೆ, ಡಾ|ಶಂಭು ಬೆನ್ನೂರ, ಡಾ|ಶರಣಬಸವ ಸಜ್ಜನ, ಡಾ|ಕೃಷ್ಣಾಜಿ ರಾಠೊಡ್‌, ಕುಂತಿನಾಥ ಇಜಾರಿ, ಶಿವಲಿಂಗ ಕಾಶಿರ್ದಾ, ನಿಂಗಪ್ಪ ಶೀಗಿಹಳ್ಳಿ, ಮಾರ್ತಾಂಡಪ್ಪ ಕತ್ತಿ, ಲಕ್ಷ್ಮೀ ಕಾಶಿಗಾರ, ಶಿವಾನಂದ ರಾಮಣ್ಣವರ, ಶ್ರೀದೇವಿ ಬೆಳವಡಿ, ಎಸ್‌.ಎಮ್‌.ದೊಡಮನಿ, ಪಾಶ್ವನಾಥ ಹೊಸಮನಿ ಇದ್ದರು.

ಸ್ಪರ್ಧೆಯ ಫಲಿತಾಂಶ: ಆಕಳು ಮತ್ತು ಎಮ್ಮೆಗಳ ಹಾಲು ಹಿಂಡುವ ಸ್ಪರ್ಧೆಗೆ ಗರಗ, ಹಂಗರಕಿ ,ತಡಕೋಡ ,ಕಬ್ಬೇನೂರ, ಶಿಂಗನಹಳ್ಳಿ, ಧಾರವಾಡ ಶಹರ ಮಾಧನಭಾವಿ, ಕೋಟೂರ, ಮಂಗಳಗಟ್ಟಿ ಸೇರಿದಂತೆ ವಿವಿಧ ಗ್ರಾಮಗಳ ರೈತರು, ಹೈನುಗಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಹೆಚ್‌.ಎಫ್‌.ಮತ್ತು ಜರ್ಸಿ ಆಕಳುಗಳು ಹಾಗೂ ಮುರಾ ಮತ್ತು ಸುರ್ತಿ ತಳಿಗಳ ಎಮ್ಮೆಗಳಿಗೆ ಪ್ರತ್ಯೇಕವಾಗಿ ಸ್ಪರ್ಧೆ ಜರುಗಿದವು.ಹಾಲು ಹಿಂಡಲು ಅವುಗಳ ಮಾಲೀಕರಿಗೆ ನಿಗದಿತ ನಿಮಿಷಗಳ ಕಾಲಾವಕಾಶ ನೀಡಲಾಯಿತು.

ಪ್ರತಿ ಜಾನುವಾರುಗಳ ಹಾಲು ಹಿಂಡುವ ಸ್ಪರ್ಧೆ ಮೇಲ್ವಿಚಾರಣೆಗೆ ಓರ್ವ ಪಶು ವೈದ್ಯಾಧಿಕಾರಿ, ಇಬ್ಬರು ಸಿಬ್ಬಂದಿ ನಿಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಶಿಂಗನಹಳ್ಳಿಯ ಮೈನುದ್ದೀನ ಮಾಳಗಿ ಅವರಿಗೆ ಶಾಸಕ ಅಮೃತ ದೇಸಾಯಿ 10 ಸಾವಿರ ರೂ. ನೀಡಿದರೆ, ದ್ವಿತೀಯ ಸ್ಥಾನ ಪಡೆದ ನೀರಲಕಟ್ಟಿಯ ಛಶ್ವರ ಗಾಳಿಗೆ ಅಶೋಕ ದೇಸಾಯಿ ಅವರು 8 ಸಾವಿರ ರೂ., ತೃತೀಯ ಸ್ಥಾನ ಪಡೆದ ಶಿಂಗನಹಳ್ಳಿಯ ಸುಶಾಂತ ಪಾಟೀಲ ಅವರಿಗೆ ಸಮಾಜಸೇವಕ ಮಹಾದೇವ ದಂಡಿನ ಅವರು 7 ಸಾವಿರ ರೂ. ನೀಡಿದರು.

4ನೇ ಸ್ಥಾನ ಪಡೆದ ಕವಲಗೇರಿಯ ಮಲ್ಲನಗೌಡ ಪಾಟೀಲರಿಗೆ 6 ಸಾವಿರ ರೂ., 5ನೇ ಸ್ಥಾನ ಪಡೆದ ನೀರಲಕಟ್ಟಿಯ ಅಜೀತ ಅಂಕಲಗಿಗೆ 5 ಸಾವಿರ ರೂ., 6ನೇ ಸ್ಥಾನ ಪಡೆದ ಹಂಗರಕಿಯ ನಿಂಗಪ್ಪ ಶಿಗೀಹಳ್ಳಿಗೆ 4 ಸಾವಿರ ರೂ., 7ನೇ ಸ್ಥಾನ ಪಡೆದ ಕವಲಗೇರಿಯ ಗಂಗಪ್ಪ ಸುಂಕಣ್ಣವರಗೆ 3 ಸಾವಿರ ರೂ., 8ನೇ ಸ್ಥಾನ ಪಡೆದ ಹಂಗರಕಿಯ ವೀರನಗೌಡ ಬಾಡಿಯವರಗೆ 2 ಸಾವಿರ ರೂ. ನೀಡಿ, ಪ್ರೋತ್ಸಾಹಿಸಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ 24 ಜನ ಜಾನುವಾರು ಮಾಲೀಕರಿಗೆ ಸಮಾಧಾನಕರ ಬಹುಮಾನವಾಗಿ ಒಂದು ಹಿಂಡಿ ಚೀಲ, ಒಂದು ಕ್ಯಾಲ್ಸಿಯಂ ಡಬ್ಬಿ ಹಾಗೂ ಇತರೆ ಉಪಕರಣ ನೀಡಲಾಯಿತು.ಇದಲ್ಲದೇ ಕರುಗಳ ಪ್ರದರ್ಶನ ಏರ್ಪಡಿಸಿ ಉತ್ತಮ ಕರುಗಳಿಗೆ ಪ್ರಶಸ್ತಿ ನೀಡಲಾಯಿತು.

ಶ್ರೀ ಜಗದ್ಗುರು ಮಡಿವಾಳೇಶ್ವರ ಕಲ್ಮಠ ಟ್ರಸ್ಟ್‌, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಕರ್ನಾಟಕ ಹಾಲು ಒಕ್ಕೂಟ, ಹಾಗೂ ಎಪಿಎಂಸಿ ಸಹಯೋಗದಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು.

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’

Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’

ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ

ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ

8

Dharwad: ಪಂ.ಮನಸೂರ ಸಂಗೀತ ಪಾಠ ಶಾಲೆ ಮತ್ತೆ ಆರಂಭ; ಜಿಲ್ಲಾಧಿಕಾರಿ ದಿವ್ಯ ಪ್ರಭು

Hubli: Police seize Rs 89.99 lakhs being transported without documents

Hubli: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89.99 ಲಕ್ಷ ರೂ ಪೊಲೀಸ್‌ ವಶಕ್ಕೆ

ED summons case: Temporary relief for Siddaramaiah’s wife Parvathi, Bairati Suresh

ED summons: ಸಿದ್ದರಾಮಯ್ಯ ಪತ್ನಿ ಪಾರ್ವತಿ, ಬೈರತಿ ಸುರೇಶಗೆ ತಾತ್ಕಾಲಿಕ ರಿಲೀಫ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.