ಇಂಟರ್ನೆಟ್ ಸೆನ್ಸೇಷನ್ ಕಿಲಿ ಪೌಲ್‌ಗೆ ಭಾರತೀಯ ಹೈಕಮಿಷನ್ ಗೌರವ
Team Udayavani, Feb 23, 2022, 7:50 AM IST
ನವದೆಹಲಿ: ಕಿಲಿ ಪೌಲ್ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ? ಬಾಲಿವುಡ್‌ನ “ಶೇರ್‌ಶಾ’ ಸಿನಿಮಾದ ರಾತನ್ ಲಂಬಿಯಾದಿಂದ ಹಿಡಿದು “ಪುಷ್ಪ’ ಸಿನಿಮಾದ ಶ್ರೀವಲ್ಲಿವರೆಗೆ ಭಾರತದ ಸಿನಿಮಾ ಹಾಡುಗಳಿಗೆ ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ಹೆಜ್ಜೆ ಹಾಕಿ, ದೇಶದ ಇಂಟರ್ನೆಟ್ ಸೆನ್ಸೇಷನ್ ಆಗಿರುವ ತಾಂಜಾನಿಯಾದ ಯುವಕನೇ ಕಿಲಿ ಪೌಲ್.
ಭಾರತದ ಕೋಟ್ಯಂತರ ಹೃದಯಗಳನ್ನು ಗೆದ್ದಿರುವ ಇನ್‌ಸ್ಟಾ ರೀಲ್ ಸ್ಟಾರ್ ಕಿಲಿ ಪೌಲ್ ಅವರನ್ನು ತಾಂಜಾನಿಯಾದಲ್ಲಿರುವ ಭಾರತೀಯ ಹೈಕಮಿಷನ್ ಗೌರವಿಸಿದೆ. ಇತ್ತೀಚೆಗೆ ಹೈಕಮಿಷನ್ ಕಚೇರಿಗೆ ವಿಶೇಷ ಅತಿಥಿ ಆಗಮಿಸಿದ್ದು, ಅವರನ್ನು ಹೃದಯಪೂರ್ವಕವಾಗಿ ಗೌರವಿಸಲಾಗಿದೆ ಎಂದು ಭಾರತೀಯ ರಾಜತಾಂತ್ರಿಕ ಅಧಿಕಾರಿ ಬಿನಯ ಪ್ರಧಾನ್ ಟ್ವೀಟ್ ಮಾಡಿದ್ದಾರೆ.
ತಮ್ಮದೇ ಆದ ಸಾಂಪ್ರದಾಯಿಕ ವಸ್ತ್ರವನ್ನು ತೊಟ್ಟು ವಿಡಿಯೋಗಳನ್ನು ಮಾಡುವ ಕಿಲಿ ಪೌಲ್ ಅವರು ಇನ್‌ಸ್ಟಾಗ್ರಾಂನಲ್ಲಿ 20 ಲಕ್ಷ ಚಂದಾದಾರರನ್ನು ಹೊಂದಿದ್ದಾರೆ. ಇವರನ್ನು ಆಯುಷ್ಮಾನ್ ಖುರಾನಾ, ಗುಲ್ ಪನಾಗ್, ರಿಚಾ ಛಡಾ ಸೇರಿದಂತೆ ಹಲವು ತಾರೆಯರೂ ಫಾಲೋ ಮಾಡುತ್ತಿದ್ದಾರೆ.
Today had a special visitor at the @IndiainTanzania ; famous Tanzanian artist Kili Paul has won millions of hearts in India for his videos lip-syncing to popular Indian film songs #IndiaTanzania pic.twitter.com/CuTdvqcpsb
— Binaya Pradhan (@binaysrikant76) February 21, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ
ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ
Sheesh Mahal Row: ಶೀಶ್‌ಮಹಲ್ ವರ್ಸಸ್ ರಾಜ್ ಮಹಲ್: ದಿಲ್ಲೀಲಿ ಬಿಜೆಪಿ, ಆಪ್ ಹೈಡ್ರಾಮ
Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ
Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್ ಪ್ರಧಾನ ಕಚೇರಿ ಸ್ಥಳಾಂತರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.