ಮಾರ್ಚ್‌ನಿಂದ 4 ಲಕ್ಷ ಕೇಂದ್ರಗಳಲ್ಲಿ ಸ್ಪರ್ಶ್ ಸೇವೆ ಲಭ್ಯ
ನಿವೃತ್ತ ಯೋಧರಿಗೆ ಸುಲಭವಾಗಿ ಪಿಂಚಣಿ ಪಡೆಯುವ ವ್ಯವಸ್ಥೆ
Team Udayavani, Feb 23, 2022, 6:25 AM IST
ನವದೆಹಲಿ: ದೇಶದ ಮಾಜಿ ಸೈನಿಕರಿಗೆ ಪಿಂಚಣಿ ಸಂಬಂಧಿ ಆನ್‌ಲೈನ್ ಸೇವೆಗಳನ್ನು ಒದಗಿಸುವ “ಸ್ಪರ್ಶ್’ ಪೋರ್ಟಲ್‌ನ ಸೇವೆಯು ಸದ್ಯದಲ್ಲೇ ದೇಶಾದ್ಯಂತ 4 ಲಕ್ಷ ಕೇಂದ್ರಗಳಲ್ಲಿ ಲಭ್ಯವಾಗಲಿದೆ.
ಡಿಜಿಟಲ್ ಇಂಡಿಯಾ ಯೋಜನೆಯಡಿ ಕೇಂದ್ರ ಸರ್ಕಾರದ ರಕ್ಷಣಾ ಲೆಕ್ಕಪತ್ರ ಇಲಾಖೆ(ಡಿಎಡಿ)ಯು ಕಳೆದ ವರ್ಷದ ಸೆಪ್ಟೆಂಬರ್‌ನಲ್ಲೇ ಈ ಸೇವೆಯನ್ನು ಆರಂಭಿಸಿದೆ.
ಈಗ ಸಿಎಸ್‌ಇ ಇ-ಗವರ್ನೆನ್ಸ್ ಸರ್ವಿಸಸ್ ಇಂಡಿಯಾ ಲಿ.ನೊಂದಿಗೆ ಇದೇ 24ರಂದು ರಕ್ಷಣಾ ಲೆಕ್ಕಪತ್ರ ಇಲಾಖೆಯು ಒಪ್ಪಂದವೊಂದಕ್ಕೆ ಸಹಿ ಹಾಕಲಿದ್ದು, ಮಾರ್ಚ್‌ನಿಂದಲೇ 4 ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಸ್ಪರ್ಶ್ ಸೇವೆಗಳು ಲಭ್ಯವಾಗುವಂತೆ ಮಾಡಲಿದೆ.
ಇದರಿಂದಾಗಿ ದುರ್ಗಮ ಪ್ರದೇಶಗಳಲ್ಲಿ ನೆಲೆಸಿರುವ, ಕನೆಕ್ಟಿವಿಟಿ ಸಮಸ್ಯೆಯಿರುವಂಥ ಮಾಜಿ ಯೋಧರಿಗೆ ಹಾಗೂ ಅವರ ಕುಟುಂಬ ಸದಸ್ಯರಿಗೆ ಪಿಂಚಣಿ ಪಡೆಯಲು ಸುಲಭವಾಗಲಿದೆ.
6 ತಿಂಗಳಲ್ಲಿ ಎಲ್ಲರಿಗೂ ಆನ್‌ಲೈನ್ ಪಿಂಚಣಿ:
ಯಾವುದೇ ಮಧ್ಯಂತರ ಸಂಸ್ಥೆಯನ್ನು (ಬ್ಯಾಂಕ್) ಅವಲಂಬಿಸದೇ ನೇರವಾಗಿ ನಿವೃತ್ತ ಯೋಧರ ಖಾತೆಗಳಿಗೆ ಪಿಂಚಣಿ ಮೊತ್ತವನ್ನು ಜಮೆ ಮಾಡುವ ಕೆಲಸವನ್ನು ಸ್ಪರ್ಶ ಅಥವಾ ಪಿಂಚಣಿ ಆಡಳಿತ ವ್ಯವಸ್ಥೆ(ರಕ್ಷಾ) ಮಾಡುತ್ತದೆ. ದೇಶದಲ್ಲಿ 33 ಲಕ್ಷ ರಕ್ಷಣಾ ಪಿಂಚಣಿದಾರರಿದ್ದಾರೆ. ಈ ಪೈಕಿ 5 ಲಕ್ಷದಷ್ಟು ಮಂದಿ ಈ ಹೊಸ ವ್ಯವಸ್ಥೆಗೆ ಬದಲಾಗಿದ್ದಾರೆ. ಮುಂದಿನ 6 ತಿಂಗಳಲ್ಲಿ ಎಲ್ಲರೂ ಸ್ಪರ್ಶ್ ಪೋರ್ಟಲ್ ಬಳಕೆ ಆರಂಭಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸರ್ಕಾರಕ್ಕೂ ಉಳಿತಾಯ:
ಪಿಂಚಣಿದಾರರೆಲ್ಲರೂ ಆನ್‌ಲೈನ್ ವ್ಯವಸ್ಥೆಗೆ ಬದಲಾದರೆ, ಕೇಂದ್ರ ಸರ್ಕಾರವು ಪ್ರತಿ ತಿಂಗಳು ಬ್ಯಾಂಕುಗಳಿಗೆ ಪಿಂಚಣಿ ಪ್ರೊಸೆಸಿಂಗ್ ಶುಲ್ಕ ಪಾವತಿಸಬೇಕಾದ ಅವಶ್ಯಕತೆ ಇರುವುದಿಲ್ಲ. ಹೀಗಾಗಿ, ಸರ್ಕಾರಕ್ಕೆ ವಾರ್ಷಿಕ 250 ಕೋಟಿ ರೂ. ಉಳಿತಾಯವಾಗಲಿದೆ. ಪ್ರಸ್ತುತ ದೇಶದಲ್ಲಿ 800ರಷ್ಟು ಸ್ಪರ್ಶ್ ಸೇವಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
MUST WATCH
ಹೊಸ ಸೇರ್ಪಡೆ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.