ರಾಜ್ಯ ಮಟ್ಟದ ಸಂದೇಶ ಪ್ರಶಸ್ತಿ ಪ್ರದಾನ: 14 ಸಾಧಕರು, ಒಂದು ಸಂಘಟನೆ, ಪತ್ರಿಕೆಗೆ ಪ್ರಶಸ್ತಿ


Team Udayavani, Feb 23, 2022, 5:16 AM IST

ರಾಜ್ಯ ಮಟ್ಟದ ಸಂದೇಶ ಪ್ರಶಸ್ತಿ ಪ್ರದಾನ: 14 ಸಾಧಕರು, ಒಂದು ಸಂಘಟನೆ, ಪತ್ರಿಕೆಗೆ ಪ್ರಶಸ್ತಿ

ಮಂಗಳೂರು: ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನವು ಸಾಹಿತ್ಯ, ಶಿಕ್ಷಣ, ಮಾಧ್ಯಮ, ಕಲೆ ಹಾಗೂ ಸಂಗೀತ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿ ಹಾಗೂ ಸಂಘಟನೆಗಳಿಗೆ ನೀಡುವ ವಾರ್ಷಿಕ 2020-21ನೇ ಮತ್ತು 2021-22ನೇ ಸಾಲಿನ ರಾಜ್ಯ ಮಟ್ಟದ ಸಂದೇಶ ಪ್ರಶಸ್ತಿಯನ್ನು 14 ಸಾಧಕರು, 1 ಸಂಘಟನೆ ಹಾಗೂ 1 ಪತ್ರಿಕೆಗೆ ಮಂಗಳವಾರ ಬಜೊjàಡಿ ಪ್ರೇಮ ನಗರದಲ್ಲಿರುವ ಸಂಸ್ಥೆಯಲ್ಲಿ ಪ್ರದಾನ ಮಾಡಲಾಯಿತು.

2021ನೇ ಸಾಲಿನ ಸಾಹಿತ್ಯ ಪ್ರಶಸ್ತಿ (ಕೊಂಕಣಿ)- ಅಮರ್‌ ಕೊಂಕಣಿ (ಸಂಪಾದಕ ಮೆಲ್ವಿನ್‌ ಪಿಂಟೊ), ಸಾಹಿತ್ಯ ಪ್ರಶಸ್ತಿ (ತುಳು)- ಡಾ| ಸುನಿತಾ ಎಂ. ಶೆಟ್ಟಿ (ಅವರ ಪರವಾಗಿ ವತ್ಸಲಾರಿಂದ ಸ್ವೀಕಾರ), ಸಂದೇಶ ಮಾಧ್ಯಮ ಪ್ರಶಸ್ತಿ- ನಾಗೇಶ ಹೆಗಡೆ (ಉತ್ತರ ಕನ್ನಡ), ಕೊಂಕಣಿ ಸಂಗೀತ ಪ್ರಶಸ್ತಿ- ಮೀನ ರೆಬಿಂಬಸ್‌ (ದಕ್ಷಿಣ ಕನ್ನಡ), ಕಲಾ ಪ್ರಶಸ್ತಿ- ಅವಿತಾಸ್‌  ಕುಟಿನ್ಹಾ (ದಕ್ಷಿಣ ಕನ್ನಡ), ಶಿಕ್ಷಣ ಪ್ರಶಸ್ತಿ- ಡಾ| ಲಕ್ಷ ¾ಣ್‌ ಸಾಬ್‌ ಚೌರಿ (ಬಾಗಲಕೋಟೆ), ವಿಶೇಷ ಪ್ರಶಸ್ತಿ- ಸಮರ್ಥನಂ ಟ್ರಸ್ಟ್ ನ ಮಹಾಂತೇಶ್‌ ಜಿ. ಕಿವುಡಸಣ್ಣವರ್‌ ಅವರಿಗೆ ನೀಡಲಾಯಿತು.

2022ನೇ ಸಾಲಿನ ಸಂದೇಶ ಸಾಹಿತ್ಯ ಪ್ರಶಸ್ತಿ (ಕೊಂಕಣಿ)ಯನ್ನು ಮೆಲ್ವಿನ್‌ ರಾಡ್ರಿಗಸ್‌ (ದ.ಕ.), ಸಾಹಿತ್ಯ ಪ್ರಶಸ್ತಿ (ತುಳು)- ಬಿ.ಕೆ. ಗಂಗಾಧರ ಕಿರೋಡಿಯನ್‌ (ದ.ಕ.), ಸಂದೇಶ ಮಾಧ್ಯಮ ಪ್ರಶಸ್ತಿ- ಡಾ| ಟಿ.ಸಿ. ಪೂರ್ಣಿಮಾ (ಬೆಂಗಳೂರು), ಕೊಂಕಣಿ ಸಂಗೀತ ಪ್ರಶಸ್ತಿ- ಆಲ್ವಿನ್‌ ನೊರೊನ್ಹಾ (ದ.ಕ.), ಕಲಾ ಪ್ರಶಸ್ತಿ- ಕಾಸರಗೋಡು ಚಿನ್ನಾ (ಕಾಸರಗೋಡು), ಶಿಕ್ಷಣ ಪ್ರಶಸ್ತಿ- ಡಾ| ಪಿ.ಕೆ. ರಾಜಶೇಖರ್‌ (ಮೈಸೂರು), ವಿಶೇಷ ಪ್ರಶಸ್ತಿ- ಸ. ರಘುನಾಥ್‌ (ಚಿಕ್ಕಬಳ್ಳಾಪುರ) ಅವರಿಗೆ ಪ್ರದಾನ ಮಾಡಲಾಯಿತು. ಸಾಹಿತ್ಯ ಪ್ರಶಸ್ತಿ(ಕನ್ನಡ)ಗೆ ಆಯ್ಕೆಯಾದ ಬರಗೂರು ರಾಮಚಂದ್ರಪ್ಪ ಹಾಗೂ ರಹಮತ್‌ ತರೀಕೆರೆ ಕಾರಣಾಂತರಗಳಿಂದ ಗೈರಾಗಿದ್ದರು.

ಸರ್ವರೂ ಒಂದಾಗುವುದೇ ಶ್ರೀಮಂತಿಕೆ: ಬಿಷಪ್‌
ಪ್ರಶಸ್ತಿ ಪ್ರದಾನಿಸಿದ ಮಂಗಳೂರು ಧರ್ಮ ಪ್ರಾಂತದ ಬಿಷಪ್‌ ರೈ| ರೆ| ಡಾ| ಪೀಟರ್‌  ಪಾವ್ಲ್  ಸಲ್ಡಾನ್ಹ ಮಾತನಾಡಿ, ಸಮಾಜದ ಸರ್ವರೂ ಒಂದಾಗುವುದೇ ಬಹುದೊಡ್ಡ ಶ್ರೀಮಂತಿಕೆ. ಪ್ರತಿಯೊಬ್ಬರೂ ದೇವರು ನೀಡಿದ ಅವಕಾಶ ಗಳನ್ನು ಸದುಪಯೋಗ ಮಾಡಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ತಿಳಿಸಿದರು.

ಮಂಗಳೂರು ವಿವಿ ಕುಲಪತಿ ಪ್ರೊ| ಪಿ.ಎಸ್‌. ಯಡಪಡಿತ್ತಾಯ ಶುಭ ಹಾರೈಸಿದರು. ಬಳ್ಳಾರಿ ಧರ್ಮಾಧ್ಯಕ್ಷ ರೈ| ರೆ| ಡಾ| ಹೆನ್ರಿ ಡಿ’ಸೋಜಾ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂದೇಶ ಪ್ರತಿಷ್ಠಾನದ ನಿರ್ದೇಶಕ ವಂ| ಫ್ರಾನ್ಸಿಸ್‌ ಅಸ್ಸಿಸಿ ಅಲ್ಮೇಡಾ, ಸಂದೇಶ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಡಾ| ವಲೇರಿಯನ್‌ ರಾಡ್ರಿಗಸ್‌, ಪ್ರತಿಷ್ಠಾನದ ವಿಶ್ವಸ್ತರಾದ ರೊಯ್‌ ಕ್ಯಾಸ್ತಲಿನೊ, ಐವನ್‌ ಪಿಂಟೊ ಮೊದಲಾದವರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ

CM-Office

By Election Result: ನಾನು ದಂತದ ಗೋಪುರದಲ್ಲಿ ಕೂತವನಲ್ಲ,ಜನರೊಂದಿಗೆ ಸದಾ ಒಡನಾಟವಿದೆ: ಸಿಎಂ

1-ree

Maharashtra; ಪತಿಗೆ ಸೋಲು: ಮತಯಂತ್ರಗಳ ಕುರಿತು ಆಪಾದಿಸಿದ ನಟಿ ಸ್ವರಾ ಭಾಸ್ಕರ್

mamata

West Bengal bypolls; ಟಿಎಂಸಿ ಕ್ಲೀನ್ ಸ್ವೀಪ್: ಪ್ರತಿಭಟನೆಗಳು ಬಿಜೆಪಿಗೆ ಸಹಕಾರಿಯಾಗಲಿಲ್ಲ

satish

ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್‌ ಜಾರಕಿಹೊಳಿ

55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್‌ – ಮನರಂಜನೆಗೆ ಹೊಸ ಆಯಾಮ

55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್‌ – ಮನರಂಜನೆಗೆ ಹೊಸ ಆಯಾಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrest

Ullala: ತ್ರಿವಳಿ ತಲಾಖ್‌ ಪ್ರಕರಣ: ಆರೋಪಿಯ ಸೆರೆ

Ullala-Balepuni

Ullala: 3ರ ಬಾಲಕಿಗೆ 70ರ ವೃದ್ಧನಿಂದ ಲೈಂಗಿಕ ಕಿರುಕುಳ

Kishor-Kodgi-Campco

Mangaluru: ಅಡಿಕೆ ಕ್ಯಾನ್ಸರ್‌ ಕಾರಕ ಎಂಬ ಡಬ್ಲ್ಯುಎಚ್‌ಒ ವಾದಕ್ಕೆ ಕ್ಯಾಂಪ್ಕೊ ಆಕ್ಷೇಪ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ

7

Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು

Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ

Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ

Katpadi: ಸ್ಕೂಟರ್‌ಗೆ ಟೆಂಪೋ ಢಿಕ್ಕಿ 

Katpadi: ಸ್ಕೂಟರ್‌ಗೆ ಟೆಂಪೋ ಢಿಕ್ಕಿ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.