ಯುದ್ಧಕ್ಕೆ ಮುನ್ನುಡಿ; ಉಕ್ರೇನ್‌ನ ಎರಡು ಭಾಗ “ಸ್ವತಂತ್ರ’ವೆಂದು ಘೋಷಿಸಿದ ರಷ್ಯಾ

ಹಲವು ದೇಶಗಳಿಂದ ದಿಗ್ಬಂಧನ; ದಾಳಿಯ ಅಧಿಕಾರ ಪುತಿನ್‌ಗೆ

Team Udayavani, Feb 23, 2022, 7:00 AM IST

ಯುದ್ಧಕ್ಕೆ ಮುನ್ನುಡಿ; ಉಕ್ರೇನ್‌ನ ಎರಡು ಭಾಗ “ಸ್ವತಂತ್ರ’ವೆಂದು ಘೋಷಿಸಿದ ರಷ್ಯಾ

ಯುದ್ಧಭೀತಿಯಿಂದಾಗಿ ಉಕ್ರೇನ್‌ ಪ್ರಜೆಗಳು ಸುರಕ್ಷಿತ ಸ್ಥಳಕ್ಕೆ ಧಾವಿಸುತ್ತಿದ್ದಾರೆ.

ಮಾಸ್ಕೋ/ಕೀವ್‌: ಉಕ್ರೇನ್‌ ಮತ್ತು ರಷ್ಯಾ ನಡುವಿನ ಯುದ್ಧೋನ್ಮಾದ ತಣ್ಣಗಾಗ ಬಹುದು ಎಂಬ ಜಗತ್ತಿನ ಭಾವನೆ ಸುಳ್ಳಾಗಿದೆ. ಎರಡೂ ದೇಶಗಳ ನಡುವೆ ದೊಡ್ಡ ಮಟ್ಟದ ಸಂಘರ್ಷಕ್ಕೆ ರಷ್ಯಾ ಮುನ್ನುಡಿ ಬರೆದಿದೆ.

ಉಕ್ರೇನ್‌ ಮೇಲೆ ಆಕ್ರಮಣಗೈಯ್ಯಲು ತುದಿಗಾಲಲ್ಲಿ ನಿಂತಿದ್ದ ರಷ್ಯಾ ಸೋಮವಾರ ರಾತೋರಾತ್ರಿ ಆ ದೇಶದ 2 ಪ್ರದೇಶಗಳನ್ನು “ಸ್ವತಂತ್ರ’ ಎಂದು ಘೋಷಿಸುವ ಮೂಲಕ ಪರಿಸ್ಥಿತಿಯನ್ನು ಮತ್ತಷ್ಟು ಉದ್ವಿಗ್ನಗೊಳಿಸಿದೆ. ಅಷ್ಟೇ ಅಲ್ಲ, ಸ್ವತಂತ್ರವೆಂದು ಘೋಷಿಸಲಾದ ದೊನೆಸ್ಕ್ ಮತ್ತು ಲುಹಾನ್ಸ್ಕ್ ಪ್ರದೇಶಗಳಿಗೆ ನುಗ್ಗುವಂತೆ ತನ್ನ ಪಡೆ ಗಳಿಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌ ಆದೇಶಿಸಿ ದ್ದಾರೆ. ಅದರಂತೆ ರಷ್ಯಾದ ಸೇನೆಯು ಉಕ್ರೇನ್‌ನತ್ತ ನುಗ್ಗಿದೆ.
ಪುತಿನ್‌ ನಡೆಗೆ ಜಗತ್ತಿ ನಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸೋಮವಾರ ರಾತ್ರಿ ವಿಶ್ವಸಂಸ್ಥೆಯ ಭದ್ರತ ಮಂಡಳಿ ತುರ್ತು ಸಭೆ ನಡೆಸಿ ಉಕ್ರೇನ್‌ನ ಪ್ರಾದೇಶಿಕ ಸಾರ್ವ ಭೌಮತೆಯನ್ನು ಉಲ್ಲಂಘಿಸಿರುವ ರಷ್ಯಾದ ನಡೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದೆ.

ಪುತಿನ್‌ಗೆ ಪೂರ್ಣ ಅಧಿಕಾರ
ಉಕ್ರೇನ್‌ ಮೇಲೆ ದಾಳಿ ನಡೆಸುವ ನಿರ್ಣಯ ಕೈಗೊಳ್ಳಲು ಸಂಪೂರ್ಣ ಅಧಿಕಾರವನ್ನು ಅಧ್ಯಕ್ಷ ಪುತಿನ್‌ಗೆ ಸಂಸತ್ತು ನೀಡಿದ್ದು, ಯುದ್ಧಕ್ಕೆ ಮತ್ತಷ್ಟು ಸನಿಹವಾದಂತಾಗಿದೆ.

ದಿಗ್ಬಂಧನದ ಬಿಸಿ
ಮಂಗಳವಾರ ಪಾಶ್ಚಾತ್ಯ ರಾಷ್ಟ್ರಗಳು ಒಂದೊಂದಾಗಿ ರಷ್ಯಾಗೆ ಆರ್ಥಿಕ ದಿಗ್ಬಂಧನದ ಬಿಸಿ ಮುಟ್ಟಿಸಲು ಆರಂಭಿಸಿವೆ. ರಷ್ಯಾದ ನಡೆಯು ಅಂತಾರಾಷ್ಟ್ರೀಯ ಬದ್ಧತೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ನಾವು ಈ ಸ್ಥಿತಿಯನ್ನು ನಿರೀಕ್ಷಿಸಿದ್ದೆವು. ಅದಕ್ಕೆ ತಕ್ಕ ಪ್ರತ್ಯುತ್ತರವನ್ನೂ ಸದ್ಯದಲ್ಲೇ ನೀಡಲಿದ್ದೇವೆ. ರಷ್ಯಾ ವಿರುದ್ಧ ಆರ್ಥಿಕ ದಿಗ್ಬಂಧನ ಹೇರಲು ಚಿಂತನೆ ನಡೆಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಬೈಡೆನ್‌ ಹೇಳಿದ್ದಾರೆ. ಜತೆಗೆ ದೊನೆಸ್ಕ್ ಮತ್ತು ಲುಹಾನ್ಸ್ಕ್ ಪ್ರದೇಶಗಳಲ್ಲಿ ವ್ಯಾಪಾರ, ಹೂಡಿಕೆಗೆ ನಿರ್ಬಂಧ ಹೇರಿದ ಕಾರ್ಯಾದೇಶಕ್ಕೆ ಸಹಿ ಹಾಕಿದ್ದಾರೆ. ಇದರ ಬೆನ್ನಲ್ಲೇ ಇಂಗ್ಲೆಂಡ್‌, ಜರ್ಮನಿ ಕೂಡ ರಷ್ಯಾ ವಿರುದ್ಧ ನಿರ್ಬಂಧ ಹೇರಿವೆ.

ಯುದ್ಧ ತೀವ್ರಗೊಂಡರೆ, ಭಾರೀ ಪ್ರಮಾಣದ ಸಾವು-ನೋವು, ಇಂಧನ ಕೊರತೆ, ಜಾಗತಿಕ ಅರ್ಥವ್ಯವಸ್ಥೆಗೆ ದೊಡ್ಡ ಹೊಡೆತ ಬೀಳುವ ಆತಂಕ ಎದುರಾಗಿದೆ.

ನಾವು ಬಲಿಷ್ಠರಾಗಬೇಕು: ಮೋದಿ
ಉತ್ತರಪ್ರದೇಶದ ಬಹ್ರೈಚ್‌ನಲ್ಲಿ ಮಂಗಳವಾರ ಚುನಾವಣ ರ್‍ಯಾಲಿ ನಡೆಸಿದ ಪ್ರಧಾನಿ ಮೋದಿ ಅವರು ಉಕ್ರೇನ್‌-ರಷ್ಯಾ ಬಿಕ್ಕಟ್ಟನ್ನು ಪ್ರಸ್ತಾವಿಸಿದ್ದಾರೆ. ಜಗತ್ತು ಈಗ ಪ್ರಕ್ಷುಬ್ಧವಾಗಿದೆ. ಬೇರೆ ಬೇರೆ ದೇಶಗಳಲ್ಲಿ ಏನೇನಾಗುತ್ತಿದೆ ಎಂಬುದನ್ನು ನೀವು ನೋಡುತ್ತಿರಬಹುದು. ಇಂತಹ ಸ್ಥಿತಿಯಲ್ಲಿ, ಭಾರತವು ತನಗಾಗಿ ಮತ್ತು ಇಡೀ ಮನುಕುಲಕ್ಕಾಗಿ ಬಲಿಷ್ಠವಾಗಬೇಕಾದ ಅಗತ್ಯವಿದೆ. ನೀವು ನೀಡುವ ಒಂದೊಂದು ಮತವೂ ಭಾರತವನ್ನು ಬಲಿಷ್ಠಗೊಳಿಸಲಿದೆ ಎಂದು ಮೋದಿ ಹೇಳಿದ್ದಾರೆ.

ದಿಗ್ಬಂಧನದ ಸರದಿ
-ರಷ್ಯಾದಿಂದ ಸ್ವತಂತ್ರಗೊಂಡ ಉಕ್ರೇನ್‌ನ ಭಾಗಗಳಲ್ಲಿ ವ್ಯಾಪಾರ, ಹೂಡಿಕೆಗೆ ನಿರ್ಬಂಧ ಹೇರಿದ ಕಾರ್ಯಾದೇಶಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಸಹಿ
-ರಷ್ಯಾದ 5 ಬ್ಯಾಂಕ್‌ಗಳು ಮತ್ತು 3 ಶ್ರೀಮಂತ ವ್ಯಕ್ತಿಗಳ ವಿರುದ್ಧ ಮೊದಲ ಸುತ್ತಿನ ಆರ್ಥಿಕ ದಿಗ್ಬಂಧನ ಹೇರಿದ ಇಂಗ್ಲೆಂಡ್‌
-ರಷ್ಯಾ ಮತ್ತು ಜರ್ಮನಿಯನ್ನು ಸಂಪರ್ಕಿ ಸುವ ನಾರ್ಡ್‌ ಸ್ಟ್ರೀಮ್‌ 2 ಎಂಬ 750 ಮೈಲು ಉದ್ದದ ಪೈಪ್‌ ಲೈನ್‌ಗೆ ಪ್ರಮಾಣೀಕರಣ ನೀಡುವು ದಿಲ್ಲ ಎಂದು ಜರ್ಮನಿ ಘೋಷಣೆ

ರಷ್ಯಾ-ಉಕ್ರೇನ್‌ ತಮ್ಮ ನಡುವಣ ಬಿಕ್ಕಟ್ಟನ್ನು ಮಾತುಕತೆ ಮೂಲಕವೇ ಬಗೆಹರಿಸಿ ಕೊಳ್ಳಬೇಕು. ಭಾರತವು ಯಾವತ್ತೂ ಶಾಂತಿಯನ್ನೇ ಬಯಸುತ್ತದೆ.
– ರಾಜನಾಥ್‌ ಸಿಂಗ್‌,
ರಕ್ಷಣ ಸಚಿವ

ಶಾಂತಿ ಸ್ಥಾಪಿಸುವ ಪ್ರಯತ್ನವೆಲ್ಲವನ್ನೂ ರಷ್ಯಾ ನಾಶಪಡಿಸಿತು. ಹಾಗೆಂದು ನಾವು ಯಾರಿಗೂ ಯಾವು ದಕ್ಕೂ ಹೆದರುವುದಿಲ್ಲ. ನಾವು ಯಾರಿಗೂ ಏನನ್ನೂ ಬಾಕಿಯೂ ಉಳಿಸಿಕೊಂಡಿಲ್ಲ. ನಾವು ನಮ್ಮ ನೆಲವನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ.
– ವೋಲ್ಡಿಮಿರ್‌ ಝೆಲೆನ್‌ಸ್ಕಿ,
ಉಕ್ರೇನ್‌ ಅಧ್ಯಕ್ಷ

ಟಾಪ್ ನ್ಯೂಸ್

ರಾಂಗ್ ರೂಟ್ ನಲ್ಲಿ ಬಂದ ಕಾರಿಗೆ ಬೈಕ್ ಡಿಕ್ಕಿ… ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

ರಾಂಗ್ ರೂಟ್ ನಲ್ಲಿ ಬಂದ ಕಾರಿಗೆ ಬೈಕ್ ಡಿಕ್ಕಿ… ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

Supreme court ಯೂಟ್ಯೂಬ್‌ ಲೈವ್‌ ಸ್ಟ್ರೀಮ್‌ ಚಾನೆಲ್‌ ಹ್ಯಾಕ್…ಕ್ರಿಪ್ಟೋ ವಿಡಿಯೋ ಪೋಸ್ಟ್!

Supreme court ಯೂಟ್ಯೂಬ್‌ ಲೈವ್‌ ಸ್ಟ್ರೀಮ್‌ ಚಾನೆಲ್‌ ಹ್ಯಾಕ್…ಕ್ರಿಪ್ಟೋ ವಿಡಿಯೋ ಪೋಸ್ಟ್!

CM Siddaramaiah slams BJP about Ganeshotsav riot

Mysuru; ಬಿಜೆಪಿಯವರ ಕುಮ್ಮಕ್ಕಿನಿಂದಲೇ ರಾಜ್ಯದಲ್ಲಿ ಗಲಾಟೆ: ಸಿಎಂ ಸಿದ್ದರಾಮಯ್ಯ ಆರೋಪ

ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ

Mysuru Dasara 2024: ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ

ಶಸ್ತ್ರಾಸ್ರ ತ್ಯಜಿಸಿ ಕೂಡಲೇ ಶರಣಾಗಿ… ನಕ್ಸಲರಿಗೆ ಕೇಂದ್ರ ಸಚಿವ ಅಮಿತ್ ಶಾ ಮನವಿ

Surrender Arms: ಶಸ್ತ್ರಾಸ್ತ್ರ ತ್ಯಜಿಸಿ ಕೂಡಲೇ ಶರಣಾಗಿ… ನಕ್ಸಲರಿಗೆ ಅಮಿತ್ ಶಾ ಮನವಿ

Supreme Court slams Karnataka High Court judge for Pakistan statement

Karnataka HC: ಪಾಕಿಸ್ತಾನ ಹೇಳಿಕೆ ನೀಡಿದ ಹೈಕೋರ್ಟ್‌ ಜಡ್ಜ್‌ ಗೆ ಸುಪ್ರೀಂ ಕೋರ್ಟ್ ತರಾಟೆ

NS2

Stock Market: ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಏರಿಕೆ, ನಿಫ್ಟಿ ಜಿಗಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Labanon: ಲೆಬನಾನ್‌ ಪ್ರಯಾಣಿಕರು ಪೇಜರ್ಸ್‌, ವಾಕಿಟಾಕಿ ಒಯ್ಯುವಂತಿಲ್ಲ: ಕತಾರ್‌ ಏರ್‌ ವೇಸ್

Labanon: ಲೆಬನಾನ್‌ ಪ್ರಯಾಣಿಕರು ಪೇಜರ್ಸ್‌, ವಾಕಿಟಾಕಿ ಒಯ್ಯುವಂತಿಲ್ಲ: ಕತಾರ್‌ ಏರ್‌ ವೇಸ್

ನಟಿಯಾಗುವ ಕನಸು ಕಂಡಿದ್ದ ದ್ರುವಿ ಪಟೇಲ್ ಗೆ ‘ಮಿಸ್ ಇಂಡಿಯಾ ವರ್ಲ್ಡ್‌ವೈಡ್ 2024’ ಕಿರೀಟ

ನಟಿಯಾಗುವ ಕನಸು ಕಂಡಿದ್ದ ಧ್ರುವಿ ಪಟೇಲ್ ಗೆ ‘Miss India Worldwide 2024’ ಕಿರೀಟ

Pannu Singh

Khalistani; ಭಾರತದ ವಿರುದ್ಧ ಅಮೆರಿಕ ಕೋರ್ಟ್‌ಗೆ ಪನ್ನು ದೂರು

Jammu and Kashmir:ಕಲಂ 370 ಪುನರ್‌ ಜಾರಿ-ಕಾಂಗ್ರೆಸ್‌, ಎನ್‌ ಸಿ ನಿಲುವಿಗೆ ಪಾಕ್‌ ಬೆಂಬಲ!

Jammu and Kashmir:ಕಲಂ 370 ಪುನರ್‌ ಜಾರಿ-ಕಾಂಗ್ರೆಸ್‌, ಎನ್‌ ಸಿ ನಿಲುವಿಗೆ ಪಾಕ್‌ ಬೆಂಬಲ!

Legal Bid: ಯುರೋಪಿನಲ್ಲಿ 13,000 ಕೋಟಿ ರೂ. ಕಾನೂನು ಸಮರ ಗೆದ್ದ ಗೂಗಲ್‌!

Legal Bid: ಯುರೋಪಿನಲ್ಲಿ 13,000 ಕೋಟಿ ರೂ. ಕಾನೂನು ಸಮರ ಗೆದ್ದ ಗೂಗಲ್‌!

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

ರಾಂಗ್ ರೂಟ್ ನಲ್ಲಿ ಬಂದ ಕಾರಿಗೆ ಬೈಕ್ ಡಿಕ್ಕಿ… ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

ರಾಂಗ್ ರೂಟ್ ನಲ್ಲಿ ಬಂದ ಕಾರಿಗೆ ಬೈಕ್ ಡಿಕ್ಕಿ… ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

Belve ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 108 ಆ್ಯಂಬುಲೆನ್ಸ್‌ ಬೇಕು

Belve ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 108 ಆ್ಯಂಬುಲೆನ್ಸ್‌ ಬೇಕು

ಕೊರಗ ಸಮುದಾಯದಿಂದ ಅಹೋರಾತ್ರಿ ಧರಣಿ

Mulki: ಕೊರಗ ಸಮುದಾಯದಿಂದ ಅಹೋರಾತ್ರಿ ಧರಣಿ

ಸಣ್ಣ-ಮಧ್ಯಮ ಕೈಗಾರಿಕೆಗೆ ಸಿಗಲಿ ಪ್ರೋತ್ಸಾಹ-ಸಂಸದ ಗೋವಿಂದ ಕಾರಜೋಳ

ಸಣ್ಣ-ಮಧ್ಯಮ ಕೈಗಾರಿಕೆಗೆ ಸಿಗಲಿ ಪ್ರೋತ್ಸಾಹ-ಸಂಸದ ಗೋವಿಂದ ಕಾರಜೋಳ

Supreme court ಯೂಟ್ಯೂಬ್‌ ಲೈವ್‌ ಸ್ಟ್ರೀಮ್‌ ಚಾನೆಲ್‌ ಹ್ಯಾಕ್…ಕ್ರಿಪ್ಟೋ ವಿಡಿಯೋ ಪೋಸ್ಟ್!

Supreme court ಯೂಟ್ಯೂಬ್‌ ಲೈವ್‌ ಸ್ಟ್ರೀಮ್‌ ಚಾನೆಲ್‌ ಹ್ಯಾಕ್…ಕ್ರಿಪ್ಟೋ ವಿಡಿಯೋ ಪೋಸ್ಟ್!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.