ಮಾಣಿಕನಹಳ್ಳಿಯಲ್ಲಿ ರಸ್ತೆ ದೂಳು ಮನೆಯೊಳಗೆ
Team Udayavani, Feb 23, 2022, 1:17 PM IST
ಕಿಕ್ಕೇರಿ: ಎತ್ತ ನೋಡಿದರೂ ಕಲ್ಲು ಗುಂಡು,ಕಿತ್ತು ಬಂದ ಕೆಮ್ಮಣ್ಣಿನ ದೂಳುಮಯ ರಸ್ತೆ. ಇದು ಹೋಬಳಿಯ ಮಾಣಿಕನಹಳ್ಳಿಯ ರಸ್ತೆಯ ದುರಾವಸ್ಥೆ.
ಹೋಬಳಿಯ ಗಡಿ ಭಾಗದ ಗ್ರಾಮಕ್ಕೆ ಯಾವುದೇ ಸಾರಿಗೆ ಸೌಲಭ್ಯಗಳಿಲ್ಲದೆ ಖಾಸಗಿ ವಾಹನಗಳು ಹೊರ ಪ್ರಯಾಣಕ್ಕೆ ಆಸರೆಯಾಗಿವೆ. ಗ್ರಾಮದಲ್ಲಿ ಒಂದೆರೆಡು ಕಡೆ ಒಳಚರಂಡಿ ವ್ಯವಸ್ಥೆ ಕಂಡರೆ, ಹಲವು ಕಡೆ ಇನ್ನೂ ಚರಂಡಿ ಸೌಭಾಗ್ಯ ಕಾಣದಾಗಿದೆ. ಎಲ್ಲ ಗ್ರಾಮಗಳಲ್ಲಿ ಬಹುತೇಕ ವಿವಿಧ ಯೋಜನೆಯಲ್ಲಿ ರಸ್ತೆ ನಿರ್ಮಾಣ ಕಂಡರೆ ಈ ಗ್ರಾಮದಲ್ಲಿ ರಸ್ತೆ ನವೀಕರಣ ಸೌಭಾಗ್ಯ ಕಾಣದಾಗಿದೆ.
ದೂಳು ಮನೆಯೊಳಗೆ: ಸಣ್ಣ ವಾಹನ ಗ್ರಾಮ ಪ್ರವೇಶಿಸಿದರೂ, ಗಾಳಿ ಬೀಸಿದರೂ ಸಾಕುರಸ್ತೆಯ ದೂಳು ಮನೆಯೊಳಗೆ ಎನ್ನುವಂತಾಗಿದ್ದು, ಗ್ರಾಮಸ್ಥರು ಸಹಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ. 500 ಜನಸಂಖ್ಯೆ ಇರುವಗ್ರಾಮದಲ್ಲಿ ಬಹುತೇಕ ಕೃಷಿ ಚಟುವಟಿಕೆಪ್ರಧಾನ ಕಸುಬು. ಜೊತೆಗೊಂದಿಷ್ಟು ಹೈನುಗಾರಿಕೆ ಇದೆ. ರಸ್ತೆ ತುಂಬಾ ಕಲ್ಲುಗುಂಡುಗಳೇ ಎದ್ದು ಕಾಣುತ್ತವೆ. ಅಲ್ಲಲ್ಲಿ ಮಂಡಿ ಉದ್ದ ಗುಂಡಿ, ಸಂಪೂರ್ಣ ಕೆಮ್ಮಣ್ಣು ರಸ್ತೆಯಲ್ಲಿದ್ದ ಜಲ್ಲಿಕಲ್ಲು ಕಿತ್ತು ಬಂದು ನಡೆದಾಡಲು ಕೂಡ ಕಷ್ಟದಂತಿದೆ.
ಮತ್ತಷ್ಟು ರೋಗ ಹರಡುವಿಕೆ: ರಸ್ತೆ ಕಾಂಕ್ರೀಟೀಕರಣ ಗೊಳಿಸುವುದಾಗಿಜನಪ್ರತಿನಿಧಿಗಳು ನೀಡುವ ಭರವಸೆಯೇಇಲ್ಲಿನ ಜನರಿಗೆ ಆಸೆಯ ಉತ್ತರವಾಗಿದೆ.ರಸ್ತೆಯ ತುಂಬಾ ಉಸುಕಿನ ಮಣ್ಣು, ಜಲ್ಲಿಕಲ್ಲು ತುಂಬಿದ್ದು ದ್ವಿಚಕ್ರ ವಾಹನಗಳು ಓಡಾಡಿದರೆಚಕ್ರಗಳು ಜಾರುವಂತಿದೆ. ದೂಳಿನಿಂದವಯೋವೃದ್ಧರಿಗೆ, ಮಕ್ಕಳಿಗೆ, ಕಾಯಿಲೆಯಿಂದ ಬಳಲುವವರಿಗೆ ಮತ್ತಷ್ಟು ರೋಗ ಹಬ್ಬುವಂತಾಗಿದೆ. ಹಿರಿಯರು, ಮಕ್ಕಳು ರಸ್ತೆಯಲ್ಲಿನ ಗುಂಡಿಯಲ್ಲಿ ಬಿದ್ದು ಏಳುವಂತಾಗಿದೆ.
ವಿಷಜಂತುಗಳು: ಗ್ರಾಮಕ್ಕೆ ಸಾರಿಗೆ ಸೌಲಭ್ಯವಿಲ್ಲದಿರುವಾಗ ಸಣ್ಣಪುಟ್ಟಅವಘಡಗಳು ಸಂಭವಿಸಿದಾಗ ಗ್ರಾಮದಹೊರ ಪ್ರದೇಶದಲ್ಲಿಯೇ ಆಟೋಗಳುನಿಲ್ಲುತ್ತಿವೆ. ರಾತ್ರಿ ವೇಳೆಯಲ್ಲಿ ಹಾವು,ಚೇಳಿನಂತಹ ವಿಷಜಂತುಗಳ ಉಪದ್ರವ ಹೇಳತೀರದಾಗಿದೆ.
ಇರುವ ಕಲ್ಲುಚಪ್ಪಡಿ ಚರಂಡಿ ತುಂಬಕಸಕಡ್ಡಿ, ಗಿಡಗಂಟಿ ಬೆಳೆದು ಮುಚ್ಚಿಹೋಗಿದೆ.ಹಗಲು ವೇಳೆಯಲ್ಲಿಯೇ ವಿಷಜಂತುಗಳುಕಾಣಿಸಿಕೊಳ್ಳುತ್ತಿದ್ದು, ಮಕ್ಕಳನ್ನು ಹೊರಗಡೆಬಿಡುವುದೇ ಕಷ್ಟವೆನ್ನುವುದು ಗ್ರಾಮಸ್ಥರ ಅಳಲಾಗಿದೆ.
ತ್ವರಿತವಾಗಿ 15ನೇ ಹಣಕಾಸುಯೋಜನೆಯಲ್ಲಿ ಗ್ರಾಮದ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು. ನರೇಗಾಯೋಜನೆಗೆ ಒತ್ತು ನೀಡಿದರೂ ರಸ್ತೆಕಾಮಗಾರಿಗೆ ಕೂಲಿ ವೆಚ್ಚಕ್ಕಿಂತಸಾಮಗ್ರಿ ವೆಚ್ಚವೇ ಅಧಿಕವಾಗಿದೆ.ಶೇ.80ರಷ್ಟು ಸಾಮಗ್ರಿ ವೆಚ್ಚವಿದ್ದು,ಶೇ.20 ರಷ್ಟು ಕೂಲಿ ವೆಚ್ಚವಿದ್ದು,ತ್ವರಿತವಾಗಿ ಗ್ರಾಮದ ರಸ್ತೆ ಅಭಿವೃದ್ಧಿಗೆ ಗಮನಹರಿಸಲಾಗುವುದು.– ಶಿವಕುಮಾರ್, ಪಿಡಿಒ, ಚೌಡೇನಹಳ್ಳಿ ಗ್ರಾಪಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.