ಪೊಲೀಸರಿಗೆ “ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್’ ಬಲ : ದಿನದ 24 ಗಂಟೆಯೂ ನಿಗಾ
Team Udayavani, Feb 23, 2022, 2:16 PM IST
ಮಹಾನಗರ : ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಟ್ಟು ಪೊಲೀಸರ ತನಿಖೆಗೆ ಪೂರಕ ಮಾಹಿತಿ ಒದಗಿಸುವ “ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್’ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕಾರ್ಯಾರಂಭಿಸಿದೆ.
ಈ ಘಟಕವು ದಿನದ 24 ತಾಸು ಕೂಡ ನಿರಂತರವಾಗಿ ಕಾರ್ಯನಿರ್ವಹಿಸಲಿದೆ. 6 ಮಂದಿ ತಂತ್ರಜ್ಞರು ಇಲ್ಲಿ ಕಾರ್ಯನಿರ್ವ ಹಿಸುತ್ತಾರೆ. ಈ ಘಟಕವು ಮಾನಿಟರಿಂಗ್, ಆರ್ಗನೈಜೇಶನ್, ಆನ್‌ಲೈನ್ ಮೀಡಿಯಾ, ಇಂಡ್ಯುಜುವಲ್, ಲಾ ಆ್ಯಂಡ್ ಆರ್ಡರ್ ಡೆಸ್ಕ್ಗಳನ್ನು ಒಳಗೊಂಡಿದೆ. ವಾಟ್ಸ್ ಆ್ಯಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವೆಬ್‌ಸೈಟ್, ಟೆಲಿಗ್ರಾಂ, ಆನ್‌ಲೈನ್ ಮೀಡಿಯಾ, ಪ್ರಿಂಟ್ ಮೀಡಿಯಾ, ವಿಶ್ಯುವಲ್ ಮೀಡಿಯಾ ಮೊದಲಾದವುಗಳ ಮೇಲೆ ಈ ಘಟಕವು ನಿರಂತರ ನಿಗಾ ಇಡುತ್ತದೆ.
ಸೈಬರ್ ಠಾಣೆಗಿಂತ ಭಿನ್ನ
ನಗರದ ಸೈಬರ್ ಅಪರಾಧಗಳ ಪೊಲೀಸ್ ಠಾಣೆ ಹಾಗೂ ಎಕನಾಮಿಕ್ ಆ್ಯಂಡ್ ನಾರ್ಕೊಟಿಕ್ ಅಪರಾಧ ಠಾಣೆ ಕೆಲವು ತಿಂಗಳ ಹಿಂದೆ ವಿಲೀನಗೊಂಡು ಸೆನ್ ಪೊಲೀಸ್ ಠಾಣೆಯಾಗಿ ಮೇಲ್ದರ್ಜೆ ಗೇರಿದೆ. ಈ ಠಾಣೆಯಲ್ಲಿ 2021ರಲ್ಲಿ 107, ಈ ವರ್ಷ ಫೆ.13ರ ವರೆಗೆ 9 ಸೈಬರ್ ಪ್ರಕರಣಗಳು ದಾಖಲಾಗಿವೆ. ಇದೀಗ “ಸೋಶಿಯಲ್ ಮೀಡಿಯಾ ಮಾನಿ ಟರಿಂಗ್ ಸೆಲ್’ ಆರಂಭಗೊಂಡಿದೆ. ಆದರೆ ಇವೆರಡೂ ಘಟಕಗಳು ಕೂಡ ಪ್ರತ್ಯೇಕವಾಗಿ ಕಾರ್ಯನಿರ್ವಹಿಸಲಿವೆ. ಸೆನ್ ಪೊಲೀಸ್ ಠಾಣೆ ಸೈಬರ್ ಅಪರಾಧ ಪ್ರಕರಣಗಳ ದಾಖಲು, ತನಿಖೆ ನಡೆಸಿದರೆ ಸೋಶಿಯಲ್ ಮೀಡಿಯಾ ಮಾನಿಟ ರಿಂಗ್ ಸೆಲ್ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಮೇಲೆ ನಿರಂತರ ನಿಗಾ ಇಟ್ಟು ಸಂಬಂಧಿಸಿದ ಪೊಲೀಸ್ ವಿಭಾಗಕ್ಕೆ ಮಾಹಿತಿ ರವಾನಿಸಲಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಇದನ್ನೂ ಓದಿ : ನೂರು ರೂಪಾಯಿಗೆ ಗಂಡ-ಹೆಂಡತಿ ಜಗಳ: ಹಲ್ಲೆಗೊಳಗಾದ ವ್ಯಕ್ತಿ ಸಾವು; ಆರೋಪಿ ಬಾವನ ಬಂಧನ
ಸಾವಿರಕ್ಕೂ ಅಧಿಕ ಖಾತೆಗಳ ಮಾನಿಟರಿಂಗ್
ಆರ್ಗನೈಜೇಶನ್ ಡೆಸ್ಕ್ ರಾಜಕೀಯ, ಧಾರ್ಮಿಕ, ಜಾತಿ, ಮಹಿಳಾ, ವಿದ್ಯಾರ್ಥಿ, ಕಾರ್ಮಿಕ ಮತ್ತು ಇತರ ಸಂಘಟನೆಗಳ ಮೇಲೆ ನಿಗಾ ಇಡಲಿದ್ದು ಪ್ರಸ್ತುತ 341 ರಾಜಕೀಯ, 234 ಧಾರ್ಮಿಕ, 87 ಜಾತಿ ಸಂಘಟನೆ, 20 ಮಹಿಳಾ ಸಂಘಟನೆ, 135 ವಿದ್ಯಾರ್ಥಿ ಸಂಘಟನೆ, 77 ಕಾರ್ಮಿಕ ಸಂಘಟನೆ, 170 ಇತರ ಸಂಘಟನೆಗಳಿಗೆ ಸೇರಿದ ಒಟ್ಟು 1,064 ಖಾತೆಗಳ ಮೇಲೆ ನಿಗಾ ಇಟ್ಟಿದೆ. ಆನ್‌ಲೈನ್ ಮೀಡಿಯಾ ಡೆಸ್ಕ್ 55 ಆನ್‌ಲೈನ್ ಮೀಡಿಯಾ ಪೋರ್ಟಲ್‌ಗಳು, 5 ಮೀಡಿಯಾ ಕ್ಲಬ್, 14 ಆನ್‌ಲೈನ್ ನ್ಯೂಸ್ ಚಾನೆಲ್, 65 ರೆಗ್ಯುಲರ್ ವೆಬ್‌ನ್ಯೂಸ್ ಚಾನೆಲ್‌ಗಳ 139 ಖಾತೆಗಳ ಮೇಲೆ ನಿಗಾ ಇರಿಸಿದೆ. ಇಂಡ್ಯುಜುವಲ್ ಡೆಸ್ಕ್ 58 ಸೈಬರ್ ಅಪರಾಧಿ, 115 ರಾಜಕೀಯ ಮುಖಂಡರು, 170 ಇತರರು ಸಹಿತ ಒಟ್ಟು 354 ಖಾತೆಗಳ ಮೇಲೆ ನಿಗಾ ಇರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಎಸ್‌ಟಿಪಿಗಳಲ್ಲಿ ಸಂಸ್ಕರಣೆ ಆಗದೆ ಕೊಳಚೆ ನೀರು ನೇರ ನದಿ, ಕೆರೆಗೆ!
Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್‌ವೆಲ್‌ಗೆ ಸೌರ ಪಂಪ್
Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!
ಉಮ್ರಾ ಯಾತ್ರೆಗೆ ತೆರಳಿ ವಂಚನೆ : ಸಂತ್ರಸ್ತರನ್ನು ಊರಿಗೆ ಕರೆಸಿಕೊಂಡ ಮೊಯ್ದಿನ್ ಬಾವ
ಜ.6- 9: ಜೋಕಟ್ಟೆ ಲೆವೆಲ್‌ಕ್ರಾಸ್ ಬಂದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Snuff: ನಶ್ಯ ತಂದಿಟ್ಟ ಸಮಸ್ಯೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.