ಮಲ್ಯ, ನೀರವ್, ಚೋಸ್ಕಿಯಿಂದ 18 ಸಾ. ಕೋ.ರೂ. ಸಾಲ ಪಾವತಿ
ಸುಪ್ರೀಂಗೆ ಕೇಂದ್ರ ಸರಕಾರದಿಂದ ಮಾಹಿತಿ
Team Udayavani, Feb 24, 2022, 7:05 AM IST
ಹೊಸದಿಲ್ಲಿ: ಬ್ಯಾಂಕುಗಳಲ್ಲಿ ಸಾವಿರಾರು ಕೋಟಿ ರೂ. ಸಾಲ ಮಾಡಿ ಮರುಪಾವತಿಸದೆ ದೇಶ ಬಿಟ್ಟು ಹೋಗಿರುವ ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಮೆಹುಲ್ ಚೋಸ್ಕಿ 18 ಸಾವಿರ ಕೋಟಿ ರೂ.ಗಳನ್ನು ಮರುಪಾವತಿಸಿದ್ದಾರೆ ಎಂದು ಕೇಂದ್ರ ಸರಕಾರ ಸುಪ್ರೀಂಕೋರ್ಟ್ಗೆ ತಿಳಿಸಿದೆ.
ಅಕ್ರಮ ಹಣ ವರ್ಗಾವಣೆ ಸಂಬಂಧ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದ್ದು, ಈ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಈ ಮಾಹಿತಿ ನೀಡಿದ್ದಾರೆ. ಸದ್ಯ ದೇಶದಲ್ಲಿ 4,700 ಅಕ್ರಮ ಹಣ ಸಾಗಾಣಿಕೆ ಪ್ರಕರಣಗಳಿದ್ದು, ಇವುಗಳಿಂದ 67 ಸಾವಿರ ಕೋಟಿ ರೂ. ಬರಬೇಕಿದೆ ಎಂದಿದ್ದಾರೆ.
ಅಕ್ರಮ ಹಣ ಸಾಗಾಟ ಕಾಯ್ದೆಯಡಿಯಲ್ಲಿ ಸದ್ಯ ಕೆಲವೇ ಕೆಲವು ಪ್ರಕರಣಗಳ ತನಿಖೆ ನಡೆಯುತ್ತಿದೆ. ಅಂದರೆ, ಸದ್ಯ ಭಾರತದಲ್ಲಿ 2,086 ಪ್ರಕರಣಗಳ ತನಿಖೆ ನಡೆಸಲಾಗುತ್ತಿದೆ. ಆದರೆ ಇಂಗ್ಲೆಂಡ್ನಲ್ಲಿ 7,900, ಅಮೆರಿಕದಲ್ಲಿ 1,532, ಚೀನದಲ್ಲಿ 4,691, ಆಸ್ಟ್ರಿಯಾದಲ್ಲಿ 1,036, ಹಾಂಗ್ಕಾಂಗ್ನಲ್ಲಿ 1,823, ಬೆಲ್ಜಿಯಂನಲ್ಲಿ 1,862, ರಷ್ಯಾದಲ್ಲಿ 2,764 ಪ್ರಕರಣಗಳನ್ನು ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಮೆಹ್ತಾ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್ಪೋಸ್ಟ್ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.