ರಿಯಲ್‌ ಎಸ್ಟೇಟ್‌ ವ್ಯವಹಾರಕ್ಕೆ ಅಡ್ಡಿ : ಇಂಟಿರಿಯರ್‌ ಡಿಸೈನರ್‌ ಸೆಂಟರ್‌ ಮಾಲೀಕನ ಅಪಹರಣ


Team Udayavani, Feb 24, 2022, 1:27 PM IST

ರಿಯಲ್‌ ಎಸ್ಟೇಟ್‌ ವ್ಯವಹಾರಕ್ಕೆ ಅಡ್ಡಿ : ಇಂಟಿರಿಯರ್‌ ಡಿಸೈನರ್‌ ಸೆಂಟರ್‌ ಮಾಲೀಕನ ಅಪಹರಣ

ಬೆಂಗಳೂರು: ರಿಯಲ್‌ ಎಸ್ಟೇಟ್‌ ವ್ಯವಹಾರಕ್ಕೆ ಅಡ್ಡಿಪಡಿಸುತ್ತಿದ್ದ ಎಂಬ ಕಾರಣಕ್ಕೆ ಇಂಟೀರಿಯರ್‌ ಡಿಸೈನರ್‌ ವರ್ಕ್‌ಶಾಪ್‌ ಮಾಲೀಕನನ್ನು ಅಪಹರಿಸಿದ್ದ ನಾಲ್ವರು ಅಪಹರಣಕಾರರು ಕಾಡುಗೊಂಡನಹಳ್ಳಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಕೆ.ಜಿ.ಹಳ್ಳಿಯ ಆರೋಕಿಯಮ್ಮ ಲೇಔಟ್‌ ನಿವಾಸಿ ಶೇಖ್‌ ಜಬಿವುಲ್ಲಾ (26), ರಾಚೇನಹಳ್ಳಿಯ ಸೈಯದ್‌ ಅಬ್ದುಲ್‌ ಅಜೀಂ(31),ಬಿ.ಎಂ.ಲೇಔಟ್‌ನ ಶಾಬಾಜ್‌(27), ಜಯನಗರದ ರಿಯಾಜ್‌ (27) ಬಂಧಿತರು. ಅವರಿಂದ ಅಪಹೃತ ರಿಚರ್ಡ್‌ಟೌನ್‌ ನಿವಾಸಿ ಸೈಯದ್‌ ಅಹ್ಮದ್‌ ಅವರನ್ನು ರಕ್ಷಿಸಲಾಗಿದೆ. ಜತೆಗೆ ಕೃತ್ಯಕ್ಕೆ ಬಳಸಿದ್ದ ಬಿಎಂಡಬ್ಲೂé ಕಾರು ಹಾಗೂ ಐದು ಮೊಬೈಲ್‌ ಪೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಪ್ರಕರಣದ ಮಾಸ್ಟರ್‌ ಮೈಂಡ್‌ ರಿಯಲ್‌ ಎಸ್ಟೇಟ್‌ ಏಜೆಂಟ್‌ ಅಸ್ಲಾಂ ಅಲಿ ಯಾಸ್‌ ಕಲಾಕಾರ್‌ ಅಸ್ಲಾಂ ತಲೆಮರೆಸಿಕೊಂಡಿದ್ದಾನೆ. ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು  ಹೇಳಿದರು. ಅಪಹೃತ ಸೈಯದ್‌ ಅಹ್ಮದ್‌ ಕುಶಾಲ್‌ನಗರ ರಾಮಟೆಂಟ್‌ ರೋಡ್‌ನಲ್ಲಿಇಂಟಿರಿಯರ್‌ ಡಿಸೈನರ್‌ ವರ್ಕ್‌ಶಾಪ್‌ ಇಟ್ಟುಕೊಂಡಿದ್ದಾರೆ. ಜತೆಗೆ ರಿಯಲ್‌ ಎಸ್ಟೇಟ್‌ ವ್ಯವಹಾರ ಕೂಡ ನಡೆಸುತ್ತಾರೆ. ಈ ಮಧ್ಯೆ ಪರಾರಿಯಾಗಿರುವ ಆರೋಪಿ ಅಸ್ಲಾಂ ಇತ್ತೀಚೆಗೆ ಕೆ.ಜಿ.ಹಳ್ಳಿಯಲ್ಲಿ ಖಾಲಿ  ನಿವೇಶನವನ್ನು ಖರೀದಿಸಲು ನಿರ್ಧರಿಸಿದ್ದ. ಆ ವಿಚಾರ ತಿಳಿದ ಸೈಯದ್‌ ಅಹ್ಮದ್‌ ಮಧ್ಯಪ್ರವೇಶಿಸಿ ಆ ನಿವೇಶವನ್ನು ಆರೋಪಿಗೆ ಸಿಗದಂತೆ ವ್ಯವಹಾರ ನಡೆಸಿದ್ದ. ಅದರಿಂದ ಇಬ್ಬರ ನಡುವೆ ಹಲವಾರು ಬಾರಿ ಗಲಾಟೆಯಾಗಿತ್ತು. ಈ ಹಿನ್ನೆಲೆಯಲ್ಲಿ ಅಪಹರಣಕ್ಕೆ ಸಂಚು ರೂಪಿಸಲಾಗಿದೆ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಇದನ್ನೂ ಓದಿ : ಕಲಬುರಗಿ ಪಾಲಿಕೆ ಮೇಯರ್- ಉಪಮೇಯರ್ ಚುನಾವಣೆಗೆ ತಾತ್ಕಾಲಿಕ ತಡೆ

ಬಂಧಿತರಿಗೆ ಸುಪಾರಿಕೊಟ್ಟಿದ್ದ ಅಸ್ಲಾಂ: ನಾಲ್ವರು ಬಂಧಿತರಿಗೆ ಅಸ್ಲಾಂ, ಆರೇಳು ತಿಂಗಳ ಹಿಂದೆಯೇ ಸೈಯದ್‌ ಅಹ್ಮದ್‌ ಅಪಹರಣಕ್ಕೆ ಸುಪಾರಿ ಕೊಟ್ಟಿದ್ದ. ಮುಂಗಡವಾಗಿ 20 ಸಾವಿರ ರೂ. ನೀಡಿದ್ದ. ಅಲ್ಲದೆ,ಸೈಯದ್‌ ಅಹ್ಮದ್‌ ಬಳಿ ಬಹಳಷ್ಟು ಹಣವಿದೆ. ಆತನ ಅಪಹರಣ ಮಾಡಿ, ಹಣಕ್ಕೆ ಬೇಡಿಕೆ ಇಟ್ಟು  ಬಂದ ಹಣದಲ್ಲಿ ಶೇ.80ರಷ್ಟು ಇಟ್ಟುಕೊಂಡು ಬಾಕಿ ಹಣ ಕೊಡುವಂತೆ ಆರೋಪಿಗಳಿಗೆ ಆಮಿಷವೊಡ್ಡಿ. ಹೀಗಾಗಿ ಆರೋಪಿಗಳು ಈ ಹಿಂದೆ ನಾಲ್ಕೈದು ಬಾರಿ ಅಪಹರಣಕ್ಕೆ ಯತ್ನಿಸಿದ್ದರು. ಆದರೆ, ಸಾಧ್ಯವಾಗಿರಲಿಲ್ಲ. ಆದರೆ, ಫೆ.16ರಂದು ತಮ್ಮ ವರ್ಕ್‌ಶಾಪ್‌ನಲ್ಲಿ ಕೆಲಸ ಮಾಡುವಾಗ ಕಾರಿನಲ್ಲಿ ಬಂದ ಆರೋಪಿಗಳು ಮಾತನಾಡಬೇಕೆಂದು ಸೈಯದ್‌ ಅಹ್ಮದ್‌ನನ್ನು ಹೊರಗಡೆ ಕರೆತಂದು ಏಕಾಏಕಿ ಕಾರಿನಲ್ಲಿ ಕೂರಿಸಿಕೊಂಡು ಹೊರಮಾವು ಕಡೆ ಕರೆದೊಯ್ದಿದ್ದಾರೆ. ಇದೇ ವೇಳೆ ಕಾರನ್ನು ಹಿಂಬಾಲಿಸುತ್ತಿದ್ದ ಸೈಯದ್‌ ಸ್ನೇಹಿದ ನವೀದ್‌ ಖಾನ್‌ಗೂ ಮಾರ್ಗ ಮಧ್ಯೆ ಮಾರಕಾಸ್ತ್ರ ತೋರಿಸಿ ಕಾರಿನಲ್ಲಿ ಕೂರಿಸಿಕೊಂಡು ಹೊಸಕೋಟೆ-ಕೆ,ಆರ್‌.ಪುರಂ ಮಾರ್ಗಮಧ್ಯೆ ಶೆಲ್‌ ಪೆಟ್ರೋಲ್‌ ಬಂಕ್‌ ಬಳಿ, ಸೈಯದ್‌ ಖಾತೆಯಿಂದ ಐದು ಸಾವಿರ ರೂ. ಅನ್ನು ಆರೋಪಿಗಳು ಫೋನ್‌ ಪೇ ಮಾಡಿಸಿಕೊಂಡು ಮತ್ತೂಮ್ಮೆ ಕರೆ ಮಾಡಿದಾಗ 3 ಲಕ್ಷ ರೂ. ಕೊಡಬೇಕು ಎಂದು ಎಚ್ಚರಿಕೆ ನೀಡಿ ಕಳುಹಿಸಿದ್ದರು. ಗಾಬರಿಗೊಂಡ ಸೈಯದ್‌ ತಡರಾತ್ರಿ 12 ಗಂಟೆ ಸುಮಾರಿಗೆ ಠಾಣೆಗೆ ಹಾಜರಾಗಿ ಅಪಹರಣದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು.

ನಂತರ ಆರೋಪಿಗಳ ಬಗ್ಗೆ ತಾಂತ್ರಿಕ ತನಿಖೆ ನಡೆಸಿ ಪ್ರಕರಣದ ಮೊದಲ ಆರೋಪಿ ಯಾಸೀನ್‌ನಗರದಲ್ಲಿರುವ ವಿಸ್ಟರ್‌ ವಾಷಾ ಸರ್ವೀಸ್‌ ಸೆಂಟರ್‌ ಮಾಲೀಕರ ಶೇಕ್‌ ಜಬಿವುಲ್ಲಾನನ್ನು ಬಂಧಿಸಿ, ಈತನ ಹೇಳಿಕೆ ಆಧರಿಸಿ ಇತರೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಟಾಪ್ ನ್ಯೂಸ್

Udupi: ಸಿಹಿ ಬಾಕ್ಸ್‌ ಜತೆ ಮಕ್ಕಳ ಮನೆಗೆ ಬರಲಿದೆ ಜನನ ಪ್ರಮಾಣ ಪತ್ರ

Udupi: ಸಿಹಿ ಬಾಕ್ಸ್‌ ಜತೆ ಮಕ್ಕಳ ಮನೆಗೆ ಬರಲಿದೆ ಜನನ ಪ್ರಮಾಣ ಪತ್ರ

Chandra

Spacecraft; ಚಂದ್ರನ ಪ್ರಾಚೀನ ಸ್ಥಳದಲ್ಲಿ ಇಳಿದ ಚಂದ್ರಯಾನ ನೌಕೆ

BCCI

Duleep Trophy ಕ್ರಿಕೆಟ್‌ ಹಳೆ ಮಾದರಿಗೆ? ಜಯ್‌ ಶಾ ಸ್ಥಾನಕ್ಕೆ ಯಾರು?

rajnath 2

Rajnath Singh; ಸ್ನೇಹ ಇದ್ದಿದ್ದರೆ ಪಾಕ್‌ಗೆ ಐಎಂಎಫ್ ಗಿಂತ ಹೆಚ್ಚು ಹಣ ಕೊಡ್ತಿದ್ದೆವು

BJP: ವರಿಷ್ಠರ ಖಡಕ್‌ ಎಚ್ಚರಿಕೆ: ಬಿಜೆಪಿ ಭಿನ್ನರ ಸಭೆ ವಿಫ‌ಲ

BJP: ವರಿಷ್ಠರ ಖಡಕ್‌ ಎಚ್ಚರಿಕೆ: ಬಿಜೆಪಿ ಭಿನ್ನರ ಸಭೆ ವಿಫ‌ಲ

BSF Bangla

Bangladesh ಅಕ್ರಮ ವಲಸಿಗರ ಆಧಾರ್‌ ನಿಷ್ಕ್ರಿಯಗೊಳಿಸಿ: ಪ್ರಾಧಿಕಾರಕ್ಕೆ ಸೇನೆ ಮನವಿ

ISREL

Israel ಸೇನೆ ನಿರಂತರ ದಾಳಿ; ಒಂದು ವಾರದಲ್ಲಿ 20 ಹೆಜ್ಬುಲ್ಲಾ ಉಗ್ರರ ಹತ್ಯೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP: ವರಿಷ್ಠರ ಖಡಕ್‌ ಎಚ್ಚರಿಕೆ: ಬಿಜೆಪಿ ಭಿನ್ನರ ಸಭೆ ವಿಫ‌ಲ

BJP: ವರಿಷ್ಠರ ಖಡಕ್‌ ಎಚ್ಚರಿಕೆ: ಬಿಜೆಪಿ ಭಿನ್ನರ ಸಭೆ ವಿಫ‌ಲ

Priyank-Kharghe

Election Bond: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ರಾಜೀನಾಮೆಗೆ ಕಾಂಗ್ರೆಸ್‌ ಪಟ್ಟು

pratp

MUDA Case: ಸಿಎಂ ಸಿದ್ದರಾಮಯ್ಯ 45 ವರ್ಷದ ರಾಜಕೀಯ ಜೀವನ ಅಂತ್ಯ: ಪ್ರತಾಪ್‌ ಸಿಂಹ

Kolar

Air Force Emergency: ಬಂಗಾರಪೇಟೆ ಬಳಿ ವಾಯುಪಡೆ ಹೆಲಿಕಾಪ್ಟರ್‌ ತುರ್ತು ಭೂ ಸ್ಪರ್ಶ

yathnal

BJP Politics: ರಾಜ್ಯಾಧ್ಯಕ್ಷ ವಿಜಯೇಂದ್ರ ಬದಲಾವಣೆಗೆ ಪಟ್ಟು ಹಿಡಿದಿಲ್ಲ: ಶಾಸಕ ಯತ್ನಾಳ್‌

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Udupi: ಸಿಹಿ ಬಾಕ್ಸ್‌ ಜತೆ ಮಕ್ಕಳ ಮನೆಗೆ ಬರಲಿದೆ ಜನನ ಪ್ರಮಾಣ ಪತ್ರ

Udupi: ಸಿಹಿ ಬಾಕ್ಸ್‌ ಜತೆ ಮಕ್ಕಳ ಮನೆಗೆ ಬರಲಿದೆ ಜನನ ಪ್ರಮಾಣ ಪತ್ರ

Rahul Gandhi (3)

Haryana;ಭಾರತ್‌ ಜೋಡೋ ಮಾದರಿ ಪ್ರಚಾರ ಇಂದು ಶುರು?

Chandra

Spacecraft; ಚಂದ್ರನ ಪ್ರಾಚೀನ ಸ್ಥಳದಲ್ಲಿ ಇಳಿದ ಚಂದ್ರಯಾನ ನೌಕೆ

BCCI

Duleep Trophy ಕ್ರಿಕೆಟ್‌ ಹಳೆ ಮಾದರಿಗೆ? ಜಯ್‌ ಶಾ ಸ್ಥಾನಕ್ಕೆ ಯಾರು?

rajnath 2

Rajnath Singh; ಸ್ನೇಹ ಇದ್ದಿದ್ದರೆ ಪಾಕ್‌ಗೆ ಐಎಂಎಫ್ ಗಿಂತ ಹೆಚ್ಚು ಹಣ ಕೊಡ್ತಿದ್ದೆವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.