ಹಿಂದೂ ಸಂಸ್ಕೃತಿಯ ಮೇಲೆ ಎರಗುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಲಾಲಾಜಿ ಆರ್. ಮೆಂಡನ್
Team Udayavani, Feb 25, 2022, 12:40 PM IST
ಕಾಪು: ಹಿಜಾಬ್ ಪ್ರಕರಣದ ಮೂಲಕವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಗೌರವಕ್ಕೆ ಚ್ಯುತಿಯಾಗುವಂತೆ ಮಾಡಿ ವಿವಾದ ಸೃಷ್ಟಿಸುವ ಪ್ರಯತ್ನ ನಡೆಸುವುದರ ಜೊತೆಗೆ ಹಿಂದೂ ಪರವಾಗಿ ಅನವರತ ಹೋರಾಡುತ್ತಿದ್ದ ಸಂಘಟನೆಯ ಕಾರ್ಯಕರ್ತ ಶಿವಮೊಗ್ಗದ ಹರ್ಷ ಕೊಲೆ ಪ್ರಕರಣ ಖಂಡನೀಯವಾಗಿದೆ. ದುಷ್ಕೃತ್ಯ ನಡೆಸಿರುವವರಿಗೆ ಮತ್ತು ದುಷ್ಪ್ರೇರಣೆ ನೀಡುವವರನ್ನು ಪತ್ತೆ ಹಚ್ಚಿ, ನಿರ್ದಾಕ್ಷಿಣ್ಯ ಕ್ರಮ ಜರಗಿಸಲು ರಾಜ್ಯ ಸರಕಾರ ಬದ್ಧವಾಗಿದೆ ಎಂದು ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಹೇಳಿದರು.
ಕ್ಷುಲ್ಲಕ ಕಾರಣಗಳಿಂದ ವಿಧಾನಸಭಾ ಅಧಿವೇಶನವನ್ನು ವ್ಯರ್ಥಗೊಳಿಸಿದ, ಶಿವಮೊಗ್ಗದಲ್ಲಿ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿದ್ದಾರೆಂದು ಅಪಪ್ರಚಾರ ಮಾಡಿ ಕೋಮು ಭಾವನೆಗಳನ್ನು ಕೆರಳಿಸಿ, ಅಮಾಯಕ ಹರ್ಷ ಅವರ ಹತ್ಯೆಗೆ ಕಾರಣವಾದ ಕಾಂಗ್ರೆಸ್ ಪಕ್ಷದ ವಿರುದ್ಧ ಕಾಪು ಕ್ಷೇತ್ರ ಬಿಜೆಪಿ ವತಿಯಿಂದ ಬಿಜೆಪಿ ಕಛೇರಿಯ ಮುಂಭಾಗದಲ್ಲಿ ಗುರುವಾರ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ, ಅವರು ಮಾತನಾಡಿದರು.
ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿಯೂ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸುವ ಉದ್ದೇಶದೊಂದಿಗೆ ನಡೆಸಲಾಗುವ ಅಧಿವೇಶನದಲ್ಲಿ ಯಾವುದೇ ರೀತಿಯ ಚರ್ಚೆಗೆ ಅವಕಾಶವಿಲ್ಲದಂತೆ ಅಧಿವೇಶನ ಮೊಟಕು ಗೊಳುಸಿರುವುದು ಕಾಂಗ್ರೆಸ್ ಪಕ್ಷದ ಕೃತ್ಯ ಖಂಡನೀಯವಾಗಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮಾತನಾಡಿ, ರಾಜ್ಯ ಮತ್ತು ದೇಶದಲ್ಲಿ ಮತೀಯ ಸಂಘಟನೆಗಳು ಮತ್ತು ಆ ಸಂಘಟನೆಗಳನ್ನು ಪೋಷಿಸುವ ಕಾಂಗ್ರೆಸ್ ಮತ್ತದರ ಮಿತ್ರ ಪಕ್ಷಗಳ ಕುತಂತ್ರದಿಂದಾಗಿ ಎಲ್ಲೆಡೆ ಗೊಂದಲ ಸೃಷ್ಟಿಯಾಗಿದೆ. ಮದರಸಾ ಶಿಕ್ಷಣದ ಮೂಲಕ ಯುವಕರಲ್ಲಿ ಕೋಮುದ್ವೇಷ ಸೃಷ್ಟಿಸುವ ಪ್ರಯತ್ನ ನಡೆಸಲಾಗುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶದಲ್ಲಿ ಮದರಸಗಳನ್ನು ಬ್ಯಾನ್ ಮಾಡಬೇಕಿದೆ. ಷರಿಯತ್ ಕಾನೂನು ಬೇಕಿದ್ದವರು, ಷರಿಯತ್ ಕಾನೂನು ಇರುವ ದೇಶಕ್ಕೆ ಹೋಗಿ, ಅಲ್ಲಿನ ಕಾನೂನುಬದ್ಧ ಆಚರಣೆಗಳು, ಸಂಪ್ರದಾಯವನ್ನು ಸ್ವೀಕರಿಸುವಂತೆ ಸಲಹೆ ನೀಡಿದರು.
ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷ ಶ್ರೀಕಾಂತ್ ನಾಯಕ್ ಮಾತನಾಡಿ, ರಾಷ್ಟ್ರ ಧ್ವಜ ಮತ್ತು ರಾಷ್ಟ್ರದ ಬಗ್ಗೆ ಕನಿಷ್ಟ ವೂ ಗೌರವ ಇರದ ಕಾಂಗ್ರೆಸ್ ಪಕ್ಷದ ದೇಶಾಭಿಮಾನವು ಹಿಜಾಬ್ ವಿಚಾರದಲ್ಲಿ ಬಹಿರಂಗಗೊಂಡಿದೆ. ಅದರೊಂದಿಗೆ ಶಿವಮೊಗ್ಗದಲ್ಲಿ ಸಂಘಟನೆಯ ಕಾರ್ಯಕರ್ತ ಹರ್ಷ ನ ಕೊಲೆ ಪ್ರಕರಣ, ಅದರ ಹಿಂದಿರುವ ಮತೀಯ ಶಕ್ತಿಗಳನ್ನು ಬಂಧಿಸಿ, ಕಠಿಣ ಶಿಕ್ಣೆಗೊಳಪಡಿಸಬೇಕಿದೆ ಎಂದರು.
ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ರಾಜ್ಯ ಕಾರ್ಯಕಾರಣಿ ಸದಸ್ಯೆ ಗೀತಾಂಜಲಿ ಎಂ. ಸುವರ್ಣ, ಸುಧಾಮ ಶೆಟ್ಟಿ, ಉಡುಪಿ ಜಿ.ಪಂ. ಮಾಜಿ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಬಿಜೆಪಿ ನಿಕಟ ಪೂರ್ವ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಪಕ್ಷದ ಮುಖಂಡರಾದ ಮನೋಹರ್ ಕಲ್ಮಾಡಿ, ಸಂದೀಪ್ ಶೆಟ್ಟಿ, ಗುರುಪ್ರಸಾದ್ ಶೆಟ್ಟಿ, ಗಙಗಾಧರ ಸುವರ್ಣ, ಸುಮಾ ಶೆಟ್ಟಿ, ನವೀನ್ ಎಸ್.ಕೆ., ಲತಾ ಆಚಾರ್ಯ, ಮಾಲಿನಿ ಶೆಟ್ಟಿ, ಶಶಿಕಾಂತ್ ಪಡುಬಿದ್ರಿ, ಗೋಪ ಪೂಜಾರಿ, ಸಚಿನ್ ಪಿತ್ರೋಡಿ, ನೀತಾ ಗುರುರಾಜ್, ಸೋನು ಪಾಂಗಾಳ, ಪುರಸಭಾ ಸದಸ್ಯರಾದ ಅರುಣ್ ಶೆಟ್ಟಿ, ಅನಿಲ್ ಕುಮಾರ್, ರತ್ನಾಕರ ಶೆಟ್ಟಿ, ಸರಿತಾ ಪೂಜಾರಿ, ಶೈಲೇಶ್ ಅಮೀನ್, ಸುರೇಶ್ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.
ಕಾಪು ಕ್ಣೇತ್ರ ಬಿಜೆಪಿ ಅಧ್ಯಕ್ಷ ಶ್ರೀಕಾಂತ್ ನಾಯಕ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಗೋಪಾಲ ಕೃಷ್ಣ ರಾವ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.