28ರಂದು ನೂತನ ಉಪವಿಭಾಗಾಧಿಕಾರಿ ಕಚೇರಿ ಉದ್ಘಾಟನೆ
Team Udayavani, Feb 25, 2022, 3:47 PM IST
ಹೊನ್ನಾಳಿ: ಚನ್ನಗಿರಿ, ನ್ಯಾಮತಿ ಮತ್ತು ಹೊನ್ನಾಳಿತಾಲೂಕು ವ್ಯಾಪ್ತಿಗೆ ಸಂಬಂ ಧಿಸಿದಂತೆ ನೂತನಉಪವಿಭಾಗಾಧಿಕಾರಿ ಕಚೇರಿ ಮಂಜೂರಾಗಿದ್ದು,ಫೆ. 28ರಂದು ಅಧಿಕೃತವಾಗಿ ಉದ್ಘಾಟನೆನೆರವೇರಿಸಲಾಗುವುದು ಎಂದು ಜಿಲ್ಲಾ ಧಿಕಾರಿಮಹಾಂತೇಶ ಬೀಳಗಿ ತಿಳಿಸಿದರು.
ಗುರುವಾರ ಪಟ್ಟಣದ ಅಗಳ ಮೈದಾನಕ್ಕೆಭೇಟಿ ನೀಡಿ ಉಪವಿಭಾಗಾಧಿಕಾರಿ ಕಚೇರಿಉದ್ಘಾಟನಾ ಸಮಾರಂಭ ನಡೆಯುವ ಸ್ಥಳಪರಿಶೀಲನೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆಅವರು ಮಾತನಾಡಿದರು. ಈಗ ತಾತ್ಕಾಲಿಕವಾಗಿತಹಶೀಲ್ದಾರ್ ಕಚೇರಿ ಮೇಲ್ಭಾಗದ ಕಟ್ಟಡದಲ್ಲಿಉಪವಿಭಾಗಾಧಿಕಾರಿಯವರಿಗೆ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಲಾಗಿದೆ. ಎಚ್.ಕಡದಕಟ್ಟೆ ಸಮೀಪದಲ್ಲಿರುವ ತುಂಗಾ ಮೇಲ್ದಂಡೆಕಚೇರಿ ವ್ಯಾಪ್ತಿಯ ಶಿಥಿಲಗೊಂಡ ಕಟ್ಟಡವನ್ನು ರಿಪೇರಿಮಾಡಿಸಿ ನೂತನ ಉಪವಿಭಾಗಾಧಿಕಾರಿ ಕಚೇರಿಆರಂಭಿಸಲಾಗುವುದು. ಯುಟಿಪಿ ಕಚೇರಿಯನ್ನುನೀರಾವರಿ ಇಲಾಖೆಗೆ ವರ್ಗಾವಣೆ ಮಾಡಲು ಕ್ರಮಕೈಗೊಳ್ಳಲಾಗಿದೆ.
ಕಚೇರಿ ಆರಂಭಕ್ಕೆ ಅಗತ್ಯವಾದಅನುದಾನ ಒದಗಿಸುವಂತೆ ಸರ್ಕಾರಕ್ಕೆ ಮನವಿಮಾಡಲಾಗಿದೆ. ಅನುದಾನ ಬಿಡುಗಡೆಯಾದನಂತರ ಅಗತ್ಯ ಮೂಲ ಸೌಲಭ್ಯ ಹಾಗೂಪೀಠೊಪಕರಣಗಳನ್ನು ಒದಗಿಸಲಾಗುವುದು.ಉಪವಿಭಾಗಾಧಿಕಾರಿ ಕಚೇರಿಗೆ ಅಗತ್ಯವಿರುವ 2ಪ್ರಥಮದರ್ಜೆ ಸಹಾಯಕರು, 2 ದ್ವಿತೀಯ ದರ್ಜೆಸಹಾಯಕರು ಹಾಗೂ ಗ್ರೇಡ್-2 ತಹಶೀಲ್ದಾರನ್ನುನೇಮಕ ಮಾಡಲಾಗಿದೆ ಎಂದರು.ಉಪವಿಭಾಗಾಧಿಕಾರಿ ಕಚೇರಿಗೆ ಅಗತ್ಯವಿರುವಅಭಿಲೇಖಾಲಯವನ್ನು ಸದ್ಯಕ್ಕೆ ತಾಲೂಕುಕಚೇರಿಯಲ್ಲಿಯೇ ವ್ಯವಸ್ಥೆ ಮಾಡಿಕೊಡಲಾಗುವುದುಎಂದರು.
ಇನ್ನು ಮುಂದೆ ಎಸಿ ಕಚೇರಿಯಲ್ಲಿಆಗಬೇಕಾದ ಕೆಲಸ ಕಾರ್ಯಗಳಿಗೆ ಮೂರುತಾಲೂಕುಗಳ ಜನತೆ ದಾವಣಗೆರೆಗೆಹೋಗಬೇಕಾಗಿಲ್ಲ. ದಾವಣಗೆರೆಯಿಂದ ಚನ್ನಗಿರಿ,ನ್ಯಾಮತಿ, ಮತ್ತು ಹೊನ್ನಾಳಿಗೆ ಸಂಬಂಧಪಟ್ಟ ಎಲ್ಲಾದಾಖಲೆಗಳನ್ನು ಇಲ್ಲಿಗೆ ವರ್ಗಾಯಿಸಲಾಗುವುದು.ಫೆ. 28ರಂದೇ ಶಾಸಕ ಎಂ.ಪಿ. ರೇಣುಕಾಚಾರ್ಯಅವರ ಜನ್ಮದಿನವಿದೆ. ಹಾಗಾಗಿ ಪಟ್ಟಣದಅಗಳ ಮೈದಾನದಲ್ಲಿಯೇ ಎಸಿ ಕಚೇರಿಉದ್ಘಾಟನೆಯ ಜೊತೆಗೆ ಶಾಸಕರ ಜನ್ಮದಿನವನ್ನೂಆಚರಿಸಲಾಗುವುದು. ಈ ಸಂದರ್ಭದಲ್ಲಿ ಒಂದುಸಾವಿರ ಫಲಾನುಭವಿಗಳಿಗೆ ಸರ್ಕಾರದ ವಿವಿಧಸೌಲಭ್ಯಗಳನ್ನು ವಿತರಿಸಲಾಗುವುದು ಎಂದುಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಆತ್ಮಹತ್ಯೆ ಮಾಡಿಕೊಂಡಿರುವ ಸಚಿನ್ ಗುತ್ತಿಗೆದಾರನೇ ಅಲ್ಲ…
Davanagere; ಹೊಸ ವರ್ಷ ಆಚರಣೆ ವೇಳೆ ಅಪಘಾ*ತ: ಯುವಕ ಸಾ*ವು,ಇನ್ನೋರ್ವ ಗಂಭೀರ
Davanagere: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದಿಂದ ಅರಾಜಕತೆ ಸೃಷ್ಟಿ: ಜಗದೀಶ್ ಶೆಟ್ಟರ್
ಸಿ.ಟಿ.ರವಿ-ಸಚಿವೆ ಲಕ್ಷ್ಮೀ ದೂರು ಪ್ರಕರಣ: ಪೊಲೀಸರ ವರದಿ ಬಳಿಕ ನಿಯಮಾನುಸಾರ ಕ್ರಮ: ಹೊರಟ್ಟಿ
Davangere: ಉತ್ತಮ ಹಿಂಗಾರು: ಬಂಪರ್ ಇಳುವರಿ ನಿರೀಕ್ಷೆಯಲ್ಲಿ ಬೆಳೆಗಾರರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ
Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.