ಮಣಿಪಾಲ: ಒಳಚರಂಡಿ ರೂಪಿಸದಿದ್ದರೆ ಮುಂದಿದೆ ಸಂಕಷ್ಟ

 ಕೊಳಚೆ ನೀರಿನಿಂದ ಜಲಮೂಲಗಳು ಕಲುಷಿತಗೊಳ್ಳುವ ಅಪಾಯ

Team Udayavani, Feb 26, 2022, 5:30 AM IST

ಮಣಿಪಾಲ: ಒಳಚರಂಡಿ ರೂಪಿಸದಿದ್ದರೆ ಮುಂದಿದೆ ಸಂಕಷ್ಟ

ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದಿರುವ ಮಣಿಪಾಲದ ಆರೋಗ್ಯ ಇನ್ನಷ್ಟು ಹೆಚ್ಚಬೇಕೆಂದರೆ ಒಳಚರಂಡಿ ವ್ಯವಸ್ಥೆ ಅತ್ಯಗತ್ಯವಾಗಿ ಬೇಕೇಬೇಕು. ಪ್ರಸ್ತುತ ಇಲ್ಲಿನ ತ್ಯಾಜ್ಯ ನೀರು ವಿವಿಧ ಜಲಮೂಲಗಳನ್ನು ಭವಿಷ್ಯದಲ್ಲಿ ಕಲುಷಿತಗೊಳ್ಳುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ನಾಗರಿಕರ ಆಗ್ರಹದಂತೆ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ನಗರಸಭೆ, ಜನಪ್ರತಿನಿಧಿಗಳು ಕಲ್ಪಿಸಬೇಕು. ಇದು ಕೂಡಲೇ ಗಮನಿಸಬೇಕಾದ ಜನರ ಬೇಡಿಕೆ.

ಮಣಿಪಾಲ : ದೊಡ್ಡ ನಗರವಾಗಿ ಬೆಳೆದಿ ರುವ ಮಣಿಪಾಲದಲ್ಲೂ ಒಳಚರಂಡಿ ವ್ಯವಸ್ಥೆ ಇನ್ನೂ ಜಾರಿಗೊಳ್ಳದಿರುವುದು ಅಚ್ಚರಿಗೆ ಕಾರಣವಾಗಿದೆ.
ಹೊರ ರಾಜ್ಯಗಳ, ವಿದೇಶಗಳ ವಿದ್ಯಾರ್ಥಿಗಳು, ಉದ್ಯೋಗಿಗಳು ಸಾಕಷ್ಟು ಮಂದಿ ಇಲ್ಲಿದ್ದು, ಸ್ಥಳೀಯ ರಿಗೂ ಜೀವನಮಟ್ಟವು ಒಂದಿಷ್ಟು ಸುಧಾರಣೆ ಕಾಣುತ್ತಿದೆ. ಆದರೆ, ನಗರಕ್ಕಿರಬೇಕಾದ ಮೂಲ ಸೌಕರ್ಯ ಒಳಚರಂಡಿ ವ್ಯವಸ್ಥೆ ಇನ್ನೂ ಕಲ್ಪಿಸಬೇಕಿದೆ.

ಪ್ರಸ್ತುತ ಒಳಚರಂಡಿ ಇಲ್ಲದ ಕಾರಣ ಎಲ್ಲ ತ್ಯಾಜ್ಯ ನೀರು ಮಳೆ ನೀರು ಹರಿಯುವ ಚರಂಡಿಗೆ ಬಿಡಲಾಗುತ್ತದೆ. ದಿನೇದಿನೆ ನಗರ ಬೆಳೆಯತೊಡಗಿದ್ದು, ಭವಿಷ್ಯದಲ್ಲಿ ಒಳಚರಂಡಿ ಕೊರತೆಯೇ ದೊಡ್ಡ ಸಮಸ್ಯೆಯಾಗಿ ಉದ್ಭವಿಸಲಿದೆ. ಆದ ಕಾರಣ ಕೂಡಲೇ ಮಣಿಪಾಲಕ್ಕೂ ಒಳಚರಂಡಿ ವ್ಯವಸ್ಥೆ ಕಲ್ಪಿಸಬೇಕೆಂಬುದು ಜನರ ಆಗ್ರಹ.

ಮನೆ ಬಳಕೆ, ಶೌಚ ತ್ಯಾಜ್ಯ ಮಣ್ಣಪಳ್ಳಕ್ಕೆ
ಮಣಿಪಾಲ ಸುತ್ತಮುತ್ತಲಿನ ಹಲವು ಬಡಾವಣೆಗಳ ಮನೆಯ ಕಲುಷಿತ ನೀರು ಚರಂಡಿಗಳಿಗೆ ಬಿಡಲಾಗು ತ್ತಿದೆ. ಆ ಚರಂಡಿ ಇಕ್ಕೆಲಗಳ ಮೂಲಕ ಮಳೆ ನೀರು
ಹರಿವ ತೋಡುಗಳಿಗೆ ಸಂಪರ್ಕವಾಗುತ್ತವೆ. ಈ ಮಳೆ ನೀರು ಸಾಗುವ ಬಹುತೇಕ ತೋಡುಗಳು ಒಂದಾಗು ವುದು ಮಣ್ಣಪಳ್ಳ ಕೆರೆಯಲ್ಲಿ. ಹಾಗಾಗಿ ನಿತ್ಯವೂ ಸಾಕಷ್ಟು ಪ್ರಮಾಣದ ಬಳಕೆ ಮಾಡಿದ ಕೊಳಚೆ ನೀರು ಮಣ್ಣಪಳ್ಳಕ್ಕೆ ಸೇರುತ್ತಿರುವುದು ಆತಂಕಕಾರಿಯಾಗಿದೆ.

ಶ್ಯಾಂಪು ಪ್ಯಾಕೆಟ್ಸ್‌, ಸೋಪು ತುಂಡುಗಳು, ಸ್ಯಾನಿಟರಿ ಪ್ಯಾಡ್ಸ್‌, ಮಕ್ಕಳ ಸ್ಯಾನಿಟರಿ ನ್ಯಾಪ್‌ಕಿನ್ಸ್‌, ಪ್ಲಾಸ್ಟಿಕ್‌ ತ್ಯಾಜ್ಯ, ಗಾಜಿನ ಚೂರುಗಳೂ ಈ ತ್ಯಾಜ್ಯ ನೀರಿನ ಮೂಲಕ ಹರಿದು ಕೆರೆಯನ್ನು ಸೇರುತ್ತಿವೆ. ಇದಕ್ಕೆ ಕ್ರಮ ಕೈಗೊಳ್ಳದಿದ್ದರೆ ಕೆಲವೇ ವರ್ಷ ಗಳಲ್ಲಿ ಮಣ್ಣಪಳ್ಳ ಕೆರೆಯ ಆರೋಗ್ಯ ಸಂಪೂರ್ಣ ಹದಗೆಡಲಿದೆ. ಸುತ್ತಲಿನ ಬಾವಿಗಳೂ ಕಲುಷಿತ
ಗೊಳ್ಳುವ ಅಪಾಯವಿದೆ.

ಪರ್ಕಳಕ್ಕೂ ಒಳಚರಂಡಿ
ಮಣಿಪಾಲದಂತೆ ಪರ್ಕಳ ಸುತ್ತಮುತ್ತಲ ಪರಿಸರದಲ್ಲಿಯೂ ಒಳಚರಂಡಿ ವ್ಯವಸ್ಥೆಯನ್ನು ರೂಪಿಸಬೇಕಿದೆ. ಪ್ರಸ್ತುತ ಈ ಸಮಸ್ಯೆ ದೊಡ್ಡ ಮಟ್ಟದಲ್ಲಿ ಇಲ್ಲದಿದ್ದರೂ ಮುಂದಿನ ದಿನಗಳಲ್ಲಿ ರಸ್ತೆ ಅಭಿವೃದ್ಧಿಗೊಂಡು ವಾಣಿಜ್ಯ ಕಟ್ಟಡ, ವಸತಿ ಸಮುತ್ಛಯಗಳು ನಿರ್ಮಾಣಗೊಳ್ಳಲಿವೆ. ಭವಿಷ್ಯದ ದೃಷ್ಟಿಯಿಂದ ಪರ್ಕಳದಲ್ಲಿಯೂ ವ್ಯವಸ್ಥಿತ ಒಳಚರಂಡಿ ವ್ಯವಸ್ಥೆ ಬರಬೇಕು ಎನ್ನುತ್ತಾರೆ ಸ್ಥಳೀಯರು.

ವಾರಕ್ಕೆ 3 ಬಾರಿ ಔಷಧ ಸಿಂಪಡಣೆ
ಮಣಿಪಾಲದಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು ಬೇಕಾಬಿಟ್ಟಿ ತ್ಯಾಜ್ಯ ಹೊರ ಚೆಲ್ಲುತ್ತಿರುವುದರಿಂದ ಚರಂಡಿಯಲ್ಲಿ ತ್ಯಾಜ್ಯ ನಿಂತು ಸೊಳ್ಳೆ ಉತ್ಪತ್ತಿಯ ತಾಣವಾಗುತ್ತಿದೆ. ಈ ಭಾಗ ಮುರಕಲ್ಲಿನ ಮಣ್ಣು ಆಗಿರುವುದರಿಂದ ನೀರು ಬೇಗನೆ ಇಂಗುವುದಿಲ್ಲ. ಬೇಸಗೆಯಲ್ಲಿ ವಿಪರೀತ ಸೊಳ್ಳೆಕಾಟವಿರುತ್ತದೆ. ಇದರಿಂದ ಸಾಂಕ್ರಾಮಿಕ ರೋಗ ಹರಡುತ್ತಿದ್ದು, ಪ್ರತೀವರ್ಷ ಇಲ್ಲಿ ಡೆಂಗ್ಯೂ, ಮಲೇರಿಯ ಕಾಯಿಲೆಗಳು ಬಾಧಿಸುತ್ತಿವೆ. ಸ್ಥಳೀಯ ನಗರಸಭಾ ಸದಸ್ಯರ ಮನವಿಯಂತೆ ವಾರಕ್ಕೆ ಮೂರು ಬಾರಿ ಚರಂಡಿಯಲ್ಲಿ ನಿಂತ ತ್ಯಾಜ್ಯ ನೀರಿಗೆ ಪೌರಕಾರ್ಮಿಕರು ಔಷಧ ಸಿಂಪಡಿಸುತ್ತಿದ್ದಾರೆ.

ಅನಧಿಕೃತ ಪಿಜಿ
ಹುಡ್ಕೊ, ಅನಂತನಗರ ಸಹಿತ ಮಣಿಪಾಲದ ವಿವಿಧೆಡೆ ಅನಧಿಕೃತ ಪಿಜಿಗಳ (ಪೇಯಿಂಗ್‌ ಗೆಸ್ಟ್‌) ಸಂಖ್ಯೆ ಹೆಚ್ಚುತ್ತಿದೆ ಎನ್ನುತ್ತಾರೆ ಸ್ಥಳೀಯರು. ನಗರಸಭೆಯಿಂದ ಸೂಕ್ತ ಅನುಮತಿ ಪಡೆಯದೆ ಸಣ್ಣಸಣ್ಣ ರೂಂಗಳಲ್ಲಿ ವಿದ್ಯಾರ್ಥಿಗಳನ್ನು, ಉದ್ಯೋಗಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಇದರಿಂದಾಗಿ ಸಾಕಷ್ಟು ಪ್ರಮಾಣದ ತ್ಯಾಜ್ಯ ನೀರು ಉತ್ಪತ್ತಿಯಾಗುತ್ತಿದ್ದು, ಇದೆಲ್ಲವೂ ತೋಡಿಗೆ ಹರಿಯುತ್ತಿದೆ. ಜತೆಗೆ ಇಲ್ಲಿನ ಕೆಲವು ಹೊಟೇಲ್‌ಗ‌ಳು, ವಸತಿ ಗೃಹಗಳೂ ಇದೇ ಮಾರ್ಗ ಅನುಸರಿಸುತ್ತಿವೆ. ತ್ಯಾಜ್ಯ, ಶೌಚಗುಂಡಿಯ ಪೈಪ್‌ಗ್ಳ ಸಂಪರ್ಕವನ್ನೂ ಮಳೆ ನೀರು ಹರಿಯುವ ತೋಡಿಗೆ ಕಲ್ಪಿಸಿದ್ದಾರೆಂಬ ದೂರೂ ಕೇಳಿಬಂದಿದೆ.

ಟಾಪ್ ನ್ಯೂಸ್

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-deeee

Udupi; ಮಕ್ಕಳ ರಕ್ಷಣೆ ಕಾಯ್ದೆ ಅನುಷ್ಠಾನ ಅಗತ್ಯ

1-hebri

ಅನಾರೋಗ್ಯ; ಭಾಗವತ ಗಣೇಶ ಹೆಬ್ರಿ ಅವರ ಪುತ್ರ ನಿಧನ

accident

Udupi: ಸ್ಕೂಟರಿಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ

8

Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!

3

Karkala: ಕಾಮಗಾರಿಗೆ ಅಡ್ಡಿ; ಸಾರ್ವಜನಿಕರ ಆಕ್ರೋಶ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.