ಮೆಲ್ಕಾರ್: ಹೆದ್ದಾರಿ ಬದಿ ಲಾರಿ ನಿಲುಗಡೆಗೆ ಬಿದ್ದಿಲ್ಲ ಬ್ರೇಕ್
ಎರಡೂ ಬದಿ ನಿಲ್ಲಿಸಿದರೆ ಸಂಚಾರಕ್ಕೆ ತೊಂದರೆ
Team Udayavani, Feb 26, 2022, 5:20 AM IST
ಬಂಟ್ವಾಳ: ಮೆಲ್ಕಾರ್ ಜಂಕ್ಷನ್‌ನಿಂದ ಕಲ್ಲಡ್ಕ ಭಾಗಕ್ಕೆ ತೆರಳುವ ಹೆದ್ದಾರಿ ಬದಿ ಹೆಚ್ಚಿನ ಸಂಖ್ಯೆಯಲ್ಲಿ ಬೃಹತ್ ಗಾತ್ರದ ಲಾರಿ ಹಾಗೂ ಟ್ಯಾಂಕರ್‌ಗಳನ್ನು ನಿಲ್ಲಿಸುತ್ತಿರುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದೆ. ಹಿಂದೊಮ್ಮೆ ಈ ಭಾಗದಲ್ಲಿ ಲಾರಿಗಳನ್ನು ನಿಲ್ಲಿಸದಂತೆ ಸೂಚನ ಪೊಲೀಸರು ಫಲಕ ಹಾಕಿದ್ದರೂ, ಪ್ರಸ್ತುತ ಫಲಕ ಮಾಯ ವಾಗಿದೆಯೇ ಹೊರತು ಲಾರಿ ನಿಲ್ಲುವ ಸಮಸ್ಯೆಗೆ ಮುಕ್ತಿ ದೊರಕಿಲ್ಲ.
ಬೆಂಗಳೂರು, ಚೆನ್ನೈ, ಆಂಧ್ರ ಪ್ರದೇಶ ಮೊದಲಾದ ಭಾಗಗಳಿಂದ ಸರಕು ಹೊತ್ತು ಮಂಗಳೂರಿಗೆ ಬರುವ ಲಾರಿ, ಟ್ಯಾಂಕರ್ ಹಾಗೂ ಮಂಗಳೂರಿನಿಂದ ದೂರದ ಪ್ರದೇಶಗಳಿಗೆ ತೆರಳುವ ಲಾರಿಗಳನ್ನು ಗಂಟೆಗಟ್ಟಲೆ ನಿಲ್ಲಿಸಲಾಗುತ್ತದೆ. ಇದರಿಂದ ಹೆದ್ದಾರಿಯಲ್ಲಿ ಸಂಚಾರಕ್ಕೆ ಸಾಕಷ್ಟು ತೊಂದರೆಯಾಗುತ್ತಿದೆ.
ಈ ರೀತಿ ನಿಂತ ಲಾರಿಗಳ ಚಾಲಕರು, ನಿರ್ವಾಹಕರು ಪರಿಸರದಲ್ಲಿ ಗಲೀಜು ಮಾಡುತ್ತಿರುವುದರಿಂದ ನಮಗೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯರೊಬ್ಬರು ದೂರು ಕೂಡ ನೀಡಿದ್ದರು. ಆದರೆ ಯಾವುದೇ ದೂರಿಗೂ ಕಿವಿಗೊಡದ ಲಾರಿಗಳು ಅಲ್ಲಿ ತಾಸುಗಟ್ಟಲೆ ನಿಲ್ಲುತ್ತಲೇ ಇವೆ. ಪೊಲೀಸರು ಕೂಡ ಈ ಕುರಿತು ಗಮನಹರಿಸುತ್ತಿಲ್ಲ ಎನ್ನುವ ದೂರು ಕೇಳಿ ಬಂದಿದೆ.
ಟ್ರಾಫಿಕ್ ಪೊಲೀಸರ ಫಲಕ ಇತ್ತು
ಈ ರೀತಿ ಲಾರಿ ನಿಂತು ಹೆದ್ದಾರಿ ಸಂಚಾರಕ್ಕೆ ತೊಂದರೆಯಾಗುತ್ತಿರುವ ವಿಚಾರ ಮಾಧ್ಯಮಗಳಲ್ಲಿ ಪ್ರಕಟಗೊಂಡ ಬಳಿಕ ಅಲ್ಲಿ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯ ವತಿಯಿಂದ ಘನ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ ಎಂದು ಸೂಚನ ಫಲಕವನ್ನು ಅಳವಡಿಸಲಾಗಿತ್ತು. ಆದರೆ ಈಗ ಫಲಕ ಮಾಯವಾಗಿದೆಯೇ ಹೊರತು ಲಾರಿಗಳ ನಿಲುಗಡೆಗೆ ಮಾತ್ರ ಬ್ರೇಕ್ ಬಿದ್ದಿಲ್ಲ.
ದೂರದಿಂದ ಬರುವ ಲಾರಿ/ ಟ್ಯಾಂಕರ್ ಚಾಲಕರಿಗೆ ವಿರಾಮ ಬೇಕಿ ರುವುದು ಅಗತ್ಯವಾಗಿರುವುದರಿಂದ ಹೆದ್ದಾರಿ ಬದಿ ಸಾಕಷ್ಟು ಸ್ಥಳಾವಕಾಶ ಇರುವಲ್ಲಿ ನಿಲ್ಲಿಸು ವುದು ಸಹಜ.
ಕ್ರಮ ಕೈ ಗೊಳ್ಳಲಾಗುವುದು
ಹೆದ್ದಾರಿ ಬದಿ ಲಾರಿ ನಿಂತು ಸಮಸ್ಯೆಯಾಗುತ್ತಿರುವ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಪ್ರಸಕ್ತ ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ ಹುದ್ದೆ ಖಾಲಿ ಇದ್ದು, ಫೆ. 28ರಂದು ಪಿಎಸ್‌ಐ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಬಳಿಕ ಈ ಬಗ್ಗೆ ಗಮನ ಹರಿಸಲಾಗುವುದು.
-ಪ್ರತಾಪ್ ಸಿಂಗ್ ಥೊರಟ್, ಡಿವೈಎಸ್‌ಪಿ, ಬಂಟ್ವಾಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ
Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು
Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.