ನಾಳೆ ಐದನೇ ಹಂತದ ಮತ: ಉ.ಪ್ರ: 12 ಜಿಲ್ಲೆಗಳಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆ
Team Udayavani, Feb 26, 2022, 6:35 AM IST
ಉ.ಪ್ರ.ದ ಗೌರಿಗಂಜ್ನಲ್ಲಿ ಕೇಂದ್ರ ಸಚಿವೆ ಸ್ಮತಿ ಇರಾನಿ ಬೈಕ್ ರ್ಯಾಲಿ ನಡೆಸಿದರು
ಲಕ್ನೋ: ಉತ್ತರ ಪ್ರದೇಶದ 12 ಜಿಲ್ಲೆಗಳ 61 ವಿಧಾನಸಭಾ ಕ್ಷೇತ್ರಗಳಿಗೆ ಐದನೇ ಹಂತದಲ್ಲಿ ಫೆ. 27ರ ರವಿವಾರ ಮತದಾನ ನಡೆಯಲಿದ್ದು ಶುಕ್ರವಾರ ಸಂಜೆ ಬಹಿರಂಗ ಪ್ರಚಾರ ಅಂತ್ಯಗೊಂಡಿತು.
ರವಿವಾರ ನಡೆಯಲಿರುವ ಚುನಾವಣೆಯಲ್ಲಿ ಒಟ್ಟು 692 ಅಭ್ಯರ್ಥಿಗಳ ಭವಿಷ್ಯವನ್ನು 2.24 ಕೋಟಿ ಮತದಾರರು ನಿರ್ಧರಿಸಲಿದ್ದಾರೆ. ಸುಲ್ತಾನ್ಪುರ, ಚಿತ್ರಕೂಟ, ಪ್ರತಾಪ್ಗ್ಢ, ಕೌಶಂಬಿ, ಪ್ರಯಾಗ್ರಾಜ್, ಬರಾಬಂಕಿ, ಬಹ್ರೈಚ್, ಶ್ರಾವಸ್ಥಿ ಮತ್ತು ಗೋಂಡಾ ಜಿಲ್ಲೆಗಳಲ್ಲಿ ಐದನೇ ಹಂತದಲ್ಲಿ ಮತದಾನ ನಡೆಯಲಿದೆ. ಹಿಂದೆ ಕಾಂಗ್ರೆಸ್ನ ಭದ್ರಕೋಟೆಯಾಗಿದ್ದ ಅಮೇಠಿ ಮತ್ತು ರಾಯ್ಬರೇಲಿ ಹಾಗೂ ಅಯೋಧ್ಯೆಯಲ್ಲೂ ಭಾನುವಾರ ಮತದಾನ ನಡೆಯಲಿದೆ.
ಉಪಮುಖ್ಯ ಮಂತ್ರಿ ಕೇಶವ ಪ್ರಸಾದ್ ಮೌರ್ಯ, ಸಚಿವರಾದ ಸಿದ್ಧಾರ್ಥ ನಾಥ್ ಸಿಂಗ್, ರಾಜೇಂದ್ರ ಸಿಂಗ್ ಅಲಿ ಯಾಸ್ ಮೋತಿ ಸಿಂಗ್, ನಂದ ಗೋಪಾಲ ಗುಪ್ತ ನಾಡಿ, ರಾಮಪತಿ , ಚುನಾವಣ ಕಣದಲ್ಲಿರುವ ಪ್ರಮುಖರು.
5ನೇ ಹಂತದ ಮತದಾನ ನಡೆಯಲಿರುವ ಕ್ಷೇತ್ರಗಳಲ್ಲಿ ಪ್ರಧಾನಿ ಮೋದಿ, ರಾಜನಾಥ್ ಸಿಂಗ್, ಅಮಿತ್ ಶಾ ಎಸ್ಪಿ ಮುಖ್ಯಸ್ಥ ಅಖೀಲೇಶ್ ಯಾದವ್, ಬಿಎಸ್ಪಿಯ ಮಾಯಾವತಿ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಪ್ರಚಾರ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.