![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Feb 26, 2022, 7:19 AM IST
ಮೇಷ:
ಸರಕಾರೀ ಕೆಲಸಗಳಲ್ಲಿ ಪ್ರಗತಿ. ಗುರುಹಿರಿಯರ ಅವಲಂಬನೆ. ಧಾರ್ಮಿಕ ಕಾರ್ಯಗಳ ನಿಮಿತ್ತ ದೂರ ಪ್ರಯಾಣ. ಉದ್ಯೋಗ ವ್ಯವಹಾರಗಳಲ್ಲಿ ಅಡಚಣೆ ತೋರೀತು. ಮಕ್ಕಳಿಗಾಗಿ ಧನವ್ಯಯ. ದಾಂಪತ್ಯ ತೃಪ್ತಿಕರ. ಗೃಹೋಪಕರಣ ವಸ್ತು ಸಂಗ್ರಹ.
ವೃಷಭ:
ಬಂಧುಬಳಗದವರಿಂದ ಸಹಕಾರ. ದಾಂಪತ್ಯದಲ್ಲಿ ಪರಸ್ಪರ ಅನುರಾಗ ವೃದ್ಧಿ. ಅಧ್ಯಯನದಲ್ಲಿಯೂ ಭೂಮ್ಯಾದಿ ಆಸ್ತಿ ವಿಚಾರಗಳಲ್ಲಿ ಪ್ರಗತಿ. ಮಕ್ಕಳಿಗೆ ನಿರೀಕ್ಷಿತ ಸ್ಥಾನ ಲಾಭವಾದ್ದರಿಂದ ಸಂತೋಷ ವೃದ್ಧಿ. ಸಹೋದರ ಸಮಾನರಿಗೆ ಪ್ರಯಾಣ ಯೋಗ.
ಮಿಥುನ:
ಸುದೃಢ ಆರೋಗ್ಯ. ಸಂದರ್ಭಕ್ಕೆ ಸರಿಯಾಗಿ ಸಮಯ ಒದಗಿ ಬರುವುದು. ಯತೇತ್ಛ ಧನಾಗಮನ. ಉದ್ಯೋಗ ವ್ಯವಹಾರಗಲ್ಲಿಯೂ ಪಾಲುದಾರಿಕೆಯಲ್ಲಿಯೂ ಹೆಚ್ಚಿದ ಪ್ರಗತಿ. ಸಾಂಸಾರಿಕ ಸುಖ ವೃದ್ಧಿ. ಗುರುಹಿರಿಯರ ಆರೋಗ್ಯ ಗಮನಿಸಿ.
ಕಟಕ:
ಕೆಲಸ ಕಾರ್ಯಗಳಲ್ಲಿ ನಿರೀಕ್ಷಿಸಿದಂತೆ ಸಫಲತೆ. ನೂತನ ಮಿತ್ರರ ಸಮಾಗಮ. ದೂರದ ವ್ಯವಹಾರಗಳಿಂದ ಧನಾಗಮ. ಮಕ್ಕಳಿಂದಲೂ ಗುರುಹಿರಿಯರಿಂದಲೂ ಸಂತೋಷ ವೃದ್ಧಿ. ನಷ್ಟದೃವ್ಯ ಪ್ರಾಪ್ತಿ ಇತ್ಯಾದಿ ಶುಭ ಫಲ.
ಸಿಂಹ:
ನಿರಂತರ ಧನಲಾಭದ ವಿಚಾರದಲ್ಲಿ ಮಗ್ನತೆ. ನಿರೀಕ್ಷಿಸಿದಂತೆ ಸ್ಥಾನ ಲಾಭ. ಸಂದರ್ಭೋಚಿತ ಕಾರ್ಯ . ನಡೆನುಡಿಯಿಂದ ಪ್ರಗತಿ. ಗುರುಹಿರಿಯರಲ್ಲಿ ಬೇಸರ ಬಾರದಂತೆ ಕಾರ್ಯನಿರ್ವಹಿಸಿ. ಸಾಂಸಾರಿಕ ಸುಖ ಮಧ್ಯಮ.
ಕನ್ಯಾ:
ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ಜವಾಬ್ದಾರಿಯಿಂದ ದೇಹಾಯಾಸ ಸಂಭವ. ಧನ ಸಂಪತ್ತಿಗಾಗಿ ದೀರ್ಘ ಪ್ರಯಾಣ ಸಂಭವ. ಪತಿ ಪತ್ನಿಯರು ಆರೊಗ್ಯ ಗಮನಿಸಿ. ಭೂ ಸಂಬಂಧ ವಿಚಾರಗಳಲ್ಲಿ ಜಾಗೃತೆ ನಡೆ ಅಗತ್ಯ.
ತುಲಾ:
ಆರೋಗ್ಯ ವೃದ್ಧಿ. ಸಣ್ಣ ಪ್ರಯಾಣ ಸಂಭವ. ದೇವತಾ ಕಾರ್ಯಗಳಲ್ಲಿ ಭಾಗಿಯಾದ ತೃಪ್ತಿ. ಉದ್ಯೋಗ ವ್ಯವಹಾರಗಳಲ್ಲಿ ಮುನ್ನಡೆ. ವಿದ್ಯಾರ್ಥಿಗಳಿಗೆ ವಿಪುಲ ಅವಕಾಶ. ಗುರುಹಿರಿಯರ ಆರೋಗ್ಯ ವೃದ್ಧಿ. ಗೃಹದಲ್ಲಿ ಸಂತಸದ ವಾತಾವರಣ.
ವೃಶ್ಚಿಕ:
ಭೂಮಿ ಆಸ್ತಿ ಇತ್ಯಾದಿ ವಿಚಾರಗಳಲ್ಲಿ ಸಹನೆಯಿಂದ ವ್ಯವಹರಿಸಿ ಕಾರ್ಯ ಸಾಧಿಸಿಕೊಳ್ಳಿ. ಮಾತನಾಡುವಾಗ ದಾಕ್ಷಿಣ್ಯಕ್ಕೆ ಒಳಗಾಗದಿರಿ. ಸಹೋದರ ಸಮಾನರಿಂದ ಉತ್ತಮ ಸಹಕಾರ. ಮನೆಯಲ್ಲಿ ಸಂಭ್ರಮದ ಸಂತಸದ ಪರಿಸ್ಥಿತಿ.
ಧನು:
ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ. ಉದ್ಯೋಗ ವ್ಯವಹಾರಗಳಲ್ಲಿ ಉತ್ತಮ ಪ್ರಗತಿ. ನಿರೀಕ್ಷೆ ಗೆ ಸರಿಯಾದ ಧನ ಸಂಪಾದನೆ. ದಾಂಪತ್ಯ ಸುಖ ತೃಪ್ತಿದಾಯಕ. ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಲಭ್ಯ. ಗುರುಹಿರಿಯರಿಂದ ಉತ್ತಮ ಸಹಕಾರ ಮಾರ್ಗದರ್ಶನ.
ಮಕರ:
ಆರೋಗ್ಯ ವೃದ್ಧಿ. ಉದ್ಯೋಗ ವ್ಯವಹಾರ ನಿಮಿತ್ತ ದೂರ ಪ್ರಯಾಣ ಸಂಭವ. ಗೃಹೋಪಕರಣ ವಸ್ತು ಸಂಗ್ರಹ. ನೂತನ ಮಿತ್ರರ ಭೇಟಿ. ಅಧಿಕ ಧನಾರ್ಜನೆ. ಸತ್ಕಾರ್ಯಗಳಿಗೆ ಧನವ್ಯಯ. ವಿದ್ಯಾರ್ಥಿಗಳಿಗೆ ಸ್ಥಾನ ಗೌರವಾದಿ ಸುಖ ಲಭ್ಯ.
ಕುಂಭ:
ಆರೋಗ್ಯ ಸ್ಥಿರ. ಜನಮನ್ನಣೆ. ಮನಸ್ಸಿನಲ್ಲಿ ಸಂಕಲ್ಪಿಸಿದಂತೆ ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಉತ್ತಮ ಸ್ಥಾನ ಸುಖ. ಮಿತ್ರರಿಂದಲೂ ಗಣ್ಯರಿಂದಲೂ ಸಹಕಾರ ಪ್ರೋತ್ಸಾಹ. ದೂರದ ವ್ಯವಹಾರಗಳಲ್ಲಿ ಧನಾರ್ಜನೆ ಇತ್ಯಾದಿ ಶುಭಫಲ.
ಮೀನ:
ಆರೋಗ್ಯ ಗಮನಿಸಿ. ದೀರ್ಘ ಪ್ರಯಾಣ ಸಂಭವ. ದೂರದ ಉದ್ಯೋಗ ಕೆಲಸ ಕಾರ್ಯಗಳಲ್ಲಿ ಅಡಚಣೆ ತೋರಿದರೂ ನಿರೀಕ್ಷಿತ ಸ್ಥಾನ ಸುಖ ಪ್ರಾಪ್ತಿ. ಉತ್ತಮ ಧನಾರ್ಜನೆಗೆ ವಿಪುಲ ಅವಕಾಶ. ಸಾಂಸಾರಿಕ ಸುಖ ವೃದ್ಧಿ. ದೇವತಾ ಕಾರ್ಯಗಳಿಂದ ಶುಭ ಫಲ.
Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ
Horoscope: ಹೇಗಿದೆ ಇಂದಿನ ರಾಶಿಫಲ
Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ
Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.
Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ
You seem to have an Ad Blocker on.
To continue reading, please turn it off or whitelist Udayavani.