ಕಣ್ಮನ ಸೆಳೆಯುತ್ತಿದೆ ಸಾಣಾಪುರ ತುಂಗಭದ್ರಾ ನದಿಯ ವಾಟರ್ ಫಾಲ್ಸ್ ರಮಣೀಯ ದೃಶ್ಯ
Team Udayavani, Feb 26, 2022, 12:02 PM IST
ಗಂಗಾವತಿ : ಈ ವರ್ಷ ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯ ಪರಿಣಾಮ ತುಂಗಭದ್ರಾ ಡ್ಯಾಂ ಭರ್ತಿಯಾಗಿ ಅಚ್ಚುಕಟ್ಟು ಪ್ರದೇಶದ
ಬೇಸಿಗೆ ಬೆಳೆಗೂ ನೀರಿನ ಅವಕಾಶ ಕಲ್ಪಿಸಲಾಗಿದೆ.ಇದರಿಂದಾಗಿ ತುಂಗಭದ್ರ ನದಿ ಮತ್ತು ಎಡ ಮತ್ತು ಬಲದಂಡೆ ಕಾಲುವೆಯ ನೀರು ನಿರಂತರವಾಗಿ ಹರಿಯುತ್ತಿದೆ.ತಾಲ್ಲೂಕಿನ ಸಣಾಪುರ ಗ್ರಾಮದ ಹತ್ತಿರ ಹರಿಯುವ ತುಂಗಭದ್ರಾ ನದಿ ಇಲ್ಲಿಯ ಬೆಟ್ಟಗುಡ್ಡ ಪ್ರದೇಶಗಳಲ್ಲಿ ಹೋಗುವ ನೀರಿನಲ್ಲಿ ವಾಟರ್ ಫಾಲ್ಸ್ ಸೃಷ್ಟಿಯಾಗಿದೆ .ಯಾವ ಹೊಗೆನ್ಕಲ್ ಮತ್ತು ಮೇಕೆದಾಟು ವಾಟರ್ ಫಾಲ್ಸ್ ಗಳು ಕೂಡ ಕಮ್ಮಿ ಇಲ್ಲದಂತೆ ಇಲ್ಲಿ ನೀರು ಗುಡ್ಡ ಪ್ರದೇಶ ಕಲ್ಲುಗಳಲ್ಲಿ ಹರಿಯುವುದರಿಂದ ನಯನಮನೋಹರವಾಗಿ ಕಾಣುತ್ತದೆ . ಸ್ಥಳೀಯ ಯುವಕರು ಈ ದೃಶ್ಯದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಮೂಲಕ ಹೆಚ್ಚಿನ ಜನರು ನೋಡಿ ಈ ವಾಟರ್ ಫಾಲ್ಸ್ ನ ಖುದ್ದು ವೀಕ್ಷಣೆ ಮಾಡಲು ಆಗಮಿಸುತ್ತಿದ್ದಾರೆ .ಸದ್ಯ ಈ ಭಾಗದಲ್ಲಿ ಪ್ರವಾಸಿಗರಿಗೆ ಊಟ ವಸತಿ ನೀಡುವ ಹೋಟೆಲ್ ಗಳು ಇಲ್ಲದಿದ್ದರೂ ಸ್ವಂತ ವಾಹನಗಳಲ್ಲಿ ಇಲ್ಲಿಗೆ ಬರುವ ಪ್ರವಾಸಿಗರು ವಾಟರ್ ಫಾಲ್ಸ್ ನ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ .
ಇಂಥ ಸುಂದರವಾದ ಪ್ರದೇಶದ ಕುರಿತು ಪ್ರವಾಸೋದ್ಯಮ ಇಲಾಖೆ ತನ್ನ ವೆಬ್ ಸೈಟ್ ಗಳಲ್ಲಿ ಎಲ್ಲಿಯೂ ಪ್ರಚಾರ ಮಾಡದಿರುವುದು ದುರದೃಷ್ಟಕರವಾಗಿದೆ .ಪ್ರವಾಸೋದ್ಯಮ ಇಲಾಖೆ ಬೆಂಗಳೂರು ಮೈಸೂರು ಕರಾವಳಿ ಬಿಟ್ಟರೆ ಇನ್ನುಳಿದ ಕಲ್ಯಾಣ ಕರ್ನಾಟಕದ ಇಂತಹ ದೃಶ್ಯಗಳನ್ನ ತನ್ನ ವೆಬ್ ಸೈಟ್ ಗಳಲ್ಲಿ ಹಾಕುವ ಮೂಲಕ ಇನ್ನಷ್ಟು ಪ್ರವಾಸಿಗರನ್ನು ಸೆಳೆಯಲು ಯೋಜನೆ ರೂಪಿಸಬೇಕಿದೆ . ಹಂಪಿಗೆ ಬರುವ ಪ್ರವಾಸಿಗರು ಆನೆಗೊಂದಿ ಭಾಗದ ಕಿಷ್ಕಿಂದಾ ಅಂಜನಾದ್ರಿ ನಂತರ 7ಗುಡ್ಡ ಪ್ರದೇಶಗಳಲ್ಲಿ ಸೂರ್ಯೋದಯ ಸೂರ್ಯಾಸ್ತಗಳನ್ನು ವೀಕ್ಷಣೆ ಮಾಡುತ್ತಾರೆ ಕೊನೆಯಲ್ಲಿ ಸಾಣಾಪುರ ವಾಟರ್ ಫಾಲ್ಸ್ ಗೆ ಆಗಮಿಸಿ ಈ ದೃಶ್ಯವನ್ನು ಕಣ್ಮನ ತುಂಬಿಕೊಳ್ಳುತ್ತಾರೆ .
ಯಾವ ಫಾಲ್ಸ್ ಗೂ ಕಡಿಮೆಯಿಲ್ಲ ಸಣಾಪುರ ಫಾಲ್ಸ್ : ಸೋಷಿಯಲ್ ಮೀಡಿಯಾದಲ್ಲಿ ಸಾಣಾಪುರ ವಾಟರ್ ಫಾಲ್ಸ್ ಬಗ್ಗೆ ನೋಡಿ ಇದನ್ನು ಖುದ್ದು ವೀಕ್ಷಣೆ ಮಾಡಬೇಕು ಎನ್ನುವ ಮನಸ್ಸಿನಿಂದ ಹಂಪಿ ಕಿಷ್ಕಿಂದಾ ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಿ ಕೊನೆಯಲ್ಲಿ ಸಣಾಪುರ ವಾಟರ್ ಫಾಲ್ಸ್ ಗೆ ಬಂದಿರುವುದಾಗಿ ಬೆಂಗಳೂರಿನ ಹವ್ಯಾಸಿ ಪ್ರವಾಸಿ ನಯನ ಉದಯವಾಣಿಯೊಂದಿಗೆ ಮಾತನಾಡಿ ಈ ಪ್ರದೇಶ ಅತ್ಯಂತ ಸುಂದರವಾಗಿದೆ ಇದನ್ನು ಉಳಿಸಿ ಬೆಳೆಸಬೇಕಾಗಿದೆ ಇನ್ನಷ್ಟು ಪ್ರವಾಸಿಗರಿಗೆ ಮೂಲಸೌಕರ್ಯಗಳನ್ನು ಕೊಡಬೇಕು ಇಲ್ಲಿ ಊಟ ವಸತಿಗೆ ಯಾವುದೇ ಅವಕಾಶ ಇಲ್ಲದೆ ಸರ್ಕಾರ ನಿರ್ಬಂಧ ಹೇರಿದ್ದು ಇದು ಪ್ರವಾಸೋದ್ಯಮದ ಮೇಲೆ ಕೆಟ್ಟ ಪರಿಣಾಮವಾಗುತ್ತದೆ ಎಂದು ಹೇಳಿದರು .
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koppala: ಮರಕುಂಬಿ ಅಸ್ಪೃಶ್ಯತೆ ಪ್ರಕರಣ… 99 ಜನರಿಗೆ ಜಾಮೀನು ನೀಡಿದ ಹೈಕೋರ್ಟ್
ಕೊಪ್ಪಳ:ಈ ರಸ್ತೆಗಳಲ್ಲಿ ನಿತ್ಯವೂ ನರಕ ದರ್ಶನ-ಜೀವಭಯದಲ್ಲೇ ಸಂಚಾರ
ಕುಷ್ಟಗಿ: ಬಿಳಿ ಜೋಳಕ್ಕೂ ಲಗ್ಗೆಯಿಟ್ಟ ಲದ್ದಿ ಹುಳು
Gangavathi: ಆನೆಗೊಂದಿ ರಾಜವಂಶಸ್ಥ ಎಸ್.ಆರ್.ಕೆ. ರಾಜಬಹಾದ್ದೂರ್ ನಿಧನ
Koppala: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಜೆಸ್ಕಾಂ ಗುತ್ತಿಗೆದಾರ
MUST WATCH
ಹೊಸ ಸೇರ್ಪಡೆ
Shimoga; ಕಾಂಗ್ರೆಸ್-ಮುಸ್ಲೀಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.