“ನನಗೆ ಮದ್ದುಗುಂಡು ಬೇಕು, ರೈಡ್ ಅಲ್ಲ”; ಅಮೆರಿಕ ಆಫರ್ ತಿರಸ್ಕರಿಸಿದ ಉಕ್ರೇನ್ ಅಧ್ಯಕ್ಷ
Team Udayavani, Feb 26, 2022, 1:09 PM IST
ಕೀವ್: ರಷ್ಯಾದ ಪಡೆಗಳು ಕೀವ್ ನಗರವನ್ನು ಸುತ್ತುವರಿಯುತ್ತಿವೆ. ಆದರೆ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಅಮೆರಿಕ ಸರ್ಕಾರದ ‘ಸ್ಥಳಾಂತರಿಸುವ ಪ್ರಸ್ತಾಪ’ವನ್ನು ತಿರಸ್ಕರಿಸಿದ್ದಾರೆ. ಅಧ್ಯಕ್ಷ ಝೆಲೆನ್ಸ್ಕಿ ತನ್ನ ದೇಶದಲ್ಲೇ ಉಳಿಯಲು ಮತ್ತು ಹೋರಾಡಲು ಇಚ್ಛಿಸಿದ್ದಾರೆ.
“ಹೋರಾಟ ಇಲ್ಲಿದೆ; ನನಗೆ ಮದ್ದುಗುಂಡುಗಳು ಬೇಕು, ಸವಾರಿ ಅಲ್ಲ” ಎಂದು ಝೆಲೆನ್ಸ್ಕಿ ಹೇಳಿದರು ಎಂದು ಅಮೆರಿಕದ ಹಿರಿಯ ಗುಪ್ತಚರ ಮೂಲನ್ನು ಉಲ್ಲೇಖಿಸಿ ಎಪಿ ವರದಿ ಮಾಡಿದೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್ ಸರ್ಕಾರವನ್ನು ಉರುಳಿಸಲು ಮತ್ತು ಅದನ್ನು ತಮ್ಮದೇ ಆದ ಆಡಳಿತದೊಂದಿಗೆ ಸೇರಿಸಲು ನಿರ್ಧರಿಸಿದ್ದಾರೆ ಎಂಬ ಗುಪ್ತಚರ ವರದಿ ಆಧಾರದ ಮೇಲೆ ಝೆಲೆನ್ಸ್ಕಿಗೆ ಅಮೆರಿಕ ಹೇಳಿದೆ.
ರಷ್ಯಾ ಪಡೆಗಳ ಮೊದಲ ಟಾರ್ಗೆಟ್ ನಾನು ನಂತರ ನನ್ನ ಕುಟುಂಬ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಹೇಳಿದ್ದರು.
ಇದನ್ನೂ ಓದಿ:ಸೂಚನೆಯಿಲ್ಲದೆ ಗಡಿ ಭಾಗಕ್ಕೆ ತೆರಳಬೇಡಿ: ಉಕ್ರೇನ್ ನಲ್ಲಿರುವ ಭಾರತೀಯರಿಗೆ ಸೂಚನೆ
ಗುರುವಾರ ಯುರೋಪಿಯನ್ ಯೂನಿಯನ್ (ಇಯು) ನಾಯಕರೊಂದಿಗಿನ ವೀಡಿಯೊ ಕಾನ್ಫರೆನ್ಸ್ ಸಮಯದಲ್ಲಿ, “ನೀವು ನನ್ನನ್ನು ಜೀವಂತವಾಗಿ ನೋಡುತ್ತಿರುವ ಕೊನೆಯ ಸಮಯವಿದು” ಎಂದು ಉಕ್ರೇನಿಯನ್ ಅಧ್ಯಕ್ಷ ಝೆಲೆನ್ಸ್ಕಿ ಹೇಳಿದ್ದರು ಎಂದು ವರದಿಯಾಗಿದೆ.
ಮಿಲಿಟರಿ ಬಲಶಾಲಿಯಾದ ರಷ್ಯಾದಿಂದ ನಿರಂತರ ಆಕ್ರಮಣದ ಹೊರತಾಗಿಯೂ, ಉಕ್ರೇನಿಯನ್ ಪಡೆಗಳು ರಷ್ಯಾದ ಸೈನ್ಯವನ್ನು ವಿರೋಧಿಸುವುದನ್ನು ಮುಂದುವರೆಸಿದೆ. ಎರಡೂ ಕಡೆಗಳಲ್ಲಿ ಸಾವುನೋವುಗಳು ಹೆಚ್ಚಾಗುತ್ತಿದ್ದರೂ ಸಹ, ಝೆಲೆನ್ಸ್ಕಿ ತನ್ನ ರಾಷ್ಟ್ರದ ರಾಜಧಾನಿಯಲ್ಲಿ ದೃಢನಿಶ್ಚಯದಿಂದ ಉಳಿದುಕೊಂಡಿದ್ದಾರೆ. “ಉಕ್ರೇನ್ ಭವಿಷ್ಯವನ್ನು ಈಗ ನಿರ್ಧರಿಸಲಾಗುತ್ತಿದೆ” ಉಕ್ರೇನಿಯನ್ನರಿಗೆ ತಮ್ಮ ನೆಲಕ್ಕಾಗಿ ಎದ್ದು ನಿಲ್ಲುವಂತೆ ಪ್ರಚೋದಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
America: ಬೋಯಿಂಗ್ ಸಂಸ್ಥೆಯ 17,000 ಉದ್ಯೋಗಿಗಳು ಶೀಘ್ರವೇ ವಜಾ
Vivek Ramaswamy: ವಿವೇಕ್‌ಗೆ ಟ್ರಂಪ್ ಸರಕಾರದ ಕಾರ್ಯಕ್ಷಮತೆ ಇಲಾಖೆ ಹೊಣೆ
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.