ರಣಜಿ ಟ್ರೋಫಿ: ಮಗಳ ನಿಧನದ ದುಃಖದ ನಡುವೆಯೂ ಶತಕ ಸಿಡಿಸಿದ ವಿಷ್ಣು ಸೋಲಂಕಿ
Team Udayavani, Feb 26, 2022, 3:18 PM IST
ಭುವನೇಶ್ವರ: ಕೆಲವು ದಿನಗಳ ಹಿಂದೆ ನವಜಾತ ಶಿಶುವನ್ನು ಕಳೆದುಕೊಂಡ ನೋವಿನಲ್ಲೂ ಬರೋಡಾ ಬ್ಯಾಟರ್ ವಿಷ್ಣು ಸೋಲಂಕಿ ಅವರು ಶುಕ್ರವಾರ ಭರ್ಜರಿ ಶತಕ ಸಿಡಿಸಿದ್ದಾರೆ.
ಭುವನೇಶ್ವರದಲ್ಲಿ ನಡೆದ ರಣಜಿ ಟ್ರೋಫಿ 2022 ಮುಖಾಮುಖಿಯಲ್ಲಿ ಚಂಡೀಗಢ ತಂಡದ ವಿರುದ್ಧ ವಿಷ್ಣು ಸೋಲಂಖಿ ತಮ್ಮ ವೈಯಕ್ತಿಕ ದುರಂತದ ನಡುವೆಯೂ ಶತಕ ಗಳಿಸಿದರು.
ಬರೋಡಾ ಎರಡನೇ ದಿನದಾಟದ ಅಂತ್ಯಕ್ಕೆ 7 ವಿಕೆಟ್‌ಗೆ 398 ರನ್ ಗಳಿಸಿತು. ಚಂಡೀಗಢ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 168 ರನ್‌ಗಳಿಗೆ ಆಲೌಟ್ ಆಗಿತ್ತು. ಸೋಲಂಕಿ ಬ್ಯಾಟಿಂಗ್ ಸಹಾಯದಿಂದ ಬರೋಡಾ ತಂಡ 230 ರನ್‌ಗಳ ಮಹತ್ವದ ಮುನ್ನಡೆ ಗಳಿಸಲು ಸಾಧ್ಯವಾಯಿತು.
ನಂ.5ರಲ್ಲಿ ಬ್ಯಾಟಿಂಗ್ ಗೆ ಬಂದ ಸೋಲಂಕಿ 161 ಎಸೆತಗಳಲ್ಲಿ ಅಜೇಯ 103 ರನ್ ಗಳಿಸಿದರು. ಅವರ ವೀರಾವೇಶದ ಶತಕವು 12 ಬೌಂಡರಿಗಳನ್ನು ಒಳಗೊಂಡಿತ್ತು ಮತ್ತು ಬರೋಡಾ ಬ್ಯಾಟರ್ ಆರಂಭಿಕ ಜ್ಯೋತ್ಸ್ನಿಲ್ ಸಿಂಗ್ ಅವರಿಂದ ಸಮರ್ಥ ಬೆಂಬಲವನ್ನು ಪಡೆದರು. ಚಂಡೀಗಢದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಜ್ಯೋತ್ಸ್ನಿಲ್ 96 ರನ್ ಗಳಿಸಿದ್ದ ವೇಳೆ ರನೌಟಾದರು.
ಇದನ್ನೂ ಓದಿ:ಲಂಕಾ ಸರಣಿಯಿಂದ ಹೊರಬಿದ್ದ ಋತುರಾಜ್ ಗಾಯಕ್ವಾಡ್: ಬದಲಿ ಆಟಗಾರನ ನೇಮಿಸಿದ ಬಿಸಿಸಿಐ
ಇತ್ತೀಚೆಗೆ ಹುಟ್ಟಿದ ಹೆಣ್ಣು ಮಗು ನಿಧನವಾದ ದುರದೃಷ್ಟಕರ ಸುದ್ದಿ ತಿಳಿದಾಗ ವಿಷ್ಣು ಸೋಲಂಕಿ ಅವರು ಬರೋಡಾ ತಂಡದ ಸಹ ಆಟಗಾರರೊಂದಿಗೆ ಭುವನೇಶ್ವರದಲ್ಲಿದ್ದರು. ತಕ್ಷಣ ಅವರು ತಮ್ಮ ಮಗಳ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ವಡೋದರಾಕ್ಕೆ ಮರಳಿದರು. ಮೂರು ದಿನಗಳ ನಂತರ ಅವರು ವಿಮಾನದ ಮೂಲಕ ಮತ್ತೆ ಭುವನೇಶ್ವರಕ್ಕೆ ಆಗಮಿಸಿ ತಂಡವನ್ನು ಕೂಡಿಕೊಂಡಿದ್ದರು.
What a player . Has to be the toughest player i have known. A big salute to vishnu and his family by no means this is easy? wish you many more hundreds and alot of success ?? pic.twitter.com/i6u7PXfY4g
— Sheldon Jackson (@ShelJackson27) February 25, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
MUST WATCH
ಹೊಸ ಸೇರ್ಪಡೆ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Love Reddy: ತೆರೆಗೆ ಬಂತು ʼಲವ್ ರೆಡ್ಡಿʼ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.