ಕರೆಂಟ್‌ ಹೋದ್ರೆ ನಾಡಕಚೇರಿಯಲ್ಲಿ ಸೇವೆ ಸ್ಥಗಿತ!


Team Udayavani, Feb 26, 2022, 3:27 PM IST

ಕರೆಂಟ್‌ ಹೋದ್ರೆ ನಾಡಕಚೇರಿಯಲ್ಲಿ ಸೇವೆ ಸ್ಥಗಿತ!

ಹುಳಿಯಾರು: ಕರೆಂಟ್‌ ಇದ್ದರೆ ಮಾತ್ರ ಜನರಿಗೆ ಸೇವೆ ಸಿಗುತ್ತದೆ. ಸೌಲಭ್ಯ ದೊರೆಯುತ್ತವೆ. ಕರೆಂಟ್‌ ಹೋದರೆ ಎಲ್ಲವೂ ಸ್ಥಗಿತಗೊಂಡು ಸಿಬ್ಬಂದಿ ಕೈ ಕಟ್ಟಿ ಕೂತರೆ, ಸಾರ್ವಜನಿಕರು ಬಾಗಿಲಲ್ಲಿ ಕಾಯುತ್ತಾಕುಳಿತುಕೊಳ್ಳುವ ಅನಿವಾರ್ಯ ಕರ್ಮ ನಿರ್ಮಾಣ ಆಗುತ್ತದೆ. ಇದು ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ನಾಡಕಚೇರಿಯ ದುಸ್ಥಿತಿ.

ನಾಡಕಚೇರಿ ಎಂದರೆ ಬೆಳಗ್ಗೆ ಬಾಗಿಲು ತೆಗೆದ ಕ್ಷಣದಿಂದಲೂ ಸಂಜೆ ಬಾಗಿಲು ಹಾಕುವವರೆಗೂ ಜನಜಂಗುಳಿ ಇದ್ದದ್ದೇ. ದಿನನಿತ್ಯ ಸಾವಿರಾರು ಜನರು ಹಳ್ಳಿಗಳಿಂದ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ವಿವಿಧ ಕೆಲಸ ಕಾರ್ಯಗಳಿಗೆ ನಾಡಕಚೇರಿಗೆ ಬರುವುದು ಸಾಮಾನ್ಯ. ಹೀಗೆ ನಿತ್ಯವೂ ಕಿಕ್ಕಿರಿದು ಬರುವ ಜನರಿಗೆ ಸಮರ್ಪಕ ಸೇವೆ ನೀಡುವುದು ಅಧಿಕಾರಿಗಳ ಕರ್ತವ್ಯ. ಅದರಂತೆ ಇಲ್ಲಿನ ಸಿಬ್ಬಂದಿ ಉತ್ತಮ ಸೇವೆ ನೀಡಲು ಸಿದ್ಧರಿರುತ್ತರಾದರೂ, ವಿದ್ಯುತ್‌ ಕಣ್ಣಮುಚ್ಚಾಲೆ ಆಟದಿಂದ ಇವರನ್ನು ಕೈ ಕಟ್ಟಿ ಕೂರುವಂತೆ ಮಾಡಿದೆ.

ಕಾಯುವ ಪರಿಸ್ಥಿತಿ ನಿರ್ಮಾಣ: ನಿತ್ಯ ಸಾವಿರಾರು ಜನರು ಬರುವ ಹಂದನಕೆರೆ ಹೋಬಳಿ ನಾಡಕಚೇರಿಗೆಯುಪಿಎಸ್‌ ಅಥವಾ ಜನರೇಟರ್‌ ವ್ಯವಸ್ಥೆ ಇಲ್ಲದಿರುವುದರಿಂದ ಪ್ರತಿಯೊಂದು ಕೆಲಸ ಕಾರ್ಯಗಳಿಗೂ ವಿದ್ಯುತ್‌ ಬರುವವರೆಗೂ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ಸಿಬ್ಬಂದಿ ವಿದ್ಯುತ್‌ ಇಲ್ಲದ ಸಂದರ್ಭದಲ್ಲಿ ಜನರಿಗೆ ನಾಳೆ ಬನ್ನಿ ಅಥವಾಕರೆಂಟ್‌ ಬರುವ ತನಕ ಕಾಯಿರಿ ನಿಮ್ಮ ಕೆಲಸ ಮಾಡಿ ಕೊಡು ತ್ತೇವೆ ಎನ್ನುವುದು ಸಾಮಾನ್ಯವಾಗಿದೆ. ಇದರಿಂದ ಸಣ್ಣಪುಟ್ಟ ಕಾರ್ಯಗಳಿಗೂ ಜನಸಾಮಾನ್ಯರು ಅಲೆದಾಡುವಂತಾಗಿದೆ.

ನಾಡಕಚೇರಿಗೆ ಅಲೆದಾಟ: ಮೊದಲೇ ಹಂದಕೆರೆ ಹೋಬಳಿಯಲ್ಲಿ ರೈತರು, ಕೂಲಿಕಾರ್ಮಿಕರು ಹಾಗೂ ಹಿಂದುಳಿದ ವರ್ಗದವರು ಹೆಚ್ಚಾಗಿದ್ದಾರೆ. ಅಲ್ಲದೆ ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದಿರುವುದು ಸಹ ಈ ಭಾಗದ ಜನರ ದೌರ್ಭಾಗ್ಯ. ಇವುಗಳ ಜೊತೆಗೆ ನಾಡಕಚೇರಿಯಲ್ಲಿ ವಿದ್ಯುತ್‌ ಸಮಸ್ಯೆ. ಇಷ್ಟೆಲ್ಲ ಸಮಸ್ಯೆಗಳ ಪರಿಣಾಮ ಒಂದು ಕೆಲಸಕ್ಕೆ ಅನೇಕ ಬಾರಿ ಅಲೆಯಬೇಕಿದೆ. ಇದರಿಂದ ಇಲ್ಲಿನ ಜನರ ನಿತ್ಯದ ಕೂಲಿ ಹಾಗೂ ಸಮಯ ಎರಡೂ ವ್ಯರ್ಥವಾಗುತ್ತಿದೆ.

ಯುಪಿಎಸ್‌ ವ್ಯವಸ್ಥೆ ಕಲ್ಪಿಸಿ: ಬೇಸಿಗೆ ಕಾಲದಲ್ಲಂತೂ ವಿದ್ಯುತ್‌ ಅಡಚಣೆ ಸಹಜವಾಗಿರುತ್ತದೆ. ಮಳೆ ಗಾಲದಲ್ಲಿ ಗಾಳಿಗೆ ಕಂಬಗಳು ಬೀಳುವ, ಕಂಬದ ಮೇಲೆ ಮರ ಬಿದ್ದು ಲೈನ್‌ಕಟ್‌ ಆಗಿ ವಿದ್ಯುತ್‌ ಸಮಸ್ಯೆ ನಿರ್ಮಾಣವಾಗುತ್ತದೆ. ಇದಕ್ಕೆ ಬದಲಿ ವ್ಯವಸ್ಥೆ ಮಾಡದೆ ಇರುವುದು ದುರದೃಷ್ಟಕರ ಸಂಗತಿಯಾಗಿದೆ. ಈ ಬಗ್ಗೆ ಸಾರ್ವಜನಿಕರು ದೂರು ನೀಡಿದರೂ, ಯಾವುದೇ ಪ್ರಯೋಜನವಾಗಿಲ್ಲ.ಇನ್ನಾದರೂ ಮೇಲಧಿಕಾರಿಗಳು ಇತ್ತ ಗಮನಹರಿಸಿಯುಪಿಎಸ್‌ ವ್ಯವಸ್ಥೆ ಕಲ್ಪಿಸಿ ಸಾರ್ವಜನಿಕರ ಕೆಲಸಕಾರ್ಯಗಳಿಗೆ ಅಡ್ಡಿಯಾಗದಂತೆ ನೋಡಿಕೊಳ್ಳುವರೇ ಎಂಬುದನ್ನು ಕಾದು ನೋಡಬೇಕಿದೆ.

ಯುಪಿಎಸ್‌ ಕೆಟ್ಟು ಹೋಗಿದೆ. ಇದನ್ನು ರಿಪೇರಿ ಮಾಡಿಸಿಕೊಡಲು ಮೇಲಧಿಕಾರಿಗೆ ಪತ್ರ ಬರೆದಿದ್ದೇವೆ. ಕೆಲವೇ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಿ ಕೊಟ್ಟು ರಿಪೇರಿ ಮಾಡಿಸುತ್ತೇವೆ. ಅಲ್ಲಿಯವರೆಗೂ ಜನ ಸ್ವಲ್ಪ ಅಡೆjಸ್ಟ್‌ ಮಾಡಿಕೊಳ್ಳಬೇಕು. ಜನರಿಗೆ ತೊಂದರೆ ಆಗದಂತೆ ಕೆಲಸ ಮಾಡಿ ಕೊಡುತ್ತಿದ್ದೇವೆ. ಹುಳಿಯಾರಿನಂತೆ ಇಲ್ಲಿ ಅಷ್ಟೊಂದು ಜನಸಂದಣಿಇರುವುದಿಲ್ಲ. ಆದ್ದರಿಂದ ಬರುವ ಜನರಿಗೆ ಸಮಸ್ಯೆ ಆಗದಂತೆ ಸ್ಪಂದಿಸುತ್ತಿದ್ದೇವೆ.ಪುಷ್ಪಾವತಿ, ಉಪಹಶೀಲ್ದಾರ್‌, ನಾಡಕಚೇರಿ, ಹಂದನಕೆರೆ

ಪಹಣಿ ಪಡೆಯಲು, ಆಧಾರ್‌ ಕಾರ್ಡ್‌ ನೋಂದಣಿ, ಸಂಧ್ಯಾಸುರಕ್ಷಾ ಹಾಗೂ ವಿಧವಾ ವೇತನಸೇರಿದಂತೆ ಇನ್ನಿತರ ಸೌಕರ್ಯಗಳಿಗಾಗಿಅರ್ಜಿ ಸಲ್ಲಿಸಲು ದಿನವಿಡೀ ವಿದ್ಯುತ್‌ಗಾಗಿಕಾದು ಕುಳಿತುಕೊಳ್ಳುವ ಅನಿರ್ವಾಯತೆಇದೆ. ಕಚೇರಿಗೆ ಬರುವ ಬಹಳಷ್ಟು ಮಂದಿನಿರಾಶೆಯಿಂದ ಹಿಂದಿರುಗುತ್ತಿದ್ದಾರೆ. ಈಬಗ್ಗೆ ಕೇಳಿದರೆ ಇಲ್ಲಿನ ಅಧಿಕಾರಿಗಳುಮೇಲಧಿಕಾರಿಗಳ ಕಡೆ ಬೆರಳು ತೋರಿಸಿಕೈ ಚಲ್ಲಿ ಕುಳಿತುಕೊಳ್ಳುತ್ತಾರೆ. –ಪ್ರಶಾಂತ್‌, ಗ್ರಾಪಂ ಸದಸ್ಯ, ದೊಡ್ಡಎಣ್ಣೇಗೆರೆ

ಟಾಪ್ ನ್ಯೂಸ್

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

1-horoscope

Horoscope: ಆರಿಸಿದ ಮಾರ್ಗದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

canada

Canada ವಲಸಿಗರಿಗೆ ನಿಯಂತ್ರಣ: ಭಾರತೀಯರಿಗೆ ಸಂಕಷ್ಟ ಸಾಧ್ಯತೆ

Vimana 2

Immigration process;ಬೆಂಗಳೂರು ವಿಮಾನ ನಿಲ್ದಾಣದಲ್ಲಿನ್ನು ಕ್ಷಣಗಳಲ್ಲೇ ವಲಸೆ ಪ್ರಕ್ರಿಯೆ!

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-pavagada

Pavagada: ಆಂಬ್ಯುಲೆನ್ಸ್ ಸಿಗದೆ ವೃದ್ದ ಮೃತದೇಹವನ್ನು ಬೈಕ್ ನಲ್ಲಿಯೇ ಕೊಂಡೊಯ್ದ ಮಕ್ಕಳು

Minister V. Somanna ಹಾಲಿನ ದರ ಏರಿಕೆ ಗ್ಯಾರಂಟಿಗೆ ಬಳಸಿದ್ರೆ ವಿರೋಧ

Minister V. Somanna ಹಾಲಿನ ದರ ಏರಿಕೆ ಗ್ಯಾರಂಟಿಗೆ ಬಳಸಿದ್ರೆ ವಿರೋಧ

Tumkur ಕೊಟ್ಟಿಗೆಗೆ ಒಟ್ಟಿಗೆ ನುಗ್ಗಿದ 5 ಚಿರತೆಗಳು:32 ಕುರಿಗಳ ಸಾವು

Tumkur ಕೊಟ್ಟಿಗೆಗೆ ನುಗ್ಗಿದ 5 ಚಿರತೆಗಳು: 32 ಕುರಿಗಳ ಸಾವು

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

Kunigal: ಹಿಂದು ಮುಸ್ಲಿಂ ಭಾವೈಕ್ಯತೆ, ಸಂಗಮಕ್ಕೆ ಸಾಕ್ಷಿಯಾದ : ಈದ್ ಮೀಲಾದ್ ಮೆರವಣಿಗೆ

Kunigal: ಹಿಂದೂ ಮುಸ್ಲಿಂ ಭಾವೈಕ್ಯತೆ, ಸಂಗಮಕ್ಕೆ ಸಾಕ್ಷಿಯಾದ ಈದ್ ಮಿಲಾದ್ ಮೆರವಣಿಗೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

1-horoscope

Horoscope: ಆರಿಸಿದ ಮಾರ್ಗದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

1-japp

Japan ಆ್ಯನಿಮೇಟೆಡ್‌ ರಾಮಾಯಣ ಅ.18ಕ್ಕೆ ಮರು ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.