ಗ್ರಾಮೀಣ ಮನೆಗಳಿಗೂ ವಾಟರ್ ಮೀಟರ್ ಕಡ್ಡಾಯ
ಒಬ್ಬರಿಗೆ ದಿನಕ್ಕೆ ಕನಿಷ್ಠ 55 ಲೀ. ನೀರು ಖಾತರಿ ; ಪೋಲು ತಡೆ ಉದ್ದೇಶ
Team Udayavani, Feb 27, 2022, 6:00 AM IST
ಮಂಗಳೂರು: ಗ್ರಾಮ ಪಂಚಾಯತ್ಗಳು ಮನೆ ಮನೆಗೆ ಸರಬರಾಜು ಮಾಡುವ ಕುಡಿಯುವ ನೀರಿಗೆ ಇನ್ನು ಮೀಟರ್ ಕಡ್ಡಾಯವಾಗಲಿದ್ದು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿಯೂ ಪೂರಕ ತಯಾರಿ ಆರಂಭಗೊಂಡಿದೆ. ಈಗಾಗಲೇ ಇರುವ ಸಂಪರ್ಕಕ್ಕೂ ಜಲಜೀವನ್ ಮಿಷನ್ ಯೋಜನೆಯಡಿ ನೀಡಲಾಗುತ್ತಿರುವ ಹೊಸ ಸಂಪರ್ಕಕ್ಕೂ ಇದು ಅನ್ವಯ.
ಪ್ರಸ್ತುತ ಗ್ರಾ.ಪಂ.ಗಳು ಬಳಕೆದಾರರಿಂದ ತಿಂಗಳಿಗೆ ನಿರ್ದಿಷ್ಟ ಶುಲ್ಕ ವಸೂಲಿ ಮಾಡುತ್ತಿವೆ. ಹಾಗೆಂದು ಪೂರೈಸುವ ನೀರಿಗೆ ಮಿತಿಯನ್ನು ಹಾಕಿಕೊಂಡಿಲ್ಲ. ಆದರೆ ಪೂರೈಕೆ ಎಲ್ಲ ಭಾಗಗಳಿಗೂ ಸಮರ್ಪಕವಾಗಿಲ್ಲ. ಆದ್ದರಿಂದ ಜಲಜೀವನ್ ಮಿಷನ್ನಡಿ ಬಹುತೇಕ ಎಲ್ಲ ಮನೆಗಳಿಗೂ ಪೂರೈಕೆಯಾಗುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಮುಂದಿನ 30 ವರ್ಷಗಳಿಗೆ ಬೇಕಾದಷ್ಟು ನೀರಿನ ಮೂಲಗಳನ್ನು ಸಿದ್ಧಗೊಳಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕನಿಷ್ಠ 55 ಲೀಟರ್
ವಿಶ್ವ ಆರೋಗ್ಯ ಸಂಸ್ಥೆಯ ಲೆಕ್ಕಾಚಾರದನ್ವಯ ಒಬ್ಬ ವ್ಯಕ್ತಿಗೆ ದಿನವೊಂದಕ್ಕೆ ಕನಿಷ್ಠ 55 ಲೀಟರ್ ನೀರು ಒದಗಿಸುವುದು ಜೆಜೆಎಂ (ಜಲಜೀವನ್ ಮಿಷನ್) ಉದ್ದೇಶ. ಗ್ರಾ.ಪಂ.ಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಹೆಚ್ಚು ಕೂಡ ಪೂರೈಸಬಹುದಾಗಿದೆ. ಪ್ರತೀಲೀಟರ್ಗೆ 5 ಪೈಸೆ ನಿಗದಿಪಡಿಸುವ ಚಿಂತನೆ ಸರಕಾರ ಮಟ್ಟದಲ್ಲಿದೆ ಎಂದು ಮೂಲಗಳು ತಿಳಿಸಿವೆ.
ಕೆಲವೆಡೆ ಬೇಕಾಬಿಟ್ಟಿ ನೀರಿನ ಬಳಕೆಯಾಗುತ್ತಿರುವುದು, ಇನ್ನು ಕೆಲವೆಡೆ ಅಗತ್ಯವಿರುವಷ್ಟು ಲಭ್ಯವಾಗದಿರುವುದು ಕಂಡು ಬಂದಿದೆ. ಇದನ್ನು ಸರಿಪಡಿಸಲು ಜೆಜೆಎಂನಲ್ಲಿ ಆದ್ಯತೆ ನೀಡಲಾಗುತ್ತಿದೆ. ದ.ಕ. ಜಿಲ್ಲೆಯಲ್ಲಿ ಈಗಾಗಲೇ ಜೆಜೆಎಂನಡಿ 28,000ಕ್ಕೂ ಅಧಿಕ ಸಂಪರ್ಕಗಳಿಗೆ ಮೀಟರ್ ಅಳವಡಿಸಲಾಗುತ್ತಿದೆ.
– ಡಾ| ಕುಮಾರ್,
ಸಿಇಒ, ದ.ಕ ಜಿ.ಪಂ.
ಸದ್ಯ ಗ್ರಾ.ಪಂ.ಗಳು ತಿಂಗಳಿಗೆ ನಿಗದಿತ ಶುಲ್ಕ ವಸೂಲಿ ಮಾಡುತ್ತಿವೆ. ಮುಂದೆ ನೀರಿನ ಬಳಕೆಗೆ ತಕ್ಕಂತೆ ದರ ನಿಗದಿಯಾಗಲಿದೆ. ಮೀಟರ್ ಜತೆ ವಾಲ್Ì ಕೂಡ ಕಡ್ಡಾಯ ಮಾಡಲಾಗುವುದು. ಇದು ಪ್ರಶರ್ನಲ್ಲಿ ನೀರು ಪೂರೈಕೆಯಾಗಲು ಸಹಕಾರಿ ಹಾಗೂ ಪೋಲಾಗುವುದನ್ನು ತಡೆಯಲಿದೆ. ಯಾವ ರೀತಿ ಮೀಟರ್ ಅಳವಡಿಕೆಯನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿ ಉತ್ತಮ ಸೇವೆ ನೀಡಬಹುದು ಎಂಬ ಬಗ್ಗೆ ಶೀಘ್ರದಲ್ಲೇ ಗ್ರಾ.ಪಂ. ಅಧ್ಯಕ್ಷರು, ಪಿಡಿಒ ಮತ್ತು ವಾಟರ್ಮನ್ಗಳಿಗೆ ತರಬೇತಿ ನೀಡಲಾಗುವುದು.
– ಡಾ| ನವೀನ್ ಭಟ್,
ಸಿಇಒ ಉಡುಪಿ ಜಿ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kinnigoli: ದ್ವಿಚಕ್ರ ವಾಹನಗಳ ಢಿಕ್ಕಿ; ಸವಾರ ಮೃತ್ಯು
Mangaluru: ಅನಧಿಕೃತ ಫ್ಲೆಕ್ಸ್ , ಬ್ಯಾನರ್ ತೆರವು ಆರಂಭ
Ullala: ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.