ಉಡುಪಿಗೂ ಒಳ ಚರಂಡಿ: ಮುಂದಿನ ಬಜೆಟ್‌ನಲ್ಲಿ ಯೋಜನೆಗೆ ಹಣ ಸಿಗಲಿ


Team Udayavani, Feb 27, 2022, 12:43 PM IST

ಉಡುಪಿಗೂ ಒಳ ಚರಂಡಿ: ಮುಂದಿನ ಬಜೆಟ್‌ನಲ್ಲಿ ಯೋಜನೆಗೆ ಹಣ ಸಿಗಲಿ

ಸ್ವತ್ಛತೆ, ಆರೋಗ್ಯ, ಶಿಕ್ಷಣದಲ್ಲಿ ಉಡುಪಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಾದರಿಯಾಗಿದೆ. ಮಲ ಹೊರುವ ಪದ್ಧತಿ ನಿಷೇಧಿಸುವ ಮೂಲಕ ದೇಶದಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಿದ್ದೂ ಇದೇ ನಗರ. ಈಗ ನಗರ ಮತ್ತಷ್ಟು ಬೆಳೆಯುತ್ತಿದೆ. ಅದಕ್ಕೆ ತಕ್ಕಂತೆ ಒಳಚರಂಡಿ ವ್ಯವಸ್ಥೆ ನಿಗದಿತ ಕಾಲಾವಧಿಯಲ್ಲಿ ಜಾರಿಗೊಳ್ಳಬೇಕು. ಆಗ ನಗರದ ಕೀರ್ತಿ ಇನ್ನಷ್ಟು ಹೆಚ್ಚುತ್ತದೆ. ಇಲ್ಲವಾದರೆ ನಗರದ ಆರೋಗ್ಯ ಹದಗೆಡಲಿದೆ.

ಉಡುಪಿ : ಸ್ವತಃ ಉಡುಪಿ ನಗರದಲ್ಲೂ ಸಮರ್ಪಕವಾದ ಒಳಚರಂಡಿ (ಯುಜಿಡಿ) ವ್ಯವಸ್ಥೆ ಇರದಿರುವುದು ಸುತ್ತಲಿನ ಪ್ರದೇಶ ಹಾಗೂ ಜಲಮೂಲ ಗಳಿಗೆ ಕಂಟಕವಾಗಿ ಪರಿಣಮಿಸುತ್ತಿದೆ.

ಪ್ರಸ್ತುತ ಯುಜಿಡಿ ಸಮರ್ಪಕವಾಗಿ ಲ್ಲದೆ ತತ್ತರಿಸಿರುವ ನಗರಕ್ಕೆ 330 ಕೋಟಿ ರೂ. ವೆಚ್ಚದ ಯೋಜನೆಯನ್ನು ನಗರಸಭೆ ಸರಕಾರಕ್ಕೆ ಸಲ್ಲಿಸಿದೆ. ಮುಂಬರುವ ಆಯವ್ಯಯದಲ್ಲಿ ಯೋಜನೆಗೆ ಅನುದಾನ ದೊರೆಯುವಂತೆ ಮಾಡುವ ಗುರುತರ ಹೊಣೆಗಾರಿಕೆ ಸ್ಥಳೀಯ ಶಾಸಕರು (ವಿಧಾನಸಭೆ ಮತ್ತು ವಿಧಾನ ಪರಿಷತ್‌ ಸದಸ್ಯರು), ಸಂಸದರ ಮೇಲಿದೆ.

ಬೆಳೆದ ನಗರ, ಹೆಚ್ಚಿದ ಒತ್ತಡ
ನಗರಸಭೆ ವ್ಯಾಪ್ತಿಯ ಶೇ. 17ರಷ್ಟು ಪ್ರದೇಶದಲ್ಲಿ ಕೆಲವು ದಶಕಗಳ ಹಿಂದೆ ನಿರ್ಮಿಸಿದ ಒಳ ಚರಂಡಿ ವ್ಯವಸ್ಥೆ ಇದ್ದರೂ, ಅದರ ಆರೋಗ್ಯ ಕೆಟ್ಟಿದೆ. ಆಗಿನ ಜನಸಂಖ್ಯೆಯನುಸಾರ ನಿರ್ಮಿಸಲಾಗಿದ್ದ ಒಳ ಚರಂಡಿಗಳು, ನಗರ ಬೆಳೆದಂತೆ ಒತ್ತಡ ಹೆಚ್ಚಾಗಿ ಪ್ರಯೋಜನಕ್ಕೆ ಬಾರದಾಗಿವೆ.

ಎರಡು ಹಂತಗಳಲ್ಲಿ ಒಳಚರಂಡಿ ವ್ಯವಸ್ಥೆ ಮೇಲ್ದರ್ಜೆ ಗೇರಿದರೂ ವ್ಯವಸ್ಥಿತಗೊಳಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಸದಾ ಒಳಚರಂಡಿ ಸಮಸ್ಯೆ ನಾಗರಿಕರನ್ನು ಕಾಡತೊಡಗಿದೆ. ಅಲ್ಲಲ್ಲಿ ಪೈಪುಗಳು ಒಡೆಯುವುದು, ತ್ಯಾಜ್ಯದ ಹೆಚ್ಚಿನ ಒತ್ತಡ ಸಹಿಸಲಾಗದೆ ನೇರವಾಗಿ ಇಂದ್ರಾಣಿಗೆ ಬಿಡುವ ಇತ್ಯಾದಿ ಸಮಸ್ಯೆಗಳು ಉದ್ಭವಿಸುತ್ತಲೇ ಇದೆ.

ಹೊಸ ಪ್ರಸ್ತಾವನೆ
ಹೊಸ ಪ್ರಸ್ತಾವನೆಯಲ್ಲಿ ಯುಜಿಡಿ ವ್ಯವಸ್ಥೆಯನ್ನು 148 ಕಿ.ಮೀ. ವಿಸ್ತರಿಸಲಾಗಿದೆ. ಪ್ರತೀ 30 ಮೀಟರ್‌ಗೆ ಒಂದರಂತೆ 5,600 ಮ್ಯಾನ್‌ ಹೋಲ್‌, 5 ವೆಟ್‌ವೆಲ್‌ಗ‌ಳು ನಿರ್ಮಾಣವಾಗಲಿವೆ. ಈಗ ರಾಜ್ಯ ಸರಕಾರ ಒಳ ಚರಂಡಿ ಪ್ರಸ್ತಾವನೆಗೆ ಅನುಮೋದನೆ ಕೊಟ್ಟು ಅನುದಾನ ನೀಡಬೇಕಿದೆ.

ಇಂದ್ರಾಣಿ ನದಿ ದುಸ್ಥಿತಿ
ನಗರದ ಎಲ್ಲ ತ್ಯಾಜ್ಯವು ಇಂದ್ರಾಣಿ ನದಿಯ ಒಡಲು ಸೇರಿ ಕಲುಷಿತವಾಗಿದ್ದು, ಇಂದ್ರಾಣಿ ನದಿಯನ್ನು ಪುನಶ್ಚೇತನಗೊಳಿಸಬೇಕಿದೆ. ಇಂದ್ರಾಳಿಯಿಂದ ಕಲ್ಮಾಡಿವರೆಗೂ ನಗರದ ಒಳ ಚರಂಡಿಯ ತ್ಯಾಜ್ಯ ನೀರು ಮಳೆ ನೀರಿನ ಚರಂಡಿ ಮೂಲಕ ಇಂದ್ರಾಳಿಯನ್ನು ಸೇರುತ್ತಿದೆ. ಇಲ್ಲಿನ ನೀರು ಬಣ್ಣ ಸಂಪೂರ್ಣ ಕಪ್ಪು ಬಣ್ಣಕ್ಕೆ ತಿರುಗಿದ್ದು, ನಿಟ್ಟೂರು ಎಸ್‌ಟಿಪಿ ಘಟಕದಿಂದಲೂ ಕೊಳಚೆ ನೀರನ್ನು ಶುದ್ಧೀಕರಿಸದೆ ನದಿಗೆ ಬಿಡಲಾಗುತ್ತಿದೆ ಎಂಬ ಆರೋಪವಿದೆ.

ಇದನ್ನೂ ಓದಿ : ಉಕ್ರೇನ್: ಛತ್ತೀಸ್‌ಗಢದ ವಿದ್ಯಾರ್ಥಿಗಳ ವಾಪಸಾತಿಯ ವೆಚ್ಚ ಭರಿಸುವ ಸರಕಾರ

ಎಲ್ಲೆಲ್ಲಿ ತುರ್ತು ಕಾಮಗಾರಿ ನಡೆಯುತ್ತಿದೆ?
ನಗರದಲ್ಲಿ ಕೆಲವೆಡೆ ತುರ್ತಾಗಿ ಒಳಚರಂಡಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ನಿಟ್ಟೂರು-ಬನ್ನಂಜೆ ಸಂಪರ್ಕಿಸುವ ಗರಡಿ ರಸ್ತೆಯಲ್ಲಿ ಉಕ್ಕಿ ಹರಿಯುತ್ತಿದ್ದ ಒಳಚರಂಡಿ ಮ್ಯಾನ್‌ಹೋಲ್‌ ಅನ್ನು ಕೊನೆಗೂ ಸರಿಪಡಿಸಲಾಗಿದೆ. ಒಳಚರಂಡಿಯಿಂದ ಕೊಳಚೆ ನೀರು ಸೋರಿಕೆಯಾಗಿ ಸುತ್ತಲಿನ ಪರಿಸರದಲ್ಲಿ ಕೊಳಚೆ ನೀರಿನ ಕೆರೆ ಸೃಷ್ಟಿಯಾಗಿತ್ತು. ನಿಟ್ಟೂರು, ಬನ್ನಂಜೆ ಮಾರ್ಗವಾಗಿ ಸಾಕಷ್ಟು ಮಂದಿ ನಿತ್ಯ ಪ್ರಯಾಣಿಸುತ್ತಿದ್ದು, ಕಿರಿಕಿರಿ ಅನುಭವಿಸುತ್ತಿದ್ದರು. ನಿಟ್ಟೂರು- ಮೂಡ ನಿಡಂಬೂರು ಬಬ್ಬುಸ್ವಾಮಿ ಗರೋಡಿವರೆಗೆ ರೂಪಿಸಿದ್ದ ವ್ಯವಸ್ಥಿತ ಒಳ ಚರಂಡಿ ಯೋಜನೆ ಗುತ್ತಿಗೆದಾರರ ವಿಳಂಬ ಧೋರಣೆಯಿಂದ ಜಾರಿಯಾಗಿರಲಿಲ್ಲ. ಈಗ 56 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಅಲ್ಲದೆ ಕಲ್ಸಂಕ, ಅಂಕದಕಟ್ಟೆ, ಗುಂಡಿಬೈಲು ಅಂಬಾಗಿಲು ಮೂಲಕ ಎಸ್‌ಟಿಪಿ ತಲುಪುವ ಯುಜಿಡಿ ಮುಖ್ಯ ಪೈಪ್‌ಲೈನ್‌ ಕಾಮಗಾರಿಯೂ ಪ್ರಗತಿಯಲ್ಲಿದೆ. ಈ ಸಮಸ್ಯೆಗಳ ಬಗ್ಗೆ “ಉದಯವಾಣಿ’ ವಿಸ್ತೃತ ವರದಿಗಳನ್ನು ಪ್ರಕಟಿಸಿತ್ತು. ಇದಕ್ಕೆ ಸ್ಪಂದಿಸಿದ ಜನಪ್ರತಿನಿಧಿಗಳು ವಿಶೇಷ ಅನುದಾನದ ಮೂಲಕ ಯುಜಿಡಿ ಯೋಜನೆ ಅನುಷ್ಠಾನಕ್ಕೆ ಪ್ರಯತ್ನಿಸಿದ್ದಾರೆ.

ಟಾಪ್ ನ್ಯೂಸ್

1-sambhal

Sambhal; ದೇಗುಲ ಬಳಿಕ 150 ವರ್ಷ ಹಳೆ ಬಾವಿ ಪತ್ತೆ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ

Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-ru

PF fraud; ಆರೋಪಿ ಕಂಪೆನಿಗಳಿಗೆ ನಾನು ನಿರ್ದೇಶಕನಲ್ಲ: ರಾಬಿನ್‌ ಉತ್ತಪ್ಪ

1-sambhal

Sambhal; ದೇಗುಲ ಬಳಿಕ 150 ವರ್ಷ ಹಳೆ ಬಾವಿ ಪತ್ತೆ

1-reeeee

Vijay Hazare Trophy Cricket: ಇಂದು ಕರ್ನಾಟಕಕ್ಕೆ ಪುದುಚೇರಿ ಎದುರಾಳಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.